ಹಗಲು ವೇಳೆ ಮನೆಗಳ್ಳತನ ‌ಮಾಡಿದ್ದ ಮೂವರು ಖತರ್ನಾಕ್ ಕಳ್ಳರ ಬಂಧಿಸಿದ ಮದ್ದೂರು ಪೊಲೀಸರು

ವಿಚಾರಣೆ ವೇಳೆ ಆರೋಪಿಗಳು ನಡೆಸಿದ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿವೆ. ಮದ್ದೂರು ಪೊಲೀಸರ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್  ಪ್ರಶಂಸಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಿದ್ದಾರೆ.

news18-kannada
Updated:May 23, 2020, 7:23 PM IST
ಹಗಲು ವೇಳೆ ಮನೆಗಳ್ಳತನ ‌ಮಾಡಿದ್ದ ಮೂವರು ಖತರ್ನಾಕ್ ಕಳ್ಳರ ಬಂಧಿಸಿದ ಮದ್ದೂರು ಪೊಲೀಸರು
ಖತರ್ನಾಕ್ ಕಳ್ಳರನ್ನು ಬಂಧಿಸಿರುವ ಮದ್ದೂರು ಪೊಲೀಸರು.
  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮದ್ದೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಸಮಾಜಕ್ಕೆ ಕಂಟಕವಾಗಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯ ದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.

ಕಳ್ಳತನ ಮಾಡಿದ್ದ ಆನಂದ (35), ಕೃಷ್ಣ ಕೆಂಚ್ಚನಹಳ್ಳಿ (65), ವೆಂಕಟೇಶ್ (55) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಪಕ್ಕದ ರಾಮನಗರ ಜಿಲ್ಲೆಯವರಾಗಿದ್ದು  ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕೃತ್ಯ ಎಸಗಿ ಇದುವರೆಗೂ ತಪ್ಪಿಸಿಕೊಂಡು ಓಡಾಡ್ತಿದ್ದರು. ವಿಚಾರಣೆ ವೇಳೆ ತಮ್ಮ ಕಳ್ಳತನದ ಕೃತ್ಯವನ್ನು ಆರೋಪಿಗಳು  ಒಪ್ಪಿಕೊಂಡಿದ್ದಾರೆ.

ಇನ್ನು  ಬಂಧಿತ ಆರೋಪಿಗಳಿಂದ ಪೋಲೀಸರು  ಸುಮಾರು 410 ಗ್ರಾಂ ಚಿನ್ನ, ಒಂದೂವರೆ ಕೆಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಟಾಟಾ ಏಸ್ ಗಾಡಿ ಮತ್ತು‌ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.

ಈ ಖತರ್ನಾಕ್ ಮನೆಗಳ್ಳರು ಕಳ್ಳತನಕ್ಕೂ ಮುನ್ನ  ಮನೆಗಳನ್ನು ಆಯ್ಕೆ ಮಾಡಿ, ಅಕ್ಕಪಕ್ಕದವರ ಚಲನವಲನ‌ ಗಮನಿಸಿ ಕೃತ್ಯ ಎಸಗುತ್ತಿದ್ದರು .ಅಲ್ಲದೇ ಹಲವೆಡೆ ಮಹಿಳೆಯರ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದರು. ಮೇ 14 ರಂದು ಮದ್ದೂರು ತಾಲೂಕಿನ ವಡ್ಡರದೊಡ್ಡಿ ರೈಲ್ವೆ ನಿಲ್ದಾಣ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ನಡೆಸಿದ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿವೆ. ಮದ್ದೂರು ಪೊಲೀಸರ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್  ಪ್ರಶಂಸಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಿದ್ದಾರೆ.

ಇದನ್ನು ಓದಿ: ಸಕ್ಕರೆನಾಡಿನಲ್ಲಿ ನಿಲ್ಲದ ಕೊರೋನಾ ರಣಕೇಕೆ; ಜಿಲ್ಲೆಯಲ್ಲಿ 237ಕ್ಕೇರಿದ ಸೋಂಕಿತರ ಸಂಖ್ಯೆ

ಒಟ್ಟಾರೆ ಲಾಕ್ಡೌನ್  ಸಮಯದಲ್ಲಿ ಕರ್ತವ್ಯದ ನಡುವೆಯೂ ಸಕ್ಕರೆನಾಡು ಮಂಡ್ಯದಲ್ಲಿ ಮದ್ದೂರು ಪೊಲೀಸರ ಕಾರ್ಯಾಚರಣೆಯಿಂದ ಖತರ್ನಾಕ್ ಮನೆಗಳ್ಳರು ಈಗ ಅಂದರ್ ಆಗಿದ್ದಾರೆ. ಹಗಲು ವೇಳೆಯೇ  ಮನೆಗಳ್ಳತನ ನಡೆಸಿ ಸುತ್ತಮುತ್ತ ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿದ್ದ, ಈ ತಂಡವನ್ನು ಮದ್ದೂರು ಪೊಲೀಸರು ಎಡೆಮುರಿ‌ ಕಟ್ಟಿರೋದು ಜಿಲ್ಲೆಯೂ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಂತಾಗಿದೆ.
First published: May 23, 2020, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading