• Home
  • »
  • News
  • »
  • state
  • »
  • Hijab Row: ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿದ್ದ ಪ್ರಾಂಶುಪಾಲರಿಗೆ ಜೀವ ಬೆದರಿಕೆ 

Hijab Row: ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿದ್ದ ಪ್ರಾಂಶುಪಾಲರಿಗೆ ಜೀವ ಬೆದರಿಕೆ 

ಪ್ರಾಂಶುಪಾಲ ವಿಜಯ್

ಪ್ರಾಂಶುಪಾಲ ವಿಜಯ್

ಮಹಮ್ಮದ್ ತೌಸಿಫ್ ಎಂಬಾತ ನೀನು ಹೆಚ್ಚು ದಿನ ಬದುಕಲ್ಲ, ಹಜಾಮ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾನೆ. ಇದು ಪ್ರಾಂಶುಪಾಲ ವಿಜಯ್ ಅವರ ಗಮನಕ್ಕೆ ಬಂದಿದ್ದು ಮಡಿಕೇರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

  • Share this:

ಹಿಜಾಬ್ (Hijab) ಧರಿಸಿಯೇ ತರಗತಿಗೆ ಪ್ರವೇಶಿಸಲು ಪ್ರಯತ್ನಿಸಿದ್ದ ವಿದ್ಯಾರ್ಥಿನಿಯರ (Students) ವಿರುದ್ಧ ಶುಕ್ರವಾರ ಗರಂ ಆಗಿದ್ದ ಪ್ರಾಂಶುಪಾಲರಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಕೊಲೆ ಬೆದರಿಕೆ ಹಾಕಲಾಗಿದೆ. ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ (Madikeri Gov Junior College) ಪ್ರಾಂಶುಪಾಲ ವಿಜಯ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಹಿಜಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿರಿಸಿ ತರಗತಿಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೆ ತರಗತಿಗೆ ಹೋಗಲು ಯತ್ನಿಸಿದ್ದರು. ಈ ವೇಳೆ ಪ್ರಾಂಶುಪಾಲ ವಿಜಯ್ ಅವರು ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿದ್ದರು.


ಹಿಜಾಬ್ ತೆಗೆಯದಿದ್ದರೆ ಕಾಲೇಜಿನಿಂದ ಹೊರಗೆ ಹೋಗಿ ಎಂದು ರೇಗಾಡಿದ್ದರು. ಆದರು ವಿದ್ಯಾರ್ಥಿನಿಯರು ಕಾಲೇಜು ಕೊಠಡಿ ಬಳಿಯೇ ಇದ್ದಾಗ ಪೊಲೀಸರನ್ನು ಕರೆದು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಇಲ್ಲ ಅರೆಸ್ಟ್ ಮಾಡಿ ಕೇಸು ಹಾಕಿ. ಇವರಿಂದಾಗಿ ಉಳಿದ ವಿದ್ಯಾರ್ಥಿಗಳ ಪಾಠ ಪ್ರವಚನನಕ್ಕೂ ತೊಂದರೆ ಆಗುತ್ತಿದೆ ಎಂದು ಕೂಗಾಡಿದ್ದರು.


ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ


ಈ ಕುರಿತು ನ್ಯೂಸ್ 18 ಕನ್ನಡ ಸುದ್ಧಿ ಪ್ರಸಾರ ಮಾಡಿತ್ತು. ಇದನ್ನೆಲ್ಲವನ್ನು ಗಮನಿಸಿದ್ದ ಮಹಮ್ಮದ್ ತೌಸಿಫ್ ಎಂಬಾತ ನೀನು ಹೆಚ್ಚು ದಿನ ಬದುಕಲ್ಲ, ಹಜಾಮ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾನೆ. ಇದು ಪ್ರಾಂಶುಪಾಲ ವಿಜಯ್ ಅವರ ಗಮನಕ್ಕೆ ಬಂದಿದ್ದು ಮಡಿಕೇರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.


ಇದನ್ನೂ ಓದಿ:  Hijab ಪರವಾಗಿ ಪ್ರತಿಭಟನೆ ನಡೆಸಿದ್ದ 58 ವಿದ್ಯಾರ್ಥಿನಿಯರು ಕಾಲೇಜಿನಿಂದ ಅಮಾನತು


ಹಿಜಾಬ್ ಗಾಗಿ ಅವಕಾಶ ಕೋರಿ ವಿದ್ಯಾರ್ಥಿನಿಯರು ನಡೆಸುತ್ತಿರುವ ಪ್ರತಿಭಟನೆ ಕೊಡಗಿನಲ್ಲಿ 6 ನೇ ದಿನವೂ ಮುಂದುವರಿದಿದೆ. ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ ಐದು ವಿದ್ಯಾರ್ಥಿನಿಯರು ಶನಿವಾರವೂ ಪ್ರತಿಭಟನೆ ಮುಂದುವರಿಸಿದರು.


ಕಾಲೇಜ್ ಗೇಟ್ ಮುಂಭಾಗ ವಿದ್ಯಾರ್ಥಿನಿಯರ ಪ್ರತಿಭಟನೆ


ಶನಿವಾರವೂ ಹಿಜಾಬ್ ಧರಿಸಿ ಬಂದಿದ್ದ ಐದು ವಿದ್ಯಾರ್ಥಿನಿಯರು ತರಗತಿಗೆ ಹೋಗಲು ಪ್ರಯತ್ನಿಸಿದರು. ಆದರೆ ಪ್ರಾಂಶುಪಾಲ ವಿಜಯ್ ಅವರು ಹಿಜಬ್ ತೆಗೆಯದಿದ್ದರೆ ತರಗತಿಗೆ ಬರಬೇಡಿ ಎಂದು ಸೂಚಿಸಿದರು. ಇದರಿಂದ ನೇರ ಹೊರನೆಡೆದ ವಿದ್ಯಾರ್ಥಿಗಳು ಕಾಲೇಜು ಗೇಟ್ ಮುಂಭಾಗ ಕುಳಿತು ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು.


ಈ ವೇಳೆ ಮಾತನಾಡಿದ ವಿದ್ಯಾರ್ಥಿ ಸಾನಿಯಾ ಮೂರು ದಿನಗಳಿಂದ ನಮಗೆ ತರಗತಿಗೆ ಹೋಗಲು ಅವಕಾಶ ನೀಡುತ್ತಿಲ್ಲ. ಸೋಮವಾರದಿಂದ ಪ್ರಾಕ್ಟಿಕಲ್ ಪರೀಕ್ಷೆ ಇದೆ. ಹಿಜಬ್ ಧರಿಸಿಯೇ ನಮಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಿ. ಇಲ್ಲದಿದ್ದರೆ ಕಾಲೇಜಿನ ಹೊರಗೆ ಕುಳಿತುಕೊಳ್ಳುತ್ತೇವೆ. ಅಲ್ಲಿಗೆ ಪೇಪರ್ ಕೊಡಲಿ, ಹೊರಗೆ ಕುಳಿತು ಪರೀಕ್ಷೆ ಬರೆಯುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನಿಲ್ಲದ ಹಿಜಾಬ್ ಪ್ರತಿಭಟನೆ


ನಮಗೆ ಫ್ಯೂಚರ್ ಗೆ ಎಜುಕೇಷನ್ ಬೇಕು. ಹಾಗೆಯೇ ಹಿಜಬ್ ಕೂಡ ಮುಖ್ಯ ಎಂದಿದ್ದಾರೆ. ಮತ್ತೊಂದೆಡೆ ಮಡಿಕೇರಿಯ ಎಫ್ಎಂಸಿ ಕಾಲೇಜಿನಲ್ಲೂ ಹಿಜಾಬ್ ಮತ್ತು ಬುರ್ಖಾ ಧರಿಸಿಯೇ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. ಆದರೆ ಪ್ರಾಂಶುಪಾಲರು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದಿದ್ದರಿಂದ ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರ ನಡೆಯಬೇಕಾಯಿತು. ಒಟ್ಟಿನಲ್ಲಿ ಕೊಡಗಿನಲ್ಲಿ ಹಿಜಾಬ್ ಬೇಕೆಂಬ ಹೋರಾಟ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ.


ಇದನ್ನೂ ಓದಿ:  Hijab Row: ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ.. ಯಾರಿಗೆಲ್ಲಾ ಇದು ಅನ್ವಯ?


ಶಿವಮೊಗ್ಗದಲ್ಲಿ 58 ವಿದ್ಯಾರ್ಥಿನಿಯರು ಅಮಾನತು


ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ (Shiralakoppa, Shivamogga) ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದ 58 ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಶಾಲಾ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಶಿರಾಳಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಅಮಾನತು ಮಾಡಿ ಆದೇಶ ಪ್ರಕಟಿಸಿದೆ. ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ಶಾಲಾ ಆಡಳಿತ ಮಂಡಳಿಯ ನಿರ್ಧಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ

Published by:Mahmadrafik K
First published: