• Home
  • »
  • News
  • »
  • state
  • »
  • Mandya Politics: ನಿಮ್ಮಿಬ್ಬರ ವಿರುದ್ಧ ಸೋತ್ರೆ ಶಿರಚ್ಛೇದ ಮಾಡಿಕೊಳ್ಳುವೆ: ಶಿವರಾಮೇಗೌಡರ ಸವಾಲ್

Mandya Politics: ನಿಮ್ಮಿಬ್ಬರ ವಿರುದ್ಧ ಸೋತ್ರೆ ಶಿರಚ್ಛೇದ ಮಾಡಿಕೊಳ್ಳುವೆ: ಶಿವರಾಮೇಗೌಡರ ಸವಾಲ್

ಮಾಜಿ ಸಂಸದ ಶಿವರಾಮೇಗೌಡ

ಮಾಜಿ ಸಂಸದ ಶಿವರಾಮೇಗೌಡ

ಅಭ್ಯರ್ಥಿ ಬದಲಿಸಲಿಸದಿದ್ದರೆ ನಾಗಮಂಗಲಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆದಿಯಾಗಿ ಯಾರೇ ಬಂದ್ರೂ ಸುರೇಶ್ ಗೌಡ ಗೆಲ್ಲಲ್ಲ.ಪಕ್ಷದ ಮೇಲೆ ನಿಂತರೆ ಯಾರ್ ಬೇಕಾದ್ರು ಗೆಲ್ತಾರೆ ಬನ್ನಿ ಪಕ್ಷೇತರರಾಗಿ ನಿಲ್ಲೋಣ ಎಂದು ಆಹ್ವಾನಿಸಿದರು.

  • Share this:

ಜೆಡಿಎಸ್ನಿಂದ (JDS) ಉಚ್ಛಾಟನೆಗೊಂಡಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರು (Former MP LR Shivaramegowda), ವಿಧಾನಸಭಾ ಚುನಾವಣೆಯ (Assembly Election) ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ನಾಗಮಂಗಲ (Nagamangala) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧರಾಗಿರುವ ಎಲ್ಆರ್ ಶಿವರಾಮೇಗೌಡರು, ಸಕ್ರಿಯರಾಗಿ ಚುನಾವಣೆ ಘೋಷಣೆಗೂ ಮುನ್ನ ಪ್ರಚಾರದಲ್ಲಿ (Election Campaign) ತೊಡಗಿಕೊಂಡಿದ್ದಾರೆ. ಇದರ ಜೊತೆ ಸಮಯ ಸಿಕ್ಕಾಗೆಲ್ಲ ಜೆಡಿಎಸ್ ಶಾಸಕರ (JDS MLAs) ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಮದ್ದೂರು ತಾಲೂಕಿನ ಕೆ ಮಲ್ಲಿಗೆರೆ ಗ್ರಾಮದಲ್ಲಿ ಮಾತನಾಡಿದ ಶಿವರಾಮೇಗೌಡರು, ಇಬ್ಬರು ನಾಯಕರಿಗೆ ಬಹಿರಂಗ ಸವಾಲು ಹಾಕಿದರು.


ನನ್ನ ವಿರುದ್ಧ ನೀವಿಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿ. ಚುನಾವಣೆಯಲ್ಲಿ ನಿಮ್ಮ ವಿರುದ್ಧ ನಾನು ಗೆಲ್ಲದಿದ್ದರೆ ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ (MLA Suresh Gowda), ಮಾಜಿ ಸಚಿವ ಎನ್. ಚಲುವರಾಯಸ್ವಾಮಿಗೆ (Former Minister N Chaluvarayaswamy) ಬಹಿರಂಗ ಸವಾಲು ಹಾಕಿದರು.


ನಾಗಮಂಗಲದಲ್ಲಿ ಜೆಡಿಎಸ್ ಸೋಲುತ್ತೆ


ನೀವಿಬ್ರು ಪಕ್ಷ ಬಿಟ್ಟು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲು ಹಾಕಿದ ಶಿವರಾಮೇಗೌಡರು, ನಾಗಮಂಗಲದಲ್ಲಿ ಈ ಬಾರಿ ಸುರೇಶ್ ಗೌಡರೇ ಅಭ್ಯರ್ಥಿಯಾದ್ರೆ ಜೆಡಿಎಸ್ ಸೋಲುತ್ತೆ ಎಂದು ಭವಿಷ್ಯ ನುಡಿದರು.


ಅಭ್ಯರ್ಥಿ ಬದಲಿಸಲಿಸದಿದ್ದರೆ ನಾಗಮಂಗಲಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆದಿಯಾಗಿ ಯಾರೇ ಬಂದ್ರೂ ಸುರೇಶ್ ಗೌಡ ಗೆಲ್ಲಲ್ಲ.ಪಕ್ಷದ ಮೇಲೆ ನಿಂತರೆ ಯಾರ್ ಬೇಕಾದ್ರು ಗೆಲ್ತಾರೆ ಬನ್ನಿ ಪಕ್ಷೇತರರಾಗಿ ನಿಲ್ಲೋಣ ಎಂದು ಆಹ್ವಾನಿಸಿದರು.


ಜೆಡಿಎಸ್ ಭದ್ರಕೋಟೆ ಕುಸಿಯುತ್ತಿದೆ


ಈ ಹಿಂದೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ. ಆದರೆ ಜಿಲ್ಲೆಯ ಕೆಲ ಭಟ್ಟಂಗಿಗಳ ದುರ್ವರ್ತನೆಯಿಂದ ಜೆಡಿಎಸ್ ಭದ್ರಕೋಟೆ ಸ್ವಲ್ಪ ಸ್ವಲ್ಪ ಕುಸಿಯುತ್ತಿದೆ. ನನಗೆ ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಅವರುಗಳ ಬಗ್ಗೆ ಗೌರವ ಇದೆ ಎಂದರು.


ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ


ಈ ಹಿಂದೆ ನಾನು ಎರಡು ಬಾರಿ ಪಕ್ಷೇತರರಾಗಿ ನಿಂತು ಚುನಾವಣೆಯಲ್ಲಿ ಗೆದ್ದಿದ್ದೀನಿ. ಆ ಸಮಯದಲ್ಲಿ ನನ್ನ ಮೇಲೆ ಕೊಲೆ ಕೇಸ್ ಹಾಕಿಸಿ ಕೊಡಬಾರದ ಹಿಂಸೆ ಕೊಟ್ರು. ಶಿವರಾಮೇಗೌಡ ಐದೇ ತಿಂಗಳು ಸಂಸದನಾಗಿದ್ದು ಜಿಲ್ಲೆಗೆ ಪಾಸ್ ಪೋರ್ಟ್ ಮಾಡುವ ಕಚೇರಿ ತಂದಿದ್ದೀನಿ. ಹಾಲಿ ಸಂಸದೆ ಸುಮಲತಾರನ್ನ ಈ ರೀತಿ ಕೇಂದ್ರ ಸರ್ಕಾರದ ಒಂದೇ ಒಂದು ಕೆಲಸ ಮಾಡಿದ್ದಾರಾ ಅಂತ ಕೇಳಿ ಎಂದು ವಾಗ್ದಾಳಿ ನಡೆಸಿದರು.


ನಾನೇ ಪೂರ್ಣವಧಿ ಸಂಸದನಾಗಿದ್ದರೆ ಪ್ರಧಾನ ಮಂತ್ರಿ ಯಾರೇ ಆಗಿದ್ರೂ ಅವರ ಕಾಲು ಕಟ್ಟಿ ಹಣ ತಂದು ಮೂರು ಸಾವಿರ ಹಳ್ಳಿಗಳಿಗೆ ಸಮುದಾಯ ಭವನ ಕಟ್ಟಿಸುತ್ತಿದ್ದೆ ಎಂದು ಹೇಳಿದರು.


ಇದನ್ನೂ ಓದಿ:  ಅಂಬರೀಷ್ ಮದುವೆಯಾದ್ಮೇಲೆ ಸುಮಲತಾ ಗೌಡ್ತಿಯೇ ಆಗ್ಲಿಲ್ವ?; ಶಿವರಾಮೇಗೌಡ ವಿರುದ್ಧ ಎಂಟಿಬಿ ನಾಗರಾಜ್ ಪರೋಕ್ಷ​ ವಾಗ್ದಾಳಿ


ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ರಣ ಕಹಳೆ


ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಎಲ್ಆರ್ ಶಿವರಾಮೇಗೌಡರು ಚೀಣ್ಯ ಹೋಬಳಿಯ 15ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರಚಾರ ನಡೆಸಲಾಗ್ತಿದೆ. ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದ ತೊಡೆ ತಟ್ಟಿರುವ ಎಲ್ ಆರ್ ಶಿವರಾಮೇಗೌಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


ಈ ನಡುವೆ ಶಿವರಾಮೇಗೌಡರು ಬಿಜೆಪಿ ಸೇರ್ತಾರ ಅನ್ನೋ ಮಾತುಗಳು ಸಹ ಕೇಳಿಬರುತ್ತಿವೆ. ಆದ್ರೆ ಈ ಬಗ್ಗೆ ಶಿವರಾಮೇಗೌಡರು ಮತ್ತು ಬಿಜೆಪಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.


ಇದನ್ನೂ ಓದಿ:  LR Shivaramegowda: ನಾನು 420 ಆದ್ರೆ, ಅವನು 840; ಮಂಡ್ಯ ರಾಜಕಾರಣದಲ್ಲಿ ಏಟು ಎದಿರೇಟು


ಮಾದೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ


ಸ್ವಾತಂತ್ರ್ಯ ಹೋರಾಟಗಾರ ಮಾದೇಗೌಡರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು.

Published by:Mahmadrafik K
First published: