• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Lokyukta Raid: 40 ಪರ್ಸೆಂಟ್​ ದಂಧೆ ಮಾಡೋಕೆ ವಿರೂಪಾಕ್ಷಪ್ಪ ಮಂತ್ರಿಯಲ್ಲ; ಮಾಧುಸ್ವಾಮಿ

Lokyukta Raid: 40 ಪರ್ಸೆಂಟ್​ ದಂಧೆ ಮಾಡೋಕೆ ವಿರೂಪಾಕ್ಷಪ್ಪ ಮಂತ್ರಿಯಲ್ಲ; ಮಾಧುಸ್ವಾಮಿ

ಜೆಸಿ ಮಾಧುಸ್ವಾಮಿ, ಸಚಿವ

ಜೆಸಿ ಮಾಧುಸ್ವಾಮಿ, ಸಚಿವ

ಇದು ಯಾವ ದುಡ್ಡು ಎಂದು ಅವರನ್ನು ಕೇಳಲಾಗುತ್ತೆ. ಅವರು ಇದಕ್ಕೆ ನೀಡುವ ಉತ್ತರದ ಮೇಲೆ‌ ಎಲ್ಲಾ ಇದೆ. ದಾಖಲೆಗಳು ಸರಿಯಾಗಿ ಇಲ್ಲ ಎಂದ್ರೆ ಅದು ಭ್ರಷ್ಟಾಚಾರ ಆಗುತ್ತೆ. ಕಾಂಗ್ರೆಸ್‌ನವರಿಗೆ ಏನು ಇಲ್ಲ, ಅದಕ್ಕೆ ಮಾತನಾಡುತ್ತಾರೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.

  • Share this:

ಮಂಡ್ಯ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಪಕ್ಷಪ್ಪ (BJP MLA Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashanth Madal) ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತಾ ದಾಳಿ (Karnataka Lokayukta Raid) ಬಗ್ಗೆ ಸ್ಪಷ್ಟನೆ ನೀಡುವಲ್ಲಿಯೂ ಸಚಿವ ಮಾಧುಸ್ವಾಮಿ (Minister Madhuswamy) ಎಡವಟ್ಟು ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ದಂಧೆ ಮಾಡೋಕೆ ಅವರು ಮಂತ್ರಿಯಲ್ಲ. ಮಗ ಲಂಚ (Bribe) ತೆಗೆದುಕೊಂಡರೆ ಅಪ್ಪ ಏನು ಮಾಡಬೇಕು? ನಮ್ಮ ಶಾಸಕರು, ಸಿಎಂ ಬೊಮ್ಮಾಯಿ ಯಾಕೆ ರಾಜೀನಾಮೆ ಕೊಡಬೇಕು‌? ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ (Corruption) ಅನ್ನೋಕೆ ಆಗಲ್ಲ ಅಂತ ಮಂಡ್ಯದಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಶಾಸಕರ ಮಗ ಸರ್ಕಾರಿ ಅಧಿಕಾರಿಯಾಗಿದ್ದಾರೆ‌.ದುಡ್ಡು ತೆಗೆದುಕೊಂಡಿದ್ದಾನೆ ಮುಂದಿನ ಪರಿಣಾಮ ಎದುರಿಸುತ್ತಾನೆ. ವಿರೂಪಾಕ್ಷಪ್ಪನ ಮಗ ಎಸಿಬಿಯಲ್ಲಿ ಒಬ್ಬ ಆಫಿಸರ್. ಅವನು ಲಂಚ ತೆಗೆದುಕೊಂಡರೆ ವಿರೂಪಾಕ್ಷಪ್ಪ ಏನು ಮಾಡ್ತಾರೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ ಹಾಕಬೇಕು ಎಂದು ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ.


ಶಾಸಕರ ಮಗ ಮಾಡಿದ್ದಕ್ಕೆ ಸಿಎಂ ಯಾಕೆ ರಾಜೀನಾಮೆ ಕೊಡಬೇಕು. ಇಂತಹ ಅಯೋಗ್ಯರು ಯಾರ್ ಯಾರು ಇದ್ದಾರೆ ಎಂದು ನಾವು ಹುಡುಕಿಕೊಂಡು‌ ಕೂರೋಕೆ ಆಗುತ್ತಾ ಎಂದರು.


ಮೊದಲು ಭ್ರಷ್ಟಾಚಾರ ಸಾಬೀತು ಆಗಬೇಕು


ಶಾಸಕರಗೂ ಮುಖ್ಯಮಂತ್ರಿಗಳಿಗೂ ಇದರಲ್ಲಿ ಸಂಬಂಧವಿಲ್ಲ. ಕಾಂಗ್ರೆಸ್‌ನವರಿಗೆ ಏನು ಇಲ್ಲ, ಏನಾದರೂ ಸಿಕ್ಕಿದರೆ ದೊಡ್ಡದು ಮಾಡಿಕೊಂಡು ಹೋಗ್ತಾರೆ. ಮೊದಲು ಭ್ರಷ್ಟಾಚಾರ ಸಾಬೀತು ಆಗಬೇಕು. ಹಣ ಕೊಟ್ಟವರು, ತೆಗೆದುಕೊಂಡವರು ಎಲ್ಲಾ ಹೇಳಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.


ಈಗ ಅಧಿಕಾರಿಯ ಮನೆಯ ಮೇಲೆ ರೈಡ್ ಆಗಿದೆ. ಈ ಬಗ್ಗೆ ಅವರು ಸೂಕ್ತ ದಾಖಲೆ ನೀಡಿದ್ರೆ, ನಾಳೆ ನಾವು ನೀವು ಏನು ಮಾತಾಡೋಕೆ ಆಗಲ್ಲ. ದುಡ್ಡಿಗೆ ದಾಖಲೆ ಸರಿಯಾಗಿ ಇದ್ರೆ ನಮ್ಮ ನಿಮ್ಮ ಮಾತುಗಳು ಬಂದ್ ಆಗುತ್ತೆ. ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಎಂದು ಹೇಳಲು ಆಗಲ್ಲ ಎಂದರು.


Lokayukta raid more than 6 crore cash found mla Madal Virupakshappa son arrested mrq
ಪ್ರಶಾಂತ್ ಮಾಡಳ್ ನಿವಾಸದಲ್ಲಿ ಪತ್ತೆಯಾದ ಹಣ


ಕಾಂಗ್ರೆಸ್​ನವರಿಗೆ ಮಾತಾಡೋಕೆ ಏನೂ ಇಲ್ಲ


ಇದು ಯಾವ ದುಡ್ಡು ಎಂದು ಅವರನ್ನು ಕೇಳಲಾಗುತ್ತೆ. ಅವರು ಇದಕ್ಕೆ ನೀಡುವ ಉತ್ತರದ ಮೇಲೆ‌ ಎಲ್ಲಾ ಇದೆ. ದಾಖಲೆಗಳು ಸರಿಯಾಗಿ ಇಲ್ಲ ಎಂದ್ರೆ ಅದು ಭ್ರಷ್ಟಾಚಾರ ಆಗುತ್ತೆ. ಕಾಂಗ್ರೆಸ್‌ನವರಿಗೆ ಏನು ಇಲ್ಲ, ಅದಕ್ಕೆ ಮಾತನಾಡುತ್ತಾರೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.


ಸಿದ್ದರಾಮಯ್ಯ ತಿರುಗೇಟು


ಇನ್ನು ಮಾಧುಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಅಪ್ಪ ಅಧ್ಯಕ್ಷ ಆಗಿದ್ದರಿಂದಲೇ ಮಗನಿಗೆ ಲಂಚ ನೀಡಲಾಗಿದೆ. ಸಚಿವ ಮಾಧುಸ್ವಾಮಿಗೆ ಇದು ಅರ್ಥ ಆಗಲ್ವಾ ಅಂತ ಕಿಡಿಕಾರಿದ್ರು.
ಪ್ರಶಾಂತ್ ಮಾಡಾಳ್‌ಗೆ ನ್ಯಾಯಾಂಗ ಬಂಧನ


ಲೋಕಾಯುಕ್ತ ರೇಡ್​ನಲ್ಲಿ ಸಿಕ್ಕಿಬಿದ್ದ ಪ್ರಶಾಂತ್ ಮಾಡಾಳ್​ಗೆ  14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ಲೋಕಾಯುಕ್ತ ಅಧಿಕಾರಿಗಳು, ಬೆಂಗಳೂರಿನ ಕೋರಮಂಗಲದಲ್ಲಿರೋ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಪ್ರಶಾಂತ್‌ ಮಾಡಾಳ್‌ ಸೇರಿದಂತೆ ಐವರು ಆರೋಪಿಗಳುನ್ನು ಹಾಜರು ಪಡಿಸಿದ್ರು.


ಈ ವೇಳೆ ಐವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಆದೇಶ ಹೊರಡಿಸಿದೆ. ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಇನ್ನು FIRನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೆಸರನ್ನು ಲೋಕಾಯುಕ್ತ ಅಧಿಕಾರಿಗಳು ಉಲ್ಲೇಖಿಸಿದ್ದು, ಬಂಧನ ಭೀತಿ ಎದುರಾಗಿದೆ.


ಇದನ್ನೂ ಓದಿ: Madal Virupakshappa: ಈ ಹಣ ಕೊಂಡೊಯ್ಯಲು ಅಮಿತ್ ಶಾ ಬಂದ್ರಾ? ಕಾಂಗ್ರೆಸ್ ಪ್ರಶ್ನೆ


ನಿಷ್ಪಕ್ಷಪಾತ ತನಿಖೆ


ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ  ಬಿ.ಎಸ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು.


ಕಚೇರಿಯಲ್ಲಿ ₹2.02 ಕೋಟಿ ಹಣ ಹಾಗೂ ಮನೆಯಲ್ಲಿ ₹6.10 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದೇವೆ. ಈಗ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಾಕ್ಷ್ಯಾಧಾರ ಸಂಗ್ರಹಿಸಿ ಕೋರ್ಟ್​ಗೆ ಸಲ್ಲಿಸುತ್ತೇವೆ ಅಂತ ಹೇಳಿದ್ರು. ಈವರೆಗೆ 5 ಜನರನ್ನ ಬಂಧಿಸಿದ್ದೇವೆ. ಪ್ರಶಾಂತ್ ಮಾಡಾಳ್ ಹಾಗೂ ಅವ್ರ ಅಕೌಂಟೆಂಟ್ ಸೇರಿದಂತೆ ಲಂಚ ಕೊಡಲು ಬಂದಿದ್ದ ಮೂವರನ್ನು ಬಂಧಿಸಿದ್ದೇವೆ ಅಂತ ಹೇಳಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು