• Home
  • »
  • News
  • »
  • state
  • »
  • Mandya Politics: ಸುಮಲತಾ ಅಂಬರೀಶ್ ಟೆಕ್ನಿಕ್ ಫಾಲೋ ಮಾಡ್ತಾರಂತೆ ಶಿವರಾಮೇಗೌಡ್ರು; ವರ್ಕೌಟ್ ಆಗುತ್ತಾ?

Mandya Politics: ಸುಮಲತಾ ಅಂಬರೀಶ್ ಟೆಕ್ನಿಕ್ ಫಾಲೋ ಮಾಡ್ತಾರಂತೆ ಶಿವರಾಮೇಗೌಡ್ರು; ವರ್ಕೌಟ್ ಆಗುತ್ತಾ?

ಸುಮಲತಾ ಅಂಬರೀಶ್, ಎಲ್​.ಆರ್.ಶಿವರಾಮೇಗೌಡ

ಸುಮಲತಾ ಅಂಬರೀಶ್, ಎಲ್​.ಆರ್.ಶಿವರಾಮೇಗೌಡ

2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಪ್ರಯೋಗಿಸಿದ ತಂತ್ರಗಳನ್ನೇ ಎಲ್​.ಆರ್.ಶಿವರಾಮೇಗೌಡರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  • Share this:

ಮಂಡ್ಯ: ವಿಧಾನಸಭಾ ಚುನಾವಣೆಗೆ (Assembly Election) ಇನ್ನು ಮೂರು ತಿಂಗಳು ಬಾಕಿ ಉಳಿದಿದೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು (Political Party) ಪ್ರಚಾರದಲ್ಲಿ ತೊಡಗಿಕೊಂಡಿವೆ. ಇತ್ತ  ಪಕ್ಷೇತರರು ಸಹ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕಿಳಿದಿದ್ದು, ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್​ನಿಂದ (JDS) ಉಚ್ಛಾಟನೆಗೊಂಡಿರುವ ಮಾಜಿ ಸಂಸದ ಎಲ್​.ಆರ್.ಶಿವರಾಮೇಗೌಡರು (LR Shivaramegowda) ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಪ್ರಯೋಗಿಸಿದ ತಂತ್ರಗಳನ್ನೇ ಎಲ್​.ಆರ್.ಶಿವರಾಮೇಗೌಡರು ಮುಂದಾಗಿದ್ದಾರೆ. 2019ರಲ್ಲಿ ಸುಮಲತಾ ಅವರ ಈ ತಂತ್ರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು ಎಂದು ವಿಶ್ಲೇಷಣೆ ಮಾಡಲಾಗುತ್ತದೆ.


ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಪ್ರಚಾರದ ಕೊನೆಯ ದಿನ ಸೆರಗೊಡ್ಡಿ ಕಣ್ಣೀರು ಹಾಕಿ ಮತಯಾಚನೆ ಮಾಡುತ್ತಿದ್ದರು. ಅಂದು ಸುಮಲತಾ ಆಡಿದ್ದ ಮಾತುಗಳು ಭಾವನಾತ್ಮಕ ಜನರನ್ನು ಸೆಳೆಯಲು ಯಶಸ್ವಿಯಾಗಿತ್ತು. ಇದರ ಜೊತೆಗೆ ಸ್ವಾಭಿಮಾನಕ್ಕಾಗಿ ಟಿಕೆಟ್ ನೀಡಿ ಎಂದು ಮತದಾರರ ಮುಂದೆ ಹೋಗಿದ್ದರು.


ಜೋಳಿಗೆ ಹಿಡಿದು ಮತವ ಕೇಳಲು ಪ್ಲಾನ್


ಇದೀಗ ಸುಮಲತಾ ಅವರ ಮಾರ್ಗದಲ್ಲಿ ಜೋಳಿಗೆ ಹಿಡಿದು ಮತ ಕೇಳಲು ಶಿವರಾಮೇಗೌಡರು ಹೋಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಕಳೆದ ನಾಲ್ಕೈದು ತಿಂಗಳಿನಿಂದ ನಾಗಮಂಗಲ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.


ಜೆಡಿಎಸ್​ ನನ್ನನ್ನು ಪಕ್ಷದಿಂದ ಹೊರಗೆ ಹಾಕಿದೆ. ಹಾಗಾಗಿ ಸ್ವಾಭಿಮಾನದ ಮತ ನೀಡಿ ಎಂದು ಎಲ್​ಆರ್ ಶಿವರಾಮೇಗೌಡರು ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರಂತೆ. ಶಿವರಾಮೇಗೌಡರ ಪ್ಲಾನ್ ವರ್ಕೌಟ್ ಆಗುತ್ತಾ? ನಾಗಮಂಗಲದ ಜನತೆ ಇದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


ಎಲ್​ಆರ್ ಶಿವರಾಮೇಗೌಡ, ಮಾಜಿ ಸಂಸದ


ನಾಗಮಂಗಲದಲ್ಲಿ ಜೆಡಿಎಸ್ ಸೋಲುತ್ತೆ


ನನ್ನ ವಿರುದ್ಧ ನೀವಿಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿ. ಚುನಾವಣೆಯಲ್ಲಿ ನಿಮ್ಮ ವಿರುದ್ಧ ನಾನು ಗೆಲ್ಲದಿದ್ದರೆ ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ (MLA Suresh Gowda), ಮಾಜಿ ಸಚಿವ ಎನ್. ಚಲುವರಾಯಸ್ವಾಮಿಗೆ (Former Minister N Chaluvarayaswamy) ಬಹಿರಂಗ ಸವಾಲು ಹಾಕಿದರು.


ನೀವಿಬ್ರು ಪಕ್ಷ ಬಿಟ್ಟು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲು ಹಾಕಿದ ಶಿವರಾಮೇಗೌಡರು, ನಾಗಮಂಗಲದಲ್ಲಿ ಈ ಬಾರಿ ಸುರೇಶ್ ಗೌಡರೇ ಅಭ್ಯರ್ಥಿಯಾದ್ರೆ ಜೆಡಿಎಸ್ ಸೋಲುತ್ತೆ ಎಂದು ಭವಿಷ್ಯ ನುಡಿದರು.


ಅಭ್ಯರ್ಥಿ ಬದಲಿಸಲಿಸದಿದ್ದರೆ ನಾಗಮಂಗಲಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆದಿಯಾಗಿ ಯಾರೇ ಬಂದ್ರೂ ಸುರೇಶ್ ಗೌಡ ಗೆಲ್ಲಲ್ಲ.ಪಕ್ಷದ ಮೇಲೆ ನಿಂತರೆ ಯಾರ್ ಬೇಕಾದ್ರು ಗೆಲ್ತಾರೆ ಬನ್ನಿ ಪಕ್ಷೇತರರಾಗಿ ನಿಲ್ಲೋಣ ಎಂದು ಆಹ್ವಾನಿಸಿದರು.


ಎಲ್​ಆರ್ ಶಿವರಾಮೇಗೌಡ, ಮಾಜಿ ಸಂಸದ


ಮಾದೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ


ಸ್ವಾತಂತ್ರ್ಯ ಹೋರಾಟಗಾರ ಮಾದೇಗೌಡರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು.


ಇದನ್ನೂ ಓದಿ:   Hijab Row: ಹಿಜಾಬ್ ನಿಷೇಧದ ಬಳಿಕ ಕಾಲೇಜ್ ತೊರೆದವರ ಸಂಖ್ಯೆ ಎಷ್ಟು? PUCL ವರದಿಯಲ್ಲಿ ಮಾಹಿತಿ


ಮೋದಿಗೆ ವಿವೇಕಾನಂದ ಮೂರ್ತಿ ಗಿಫ್ಟ್‌


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವಿಶಿಷ್ಟ ಉಡುಗೊರೆಯಾಗಿ ವಿವೇಕಾನಂದ ಮೂರ್ತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೀಡಾ ಸಚಿವ ಡಾ. ನಾರಾಯಣಗೌಡ (Minister Narayan Gowda) ಮಾತಾಡಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಹೆಚ್ಚು ಯುವ ಜನತೆ ನೋಂದಣಿ ಮಾಡಿದ್ದಾರೆ. ಆದ್ರೆ 25 ಸಾವಿರ ಜನರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಿದ್ದೇವೆ. ಉಳಿದವರಿಗೆ ಪಕ್ಕದ ಮೈದಾನದಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಿದ್ದೇವೆ ಅಂತ ಹೇಳಿದ್ರು..

Published by:Mahmadrafik K
First published: