ಮಾದನಾಯಕನಹಳ್ಳಿ ಪೊಲೀಸರ ಕಾರ್ಯಾಚರಣೆ: ನಾಲ್ವರು ಸರಗಳ್ಳರ ಬಂಧನ

ಬಂಧಿತ ಆರೋಪಿಗಳು ಲಾಕ್‌ಡೌನ್‌ನಲ್ಲಿ ಆರ್ಥಿಕ ಹೊಡೆತವನ್ನು ಸರಿದೂಗಿಸಿಕೊಳ್ಳಲು ಕಳ್ಳತನ ಮಾಡಿದ್ದರು ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಸದ್ಯ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ‌. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

news18-kannada
Updated:July 18, 2020, 3:08 PM IST
ಮಾದನಾಯಕನಹಳ್ಳಿ ಪೊಲೀಸರ ಕಾರ್ಯಾಚರಣೆ: ನಾಲ್ವರು ಸರಗಳ್ಳರ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜುಲೈ 18): ಬ್ಲಾಕ್‌ ಪಲ್ಸರ್ ಹಾಗೂ ಡಿಯೋ ಬೈಕ್ ಬಳಸಿ ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು ಮೂಲದ ರಂಗರಾಜು ಸಿ.ಪಿ(32) ಅಲಿಯಾಸ್ ರಾಜು, ತಮಿಳುನಾಡಿನ ಕೃಷ್ಣಗಿರಿ ಮೂಲದ ಶಶಿಕುಮಾರ್ (26) ಅಲಿಯಾಸ್ ಶಶಿ, ಹಾಸನ ಮೂಲದ ಸಂದೀಪ್ ಟಿ.ಎನ್ (25) ಅಲಿಯಾಸ್ ಕಿಟ್ಟಿ ಹಾಗೂ ಹಾಸನ ಮೂಲದ ಗೋಪಾಲ್ ಎ.ಬಿ(20) ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಮೂರು ಜನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಮೆಕಾನಿಕ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಬಂಧಿತರು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ, ಲಕ್ಷ್ಮಿಪುರ, ಆಲೂರು ಹಾಗೂ ದೊಂಬರಹಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡಿತ್ತಿದ್ದರು. ಇವರ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ  ಆರೋಪಿಗಳು ಸಿಕ್ಕಿಬಿದ್ದಿದ್ದು, ಕೃತ್ಯಕ್ಕೆ ಬಳಸಿದ್ದ ಬ್ಲಾಕ್ ಪಲ್ಸರ್, ಕಳ್ಳತನ ಮಾಡಿದ್ದ ಡಿಯೋ ಬೈಕ್ ಹಾಗೂ 140 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನು ಓದಿ: ಚಿಕಿತ್ಸೆ ಸಿಗದೆ ಶಿಶು ನಿಧನ; ಸಿಎಂ ಮನೆ ಮುಂದೆ ಅಪ್ಪನ ಏಕಾಂಗಿ ಪ್ರತಿಭಟನೆ

ಇನ್ನೂ ಬಂಧಿತ ಆರೋಪಿಗಳು ಲಾಕ್‌ಡೌನ್‌ನಲ್ಲಿ ಆರ್ಥಿಕ ಹೊಡೆತವನ್ನು ಸರಿದೂಗಿಸಿಕೊಳ್ಳಲು ಕಳ್ಳತನ ಮಾಡಿದ್ದರು ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಸದ್ಯ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ‌. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Published by: HR Ramesh
First published: July 18, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading