ಮಂಗಳೂರಿನಲ್ಲಿ 'ಲುಬನ್' ಚಂಡಮಾರುತದ ಪರಿಣಾಮ; ಮನೆಯತ್ತ ನುಗ್ಗುತ್ತಿರುವ ಕಡಲ ಅಲೆಗಳು

sushma chakre | news18
Updated:October 11, 2018, 3:18 PM IST
ಮಂಗಳೂರಿನಲ್ಲಿ 'ಲುಬನ್' ಚಂಡಮಾರುತದ ಪರಿಣಾಮ; ಮನೆಯತ್ತ ನುಗ್ಗುತ್ತಿರುವ ಕಡಲ ಅಲೆಗಳು
sushma chakre | news18
Updated: October 11, 2018, 3:18 PM IST
ನ್ಯೂಸ್​18 ಕನ್ನಡ

ಮಂಗಳೂರು (ಅ. 11): ಅರಬ್ಬೀ ಸಮುದ್ರದಲ್ಲಿ ಲುಬನ್ ಚಂಡಮಾರುತ ಎದ್ದಿರುವ ಪರಿಣಾಮ ಮಂಗಳೂರಿನ ಪಣಂಬೂರು, ಉಳ್ಳಾಲ, ಸೋಮೇಶ್ವರದಲ್ಲಿ  ಕಡಲು ಉಕ್ಕೇರುತ್ತಿದೆ.

ಸಮುದ್ರದಿಂದ ಮೇಲೇಳುತ್ತಿರುವ ಕಡಲಿನ ಅಲೆಗಳು ಆಸುಪಾಸಿನಲ್ಲಿರುವ ಹಲವು ಮನೆಗಳ ಒಳಗೂ ನುಗ್ಗುತ್ತಿದೆ. 2 ದಿನಗಳಿಂದ ಅಲೆಗಳು ನುಗ್ಗುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತಳೆದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸೋಮೇಶ್ವರ, ಪೆರಿಬೈಲ್​ನಲ್ಲಿ ಮನೆಗಳು ಅಪಾಯದಲ್ಲಿವೆ. ಹವಾಮಾನ ಇಲಾಖೆ ಈ ಮೊದಲೇ ಮುನ್ನೆಚ್ಚರಿಕೆ ನೀಡಿದ್ದರೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಸದ್ಯಕ್ಕೆ ಹವಾಮಾನ ಇಲಾಖೆ ಅ. 13ರವರೆಗೂ ಸಮುದ್ರದಲ್ಲಿ ಮೀನು ಹಿಡಿಯಲು ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಿದ 'ತಿತ್ಲಿ' ಚಂಡಮಾರುತ; ಆಂಧ್ರ ಪ್ರದೇಶದಲ್ಲಿ ಇಬ್ಬರ ಸಾವು

ಲುಬನ್ ಚಂಡಮಾರುತದ ಪ್ರಭಾವದಿಂದ ಮಂಗಳೂರಿನ ಕಡಲತಡಿಯಲ್ಲೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮೀನುಗಾರರಿಗೆ ಸಮುದ್ರದ ಕಡೆಗೆ ಹೋಗದಂತೆ ಸೂಚನೆ ನೀಡಲಾಗಿದೆ. ಆದರೂ ಸಮುದ್ರದ ಸುತ್ತಮುತ್ತ ಇರುವ ಮನೆಗಳತ್ತ ಸಮುದ್ರದ ಅಲೆಗಳು ನುಗ್ಗುತ್ತಿರುವುದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಅಂಗಳದ ತುಂಬ ಸಮುದ್ರದ ನೀರು ತುಂಬಿಕೊಂಡಿದೆ. ಕೆಲವರ ಮನೆಯೊಳಗೂ ನೀರು ನುಗ್ಗಿದ್ದು, ಸಂಜೆಯಾಗುತ್ತಿದ್ದಂತೆ ಅಲ್ಲಿನ ಜನರು ಭಯಪಡುವ ಪರಿಸ್ಥಿತಿ ಎದುರಾಗಿದೆ.

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ