ಬೆಂಗಳೂರು: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashanth Madal) ನಿವಾಸದಲ್ಲಿ ಹಣ ಸಿಕ್ಕ ಪ್ರಕರಣದಿಂದ ಬಿಜೆಪಿಗೆ (BJP) ತೀವ್ರ ಮುಜುಗರ ಉಂಟಾಗಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ (Congress) ಕೈಗೆ ಮಹಾ ಅಸ್ತ್ರ ಸಿಕ್ಕಂತಾಗಿದ್ದು, ಇದೀಗ ರಾಜ್ಯ ಸರ್ಕಾರದ (Karnataka BJP Government) ವಿರುದ್ಧ ಮಾರ್ಚ್ 9ರಂದು ಕರ್ನಾಟಕ ಬಂದ್ಗೆ ಕರೆ ನೀಡಿದೆ. ಈಗಾಗಲೇ ಸಿಎಂ ಬೊಮ್ಮಾಯಿ (CM Basavaraj Bommai) ಆದಿಯಾಗಿ ಎಲ್ಲಾ ಬಿಜೆಪಿ ನಾಯಕರು ಮಾಡಾಳ್ ಹಗರಣದ ಬಗ್ಗೆ ತಮ್ಮ ತಮ್ಮ ಪ್ರತಿಕ್ರಿಯೆ ನೀಡುತ್ತಾ, ಕಾಂಗ್ರೆಸ್ ಸರ್ಕಾರ ಕಾಲದ ಹಗರಣಗಳನ್ನು ಮುನ್ನಲೆಗೆ ತಂದಿದ್ದಾರೆ. ಮಾಡಾಳ್ ವಿರುಪಾಕ್ಷಪ್ಪ ಹಗರಣದಿಂದ ಬಿಜೆಪಿಗೆ ತೀವ್ರ ಮುಜುಗರ ಉಂಟಾಗಿದೆ. ಇದೀಗ ಕೇಸರಿ ಪಡೆ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದೆ
ಮುಜುಗರಕ್ಕೆ ಮುಲಾಮು
ಮಾಡಾಳ್ ಕ್ಷೇತ್ರದಿಂದ ಉಂಟಾಗಿರುವ ಮುಜಗರಕ್ಕೆ ಅಭಿವೃದ್ಧಿ ಮಂತ್ರದ ಮುಲಾಮು ಹಚ್ಚಳ ಬಿಜೆಪಿ ಮುಂದಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿ ಕುರಿತು ಪ್ರಚಾರ ನಡೆಸಲು ಬಿಜೆಪಿ ಮುಂದಾಗಿದೆ. ಕೇಂದ್ರದ ನಾಯಕರನ್ನು ರಾಜ್ಯಕ್ಕೆ ಕರೆಸಿ ಪ್ರಚಾರ ನಡೆಸೋದು. ಜಾತಿವಾರು, ಪ್ರದೇಶವಾರು ಸಂಘಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಮಟ್ಟದ ನಾಯಕರಿಂದ ಮತಬೇಟೆ ಮಾಡಿಸಲು ಕೇಸರಿಪಡೆ ಪ್ಲಾನ್ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಬಳಿಕ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆಸುವ ಮೂಲಕ ಮಾಡಾಳ್ ಹಗರಣದಿಂದ ಉಂಟಾಗಿರುವ ಮುಜುಗರವನ್ನು ಸರಿ ಮಾಡಿಕೊಳ್ಳಲು ಕಮಲ ಪಾಳಯ ತಂತ್ರ ರೂಪಿಸಿದೆ.
ಮಾಡಾಳ್ ಪತ್ತೆಗೆ ಮೂರು ತಂಡಗಳ ರಚನೆ
ಲೋಕಾಯುಕ್ತ ದಾಳಿ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಲೋಕಾಯುಕ್ತ ದಾಳಿ ನಂತ್ರ ಮಾಡಾಳ್ ವಿರೂಪಾಕ್ಷಪ್ಪ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಶಾಸಕರ ಎರಡೂ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.
ಯಾರ ಜೊತೆಗೂ ಸಂಪರ್ಕ ಇಟ್ಟುಕೊಳ್ಳದೇ ಶಾಸಕರು ನಾಪತ್ತೆಯಾಗಿದ್ದಾರೆ. ಹೀಗಾಗಿ ಮಾಡಾಳ್ ವಿರೂಪಾಕ್ಷಪ್ಪ ಪತ್ತೆಗೆ 3 ತಂಡಗಳನ್ನು ನೇಮಕ ಮಾಡಲಾಗಿದೆ. ಮೂವರು ಡಿವೈಎಸ್ಪಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹುಡುಕಾಟ ನಡೆಸಿದ್ದಾರೆ.
ಲ
ಈ ಮಧ್ಯೆ ಅಜ್ಞಾತ ಸ್ಥಳದಿಂದ್ಲೇ ಮಾಡಾಳ್ ನಿರೀಕ್ಷಣಾ ಜಾಮೀನಿಗೆ ಯತ್ನಿಸಿದ್ದಾರೆ. ವಕೀಲರ ಮೂಲಕ ಕೋರ್ಟ್ಗೆ ಆರೋಗ್ಯದ ನೆಪವೊಡ್ಡಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಮಾ.9ಕ್ಕೆ ಕರ್ನಾಟಕ ಬಂದ್ಗೆ ‘ಕೈ’ ಕರೆ
ಶಾಸಕ ಮಾಡಾಳ್ ಬಂಧಿಸಬೇಕು ಹಾಗೂ ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇದೇ 9ರಂದು ಕರ್ನಾಟಕ ಬಂದ್ಗೆ ಕಾಂಗ್ರೆಸ್ ಕರೆ ನೀಡಿದೆ. ಬೆಳಗ್ಗೆ 9ರಿಂದ 11ರವರೆಗೆ 2 ಗಂಟೆ ಕಾಲ ಬಂದ್ ಮಾಡಲು ಕರೆ ನೀಡಿದೆ.
ಶಾಲೆ, ಕಾಲೇಜು, ಆಸ್ಪತ್ರೆ, ಸಾರಿಗೆ ಹೊರತುಪಡಿಸಿ ಉಳಿದ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
‘ಕೈ’ಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ’
ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಮಂತ್ರಿ ಕಚೇರಿಯಲ್ಲಿ 2 ಲಕ್ಷ ರೂಪಾಯಿ ಸಿಕ್ಕಿತ್ತು. ಆಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ರಾ ಎಂದು ತಿರುಗೇಟು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ