ಅ.19ರಿಂದ ಮತ್ತೆ ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೀದರ್, ರಾಯಚೂರು, ಗದಗ, ಬಾಗಲಕೋಟೆ, ಕೊಪ್ಪಳ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದ್ದು, ಯೆಲ್ಲೋ ಆಲರ್ಟ್​ ಘೋಷಣೆ ಮಾಡಲಾಗಿದೆ.

news18-kannada
Updated:October 17, 2020, 6:31 PM IST
ಅ.19ರಿಂದ ಮತ್ತೆ ವಾಯುಭಾರ ಕುಸಿತ; ಭಾರೀ ಮಳೆ ಸಾಧ್ಯತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ
  • Share this:
ಈಗಾಗಲೇ ವಾಯುಭಾರ ಕುಸಿತದಿಂದ ಮಳೆಯಬ್ಬರ ಪ್ರವಾಹಕ್ಕೆ ತುತ್ತಾಗಿರುವ ತೆಲಂಗಾಣ, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆಯಲಿದೆ. ಅ.19ರಿಂದ ಮತ್ತೊಂದು ಹಂತದ ವಾಯುಭಾರ ಕುಸಿತ ಸಂಭವಿಸಲಿದ್ದು, ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕೂಡ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ. ಅ.20 ಮತ್ತು 21ರಂದು ಉತ್ತರ ಒಳನಾಡಿನಲ್ಲಿ ಹಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ರಾಯಚೂರು, ಗದಗ, ಬಾಗಲಕೋಟೆ, ಕೊಪ್ಪಳ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಮಳೆಯಾಗುವ  ಸಂಭವವಿದ್ದು, ಯೆಲ್ಲೋ ಆಲರ್ಟ್​ ಘೋಷಣೆ ಮಾಡಲಾಗಿದೆ.

ಹವಾಮಾನ ಇಲಾಖೆ ಪ್ರಕಾರ ಸದ್ಯ ಕಡಿಮೆ ಒತ್ತಡ ಪ್ರದೇಶವೂ ಪೂರ್ವ ಮದ್ಯ ಅರೇಬಿಯನ್​ ಪ್ರದೇಶದಲ್ಲಿದೆ. ಇದರ ಜೊತೆ ಕರಾವಳಿ ಮತ್ತು ಮಹಾರಾಷ್ಟ್ರದ ಸುತ್ತಮುತ್ತ ಕೂಡ ಕಡಿಮೆ ಒತ್ತಡ ಉಂಟಾಗಿದೆ. ಇಲ್ಲಿನ ಮಳೆಯ ಮೋಡಗಳು ಮುಂದಿನ 24 ಗಂಟೆಗಳಲ್ಲಿ ಪಶ್ಚಿಮದ ಕಡೆ ಚಲಿಸಲಿದ್ದು, ಉತ್ತರ ಮಹಾರಾಷ್ಟ್ರ, ದಕ್ಷಿಣ ಕರಾವಳಿಯ ಸಮೀಪ ಚಂಡಮಾರುತಕ್ಕೆ ತಿರುಗುವ ಸಾಧ್ಯತೆ ಇದೆ. ಇದರಿಂದ ಉತ್ತರ ಕರ್ನಾಟಕದ ಹಲವು ಭಾಗ ಸೇರಿದಂತೆ ತೆಲಂಗಾಣದಲ್ಲಿ ಭಾರೀ ಮಳೆಯಾಗಲುವ ಸಾಧ್ಯತೆ ಇದೆ.


ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದ ಆಂಧ್ರ ಪ್ರದೇಶದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆ ರಾಯಲಸೀಮಾ, ಕರಾವಳಿಯಲ್ಲಿಯೂ ವರುಣನ ಅಬ್ಬರ ಮುಂದಿನ 24 ಗಂಟೆ ಹೆಚ್ಚಿರಲಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ: ಗಾಯದ ‌ಮೇಲೆ ಬರೆ ಎಳೆಯುತ್ತಿರುವ ಮಳೆ; ನೂರಾರು ಎಕರೆ ಭತ್ತದ ಬೆಳೆ ನಾಶ

ಈಗಾಗಲೇ ಕಳೆದೊಂದು ವಾರದಿಂದ ಸುರಿದಿರುವ ಮಳೆಗೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳು, ತೆಲಂಗಾಣ, ಮಹಾರಾಷ್ಟ್ರ ನಲುಗಿದೆ. ಮಳೆ ನಿಂತರೂ ಪ್ರವಾಹ ತಗ್ಗದ ಪರಿಣಾಮ ಜನರು ಕಣ್ಣೀರು ಹಾಕುವಂತೆ ಆಗಿದೆ. ಪ್ರವಾಹದಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳು ಜಲಾವೃತಗೊಂಡಿದೆ. ಮನೆ-ಮಠ ಕಳೆದು ಕೊಂಡ ಜನರು ನಿರಾಶ್ರಿತರ ಶಿಬಿರ ಸೇರಿದ್ದಾರೆ. ಈಗ ಮತ್ತೆ ವಾಯುಭಾರ ಕುಸಿದು ಮಳೆಯಾದರೆ, ಜನರು ಮತ್ತಷ್ಟು ಹೈರಾಣಾಗಲಿದ್ದಾರೆ.
Published by: Seema R
First published: October 17, 2020, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading