• Home
  • »
  • News
  • »
  • state
  • »
  • Madikeri: ದಲಿತ ಕುಟುಂಬಗಳಿಗೆ ಹೊಳೆಯ ನೀರಿನಲ್ಲಿ ಶವ ಸಂಸ್ಕಾರ ಮಾಡುವ ದುಃಸ್ಥಿತಿ

Madikeri: ದಲಿತ ಕುಟುಂಬಗಳಿಗೆ ಹೊಳೆಯ ನೀರಿನಲ್ಲಿ ಶವ ಸಂಸ್ಕಾರ ಮಾಡುವ ದುಃಸ್ಥಿತಿ

ಶವ ಸಂಸ್ಕಾರಕ್ಕೆ ತೆಗೆದ ಗುಂಡಿಯಿಂದ ನೀರು ಹೊರ ತೆಗೆಯುತ್ತಿರುವ ಜನರು

ಶವ ಸಂಸ್ಕಾರಕ್ಕೆ ತೆಗೆದ ಗುಂಡಿಯಿಂದ ನೀರು ಹೊರ ತೆಗೆಯುತ್ತಿರುವ ಜನರು

ಗುಂಡಿ ಮುಚ್ಚಲು ಅದೇ ಗುಂಡಿಯಿಂದ ತೆಗೆದ ಮಣ್ಣನ್ನು ಹಾಕುವುದಕ್ಕಾಗಿ ನೋಡಿದರೆ ಅಲ್ಲಿ ಸಂಪೂರ್ಣ ನೀರು ಹರಿಯುತ್ತಿದ್ದರಿಂದ ಇಡೀ ಮಣ್ಣು ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿ ಗುಂಡಿಮುಚ್ಚಲು ಪರದಾಡಿ ಕೊನೆಗೆ ಗುಂಡಿಯ ಸುತ್ತಲೂ ಮಣ್ಣು ಕಡಿದು ಗುಂಡಿಗೆ ಹಾಕಬೇಕಾಯಿತು.

  • Share this:

ಕೊಡಗು : ಯಾವುದೇ ಮನುಷ್ಯ (Man) ಸತ್ತರೆ ಕೊನೆ ಪಕ್ಷ ಅಂತಿಮವಾಗಿ ಶವ ಸಂಸ್ಕಾರವನ್ನಾದರೂ (Cremation) ಸರಿಯಾಗಿ ಮಾಡಬೇಕು ಎನ್ನುವುದು ಯಾವ ಕುಟುಂಬಕ್ಕಾದರೂ ಇದ್ದೇ ಇರುತ್ತದೆ. ಆದರೆ ಈ ಊರಿನ ಹತ್ತಾರು ಕುಟುಂಬಗಳಲ್ಲಿ ಯಾರೇ ಸತ್ತರೂ ತುಂಬಿ ಹರಿಯುವ ಹೊಳೆ ನೀರಿನಲ್ಲಿ (Water) ನಿಂತು ಪರದಾಡುತ್ತಾ ಅಂತಿಮ ಸಂಸ್ಕಾರ ಮಾಡಬೇಕಾದ ದುಃಸ್ಥಿತಿ ಇದೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಣ್ವಬಲಮುರಿಯ (Kanvabalamuri, Madikeri) 40ಕ್ಕೂ ಹೆಚ್ಚು ದಲಿತ ಕುಟುಂಬಗಳು (Dalit Families) ಇಂತಹ ಹೀನಾಯ ಪರಿಸ್ಥಿತಿ ಎದುರಿಸುತ್ತಿವೆ. ಕಣ್ವಬಲಮುರಿಯನ್ನು ಸುತ್ತುವರಿದೇ ಕಾವೇರಿ ನದಿ ಹರಿಯುತ್ತಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ (Kodagu Rains) ಕನಿಷ್ಟ 6 ತಿಂಗಳು ಮಳೆ ಸುರಿಯುವುದರಿಂದ ಕಾವೇರಿ ನದಿ (Cauvery River) ಉಕ್ಕಿ ಹರಿಯುತ್ತದೆ. ಹೀಗಾಗಿ ಈ 6 ತಿಂಗಳು ಊರಿನಲ್ಲಿ ಯಾರೇ ಮೃತಪಟ್ಟರು ಶವ ಸಂಸ್ಕಾರ ಮಾಡಬೇಕೆಂದರೆ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ.


ತಲತಲಾಂತರಗಳಿಂದ ಇದೇ ಜಾಗದಲ್ಲಿ ಜನರು ಅಂತಿಮ ಸಂಸ್ಕಾರ ಮಾಡುತ್ತಿದ್ದರೂ, ಕಳೆದ ಐದು ವರ್ಷಗಳಿಂದ ಕಾವೇರಿ ನದಿ ಪದೇ ಪದೇ ಉಕ್ಕಿ ಹರಿಯುತ್ತಿರುವುದರಿಂದ ಈ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆಂದರೆ ನೀರಿನಲ್ಲಿಯೇ ಗುಂಡಿ ತೆಗೆದು ನೀರಿನಲ್ಲಿ ನಿಂತೇ ಶವ ಸಂಸ್ಕಾರ ಮಾಡಬೇಕಾಗಿದೆ.


ಶವ ಹೂಳಲು ಗುಂಡಿ ತೆಗೆದ್ರೆ ಬರ್ತಿದೆ ನೀರು


ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರ ಸಂದರ್ಭ ಗ್ರಾಮದ ಜನರು ಪಟ್ಟಿರುವ ಕಷ್ಟ ಹೇಳತೀರದು. ಎಂದಿನಂತೆ ಸಂಸ್ಕಾರ ಮಾಡಲಾಗುತ್ತಿದ್ದ ಜಾಗದಲ್ಲಿ ಹೊಳೆ ತುಂಬಿ ಹರಿಯುತ್ತಿದ್ದರಿಂದ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಎತ್ತರದ ಜಾಗದಲ್ಲಿ ಅವರಿಬ್ಬರನ್ನೂ ಹೂಳುವುದಕ್ಕೆ ಗುಂಡಿ ತೆಗೆದಿದ್ದಾರೆ.


ನೀರಿನಲ್ಲಿ ಶವ ಮುಚ್ಚಿದ ಗ್ರಾಮಸ್ಥರು


ವಿಪರ್ಯಾಸವೆಂದರೆ ಆ ಗುಂಡಿಯಲ್ಲಿ ನೀರು ಉಕ್ಕಿ ಹರಿಯಲಾರಂಭಿಸಿದೆ. ಆದರೆ ಬೇರೆ ದಾರಿಯಿಲ್ಲದೆ ಗುಂಡಿಯಲ್ಲಿ ತುಂಬಿಕೊಳ್ಳುತ್ತಿದ್ದ ನೀರನ್ನು ಬಕೆಟ್ ಗಳಲ್ಲಿ ತುಂಬಿ ಹೊರ ಹಾಕಿ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಆದರೂ ಗುಂಡಿಯಲ್ಲಿ ಮತ್ತೆ ನೀರು ತುಂಬಿಕೊಳ್ಳುತ್ತಲೇ ಇದ್ದಿದ್ದರಿಂದ ಅನಿವಾರ್ಯವಾಗಿ ಜನರು ಮೃತದೇಹವನ್ನು ಆ ನೀರಿನಲ್ಲೇ ಹಾಕಬೇಕಾಯಿತು ಎಂದು ಗ್ರಾಮದ ಸಂಜೀವ್ ಬೇಸರ ವ್ಯಕ್ತಪಡಿಸಿದರು.


Madikeri Dalit Community demand for a cremation ground rsk mrq
ಶವ ಸಂಸ್ಕಾರಕ್ಕೆ ತೆಗೆದ ಗುಂಡಿಯಿಂದ ನೀರು ಹೊರ ತೆಗೆಯುತ್ತಿರುವ ಜನರು


ಇದನ್ನೂ ಓದಿ: Jayadeva Hospital: ಜಯದೇವ ಆಸ್ಪತ್ರೆಯ ವರದಿ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು


ಗ್ರಾಮಸ್ಥರ ಬೇಸರ


ಇನ್ನು ಗುಂಡಿ ಮುಚ್ಚಲು ಅದೇ ಗುಂಡಿಯಿಂದ ತೆಗೆದ ಮಣ್ಣನ್ನು ಹಾಕುವುದಕ್ಕಾಗಿ ನೋಡಿದರೆ ಅಲ್ಲಿ ಸಂಪೂರ್ಣ ನೀರು ಹರಿಯುತ್ತಿದ್ದರಿಂದ ಇಡೀ ಮಣ್ಣು ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿ ಗುಂಡಿಮುಚ್ಚಲು ಪರದಾಡಿ ಕೊನೆಗೆ ಗುಂಡಿಯ ಸುತ್ತಲೂ ಮಣ್ಣು ಕಡಿದು ಗುಂಡಿಗೆ ಹಾಕಬೇಕಾಯಿತು. ಇಂತಹ ದುಃಸ್ಥಿಯಲ್ಲಿ ನಾವಿದ್ದೇವೆ ಎಂದು ಗ್ರಾಮದ ಎಂದು ರವಿಕಾಂತ್ ಅಳಲು ತೋಡಿಕೊಂಡರು.


ಈ ದುಃಸ್ಥಿತಿಯಲ್ಲಿ ಶವ ಸಂಸ್ಕಾರ ಮಾಡುವುದನ್ನು ಪಂಚಾಯತಿ ಅದ್ಯಕ್ಷರೂ, ಅಧಿಕಾರಿಗಳು ನೋಡಿದ್ದಾರೆ. ಹೀಗಾಗಿ ನಮಗೆ ವ್ಯವಸ್ಥಿತವಾದ ರುಧ್ರಭೂಮಿ ಮಾಡಿ ಕೊಡುವಂತೆ ಮನವಿ ಮಾಡಿದ್ದೇವೆ.


ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು


ಆದರೂ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಗಮನ ಹರಿಸಿಲ್ಲ. ಇನ್ನಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  Crime News: ಬೇರೊಬ್ಬನ ಜೊತೆ ಗೆಳತಿಯ ಪ್ರೀತಿ; ಅಮಾಯಕನ ಮೇಲೆ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ


ಮುರುಘಾ ಸ್ವಾಮಿ ಫೋಟೋ ಕಳ್ಳತನ


ಚಿತ್ರದುರ್ಗ ಮುರುಘಾ ಮಠದಲ್ಲಿದ್ದ ಮುರುಘಾ ಸ್ವಾಮಿ ಫೋಟೋಗಳ ಕಳವು ಮಾಡಲಾಗಿದೆ.. ಮಠದ ರಾಜಾಂಗಣದಲ್ಲಿದ್ದ 47 ಪೋಟೋಗಳು ರಾತ್ರೋ ರಾತ್ರಿ ಕಳವು ಮಾಡಲಾಗಿದ್ದು, ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದ ವೇಳೆಯ ಗಣ್ಯರ ಫೋಟೋಗಳು ಕಳುವಾಗಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Mahmadrafik K
First published: