ಗಿರೀಶ್​ ಕಾರ್ನಾಡ್​ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರ ಸಂತಾಪ

Condolence To Girish Karnad Sad Demise: ಗಿರೀಶ್​ ಕಾರ್ನಾಡ್ ನಿಧನಕ್ಕೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

Seema.R | news18
Updated:June 10, 2019, 1:22 PM IST
ಗಿರೀಶ್​ ಕಾರ್ನಾಡ್​ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರ ಸಂತಾಪ
ಗಿರೀಶ್​​ ಕಾರ್ನಾಡ್​​
  • News18
  • Last Updated: June 10, 2019, 1:22 PM IST
  • Share this:
ಬೆಂಗಳೂರು (ಜೂ.10): ಶ್ರೇಷ್ಠ ನಾಟಕಕಾರ, ಜ್ಞಾನಪೀಠ ಸಾಹಿತಿ ಗಿರೀಶ್​ ಕಾರ್ನಾಡ್​​ ಅನಾರೋಗ್ಯದಿಂದ  ಇಂದು ನಿಧನರಾಗಿದ್ದಾರೆ. 81 ವರ್ಷದ ಕಾರ್ನಾಡರ ಸಾವಿನಿಂದಾಗಿ ರಂಗಭೂಮಿ, ಸಾಹಿತ್ಯದ ಕೊಂಡಿಯೊಂದು ಕಳಚಿದೆ.

ಸಾಹಿತ್ಯ, ರಂಗಭೂಮಿ, ಸಿನಿಮಾ ಮಾತ್ರವಲ್ಲದೇ ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಕಾರ್ನಾಡ್ ಹೆಸರಾಗಿದ್ದವರು. ಅವರ ನಿಧನಕ್ಕೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಹುಮುಖ ಪ್ರತಿಭೆಯಿಂದ ಗಿರೀಶ್​ ಕಾರ್ನಾಡರು ನಮ್ಮ ನೆನೆಪಿನಲ್ಲಿ ಉಳಿಲಿಯಲಿದ್ದಾರೆ. ಅವರ ಭಾವನೆಗಳನ್ನು ಆತ್ಮೀಯವಾಗಿ ಹೊರಹಾಕುತ್ತಿದ್ದರು. ಅವರ ಕೆಲಸ ಮುಂದಿನ ವರ್ಷಗಳಲ್ಲೂ ಉಳಿಯಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

First published:June 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ