• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Madikeri: ಅಲ್ಯೂಮಿನಿಯಂ ಏಣಿ ಬಳಸಿ ಕೊಡಗಿನ 42 ತೋಟ ಕಾರ್ಮಿಕರ ಸಾವು, ಇದಕ್ಕೆ ಯಾವಾಗ ಕೊನೆ?

Madikeri: ಅಲ್ಯೂಮಿನಿಯಂ ಏಣಿ ಬಳಸಿ ಕೊಡಗಿನ 42 ತೋಟ ಕಾರ್ಮಿಕರ ಸಾವು, ಇದಕ್ಕೆ ಯಾವಾಗ ಕೊನೆ?

ಅಲ್ಯೂಮಿನಿಯಂ ಏಣಿ

ಅಲ್ಯೂಮಿನಿಯಂ ಏಣಿ

ಚೀಪ್ ಎಂದು ಅಲ್ಯೂಮಿನಿಯಂ ಏಣಿ ಬಳಸಿ ಕೊಡಗಿನಲ್ಲಿ ಕಾರ್ಮಿಕರು ಸಾಯುತ್ತಲೇ ಇದ್ದಾರೆ, ಇದಕ್ಕೆ ಯಾವಾಗ ಕೊನೆ?

  • Share this:

ಕೊಡಗು(ಮಾ.13): ಕಾಫಿ ಕೃಷಿಯನ್ನು (Coffee) ಕೊಡಗಿನ ಕಾಫಿ ಬೆಳೆಗಾರರು ವೈಜ್ಞಾನಿಕವಾಗಿ ಮಾಡುತ್ತಿದ್ದು, ಹಲವು ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಕಾಫಿ ಜೊತೆಗೆ ಕಾಳುಮೆಣಸು (Black Pepper) ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ಬೆಳೆಗಾರರು, ದೀರಘಕಾಲ ಬಳಕೆಗೆ ಬರುವ ಮತ್ತು ಬಳಕೆಗೆ ಉತ್ತಮ ಎಂಬ ಕಾರಣದಿಂದ ಕಾಫಿ ಕೊಯ್ಲಿಗೆ ಅಲ್ಯೂಮಿನಿಯಂ ಏಣಿಗಳನ್ನು (Aluminum Ladders) ಬಳಸುತ್ತಿದ್ದಾರೆ. ಆದರೆ ಈ ಅಲ್ಯೂಮಿನಿಯಂ ಏಣಿಗಳೇ ಬಡಪಾಯಿ ಕಾರ್ಮಿಕರ ಜೀವ ಬಲಿತೆಗೆದುಕೊಳ್ಳುತ್ತಿವೆ. ಹೌದು ಕೊಡಗಿನಲ್ಲಿ ಅಲ್ಯೂಮಿನಿಯಂ ಏಣಿ ಬಳಸಿ ಕಾಳುಮೆಣಸು ಕೊಯ್ಲು ಮಾಡುವಾಗ ಅದು ವಿದ್ಯುತ್ ಲೈನಿಗೆ ತಗುಲಿ ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 42 ಕೂಲಿ ಕಾರ್ಮಿಕರು ತಮ್ಮ ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ.


ಕೊಡಗು ಜಿಲ್ಲೆ ಹೇಳಿ ಕೇಳಿ ಕಾಳುಮೆಣಸು ಪ್ರೊಡಕ್ಷನ್ ನಲ್ಲಿ ದೇಶ ವಿದೇಶಗಳಲ್ಲೂ ಫೇಮಸ್. ಕೊಡಗಿನಲ್ಲಿ ಬೆಳೆಯೋ ಗುಣಮಟ್ಟದ ಕಾಳುಮೆಣಸು ಬೇರೆಲ್ಲೆಡೆಯ ಮೆಣಸಿಗಿಂತ ಗುಣಮಟ್ಟದಿಂದ ಕೂಡಿದೆ. ಇಂತಹ ಗುಣಮಟ್ಟದ ಕಾಳುಮೆಣಸು ನಮ್ಮ ನಿಮ್ಮ ಅಡಿಗೆ ಮನೆ ಸೇರೋದ್ರೊಳಗೆ ಅದೆಷ್ಟೋ ಅಮಾಯಕ ಜೀವಗಳನ್ನ ಬಲೀ ಪಡೀತಿದೆ.


ಕೂಲಿ ಅರಸಿ ಬರುವವರಿಗೆ ಬೇರೆ ದಾರಿ ಇಲ್ಲ


ಕೊಡಗಿಗೆ ಕೂಲಿ ಅರಸಿ ಹೊರಜಿಲ್ಲೆ ಮತ್ತು ಹೊರ ರಾಜ್ಯದಿಂದ ತಮ್ಮ ಹೊಟ್ಟೆಪಾಡಿಗಾಗಿ ಬರುವ ಕೂಲಿ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಾಫಿ ತೋಟದ ಮರಗಿಡಗಳ ನೆರಳಿನಲ್ಲಿ ಹುಮ್ಮಸ್ಸಿನಿಂದಲೇ ಕೆಲಸ ಮಾಡುವ ಕಾರ್ಮಿಕರಿಗೆ ಮರಗಳ ಒಳಗೆ ಹಾದು ಹೋಗಿರೋ ತ್ರಿಫೇಸ್ ವಿದ್ಯುತ್ ಲೈನ್ ಗಳು ಕಾಣೋದೇ ಇಲ್ಲ.


ದಾರುಣವಾಗಿ ಸಾಯುತ್ತಿದ್ದಾರೆ ಬಡ ಕಾರ್ಮಿಕರು


ಹೀಗಾಗಿ ಒಂದು ಮರದಿಂದ ಮತ್ತೊಂದು ಮರಕ್ಕೆ ಅಲ್ಯೂಮಿನಿಯಂ ಏಣಿ ಬದಲಾಯಿಸುವಾಗ ವಿದ್ಯುತ್ ಲೈನ್ ಗಳಿಗೆ ಏಣಿಗಳು ತಗುಲಿ ಕಾರ್ಮಿಕರು ದಾರುಣವಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದನ್ನ ಖುದ್ದು ತೋಟದ ಮಾಲಿಕರು ಸಹ ಒಪ್ಪಿಕೊಳ್ಳುತ್ತಿದ್ದಾರೆ.


ಈ ಏಣಿಗಳು ಚೀಪ್ ಹೌದು, ಆದರೆ ಡೇಂಜರ್ ಕೂಡಾ


ಅಲ್ಯೂಮಿನಿಯಂ ಏಣಿಗಳನ್ನು ಬಳಸದಂತೆ ಕಾರ್ಮಿಕ ಇಲಾಖೆ ಕೂಡ ಸಾಕಷ್ಟು ಅರಿವು ಮೂಡಿಸಲು ಪ್ರಯತ್ನಿಸಿದೆ. ಅಲ್ಯೂಮಿನಿಯಂ ಏಣಿಗಳಿಗೆ ಬದಲಾಗಿ ಬಿದಿರು ಮತ್ತು ಫೈಬರ್ ಏಣಿಗಳನ್ನು ಬಳಸುವಂತೆ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದೆ. ಇಷ್ಟಾದರೂ ಅಲ್ಯೂಮಿನಿಯಂ ಏಣಿಗಳು ದೀರ್ಘಕಾಲ ಬಳಕೆಗೆ ಬರುತ್ತವೆ, ಸುಲಭವಾಗಿ ಮನೆ ಬಾಗಿಲಿಗೆ ಅವುಗಳು ಪೂರೈಕೆ ಆಗುತ್ತವೆ ಎಂಬ ಕಾರಣಕ್ಕೆ ತೋಟದ ಮಾಲೀಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಯೂಮಿನಿಯಂ ಏಣಿಗಳನ್ನೇ ಬಳಸುತ್ತಿರೋದೆ ನಾಲ್ಕು ವರ್ಷದಲ್ಲಿ 42 ಕಾರ್ಮಿಕರು ದಾರುಣವಾಗಿ ಜೀವ ಕಳೆದುಕೊಳ್ಳುವುದಕ್ಕೆ ಕಾರಣ.


ಫೈಬರ್ ಏಣಿ ಬಳಸಲು ಸೂಚನೆ


ಇಷ್ಟು ಪ್ರಮಾಣದಲ್ಲಿ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೊಡಗು ಜಿಲ್ಲಾಧಿಕಾರಿ ಡಾ ಬಿ. ಸಿ ಸತೀಶ್ ಅಲ್ಯೂಮೀನಿಯಂ ಏಣಿ ಬದಲಿಗೆ ಫೈಬರ್ ಏಣಿ ಬಳಸಿ ಅಂತ ಜಿಲ್ಲೆಯ ತೋಟದ ಮಾಲಿಕರಿಗೆ ತಿಳಿಸಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮೃತಪಟ್ಟವರ ಸಂಖ್ಯೆ ನೋಡುವುದಾರೆ 2021 ರಲ್ಲಿ 2 ಕಾರ್ಮಿರು ಮೃತಪಟ್ಟಿದ್ರೆ, 2021-22 ನೇ ಸಾಲಿನಲ್ಲಿ 5 ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ: Sawfish: ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಿತ್ತು ಗರಗಸ ಮೀನು..! ಹೇಗಿದೆ ನೋಡಿ


ಫೈಬರ್ ಮತ್ತು ಬಿದಿರಿನ ಏಣಿ ಬಳಕೆ


ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮಘಟ್ಟದ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಕೊಡಗು ಜಿಲ್ಲೆ ಮಾತ್ರವಲ್ಲ, ಹೆಚ್ಚಾಗಿ ಕಾಫಿ ಮೆಣಸು ಬೆಳೆಯುವ ಎಲ್ಲಾ ಜಿಲ್ಲೆಗಳ ರೈತರು ಅಲ್ಯೂಮಿನಿಯಂ ಏಣಿ ಬದಲಿಗೆ, ಫೈಬರ್ ಮತ್ತು ಬಿದಿರಿನ ಏಣಿ ಬಳಕೆ ಮಾಡುವಂತೆ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಅಲ್ಯೂಮಿನಿಯಂ ಏಣಿ ತಾಗಿ ಕಾರ್ಮಿಕರು ಮೃತಪಟ್ಟರೆ ಅದಕ್ಕೆ ಯಾವುದೇ ಪರಿಹಾರವೂ ಇಲ್ಲ


ಕಾಫಿ ತೋಟಗಳಲ್ಲಿ ಕೊಯ್ಲು ಸಂದರ್ಭ ವಿದ್ಯುತ್ ಲೈನಿಗೆ ಅಲ್ಯೂಮಿನಿಯಂ ಏಣಿ ತಾಗಿ ಕಾರ್ಮಿಕರು ಮೃತಪಟ್ಟರೆ ಅದಕ್ಕೆ ಯಾವುದೇ ಪರಿಹಾರ ದೊರೆಯುವುದಿಲ್ಲ. ವಿದ್ಯುತ್ ಇಲಾಖೆ, ಸರ್ಕಾರವೇ ಆಗಲಿ ಪರಿಹಾರ ಕೊಡೋಕೆ ಬರಲ್ಲ.


ಇದನ್ನೂ ಓದಿ: Bengaluru: ಪರೀಕ್ಷೆ ಹತ್ತಿರವಾಗ್ತಿದ್ದಂತೆ ಶಾಕ್ ಕೊಟ್ಟ ಖಾಸಗಿ ಶಾಲೆಗಳು, ಫುಲ್​ ಫೀಸ್ ಕಟ್ಟಿಲ್ಲ ಅಂದ್ರೆ ನೋ ಎಕ್ಸಾಂ


ಇನ್ನು ತೋಟದ ಮಾಲಿಕರು ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಕೊಟ್ರೆ ಆಯ್ತು ಇಲ್ಲಾಂದ್ರೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲಾಡಳಿತ ಕೂಡ ಅಲ್ಯೂಮಿನಿಯಂ ಏಣಿಗಳ ಬಳಕೆಯನ್ನು ನಿಷೇಧಿಸುವ ಹಕ್ಕಿಲ್ಲದೆ, ಅತ್ತ ಕಾರ್ಮಿಕರ ಪ್ರಾಣವನ್ನು ಉಳಿಸೋಕೆ ಆಗ್ದೇ ಹೆಣಗಾಡ್ತಿದೆ.

First published: