ತಾರಕಕ್ಕೇರಿದ ಮದಲೂರು ಕೆರೆ ವಿವಾದ; ನೀರು ಹರಿಸುವ ವಿಚಾರದಲ್ಲಿ ಮತ್ತೆ ರಾಜಕಾರಣ

ಶಿರಾ ತಂಟೆಗೆ ಬಂದ್ರೆ ಹುಷಾರ್.., ಸಚಿವ ಮಾಧುಸ್ವಾಮಿಗೆ ನೇರಾ ಎಚ್ಚರಿಕೆ ನೀಡಿದ ಮಾಜಿ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ

ಶಿರಾ ತಂಟೆಗೆ ಬಂದ್ರೆ ಹುಷಾರ್.., ಸಚಿವ ಮಾಧುಸ್ವಾಮಿಗೆ ನೇರಾ ಎಚ್ಚರಿಕೆ ನೀಡಿದ ಮಾಜಿ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ

ಶಿರಾ ತಂಟೆಗೆ ಬಂದ್ರೆ ಹುಷಾರ್.., ಸಚಿವ ಮಾಧುಸ್ವಾಮಿಗೆ ನೇರಾ ಎಚ್ಚರಿಕೆ ನೀಡಿದ ಮಾಜಿ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ

  • Share this:
ತುಮಕೂರು (ಆ. 13) : ಶಿರಾ ತಾಲೂಕಿನ ಮದಲೂರು ಕೆರೆ ಸದ್ಯ ತುಮಕೂರು ರಾಜಕಾರಣದಲ್ಲಿ ತೀವ್ರಚರ್ಚೆಗೆ ಗ್ರಾಸವಾಗಿದೆ.. ಮದಲೂರು ಕೆರೆಗೆ ನೀರು ಬಿಡೋಕೆ ಸಾಧ್ಯವೇ ಇಲ್ಲ, ಅದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂಬ ಕಾನೂನು ಸಚಿವ ಮಾಧುಸ್ವಾಮಿಯವರ ಮಾತು ಈಗ ಶಿರಾ ತಾಲೂಕಿನಲ್ಲಿ ರಾಜಕೀಯ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದೆ.‌ ಶಿರಾ ಶಾಸಕ ಡಾ.ರಾಜೇಶ್ ಗೌಡರ ಗೆಲವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದ ಮದಲೂರು ಕೆರೆ ಈ ವರ್ಷವಾದ್ರು ತುಂಬುತ್ತಾ ಎಂಬ ಅನುಮಾನ ಕಾಡುತ್ತಿದೆ. ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವೇ ಇಲ್ಲ ಅದಕ್ಕೆ ಕಾನೂನಿಲ್ಲಿ ಅವಕಾಶವೇ ಇಲ್ಲ ಎಂದಿರುವ ಮಾಧುಸ್ವಾಮಿಯವರ ನಡೆ ಈಗ ಸ್ವತಃ ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡಗೆ ತೀವ್ರ ತಲೆನೀವು ತಂದಿದೆ.

ಇತ್ತ ಮಾಜಿ ಸಚಿವ ಟಿ.ಬಿ ಜಯಚಂದ್ರ ಕೂಡ ಸಚಿವ ಮಾಧುಸ್ವಾಮಿಗೆ ನೇರಾ ನೇರಾ ಎಚ್ಚರಿಕೆ ಕೊಟ್ಟಿದ್ದಾರೆ. ನೀವು ಸಚಿವರಾಗಿರಿ ಯಾರೇ ಆಗಿರಿ ನಮ್ಮ ಶಿರಾ ಸಹವಾಸಕ್ಕೆ ಬಂದ್ರೆ ಹುಷಾರ್ ಎಂಬ ನೇರ ಸಂದೇಶವನ್ನ ಕೊಟ್ಟಿದ್ದಾರೆ. ನಿಮಗೆ ಶಿರಾ ಅಷ್ಟೋಂದು ಕೇವಲನಾ... ನಾವೇನು ಭಿಕ್ಷೆ ಬೇಡುತ್ತಿಲ್ಲ ನ್ಯಾಯಯುತವಾಗಿ ನಮ್ಮ ನೀರನ್ನ ನಮಗೆ ಬಿಡಬೇಕು ಎಂದು ಹೇಳಿದ್ದಾರೆ. ಅಲ್ಲದೇ ಇದೇ 21ರಂದು ವಿವಾದದ ಕೇಂದ್ರಬಿಂದುವಾಗಿರೋ ಮದಲೂರು ಕೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಕಳ್ಳಂಬೆಳ್ಳಕೆರೆ ಭರ್ತಿಯಾಗಿದ್ದು ಒಂದೆರಡು ದಿನಗಳಲ್ಲಿ ಕೋಡಿ ಬೀಳಲಿದೆ ನಂತರ ಮದಲೂರು ಕೆರೆಗೆ ನೀರು ಹರಿಸಲಾಗುತ್ತೆ. ಆದರೆ ಈ ವಿಚಾರವನ್ನ ಈ ಮುಂಚೆಯೇ ತಿಳಿದಿರುವ ಮೂರು ಪಕ್ಷದವರು ನಮ್ಮಿಂದ ಮದಲೂರು ಕೆರೆಗೆ ನೀರು ಹರಿಯುತ್ತಿದೆ ಎಂಬ ಕ್ರೆಡಿಟ್ ಪಡೆಯಲು ನಾಮುಂದು ತಾಮುಂದು ಅಂತಾ ಕಿತ್ತಾಟಕ್ಕೆ ಮುಂದಾಗಿದ್ದಾರೆ.

ಇದನ್ನು ಓದಿ: ಪಿಎಸ್ಐ ನೇಮಕಾತಿ ವೇಳೆ ಹೆಚ್ಚು ಎತ್ತರ ತೋರಿಸಲು ಐನಾತಿ ಐಡಿಯಾ; ಅಭ್ಯರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು

ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ಮಾಜಿ ಸಿಎಂ ಬಿಎಸ್ ವೈ ರನ್ನ ಭೇಟಿ ಮಾಡಿ ನೀರು ಹರಿಸಿದ್ದು ನಾನು ಎಂಬ ಕ್ರೆಡಿಟ್ ಪಡೆಯಲು ಶಾಸಕ ರಾಜೇಶ್ ಗೌಡ ಮುಂದಾದ್ರೆ, ಇತ್ತ ನಾವು ಪಾದಯಾತ್ರೆ ಮಾಡಿದ್ದಕ್ಕೇ ನೀರು ಹರಿಸಿದ್ದು ಎಂಬ ಕ್ರೆಡಿಟ್ ಪಡೆಯೋಕೆ ಟಿ.ಬಿ ಜಯಚಂದ್ರ ಯೋಜನೆ ಮಾಡಿದ್ದಾರೆ. ಮತ್ತೊಂದು ಕಡೆ ಮದಲೂರು ಕೆರೆ ನೀರಿಗಾಗಿ ಬರುವ 16ರಂದು ಮದಲೂರು ಕೆರೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ಮಾಡ್ತೀವಿ ಅಂತ ಜೆಡಿಎಸ್ ಮುಖಂಡರು ಹೇಳಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ ತುರುವೇಕೆರೆ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಗ್ರಾಮಾಂತರ, ತುಮಕೂರು ನಗರದ ಶಾಸಕರೆಲ್ಲಾ ಒಟ್ಟಾಗಿ ಯಾವುದೇ ಕಾರಣಕ್ಕೂ ಮದಲೂರು ಕೆರೆಗೆ ನೀರು ಹರಿಸಿದ್ರೆ ನಮಗೆ ನೀರು ಸಿಗಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನೀರನ್ನ ಅಲ್ಲಿಗೆ ಹರಿಸೋದು ಬೇಡ ಅಂತ ಸಚಿವ ಮಾಧುಸ್ವಾಮಿಯವರ ಮೇಲೆ ಇಷ್ಟೂ ಜನ ಎಂಎಲ್ ಎ ಗಳು ಒತ್ತಡ ಹಾಕುತ್ತಿದ್ದಾರಂತೆ.. ಒಟ್ಟಾರೆ ಕೆರೆಯೊಂದು ಮೂರು ರಾಜಕಾರಣ ಅಂತಾಗಿರೋ ಮದಲೂರು ಕೆರೆ ಈ ಬಾರಿಯಾದ್ರೂ ತುಂಬುತ್ತಾ ಎಂಬುದೇ ದೊಡ್ಡ ಅನುಮಾನವಾಗಿ ಕಾಡುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: