ನಾನು ಮಾತ್ರವಲ್ಲ, ಗೀತಾ ಶಿವರಾಜ್​ಕುಮಾರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ; ಮಧು ಬಂಗಾರಪ್ಪ

ಕಾಂಗ್ರೆಸ್ ಸೇರಲು ಶಿವಕುಮಾರ್ ಅಣ್ಣ ನನಗೆ ಮೊದಲಿನಿಂದಲೂ ಹೇಳುತ್ತಿದ್ದರು. ಈ ದೇಶಕ್ಕೆ ಕಾಂಗ್ರೆಸ್‌ನ ಅವಶ್ಯಕತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿ ನಿಷ್ಟನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸೇರಲು ಒಂದು ವರ್ಷ ನಾನು ಸಮಯ ತೆಗೆದುಕೊಂಡೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಮಧು ಬಂಗಾರಪ್ಪ

ಮಧು ಬಂಗಾರಪ್ಪ

 • Share this:
  ಬೆಂಗಳೂರು (ಮಾ. 12): ಜೆಡಿಎಸ್​ಗೆ ಪಕ್ಷ ತೊರೆದು ಮಧು ಬಂಗಾರಪ್ಪ ಕಾಂಗ್ರೆಸ್​ಗೆ ಸೇರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಮಧು ಬಂಗಾರಪ್ಪ,  ಬಂಗಾರಪ್ಪ ಅವರ ಬೆಂಬಲಿಗರಾಗಿ ಡಿಕೆ ಶಿವಕುಮಾರ್ ಕೆಲಸ‌ ಮಾಡಿದ್ದರು. ಡಿಕೆಶಿ ಅಧ್ಯಕ್ಷತೆಯಲ್ಲಿ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸೇರಲು ಶಿವಕುಮಾರ್ ಅಣ್ಣ ನನಗೆ ಮೊದಲಿನಿಂದಲೂ ಹೇಳುತ್ತಿದ್ದರು. ಈ ದೇಶಕ್ಕೆ ಕಾಂಗ್ರೆಸ್‌ನ ಅವಶ್ಯಕತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿ ನಿಷ್ಟನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸೇರಲು ಒಂದು ವರ್ಷ ನಾನು ಸಮಯ ತೆಗೆದುಕೊಂಡೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

  ಗೀತಾ ಶಿವರಾಜಕುಮಾರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ. ಸಂಬಂಧ ಒಂದು ಕಡೆ, ಪಕ್ಷ ಇನ್ನೊಂದೆಡೆ. ಹೀಗಾಗಿ ಕೆಲವು ದಿನಗಳಲ್ಲಿ ಗೀತಾ ಕಾಂಗ್ರೆಸ್ ಸೇರುತ್ತಾರೆ. ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್​ಗೆ ಬಂದಿದ್ದಾರೆ ಅಂತಲೇ ಎಂದುಕೊಳ್ಳಿ ಎನ್ನುವ ಮೂಲಕ ಮಧು ಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.

  ಬೆನ್ನಿಗೆ ಚೂರಿ ಹಾಕುವುದು ಹೊಸದಲ್ಲ ಎನ್ನುವ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ಅವರಿಗೆ ನಾನು ಅಣ್ಣನ ಸ್ಥಾನ ಕೊಟ್ಟಿದ್ದೇನೆ. ಅದನ್ನು ಅಷ್ಟಕ್ಕೇ ಮಾತ್ರ ಸೀಮಿತಗೊಳಿಸುತ್ತೇನೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಪ್ರತಿಕ್ರಿಯೆ ಕೊಡಲು ಮನಸ್ಸು ಒಪ್ಪುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಏನೇನು ಆಗಿದೆ , ಈ ಬಗ್ಗೆ ನೀವೇ ವಿಶ್ಲೇಷಣೆ ಮಾಡಬಹುದು ಎಂದಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿದ್ಯಾರ್ಥಿ ಜೀವನದಿಂದ ಗುರುತಿಸಿ ಬೆಳೆಸಿದವರು ಬಂಗಾರಪ್ಪನವರು. ನಾನು ವಿದ್ಯಾರ್ಥಿಯಾಗಿದ್ದಾಗ ಬಂಗಾರಪ್ಪ ಆಕರ್ಷಿಸಿದರು. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಇಂದು ಭೇಟಿ ಮಾಡಿದ್ದಾರೆ. ಬಹಳ ವರ್ಷದಿಂದ ಗಾಳ ಹಾಕಿಕೊಂಡು ಬಂದಿದ್ದೆವು. ವಿದ್ಯಾರ್ಥಿ ಜೀವನದಿಂದ ನನ್ನನ್ನು ಗುರುತಿಸಿ ಬೆಳೆಸಿದವರು ಬಂಗಾರಪ್ಪನವರು. ನಾನು ವಿದ್ಯಾರ್ಥಿಯಾಗಿದ್ದಾಗ ಬಂಗಾರಪ್ಪ ಆಕರ್ಷಿಸಿದರು. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಇಂದು ಭೇಟಿ ಮಾಡಿದ್ದಾರೆ. ಬಹಳ ವರ್ಷದಿಂದ ಗಾಳ ಹಾಕಿಕೊಂಡು ಬಂದಿದ್ದೆವು. ಈಗ ಅವರು ಕಾಂಗ್ರೆಸ್​ಗೆ ಸೇರಲು ಗಳಿಗೆ ಕೂಡಿಬಂದಿದೆ ಎಂದಿದ್ದಾರೆ.

  ಮಧು ಬಂಗಾರಪ್ಪ ಅವರ ತಂದೆ ಕಾಂಗ್ರೆಸ್ ಪಕ್ಷ ಸಂಘಟನೆಗೆ ಬಲ ನೀಡಿದ್ದರು. ಆಕಾಶದಿಂದ ಬಿದ್ದ ನೀರು ಕೊನೆಗೆ ಸಮುದ್ರಕ್ಕೆ ಸೇರಬೇಕು. ಕಾಂಗ್ರೆಸ್ ಪಕ್ಷ ದೊಡ್ಡ ಸಾಗರ ಇದ್ದಂತೆ. ಹೈಕಮಾಂಡ್ ವರಿಷ್ಠರು ಕೂಡ ಮಧು ಬಂಗಾರಪ್ಪ ಭೇಟಿ ಬಗ್ಗೆ ಸೂಚಿಸಿದ್ದರು. ಹೈಕಮಾಂಡ್ ಕರೆಸಿಕೊಂಡು ಭೇಟಿ ಮಾಡಿದ್ದರು. ಘಳಿಗೆ ಕಾಲ ಈಗ ಕೂಡಿ ಬಂದಿದೆ ಎಂದು ಡಿಕೆಶಿ ಹೇಳಿದ್ದಾರೆ.
  Published by:Sushma Chakre
  First published: