ಕೂಡಲ ಸಂಗಮಕ್ಕೆ ಮಾತೆ ಮಹಾದೇವಿ ಪಾರ್ಥಿವ ಶರೀರ; ಚಿತ್ರದುರ್ಗದಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಶರಣ ಮಾತೆ ಮಹಾದೇವಿ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 11 ಗಂಟೆಗೆ ಕೂಡಲ ಸಂಗಮಕ್ಕೆ ರವಾನಿಸಲು ಮಠದ ಸಿಬ್ಬಂದಿ ತೀರ್ಮಾನ ಮಾಡಿದ್ದಾರೆ. ಪಾರ್ಥಿವ ಶರೀರವನ್ನು ಹಿರಿಯೂರು, ಚಳ್ಳಕೆರೆ, ನಾಯಕನಹಟ್ಟಿ, ಚಿತ್ರದುರ್ಗ ಮಾರ್ಗವಾಗಿ ಕೂಡಲಸಂಗಮಕ್ಕೆ ಕೊಂಡೊಯ್ಯಲಾಗುವುದು.

Seema.R | news18
Updated:March 15, 2019, 10:58 AM IST
ಕೂಡಲ ಸಂಗಮಕ್ಕೆ ಮಾತೆ ಮಹಾದೇವಿ ಪಾರ್ಥಿವ ಶರೀರ; ಚಿತ್ರದುರ್ಗದಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಮಾತೆ ಮಹಾದೇವಿ
Seema.R | news18
Updated: March 15, 2019, 10:58 AM IST
ಬೆಂಗಳೂರು (ಮಾ.15): ಬಸವಪೀಠದ ಧರ್ಮಾಧ್ಯೆಕ್ಷೆ ಮಾತೆ ಮಹಾದೇವಿಯವರ ಅಂತಿಮ ವಿಧಿವಿಧಾನ ಕೂಡಲ ಸಂಗಮದಲ್ಲಿ ನಡೆಯಲಿದೆ. ಬಹುಅಂಗಾಂಗ ವೈಫಲ್ಯದಿಂದ ಗುರುವಾರ ಮಧ್ಯಾಹ್ನ ನಿಧನರಾಗಿದ್ದ ಅವರ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದ ಅವರ ಅಂತಿಮ ದರ್ಶನಕ್ಕೆ ರಾಜಾಜಿನಗರದ ಬಸವ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಇಡೀ ಭಕ್ತರು ಮತ್ತು ಸಾರ್ವಜನಿಕರು ಅವರ ಅಂತಿಮ ದರ್ಶನ ಪಡೆದರು. ಮತಾ ಗಂಗಾಜಿ ನೇತೃತ್ವದಲ್ಲಿ ಮಾತೆ ಮಹಾದೇವಿ ಲಿಂಗ ಶರೀರಕ್ಕೆ ಪೂಜೆ ಮಾಡಲಾಗಿದ್ದು, ರಾತ್ರಿ ಇಡೀ ಶರಣರಿಂದ ಭಜನೆ, ಬಸವತತ್ವ ಹಾಗೂ ಭಕ್ತಿಗೀತೆಗಳ ಪಠಣೆ ನಡೆಯಿತು.

ಶರಣ ಮಾತೆ ಮಹಾದೇವಿ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 11 ಗಂಟೆಗೆ ಕೂಡಲ ಸಂಗಮಕ್ಕೆ ರವಾನಿಸಲು ಮಠದ ಸಿಬ್ಬಂದಿ ತೀರ್ಮಾನ ಮಾಡಿದ್ದಾರೆ. ಪಾರ್ಥಿವ ಶರೀರವನ್ನು ಹಿರಿಯೂರು, ಚಳ್ಳಕೆರೆ, ನಾಯಕನಹಟ್ಟಿ, ಚಿತ್ರದುರ್ಗ ಮಾರ್ಗವಾಗಿ ಕೂಡಲಸಂಗಮಕ್ಕೆ ಕೊಂಡೊಯ್ಯಲಾಗುವುದು. ಇದರ ಮಧ್ಯೆ ಮೊದಲು ಚಿತ್ರದುರ್ಗದಲ್ಲಿ ಭಕ್ತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕೂಡಲ ಸಂಗಮದಲ್ಲಿ ನಾಳೆ  ಬಸವ ಮಹಾಮನೆಯಲ್ಲಿ ಮಾತೇ ಮಹಾದೇವಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನು ಓದಿ: 1946-2019: ವಿಶ್ವದ ಶ್ರೇಷ್ಠ ಜಂಗಮರಾಗಿ ಬೆಳೆದ ಚಿತ್ರದುರ್ಗದ ‘ರತ್ನ’ ಮಾತೆ ಮಹಾದೇವಿ

ಮಾತೆ ಮಹಾದೇವಿ ಅಂತಿಮ ದರ್ಶನ ಪಡೆದ ವಿ. ಸೋಮಣ್ಣ ಮಾತನಾಡಿ, ಬಸವ ತತ್ವಗಳನ್ನು ಪ್ರಚಾರಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಮಾತಾಜಿ. ಅವರ ಕೆಲಸಗಳು ಜಗತ್ ಪ್ರಸಿದ್ದವಾಗಿವೆ. ಬೀದರ್ ನಂತಹ ಜಿಲ್ಲೆಯಲ್ಲಿ ಬಸವಣ್ಣನ ಪೀಠ ಸ್ಥಾಪಿಸಿ ಬಸವ ತತ್ವಗಳನ್ನು ಪ್ರತಿಪಾದಿಸಿದ್ದಾರೆ. ಅವರ ಅಗಲಿಗೆ ದುಃಖ ತಂದಿದೆ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮುನ್ನಲೆಗೆ ಬಂದಾಗ ಹೋರಾಟದ ನೇತೃತ್ವ ವಹಿಸಿದ್ದು ಮಾತೆ ಮಹಾದೇವಿಯವರು. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಮಹಾದೇವಿ ಹೇಳಿದ್ದರು. ಜತೆಗೆ ದೆಹಲಿಯಲ್ಲೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...