ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮತ್ತೆ 5 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್​ಗೆ ಶಿಫ್ಟ್​

Madhya Pradesh Political Crisis: ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ರೆಸಾರ್ಟ್​ನಲ್ಲಿ ಬೀಡು ಬಿಟ್ಟಿರುವ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದರು. ಆ 19 ಶಾಸಕರ ಜೊತೆ ಇನ್ನೂ ನಾಲ್ಕೈದು ಶಾಸಕರು ಬೆಂಗಳೂರಿನ ರೆಸಾರ್ಟ್​ ಸೇರಿಕೊಂಡಿದ್ದಾರೆ.

ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್​ಶೈರ್ ರೆಸಾರ್ಟ್​

ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್​ಶೈರ್ ರೆಸಾರ್ಟ್​

  • Share this:
ಚಿಕ್ಕಬಳ್ಳಾಪುರ (ಮಾ. 11): ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಕಮಲನಾಥ್ ಸರ್ಕಾರಕ್ಕೆ ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಸಿಂಧಿಯಾ ಬಣದಲ್ಲಿ ಗುರುತಿಸಿಕೊಂಡಿದ್ದ 19 ಶಾಸಕರು ಬೆಂಗಳೂರಿನ ರೆಸಾರ್ಟ್​ನಿಂದಲೇ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದರು. ಈ ಮೂಲಕ ಕರ್ನಾಟಕ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ರೆಸಾರ್ಟ್​ ರಾಜಕಾರಣದ ಕಾವು ಏರಿದೆ. ಇದೀಗ ಮತ್ತೆ 4ರಿಂದ 5 ಶಾಸಕರು ಮಧ್ಯಪ್ರದೇಶದಿಂದ ಬೆಂಗಳೂರಿನ ರೆಸಾರ್ಟ್​ಗೆ ಆಗಮಿಸಿದ್ದಾರೆ.

ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಎಂ ಕಮಲನಾಥ್ ಮೇಲೆ ಮುನಿಸಿಕೊಂಡು ಅವರ ಸರ್ಕಾರದ 19 ಶಾಸಕರು ಬೆಂಗಳೂರಿನ ರೆಸಾರ್ಟ್​ಗೆ ಶಿಫ್ಟ್​ ಆಗಿದ್ದರು. ಅದರ ಬೆನ್ನಲ್ಲೇ ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸೋಮವಾರ ರಾತ್ರಿ ಕಮಲನಾಥ್​ ಸಂಪುಟದ 22 ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ನಿನ್ನೆ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್​ಶೈರ್  ರೆಸಾರ್ಟ್​ನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದರು. ಆ 19 ಶಾಸಕರ ಜೊತೆ ಇನ್ನೂ ನಾಲ್ಕೈದು ಶಾಸಕರು ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್​ಶೈರ್ ರೆಸಾರ್ಟ್​ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಮುಂದುವರಿದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ನಾಳೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ

ವೈಟ್​ಫೀಲ್ಡ್​ ಬಳಿ ಇದ್ದ ರೆಸಾರ್ಟ್​ನಲ್ಲಿ ತಂಗಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ನಂತರ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್​ಶೈರ್ ರೆಸಾರ್ಟ್​ಗೆ ಶಿಫ್ಟ್ ಆಗಿದ್ದರು. ಕಳೆದ ಬಾರಿ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆದು, ಕಾಂಗ್ರೆಸ್- ಜೆಡಿಎಸ್​ ಮೈತ್ರಿ ಸರ್ಕಾರ ಪತನವಾದ ಸಂದರ್ಭದಲ್ಲಿ ಜೆಡಿಎಸ್ ಶಾಸಕರು ಇದೇ ಗಾಲ್ಫ್​ಶೈರ್ ರೆಸಾರ್ಟ್​ನಲ್ಲಿ ತಂಗಿದ್ದರು. ಕರ್ನಾಟಕದ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಈ ರೆಸಾರ್ಟ್​ನಲ್ಲಿ ಈಗ ಮಧ್ಯಪ್ರದೇಶ ಸರ್ಕಾರದ ಪತನದ ಕಾರ್ಯಾಚರಣೆ ಶುರುವಾಗಿದೆ.

ಇದನ್ನೂ ಓದಿ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ; ಕೊರೋನಾ ವೈರಸ್​ ಕಾಲರ್​ ಟ್ಯೂನ್​ಗೆ ಡಿಕೆ ಶಿವಕುಮಾರ್ ವ್ಯಂಗ್ಯ

ಮಧ್ಯಪ್ರದೇಶದ ಶಾಸಕರು ಹಾಗೂ ಸಂಸದರು ನಿನ್ನೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು, ಬೆಂಗಳೂರಿನಲ್ಲಿ ತಂಗಿರುವ ತಮಗೆ ರಕ್ಷಣೆ ನೀಡುವಂತೆ ಕೋರಿದ್ದರು. ‘ಮಧ್ಯಪ್ರದೇಶದ ಶಾಸಕರು ಹಾಗೂ ಸಂಸದರಾದ ನಾವು ಸ್ವಯಂಪ್ರೇರಿತರಾಗಿ ಬೆಂಗಳೂರಿಗೆ ಬಂದಿದ್ದೇವೆ. ಇಲ್ಲಿ ಓಡಾಡಲು ಹಾಗೂ ಉಳಿದುಕೊಳ್ಳಲು ನಮಗೆ ರಕ್ಷಣೆ ಬೇಕಾಗಿದೆ. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಪೊಲೀಸರಿಂದ ಭದ್ರತೆ ಕೊಡಿಸಬೇಕು’ಎಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಮಧ್ಯಪ್ರದೇಶದ ಶಾಸಕರಾದ ತುಳಸಿ ಸಿಲಾವತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರಭುರಾಮ್ ಚೌಧರಿ, ರಣವೀರ್ ಜಟಾಯು, ಪ್ರಭು ನಾರಾಯಣ ಚೌಧರಿ, ರಾಜವರ್ಧನ್‌ ಸಿಂಗ್, ಕಮಲೇಶ್ ಜಟಾಯು, ಮುನ್ನಾಲಾಲ್ ಗೋಯಲ್, ಜಸ್ವಂತ್, ರಘುರಾಜ್, ಹರ್ಮನ್‌ ಸಿಂಗ್, ಸುರೇಶ್, ಗೋವಿಂದ್‌ಸಿಂಗ್ ರಜಪೂತ್, ಇಮ್ರಾತಿ ದೇವಿ, ಪ್ರದ್ಯುಮ್ನ ಸಿಂಗ್ ತೋಮರ್, ಗೋವಿಂದ್‌ರಾಜ್, ಜೈಪಾಲ್‌ ಸಿಂಗ್ ಬೆಂಗಳೂರಿನ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದಾರೆ.
First published: