ಡಿಸೆಂಬರ್ ಅಂತ್ಯಕ್ಕೆ ಮದಲೂರು ಕೆರೆಗೆ ನೀರು; ಶಿರಾ ಶಾಸಕ ರಾಜೇಶ್ ಗೌಡ

ಅಪ್ಪರ್ ಭದ್ರಾ ನೀರಾವರಿ ಯೋಜನೆಯಲ್ಲಿ ಈ ಹಿಂದೆ 42 ಕೆರೆಗಳು ಸೇರ್ಪಡೆಯಾಗಿದ್ದವು. ಇದೀಗ ಹೆಚ್ಚುವರಿಯಾಗಿ 20 ಕೆರೆಗಳನ್ನು ನಾನು ಶಾಸಕನಾದ ಮರುದಿನವೇ ಸೇರ್ಪಡೆ ಮಾಡಿದ್ದೇನೆ. ಅಪ್ಪರ್ ಭದ್ರ ನೀರಾವರಿ ಯೋಜನೆಯಲ್ಲಿ ಒಟ್ಟು 62 ಕೆರೆಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಡಾ. ರಾಜೇಶ್​ ಗೌಡ

ಡಾ. ರಾಜೇಶ್​ ಗೌಡ

  • Share this:
ತುಮಕೂರು(ನ.28): ಶಿರಾ ತಾಲೂಕಿನ ಸಹಸ್ರಾರು ಜನರ ಬಹುನಿರೀಕ್ಷಿತ ಮದಲೂರು ಕೆರೆಗೆ ಹೇಮಾವತಿ ನೀರು ಬಿಡಲು ಸರ್ಕಾರ ಸಿದ್ದವಾಗಿದೆ. ಕೆರೆ ಅಂಗಳ ಸೇರಿದಂತೆ 24ಕಿ ಲೋಮೀಟರ್  ಉದ್ದದ ಕಾಲುವೆಯ ಸ್ವಚ್ಚತಾ ಕಾರ್ಯ ಕೂಡ ಪೂರ್ಣಗೊಂಡಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯಲಿದೆ ಎಂದು ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದ್ದಾರೆ.  ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯನ್ನ ಶುಕ್ರವಾರ ವೀಕ್ಷಣೆ ಮಾಡಿ ನೀರಿನ ಶೇಖರಣಾ ಸಾಮರ್ಥ್ಯ ಪರಿಶೀಲನೆ ಜೊತೆಗೆ, ಮದಲೂರು ಕಾಲುವೆ ಸ್ವಚ್ಚತಾ ಕಾರ್ಯ ವೀಕ್ಷಣೆ ಮಾಡಿ ಮಾತನಾಡಿದರು.

ಹೇಮಾವತಿ ನೀರು ಶಿರಾ ತಾಲೂಕಿಗೆ ಹಲವಾರು ದಿನಗಳಿಂದ ನಿರಂತವಾಗಿ ಹರಿಯುತ್ತಿದೆ. ಶಿರಾ ದೊಡ್ಡ ಕೆರೆ ಭರ್ತಿಯಾಗಿದ್ದು, 248 ಎಂಟಿಎಫ್ ಸಾಮರ್ಥ್ಯದ  ಕಳ್ಳಂಬೆಳ್ಳ ಕೆರೆ ಇದೀಗ 175 ಎಂಟಿಎಫ್ ನಷ್ಟು ಅಂದರೆ ಶೇ.80 ರಷ್ಟು ಭರ್ತಿಯಾಗಿದೆ. ಇನ್ನೂ 10 ರಿಂದ 15 ದಿನಗಳಲ್ಲಿ ಕಳ್ಳಂಬೆಳ್ಳ ಕೆರೆ ಸಂಪೂರ್ಣ ಭರ್ತಿಯಾಗಲಿದ್ದು, ಮರು ದಿನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮಕ್ಷಮದಲ್ಲಿ ಮದಲೂರು ಕಾಲುವೆಗೆ ನೀರು ಹರಿಸುವಂತಹ ದಿನ ಶಿರಾ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಲಿದೆ ಎಂದು ಹೇಳಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ; ತನಿಖೆ ಶುರುಮಾಡಿದ ಪೊಲೀಸರು

250 ಎಂಟಿಎಫ್ ನೀರು ತುಂಬಿಕೊಳ್ಳುವ ಸಾಮರ್ಥ್ಯ ಇರುವ ಮದಲೂರು ಕೆರೆ 2021 ಜನವರಿ ಅಂತ್ಯಕ್ಕೆ ಭರ್ತಿಯಾಗುವ ನಿರೀಕ್ಷೆ ಹೊಂದಲಾಗಿದೆ. ಮದಲೂರು ಕೆರೆ ಭರ್ತಿಯಾದ ನಂತರ ಅಪ್ಪರ್ ಭದ್ರಾ ನೀರಾವರಿ ಯೋಜನೆಯಲ್ಲಿ ಈ ಹಿಂದೆ 42 ಕೆರೆಗಳು ಸೇರ್ಪಡೆಯಾಗಿದ್ದವು. ಇದೀಗ ಹೆಚ್ಚುವರಿಯಾಗಿ 20 ಕೆರೆಗಳನ್ನು ನಾನು ಶಾಸಕನಾದ ಮರುದಿನವೇ ಸೇರ್ಪಡೆ ಮಾಡಿದ್ದೇನೆ. ಅಪ್ಪರ್ ಭದ್ರ ನೀರಾವರಿ ಯೋಜನೆಯಲ್ಲಿ ಒಟ್ಟು 62 ಕೆರೆಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಕರ್ನಾಟಕ ರೇಷ್ಮೆ ಆಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ರೈತ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಜೊತೆಗೆ ರೇಷ್ಮೆ ಕೊಡ ಲಾಭದಾಯಕ, ಇಂತಹ ಉದ್ಯಮ ಬಲಿಷ್ಟಗೊಳಿಸುವಂತ ಯೋಜನೆ ರೂಪಿಸಿ ರೇಷ್ಮೆ ಬೆಳೆಗೆ ಮತ್ತಷ್ಟು ಹೊಸತನ ನೀಡುವ ನಿಟ್ಟಿನಲ್ಲಿ ಪ್ರಮಾಣಿಕ ಸೇವೆ ಮಾಡುವಂತ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಶಿರಾ ಕ್ಷೇತ್ರದ ಆಭಿವೃದ್ಧಿ ದೃಷ್ಠಿಯಿಂದ ಶಾಸಕರ ಜೊತೆಗೂಡಿ ಉತ್ತಮ ಕೆಲಸ ಮಾಡುವ ಮೂಲಕ ಬಿಜೆಪಿಗೆ ಬದ್ರ ಬುನಾದಿ ಕಲ್ಪಿಸುವುದು ನಮ್ಮ ಗುರಿ ಮದಲೂರು ಕೆರೆಗೆ ಹೇಮಾವತಿ ನೀರು ಅತಿ ಶೀಘ್ರವೇ ಬಿಡುವ ನಿಟ್ಟಿನಲ್ಲಿ ಸಿದ್ಧತೆ ಪೊರ್ಣಗೊಂಡಿದ್ದು ಬಿಜೆಪಿ ಪಕ್ಷ ಕೊಟ್ಟ ಮಾತಿಗೆ ಎಂದು ತಪ್ಪುವುದಿಲ್ಲ ಎಂದರು.
Published by:Latha CG
First published: