• Home
 • »
 • News
 • »
 • state
 • »
 • Lumpy Skin Disease: ಚರ್ಮ ಗಂಟು ರೋಗದಿಂದ ಹೈನುಗಾರರ ಬದುಕು ಹೈರಾಣ; ಭಾರೀ ಪ್ರಮಾಣದಲ್ಲಿ ಕುಸಿತ ಹಾಲಿನ ಉತ್ಪಾದನೆ

Lumpy Skin Disease: ಚರ್ಮ ಗಂಟು ರೋಗದಿಂದ ಹೈನುಗಾರರ ಬದುಕು ಹೈರಾಣ; ಭಾರೀ ಪ್ರಮಾಣದಲ್ಲಿ ಕುಸಿತ ಹಾಲಿನ ಉತ್ಪಾದನೆ

(ಸಾಂದರ್ಭಿಕ ಚಿತ್ರ)

(ಸಾಂದರ್ಭಿಕ ಚಿತ್ರ)

ಕಳೆದ 5 ವರ್ಷಗಳಲ್ಲಿ ಇದು ಮೊದಲ ಬಾರಿಗೆ ಹಾಲಿನ ಉತ್ಪಾದನೆ ಕಡಿಮೆಯಾಗಿದ್ದು, ಹಾಲಿನ ಕೊರತೆಯಿಂದಾಗಿ ಹಾಲಿನ ಉಪಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್ ಹಾಗೂ ಇತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ.

 • Trending Desk
 • 2-MIN READ
 • Last Updated :
 • Karnataka, India
 • Share this:

ಜಾನುವಾರುಗಳಲ್ಲಿ ಕಂಡುಬರುತ್ತಿರುವ ಚರ್ಮ ರೋಗ (ಎಲ್‌ಎಸ್‌ಡಿ) (Lumpy Skin Disease), ಕಾಲು ಬಾಯಿ ರೋಗ (Hand, Foot, and Mouth Disease) ಪ್ರವಾಹ ಅಂತೆಯೇ ಕಳಪೆ ಮೇವಿನಿಂದಾಗಿ ಕರ್ನಾಟಕ ಹಾಲು ಒಕ್ಕೂಟವು (Karnataka Milk Federation) ಜುಲೈ 2022 ರಿಂದ ದಿನಕ್ಕೆ ಒಂಬತ್ತರಿಂದ 10 ಲಕ್ಷ ಲೀಟರ್ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ. ಒಕ್ಕೂಟವು ರಾಜ್ಯದಲ್ಲಿ 26 ಲಕ್ಷ ಹಾಲು ಉತ್ಪಾದಕರಿಂದ ದಿನಕ್ಕೆ 75.6 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.


ಮೊದಲ ಬಾರಿಗೆ ಹಾಲು ಸಂಗ್ರಹಣೆಯಲ್ಲಿ ಕುಸಿತ; ಹಾಲಿನ ಉತ್ಪನ್ನಗಳ ಬೆಲೆ ಏರಿಕೆ


2021-22ರಲ್ಲಿ ಹಾಲಿನ ಉತ್ಪಾದನೆಯು ದಿನಕ್ಕೆ 84.5 ಲಕ್ಷ ಲೀಟರ್ ಆಗಿತ್ತು. ಕಳೆದ ಐದು ವರ್ಷಗಳಲ್ಲಿ ಇದು ಮೊದಲ ಬಾರಿಗೆ ಕುಸಿದಿದೆ ಎಂಬುದಾಗಿ ವರದಿಯಾಗಿದೆ. ಹಾಲಿನ ಕೊರತೆಯಿಂದಾಗಿ ಹಾಲಿನ ಉಪಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್ ಹಾಗೂ ಇತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ.


ಸಾಂದರ್ಭಿಕ ಚಿತ್ರ


ತುಪ್ಪ ಹಾಗೂ ಬೆಣ್ಣೆ ಕಿಲೋಗೆ 30 ರಿಂದ 40 ರೂಪಾಯಿ ಹೆಚ್ಚಳಗೊಂಡಿದೆ. ಇನ್ನು ಹಾಲು ಒಕ್ಕೂಟದಡಿಯಲ್ಲಿ 16 ಹಾಲು ಒಕ್ಕೂಟಗಳು ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡುವ ಹಾಲಿನ ಪುಡಿ ಉತ್ಪಾದನೆಯನ್ನು ಕಡಿಮೆ ಮಾಡಿವೆ.


ಹಾಲಿನ ಉತ್ಪನ್ನಕ್ಕೆ ಬೇಡಿಕೆ ಇದೆ


ಏಪ್ರಿಲ್‌ವರೆಗೆ ಹಾಲಿನ ಪುಡಿ ದಾಸ್ತಾನು ಇರುವುದರಿಂದ ಶಾಲೆಗಳಿಗೆ ಹಾಲಿನ ಪುಡಿ ಕೊರತೆ ಎದುರಾಗುವುದಿಲ್ಲ ಎಂದು ಎರಡು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು ಮಾಧ್ಯಮಗಳಿಗೆ ದೃಢೀಕರಣ ನೀಡಿದ್ದಾರೆ. ಹಾಲು ಹಾಗೂ ಹಾಲಿನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿರುವ ಸಮಯದಲ್ಲೇ ಹಾಲಿನ ಉತ್ಪಾದನೆಯಲ್ಲಿ ಇಳಿಕೆ ಕಂಡುಬಂದಿದೆ.


ಇದನ್ನೂ ಓದಿ: Nandini Milk: ಸಿಂಗಾಪುರದವರಿಗೂ ಬೇಕು ನಮ್ಮ ನಂದಿನಿ ಹಾಲು, 500 ಕೋಟಿ ಒಪ್ಪದಂಕ್ಕೆ ಸಹಿ ಹಾಕಿದ KMF!​


ಹಾಲು ಪೂರೈಕೆ ಕೊರತೆಯಿಂದ ಸಣ್ಣ ಚಿಲ್ಲರೆ ಮಳಿಗೆಗಳು ಮಾರುಕಟ್ಟೆಗಳಿಂದ ನಿರ್ಗಮಿಸಿವೆ. ಹಾಲಿನ ಸಂಗ್ರಹಣೆಯನ್ನು ಆಧರಿಸಿ ಮಾರಾಟವನ್ನು ಕನಿಷ್ಠಗೊಳಿಸುತ್ತಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಬಿ ಪಿ ತಿಳಿಸಿದ್ದಾರೆ. ಏಪ್ರಿಲ್ ವೇಳೆಗೆ ಸಮಸ್ಯೆಗಳು ನಿವಾರಣೆಯಾಗುವ ಭರವಸೆ ಇದೆ ಎಂದು ಸುರೇಶ್ ತಿಳಿಸಿದ್ದಾರೆ.


ಹಾಲಿನ ಉತ್ಪಾದನೆಯಲ್ಲಿ ಹೆಚ್ಚು ಪ್ರಮಾಣದ ಕುಸಿತಕ್ಕೆ ತುಮಕೂರು ಜಿಲ್ಲೆ ಸಾಕ್ಷಿ


ದಿನವೊಂದಕ್ಕೆ ಸುಮಾರು 70,000 ಲೀಟರ್ ಹಾಲು ಕುಸಿತ ಕಂಡಿರುವ ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಸಂಘವು ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದ ಕುಸಿತಕ್ಕೆ ಸಾಕ್ಷಿಯಾಗಿದೆ.


Milk price hiked by Rs 3 from tomorrow KMF official information
ನಂದಿನಿ ಹಾಲು


ಜಾನುವಾರುಗಳಿಗೆ ಲಸಿಕೆ ನೀಡುವಲ್ಲಿ ವಿಳಂಬ


ಎಲ್‌ಎಸ್‌ಡಿ ಹಾಗೂ ಕಾಲು ಬಾಯಿ ರೋಗದ ವಿರುದ್ಧ ಲಸಿಕೆ ನೀಡುವಲ್ಲಿ ವಿಳಂಬವಾಗಿರುವುದರಿಂದ ಅನೇಕ ಜಾರುವಾರುಗಳು ಸತ್ತಿವೆ ಎಂದು ಬಾಗಲಕೋಟೆ ಜಿಲ್ಲೆಯ ರೈತ ನ್ಯಾಮದೇವ ಪ್ರಭುಗೌಡ ದೂರಿದ್ದಾರೆ.


ಡಿಸೆಂಬರ್ 2021 ರಲ್ಲಿ ಒಕ್ಕೂಟಕ್ಕೆ ದಿನವೊಂದಕ್ಕೆ 135 ಲೀಟರ್ ಹಾಲನ್ನು ಪೂರೈಸುತ್ತಿದ್ದೆ ಎಂದು ತಿಳಿಸಿರುವ ನ್ಯಾಮದೇವ, ಇದೀಗ ಹಸುಗಳನ್ನು ಕಾಡುತ್ತಿರುವ ಚರ್ಮರೋಗದಿಂದಾಗಿ ಏಳು ಗೋವುಗಳಲ್ಲಿ ನಾಲ್ಕು ಮೃತಗೊಂಡವು. ಹೀಗಾಗಿ ಹಾಲಿನ ಇಳುವರಿ ದಿನಕ್ಕೆ 80 ರಿಂದ 100 ಲೀಟರ್‌ಗೆ ಕುಸಿದಿದೆ ಎಂದು ತಿಳಿಸಿದ್ದಾರೆ.


ಕೆಲವೊಂದು ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಕುಸಿತ


2021-22ರಲ್ಲಿ ಕರ್ನಾಟಕ ಮಾರುಕಟ್ಟೆಗೆ ಕೆಎಂಎಫ್ ತಿಂಗಳಿಗೆ ಸುಮಾರು 2,000 ಟನ್ ತುಪ್ಪವನ್ನು ಪೂರೈಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಹಾಲಿನ ಕೊರತೆಯಿಂದಾಗಿ ಈ ಪ್ರಮಾಣ ತಿಂಗಳಿಗೆ 1,700 ಟನ್‌ಗೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.


ತಿಂಗಳಿಗೆ ಉತ್ಪತ್ತಿಯಾಗುತ್ತಿದ್ದ 150 ಟನ್ ಬೆಣ್ಣೆ ಪ್ರಮಾಣ ಕೂಡ ಕುಸಿದಿದೆ ಎಂದು ವರದಿ ನೀಡಿದ್ದಾರೆ. ಕಳೆದ ವರ್ಷ ಕೆಎಂಎಫ್ ತಿಂಗಳಿಗೆ 400 ಟನ್ ಮಾರುಕಟ್ಟೆ ಪಾಲನ್ನು ಹೊಂದಿತ್ತು ಎಂಬುದು ವರದಿಯಾಗಿದೆ. ತುಮಕೂರು, ಕೋಲಾರ, ಶಿವಮೊಗ್ಗ, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳ ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದೆ.
ಇದನ್ನೂ ಓದಿ: Lumpy Skin Disease: ಜಾನುವಾರುಗಳಿಗೆ ಚರ್ಮ ಗಂಟುರೋಗದ ಕಂಟಕ! ಭಾರತದಲ್ಲಿ ಹೈನುಗಾರಿಕೆಯ ಭವಿಷ್ಯವೇನು?


ವಿದೇಶಕ್ಕೆ ಹಾಲು ಹಾಗೂ ಉತ್ಪನ್ನಗಳ ರಫ್ತು


ಹಾಲು ಉತ್ಪಾದನೆಯಲ್ಲಿ ಕುಸಿತದ ನಡುವೆಯೂ, ಹಾಸನ ಹಾಲು ಒಕ್ಕೂಟವು ಹಾಲು ಮತ್ತು ಅದರ ಉಪ ಉತ್ಪನ್ನಗಳನ್ನು ಮಾಲ್ಡೀವ್ಸ್, ಪಶ್ಚಿಮ ಏಷ್ಯಾ ಮತ್ತು ಸಿಂಗಾಪುರಕ್ಕೆ ರಫ್ತು ಮಾಡಲು ಸಿದ್ಧವಾಗಿದೆ.


ಅರಬ್ ರಾಷ್ಟ್ರಗಳ ಪ್ರತಿನಿಧಿಗಳ ಭೇಟಿ


ಕೆಎಂಎಫ್ ಮೂಲಕ ಹಾಸನ ಒಕ್ಕೂಟವು ಈಗಾಗಲೇ 1.5 ಲಕ್ಷ ಲೀಟರ್ ಟೆಟ್ರಾಪಾಕ್ ಹಾಲನ್ನು ಮಾಲ್ಡೀವ್ಸ್‌ಗೆ ಪ್ರಾಯೋಗಿಕವಾಗಿ ರವಾನಿಸಿದೆ. ಅರಬ್ ರಾಷ್ಟ್ರಗಳ ಪ್ರತಿನಿಧಿಗಳು ಕಳೆದ ವಾರ ಹಾಸನ ಘಟಕಕ್ಕೆ ಭೇಟಿ ನೀಡಿ ಇಲ್ಲಿ ಪ್ಯಾಕ್ ಮಾಡಲಾಗುತ್ತಿರುವ ಹಾಲಿನ ಗುಣಮಟ್ಟ ಪರಿಶೀಲಿಸಿದ್ದರು.


ಸಣ್ಣ ಪುಟ್ಟ ಸಮಸ್ಯೆಗಳಿದ್ದು ಅವುಗಳು ಪರಿಹಾರಗೊಂಡರೆ ಅರಬ್ ರಾಷ್ಟ್ರಗಳಿಗೆ ದಿನಕ್ಕೆ ಕನಿಷ್ಠ 50 ಸಾವಿರ ಲೀಟರ್ ಹಾಲು ರಫ್ತು ಮಾಡಲು ಸಾಧ್ಯವಾಗುತ್ತದೆ ಎಂದು ಹಾಸನ ಒಕ್ಕೂಟದ ಎಂಡಿ ಗೋಪಾಲಯ್ಯ ತಿಳಿಸಿದ್ದಾರೆ.

First published: