• Home
 • »
 • News
 • »
 • state
 • »
 • ನಾನು ಜೆಡಿಎಸ್​ನಿಂದ ಯಾವ ಅಧಿಕಾರವನ್ನೂ ಅನುಭವಿಸಿಲ್ಲ, ಏಪ್ರಿಲ್​ನಲ್ಲಿ ಕಾಂಗ್ರೆಸ್​ ಸೇರಲಿದ್ದೇನೆ; ಮಧು ಬಂಗಾರಪ್ಪ

ನಾನು ಜೆಡಿಎಸ್​ನಿಂದ ಯಾವ ಅಧಿಕಾರವನ್ನೂ ಅನುಭವಿಸಿಲ್ಲ, ಏಪ್ರಿಲ್​ನಲ್ಲಿ ಕಾಂಗ್ರೆಸ್​ ಸೇರಲಿದ್ದೇನೆ; ಮಧು ಬಂಗಾರಪ್ಪ

ಮಧು ಬಂಗಾರಪ್ಪ

ಮಧು ಬಂಗಾರಪ್ಪ

Madhu Bangarappa: ಮಧು ಬಂಗಾರಪ್ಪ ಜೆಡಿಎಸ್​ನಿಂದ ಅಧಿಕಾರ ಎಲ್ಲ ಅನುಭವಿಸಿ, ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್​ಗೆ ಹೋಗುತ್ತಿದ್ದಾರೆ ಎಂಬ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ಜೆಡಿಎಸ್​ನಲ್ಲಿ ನಾನು ಯಾವ ಅಧಿಕಾರವನ್ನೂ ಅನುಭವಿಸಿಲ್ಲ. ಈಗ ಹೊಸದೊಂದು ಹಾದಿ ಹಿಡಿದಿದ್ದೇನೆ ಎಂದಿದ್ದಾರೆ.

ಮುಂದೆ ಓದಿ ...
 • Share this:

  ಬೆಂಗಳೂರು (ಮಾ. 11): ಜೆಡಿಎಸ್​ ತೊರೆದು ಕಾಂಗ್ರೆಸ್​ ಪಕ್ಷವನ್ನು ಸೇರಲು ನಿರ್ಧರಿಸಿರುವ ಮಾಜಿ ಸಿಎಂ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಈ ವೇಳೆ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ. ಜೆಡಿಎಸ್​ನಲ್ಲಿ ನನ್ನ ಭಾವನೆಗಳಿಗೆ ಸರಿಯಾದ ಬೆಲೆ ಸಿಕ್ಕಿಲ್ಲ. ನನ್ನ ಭಾವನೆಗಳಿಗೆ ಕಾಂಗ್ರೆಸ್ ಸೂಕ್ತ ವೇದಿಕೆ. ಹೀಗಾಗಿ, ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.


  ನಾನು ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇಂದಿನಿಂದಲೇ ಕೆಲಸ ಮಾಡಲು ಅವರು ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಸೊರಬ ಕ್ಷೇತ್ರದಲ್ಲಿ ದೊಡ್ಡ ಸಮಾವೇಶ ಆಯೋಜಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ. ನಮ್ಮ ತಂದೆಯೂ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡುತ್ತೇನೆ ಎಂದು ಹೇಳಿದರು.  ಮನಸಾರೆ ನಾನು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಅಗತ್ಯವಿದೆ. ಜೆಡಿಎಸ್​ನಲ್ಲಿ ನನ್ನ ಭಾವನೆಗೆ ಬೆಲೆ ಸಿಕ್ಕಿಲ್ಲ ಅಂತ ಹಿಂದೆಯೇ ಹೇಳಿದ್ದೆ. ನನ್ನ ಭಾವನೆಗಳಿಗೆ ಸೂಕ್ತ ವೇದಿಕೆ ಕಾಂಗ್ರೆಸ್. ಹೀಗಾಗಿ, ಸಿದ್ದರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಇವತ್ತಿನಿಂದಲೇ ಕಾಂಗ್ರೆಸ್ ಗೆ ಕೆಲಸ ಮಾಡಲಿದ್ದೇನೆ. ಏಪ್ರಿಲ್​ನಲ್ಲಿ ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರಿಕೊಳ್ಳಲಿದ್ದೇನೆ ಎಂದಿದ್ದಾರೆ.


  ಮಧು ಬಂಗಾರಪ್ಪ ಜೆಡಿಎಸ್​ನಿಂದ ಅಧಿಕಾರ ಎಲ್ಲ ಅನುಭವಿಸಿ, ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್​ಗೆ ಹೋಗುತ್ತಿದ್ದಾರೆ ಎಂಬ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ಕುಮಾರಸ್ವಾಮಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಎಲ್ಲೇ ಇದ್ದರೂ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಗೌರವ ಇರುತ್ತದೆ. ಅವರು ರಾಜಕೀಯದಲ್ಲಿ ಹಿರಿಯರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಸದ್ಯದ ರಾಜಕೀಯ ಹಾದಿಯ ಬಗ್ಗೆಯಷ್ಟೇ ಚಿಂತೆ ಮಾಡ್ತಿದ್ದೇನೆ. ಮಧು ಬಂಗಾರಪ್ಪ ವೈಯಕ್ತಿಕವಾಗಿ ಬದಲಾಗಲ್ಲ, ಪಕ್ಷ ಮಾತ್ರ ಬದಲಾವಣೆ ಆಗುತ್ತಿದೆ. ಜೆಡಿಎಸ್​ನಲ್ಲಿ ನಾನು ಯಾವ ಅಧಿಕಾರವನ್ನೂ ಅನುಭವಿಸಿಲ್ಲ. ಈಗ ಹೊಸದೊಂದು ಹಾದಿ ಹಿಡಿದಿದ್ದೇನೆ. ಕಾಂಗ್ರೆಸ್ ಪರವಾಗಿ ಇವತ್ತಿನಿಂದ ಕೆಲಸ ಮಾಡಲಿದ್ದೇನೆ ಎಂದಿದ್ದಾರೆ.

  Published by:Sushma Chakre
  First published: