ಧಾರವಾಡ(ಆ.31) : ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ ಲೆಫ್ಟಿನಂಟ್ ಜನರಲ್ ಆಗಿ ಬಡ್ತಿ ಪಡೆದ ಡಾ. ಮಾಧುರಿ ಕಾನಿಟ್ಕರ್ ಅವರು ಧಾರವಾಡದವರು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಇದು ಧಾರವಾಡ ಜಿಲ್ಲೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಹೆಮ್ಮೆ ಪಡುವಂತ ವಿಷಯವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಹರಿದಾಡುತ್ತಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸಹ ಈ ವಿಷಯವನ್ನು ಟ್ವಿಟ್ ಮಾಡಿದ್ದಾರೆ. ಇದಕ್ಕೆ ಡಾ. ಮಾಧುರಿ ಅವರು ಧನ್ಯವಾದದ ರೀ ಟ್ವಿಟ್ ಮಾಡುವ ಮೂಲಕ ತಾನೂ ಧಾರವಾಡದವಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹೌದು, ನಗರದ ದರೋಗಾ ಓಣಿಯಲ್ಲಿ ಕಳೆದ 1961 ರಲ್ಲಿ ಮಾಧುರಿ ಅವರು ಧಾರವಾಡದಲ್ಲಿ ಜನಿಸದ್ರೂ ಎಂದು ತಿಳಿದು ಬಂದಿದೆ. ಸರಳಾದೇವಿ ಖೋತ್ ಎಂಬ ವೈದ್ಯರ ಮೊಮ್ಮಗಳು ಆಗಿರುವ ಡಾ.ಮಾಧುರಿ, ವೃತ್ತಿಯಲ್ಲಿ ಶಿಶು ವೈದ್ಯೆ.
ವಕೀಲ ಪ್ರಶಾಂತ್ ಭೂಷಣ್ಗೆ 6 ತಿಂಗಳು ಸಜೆಯೋ, 2 ಸಾವಿರ ದಂಡವೋ? ಇಂದು ಸುಪ್ರೀಂ ತೀರ್ಪು
ಗೋಪಾಲರಾವ್ ಖೋತ ಹಾಗೂ ಹೇಮಲತಾ ಖೋತ ಎಂಬ ದಂಪತಿಯ ಮಗಳಾದ ಮಾಧುರಿ ಕುಟುಂಬ ಕಳೆದ 40 ವರ್ಷಗಳ ಹಿಂದೆಯೇ ಧಾರವಾಡದಿಂದ ಪುಣೆಗೆ ಹೋಗಿದ್ದರು. ಹೀಗಾಗಿ ಡಾ.ಮಾಧುರಿ ಅವರ ಎಲ್ಲ ಶಿಕ್ಷಣ ಪುಣೆಯಲ್ಲೇ ಮುಗಿಸಿದ್ದಾರೆ. ಅದಾದ ನಂತರ ಮಾಧುರಿ ಆರ್ಮಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಪ್ರೊಫೆಸರ್ ಆಗಿದ್ದರು. ಅದಾದ ನಂತರ ಆರ್ಮಿಯಲ್ಲಿ ವೈದ್ಯಾಧಿಕಾರಿ ಸೇವೆ ಆರಂಭ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ