• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Madal Virupakshappa: ಬಂಧನ ಭೀತಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ, ಪೊಲೀಸರು ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಎಸ್ಕೇಪ್!

Madal Virupakshappa: ಬಂಧನ ಭೀತಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ, ಪೊಲೀಸರು ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಎಸ್ಕೇಪ್!

ಮಾಡಾಳ್  ವಿರೂಪಾಕ್ಷಪ್ಪ

ಮಾಡಾಳ್ ವಿರೂಪಾಕ್ಷಪ್ಪ

ಪುತ್ರ ಮಾಡಾಳ್ ಪ್ರಶಾಂತ್ ಸುಮಾರು 6 ಕೋಟಿ ಲಂಚದ ಹಣದೊಂದಿಗೆ ಲೋಕಾಯುಕ್ತ ಪೊಲೀಸರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ. ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುವ ಸಾಧ್ಯತೆ ಇದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Davanagere (Davangere), India
  • Share this:

ಚನ್ನಗಿರಿ, ದಾವಣೆಗೆರೆ: ಪುತ್ರನ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ (Lokayukta Police) ಬಂಧನ ಭೀತಿಗೆ ಒಳಗಾಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Channagiri MLA Madal Virupakshappa) ಇದೀಗ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತದೆ. ಪುತ್ರ ಮಾಡಾಳ್ ಪ್ರಶಾಂತ್ (Madal prashant) ಸುಮಾರು 6 ಕೋಟಿ ಲಂಚದ ಹಣದೊಂದಿಗೆ ಲೋಕಾಯುಕ್ತ ಪೊಲೀಸರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ. ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಪಡೆದಿದ್ದರು. ಇದೀಗ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯ ತಮ್ಮ ನಿವಾಸದಿಂದ ಅಜ್ಞಾತ ಸ್ಥಳಕ್ಕೆ ಹೊರಟಿದ್ದಾರೆ ಎನ್ನಲಾಗುತ್ತಿದೆ.  


ಮಾಡಾಳ್ ಪುತ್ರನ ಕಚೇರಿಯಲ್ಲಿ ಸಿಕ್ಕಿತ್ತು ಕೋಟಿ ಕೋಟಿ ಹಣ


ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದರು. ಅವರ ಪುತ್ರ ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ಚೀಫ್ ಅಕೌಂಟೆಂಟ್ ಆಗಿದ್ದು, ತಂದೆಯ ನಿಗಮದಲ್ಲಿ ಟೆಂಡರ್‌ ನೀಡಲು ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಬರೋಬ್ಬರಿ 6 ಕೋಟಿ ನಗದು ಹಣದೊಂದಿಗೆ ಮಾಡಾಳ್ ಪ್ರಶಾಂತ್‌ನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು.




ಈ ಹಿಂದೆಯೂ ಎಸ್ಕೇಪ್ ಆಗಿದ್ದ ಶಾಸಕ


ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಎ1 ಆರೋಪಿ ಅಂತ ಹೆಸರಿಸಲಾಗಿತ್ತು. ಇಷ್ಟೆಲ್ಲಾ ಆಗುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೇ ಮಾಡಾಳ್ ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದರು. ಬಳಿಕ ಕೋರ್ಟ್ ಜಾಮೀನು ನೀಡುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷರಾಗಿದ್ದರು.


ಇದನ್ನೂ ಓದಿ: Madalu Prashant: ಬಗೆದಷ್ಟು ಹೊರ ಬರುತ್ತಿದೆ ಮಾಡಾಳು ಮಗನ ಭ್ರಷ್ಟಾಚಾರ! ಡೀಲ್ ನಡೆಸ್ತಿದ್ದನಾ ಪ್ರಶಾಂತ್?


ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ


ಈ ನಡುವೆ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ನ್ಯಾಯಪೀಠ ಜಾಮೀನು ನಿರಾಕರಿಸಿತ್ತು.


ಬಂಧನ ಭೀತಿಯಿಂದ ಎಸ್ಕೇಪ್ ಆದ ಮಾಡಾಳ್ ವಿರೂಪಾಕ್ಷಪ್ಪ


ಇನ್ನು ಬಂಧನ ಭೀತಿ ಎದುರಾಗುತ್ತಿದ್ದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದಾರೆ. ಲೋಕಾಯುಕ್ತ ಪೊಲೀಸರಿಂದ ಬಂಧನ ಭೀತಿ ಹಿನ್ನಲೆ ಅಜ್ಞಾತ ಸ್ಥಳಕ್ಕೆ  ಸಕ ಮಾಡಾಳ್ ವಿರೂಪಾಕ್ಷಪ್ಪ ಹೊರಟಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾಡಾಳ್ ಗ್ರಾಮದ ನಿವಾಸದಿಂದ ಶಿವಮೊಗ್ಗದ  ಕಡೆಗೆ ಖಾಸಗಿ ಕಾರಿನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹೊರಟಿದ್ದಾರೆ ಎನ್ನಲಾಗಿದೆ.


ಮಾಧ್ಯಮದವರ ಮೇಲೆ ಗರಂ


ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ರದ್ದಾದ ಹಿನ್ನಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ದಿಢೀರ್ ಕ್ಷೇತ್ರ ತೊರೆದಿದ್ದಾರೆ. ಮಾಧ್ಮಗಳಿಗೆ ಪ್ರತಿಕ್ರಿಯೆ ನೀಡುತ್ತಿರುವಾಗಲೇ ಅರ್ಧಕ್ಕೆ ಹೊರ ನಡೆದಿದ್ದಾರೆ. ಮಾಧ್ಯಮದವರು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ದಯಮಾಡಿ ನನ್ನ ಪಾಡಿಗೆ ನನ್ನನ್ನು ಬಿಡಿ ಎಂದು ಕೈ ಮುಗಿದು ಹೊರಟಿದ್ದಾರೆ.


ಮಾಡಾಳ್ ಮನೆಗೆ ಲೋಕಾಯುಕ್ತರ ಆಗಮನ


ಇನ್ನು ಮಾಡಾಳ್ ವಿರೂಪಾಕ್ಷಪ್ಪ ಗ್ರಾಮಕ್ಕೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು, ಮನೆಯಿಂದ ದೂರು ಗಾಡಿ ನಿಲ್ಲಿಸಿದ್ದಾರೆ. ಎರಡು ಕಾರಿನಲ್ಲಿ ಆಗಮಿಸದ ಅಧಿಕಾರಿಗಳು‌, ಮಾಡಾಳ್ ವಿರೂಪಾಕ್ಷಪ್ಪಗೆ ಆಗಮಿಸಿದ್ದಾರೆ.


ಇದನ್ನೂ ಓದಿ: Madalu Virupakshappa: ಊರೆಲ್ಲ ಹುಡುಕಿದ್ರೂ ಸಿಗದ ಮಾಡಾಳು ಮನೆ ಬಳಿ ಪ್ರತ್ಯಕ್ಷ! ಜಾಮೀನು ಪಡೆದು ಬಂದ ಶಾಸಕನಿಗೆ ಅದ್ಧೂರಿ ಸ್ವಾಗತ!


ಬೆಳಗ್ಗೆ ಕಾರ್ಯಕ್ರಮಕ್ಕೆ ಹಾಜರ್, ಸಂಜೆ ಎಸ್ಕೇಪ್


ಇನ್ನು ಬೆಳಗ್ಗೆಯಿಂದ ಸರ್ಕಾರಿ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಕೋರ್ಟ್ ನಿಂದ ಜಾಮೀನು ಅರ್ಜಿ ತಿರಸ್ಕರಿಸಿದ ಸುದ್ದಿ ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆ ವಿವಿಧ ಕಾಮಗಾರಿ, ಶಂಕುಸ್ಥಾಪನೆಗೆ ಚಾಲನೆ ನೀಡಿದ್ದ ವಿರೂಪಾಕ್ಷಪ್ಪ, ಇದೀಗ ಬಂಧನ ಭೀತಿಯಿಂದ ತಲೆಮರೆಸಿಕೊಂಡ್ರಾ ಎಂಬ ಶಂಕೆ ವ್ಯಕ್ತವಾಗಿದೆ.

top videos
    First published: