• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu Rain: ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಡಿತ

Kodagu Rain: ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಡಿತ

ಮಳೆಯಿಂದ ರಸ್ತೆ ಸಂಪರ್ಕ ಕಡಿತ

ಮಳೆಯಿಂದ ರಸ್ತೆ ಸಂಪರ್ಕ ಕಡಿತ

ಸೇತುವೆಯ ಮೇಲೆ ಒಂಭತ್ತು ಅಡಿಯಷ್ಟು ಕಾವೇರಿ ನದಿ ನೀರು ಹರಿಯುತ್ತಿದ್ದು, ಪಾರಾಣೆ, ಕೂಡು ಪರಂಬು ಮತ್ತು ನಾಲ್ಕನೇ ಮೈಲು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

  • Share this:

ಕೊಡಗು (ಜೂ. 17):  ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುುತ್ತಿದ್ದ ಮಳೆ ಮತ್ತಷ್ಟು ತೀವ್ರಗೊಂಡಿದೆ. ತಲಕಾವೇರಿಿ, ಬಾಗಮಂಡಲ ಮತ್ತು ನಾಪೋಕ್ಲು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಪರಿಣಾಮ ಕಾವೇರಿ ನದಿಯ ನೀರಿನ ಹರಿಯುವಿಕೆ ಭಾರೀ ಏರಿಕೆ ಕಂಡಿದೆ. ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಹಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಡಿಕೇರಿ ತಾಲ್ಲೂಕಿನ ಕಣ್ವ ಬಲಮುರಿಯಲ್ಲಿ ಪಾರಾಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಮೇಲೆ ಒಂಭತ್ತು ಅಡಿಯಷ್ಟು ಕಾವೇರಿ ನದಿ ನೀರು ಹರಿಯುತ್ತಿದ್ದು, ಪಾರಾಣೆ, ಕೂಡು ಪರಂಬು ಮತ್ತು ನಾಲ್ಕನೇ ಮೈಲು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಈ ಗ್ರಾಮಗಳ 60 ಕ್ಕೂ ಹೆಚ್ಚು ಕುಟುಂಬಗಳು ಬದಲಿ ಮಾರ್ಗ ಅನುಸರಿಸಿ ಸಂಚರಿಸಬೇಕಾಗಿದೆ. ಪಕ್ಕದಲ್ಲಿರುವ ಮೇಲ್ಸೇತುವೆ ಮೂಲಕ 9 ಕಿಲೋ ಮೀಟರ್ ಸುತ್ತಿ ಬಳಸಿ ಮೂರ್ನಾಡಿಗೆ ಬರಬೇಕಾಗಿದೆ.


ಕಳೆದ ಮೂರು ವರ್ಷಗಳಿಂದಲೂ ಈ ಭಾಗದ ಜನರು ತೀವ್ರ ಸಮಸ್ಯೆ ಅನುಭವಿಸುತಿದ್ದಾರೆ. ಜಿಲ್ಲೆಯಲ್ಲಿ ಮಳೆ ಮತ್ತಷ್ಟು ತೀವ್ರಗೊಂಡಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲೂ ಮತ್ತಷ್ಟು ಹೆಚ್ಚಳವಾಗಲಿದೆ. ಒಂದು ವೇಳೆ ಮಳೆ ಹೀಗೆ ಜಾಸ್ತಿ ಆದಲ್ಲಿ ಬಲಮುರಿ ಗ್ರಾಮಕ್ಕೂ ನದಿ ನೀರು ನುಗ್ಗಿ ಪ್ರವಾಹ ಬರುವ ಆತಂಕವಿದೆ ಎನ್ನುತ್ತಿದ್ದಾರೆ ಸ್ಥಳೀಯರಾದ ಅಬ್ದುಲ್ಲಾ ಮತ್ತು ಮಹಾದೇವಾ. ಕಳೆದ ಬಾರಿಯೂ ಕೂಡ ಬಲಮುರಿ ಗ್ರಾಮ ಒಂದು ವಾರಗಳ ಕಾಲ ಕಾವೇರಿ ಪ್ರವಾಹದ ನೀರಿನಲ್ಲಿ ಸಂಪೂರ್ಣ ಮುಳುಗಡೆ ಆಗಿತ್ತು. ಈ ವೇಳೆ ತಮ್ಮ ಹೊಟೇಲ್ ಮನೆಗಳು ಎಲ್ಲವೂ ಮುಳುಗಡೆಯಾಗಿದ್ದವು. ಈಗಲೂ ಅಂತಹ ಸ್ಥಿತಿ ಯಾವಾಗ ನಿರ್ಮಾಣವಾಗುತ್ತದೆಯೋ ಎನ್ನುವ ಆತಂಕವಿದೆ ಎನ್ನುತ್ತಿದ್ದಾರೆ ಸ್ಥಳೀಯರು.


ಇದನ್ನು ಓದಿ: ಮಲೆನಾಡು, ಕರಾವಳಿಯಲ್ಲಿ ಮಳೆಯಬ್ಬರ; ತುಂಬಿದ ಕೆರೆ ಕಟ್ಟೆಗಳು


ಕಳೆದ ಮೂರು ವರ್ಷಗಳಿಂದ ಜುಲೈ ಕೊನೆ ಅಥವಾ ಆಗಸ್ಟ್ ತಿಂಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುತಿತ್ತು. ಆದರೆ ಈ ಬಾರಿ ಜೂನ್ ತಿಂಗಳಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿರೋದು ಆತಂಕ ತಂದಿದೆ ಎನ್ನುತ್ತಿದ್ದಾರೆ. ಇನ್ನು ಮಳೆಯಿಂದ ಜಿಲ್ಲೆಯ ಹಲವೆಡೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರೆ, ಮಡಿಕೇರಿ ನಗರದಲ್ಲಿ ಕಾಲುವೆ ನೀರು ಮನೆ ಚರಂಡಿಗಳಿಗೆ ನುಗ್ಗಿದೆ. ಮಡಿಕೇರಿ ನಗರದ ಕೈಗಾರಿಕಾ ಬಡಾವಣೆಯಲ್ಲಿ ಮನೆ ಅಂಗಡಿಗಳಿಗೆ ನೀರು ನುಗ್ಗಿದೆ. ಕೈಗಾರಿಕಾ ಬಡಾವಣೆಯಲ್ಲಿರುವ ಕುಮಾರ್ ವಿಲಾಸ್ ಎಂಬುವರ ಮನೆಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿ ದಿನಸಿ ವಸ್ತುಗಳು ಹಾಳಾಗಿವೆ. ಹಾಗೇ ರವೂಫ್ ಎಂಬುವವರ ಮೊಬೈಲ್ ಅಂಗಡಿಗೂ ನೀರು ನುಗ್ಗಿ ಅಂಗಡಿಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್ ಬಿಡಿಭಾಗಗಳ ಹಾಳಾಗಿವೆ.


ಇನ್ನು ಭೇತ್ರಿ ಬಳಿ ಕಾವೇರಿ ನದಿಯಲ್ಲಿ ಭಾರಿ ನೀರು ಹರಿಯುತ್ತಿದ್ದು ಮಳೆ ಹೀಗೆ ಮುಂದುವರಿದರೆ ಭೇತ್ರಿ ಸೇತುವೆ ಕಾವೇರಿ ನದಿ ನೀರಿನಿಂದ ಮುಳುಗಡೆಯಾಗಲಿದೆ. ಇದರಿಂದ ವಿರಾಜಪೇಟೆ ಮತ್ತು ಮಡಿಕೇರಿ ನಡುವಿನ ಸಂಪರ್ಕ ಕಡಿತಗೊಳ್ಳಲಿದೆ.


ಇನ್ನು  ಮಲೆನಾಡು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆ ಅಬ್ಬರ ಹೆಚ್ಚಾಗಿದ್ದು, ಬಹುತೇಕ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದೆ.  ಭಾರೀ ಗಾಳಿ-ಮಳೆಯಿಂದ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು,  ಜನರು ಕತ್ತಲಲ್ಲಿ ಬದುಕುವಂತಾಗಿದೆ. ಮಳೆರಾಯನ ಅಬ್ಬರ ಜೋರಾಗಿದ್ದು, ಅನೇಕ ನದಿಗಳು ಮೈದುಂಬಿ ಹರಿಯುತ್ತಿದೆ. ಮಳೆಯಿಂದ ಜನ ಮನೆಯಿಂದ ಹೊರಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

top videos
    First published: