Madaluru Lake: ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಯಡಿಯೂರಪ್ಪ; ಅಂತೂ ಮದಲೂರು ಕೆರೆಗೆ ನೀರು ಬಂತು

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರನ್ನು ನಾಲೆ ಮೂಲಕ  ಹರಿಸಲಾಗಿದೆ. ಮುಂದಿನ 24 ಗಂಟೆಯಲ್ಲಿ ನೀರು ಮದಲೂರು ಕೆರೆಗೆ ತಲುಪಲಿದೆ. ಆದ್ರೆ ಈ ಪ್ರಯತ್ನ ಈ ಮೊದಲು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೂ ಮಾಡಿದ್ದರು. ಇದೇ ಬಿಜೆಪಿ ಪಕ್ಷದವರು ಮದಲೂರು ಕೆರೆಗೆ ಹೇಮಾವತಿ ನೀರಿನ ಅಲೋಕೇಶನ್ ಇಲ್ಲ ಎಂದು ವಾದ ಮಾಡಿದ್ದರು.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ತುಮಕೂರು(ಡಿ.01): ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಅಂತಾ ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು.  ಇದರಂತೆ ಸೋಮವಾರದಿಂದ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡಲಾಗಿದೆ. ಇದರಿಂದ ಮದಲೂರು ಗ್ರಾಮದ ಜನರು ಹರ್ಷಗೊಂಡಿದ್ದಾರೆ. ಶಿರಾ ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸೋ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಒಂದು ಪಕ್ಷದವರು ಮದಲೂರು ಕೆರೆಗೆ ನಾಲೆ ಮಾಡಿದ್ದು ನಾವು ಅಂದ್ರೆ, ಇದನ್ನ ಯೋಜನೆ ಜಾರಿ ಮಾಡಿದ್ದು ನಾವು ಅಂತಾ  ಇನ್ನೊಂದು ಪಕ್ಷದವರು ಪರಸ್ಪರ ವಾಗ್ದಾಳಿ ಮಾಡಿದ್ದರು. ಈ ನಡುವೆ ಸಿಎಂ ಯಡಿಯೂರಪ್ಪ ಅಕ್ಟೋಬರ್ 30 ರಂದು ಮದಲೂರಿನಲ್ಲಿ ಸಮಾವೇಶ ನಡೆಸಿ ಇನ್ನೂ ಆರು ತಿಂಗಳಲ್ಲಿ ಕೆರೆಗೆ ನೀರು ಬಿಡ್ತಿವಿ ಅಂತಾ ಭರವಸೆ ನೀಡಿದ್ದರು.

ಅದರಂತೆ ಇನ್ನೂ ಚುನಾವಣೆ ಮುಗಿದು ಒಂದು ತಿಂಗಳು ಕಳೆದಿಲ್ಲ, ಮದಲೂರು ಕೆರೆಗೆ ನೀರು ರಿಲೀಸ್ ಆಗಿದೆ.. ಇದ್ರಿಂದ ಕೊಟ್ಟ ಮಾತು ಈಡೇರಿಸಿದ ಸರ್ಕಾರ ಅಂತಾ ತೋರಿಸಿ ಕೊಟ್ಟಿದ್ದು ವಿಪಕ್ಷಗಳಿಗೆ ತಿರುಗೇಟು ಕೊಟ್ಟಂತೆ ಆಗಿದೆ. ಇನ್ನೂ ಈ ಬಗ್ಗೆ ಶಿರಾ ಶಾಸಕ ಡಾ.ರಾಜೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹಣೆಯಾಗಿದೆ. ಹೀಗಾಗಿ ಉಪಚುನಾವಣೆ ವೇಳೆ ಮದಲೂರು ಕೆರೆಗೆ ಕೊಟ್ಟ ಮಾತಿನಂತೆ ನೀರು ಹರಿಸಿದ್ದು, ಇನ್ನೂ ಒಂದೂವರೆ ತಿಂಗಳ ಕಾಲ ನೀರು ಹರಿಯಲಿದೆ. ಇದಕ್ಕೆ ಸಹಕರಿಸಿದ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸ್ಥಳೀಯ ನಾಯಕರಿಗೆ ಹಾಗೂ ಹೋರಾಟಗಾರಿಗೆ ಕೃತಜ್ಞತೆ ತಿಳಿಸಿದ್ದಾರೆ.

ಇಂದಿನಿಂದ ಮೆಡಿಕಲ್ ಕಾಲೇಜು ಓಪನ್; ನಾಳೆಯಿಂದ ಡಿಫಾರ್ಮಾ ಪರೀಕ್ಷೆ; ವಿದ್ಯಾರ್ಥಿಗಳ ವಿರೋಧ

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರನ್ನು ನಾಲೆ ಮೂಲಕ  ಹರಿಸಲಾಗಿದೆ. ಮುಂದಿನ 24 ಗಂಟೆಯಲ್ಲಿ ನೀರು ಮದಲೂರು ಕೆರೆಗೆ ತಲುಪಲಿದೆ. ಆದ್ರೆ ಈ ಪ್ರಯತ್ನ ಈ ಮೊದಲು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೂ ಮಾಡಿದ್ದರು. ಇದೇ ಬಿಜೆಪಿ ಪಕ್ಷದವರು ಮದಲೂರು ಕೆರೆಗೆ ಹೇಮಾವತಿ ನೀರಿನ ಅಲೋಕೇಶನ್ ಇಲ್ಲ ಎಂದು ವಾದ ಮಾಡಿದ್ದರು.

ಅಲ್ಲದೇ ಕಳ್ಳಂಬೆಳ್ಳದಿಂದ ಮದಲೂರು ಕೆರೆವರೆಗೂ  ಸುಮಾರು 32 ಕಿಲೋಮೀಟರ್ ದೂರ ಜಯಚಂದ್ರ ನಾಲೆ ನಿರ್ಮಾಣ ಮಾಡಿದ್ದಾರೆ, ಅಲ್ಲಲ್ಲಿ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿರುವುದರಿಂದ ಪೋಲಾಗುತ್ತದೆ. ಹಾಗಾಗಿ ನಾಲೆ ಕಾಮಗಾರಿ ಅವೈಜ್ಙಾನಿಕವಾಗಿದೆ ಎಂದು ಬಿಜೆಪಿಯವರು ಆಪಾದನೆ ಮಾಡುತಿದ್ದರು. ಆದರೆ ಅದೇ ನಾಲೆ ಮೂಲಕ ಇಂದು ನೀರು ಹರಿಸಿ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ.

ಮದಲೂರು ಕೆರೆಗೆ ನೀರಿನ ಅಲೋಕೇಶನ್ ಇಲ್ಲದೇ ಇದ್ದರೂ ನೀರು ಹರಿಸಿದಕ್ಕೆ ಕುಣಿಗಲ್ ಕಾಂಗ್ರೆಸ್ ಶಾಸಕ ವಿರೋಧಿಸಿದ್ದಾರೆ. ಸ್ಪೆಷಲ್ ಅಲೋಕೇಶನ್ ಹೊರಡಿಸಿ, ಪೈಪ್ ಲೈನ್ ಮೂಲಕ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸುವ ಚಿಂತನೆ ಆಡಳಿತ ಪಕ್ಷದಲ್ಲಿ ನಡೆದಿತ್ತು.

ನೀರು ಹರಿಸುವ ವಾಗ್ದಾನ ಮಾಡಿದ್ದ ಯಡಿಯೂರಪ್ಪನವರ ಸಿಎಂ ಸ್ಥಾನ ಡೋಲಾಯಮಾನದ  ಪರಿಸ್ಥಿತಿಯಲ್ಲಿತ್ತು. ಜೊತೆಗೆ ಗ್ರಾ.ಪಂ. ಚುನಾವಣೆಯ ನೀತಿ ಸಂಹಿತಿ ಜಾರಿಯಾಗಿದ್ದರಿಂದ ತರಾತುರಿಯಲ್ಲಿ ತಾವು ವಿರೋಧ ವ್ಯಕ್ತಪಡಿಸಿದ ನಾಲೆಯಲ್ಲೇ ಆಡಳಿತ ಪಕ್ಷ ಬಿಜೆಪಿ ನೀರು ಹರಿಸಿ ಮತದಾರರನ್ನು ತೃಪ್ತಿಪಡಿಸುವ ಪ್ರಯತ್ನ ಮಾಡಿದೆ.
Published by:Latha CG
First published: