Viral Video: ಚಲಿಸುತ್ತಿರುವ ಬೈಕ್‌ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು

ಈ ಪ್ರೇಮಿಗಳು ಚಲಿಸುತ್ತಿರುವ ಬೈಕ್ (Bike) ಮೇಲೆಯೇ ರೊಮ್ಯಾನ್ಸ್ (Romance) ಮಾಡ್ತಿದ್ದಾರೆ. ತಮ್ಮನ್ನು ತಾವು ಹೃತಿಕ್ ರೋಷನ್ (Hritik Roshan), ಐಶ್ವರ್ಯಾ ರೈ (Aishwarya Rai) ಎಂದುಕೊಂಡ ಪ್ರೇಮಿಗಳು, ಧೂಮ್ (Dhoom) ರೇಂಜ್‌ನಲ್ಲಿ ಪೋಸ್ ಕೊಡ್ತಾ, ವಾಹನ ಓಡಾಡೋ ರಸ್ತೆಯಲ್ಲೇ ಬೈಕ್‌ ಮೇಲೆಯೇ ಹುಚ್ಚಾಟ ಆಡಿದ್ದಾರೆ.

ಬೈಕ್ ಮೇಲೆ ಪ್ರೇಮಿಗಳ ಪ್ರಣಯ

ಬೈಕ್ ಮೇಲೆ ಪ್ರೇಮಿಗಳ ಪ್ರಣಯ

  • Share this:
ಚಾಮರಾಜನಗರ: ಪ್ರೇಮಕ್ಕೆ (Love) ಕಣ್ಣಿಲ್ಲ (Blind) ಅಂತಾರೆ, ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ, ಪ್ರೇಮಿಗಳ (Lovers) ಜಗತ್ತೇ ಬೇರೆ, ಅವರಿಗೆ ಈ ಜಗತ್ತು ಕಾಣಿಸೋದಿಲ್ಲ ಅಂತಾರೆ ಹಿರಿಯರು. ಹಾಗಂತ ಜಗತ್ತಿನ ಪ್ರೇಮಿಗಳು ಕಾಣಿಸ್ತಾರೆ ಅಲ್ವಾ? ಪ್ರೇಮಿಗಳು ಏನು ಮಾಡ್ತಾರೆ, ಎಲ್ಲಿ ಹೋಗ್ತಾರೆ ಅಂತ ಜಗತ್ತು (World) ಗಮನಿಸುತ್ತಲೇ ಇರುತ್ತಾರೆ. ಇನ್ನು ಪ್ರೀತಿ ಮಾಡೋದು ತಪ್ಪಲ್ಲ, ಆದ್ರೆ ಪ್ರೀತಿ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ (Public Place) ಅಸಭ್ಯವಾಗಿ ವರ್ತಿಸೋದು ತಪ್ಪು. ಇಲ್ಲಿ ನೋಡಿ ಈ ಪ್ರೇಮಿಗಳು ಚಲಿಸುತ್ತಿರುವ ಬೈಕ್ (Bike) ಮೇಲೆಯೇ ರೊಮ್ಯಾನ್ಸ್ (Romance) ಮಾಡ್ತಿದ್ದಾರೆ. ತಮ್ಮನ್ನು ತಾವು ಹೃತಿಕ್ ರೋಷನ್ (Hritik Roshan), ಐಶ್ವರ್ಯಾ ರೈ (Aishwarya Rai) ಎಂದುಕೊಂಡ ಪ್ರೇಮಿಗಳು, ಧೂಮ್ (Dhoom) ರೇಂಜ್‌ನಲ್ಲಿ ಪೋಸ್ ಕೊಡ್ತಾ, ವಾಹನ ಓಡಾಡೋ ರಸ್ತೆಯಲ್ಲೇ ಬೈಕ್‌ ಮೇಲೆಯೇ ಹುಚ್ಚಾಟ ಆಡಿದ್ದಾರೆ. ಪ್ರೇಮಿಗಳ ರೊಮ್ಯಾನ್ಸ್ ವಿಡಿಯೋ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಅದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರೇಮಿಗಳ ಅಸಭ್ಯ ವರ್ತನೆ ನೋಡಿ ನೆಟ್ಟಿಗರು ಛೀ, ಥೂ ಅಂತ ಉಗೀತಾ ಇದ್ದಾರೆ.

 ಬೈಕ್ ಮೇಲೆಯೇ ಪ್ರೇಮಿಗಳ ರೋಮ್ಯಾನ್ಸ್

ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಜಾಲಿ ರೈಡ್​ ಹೋಗಿದ್ದಾರೆ. ಆದರೆ, ಈ ಪ್ರಿಯಕರ ತನ್ನ ಪ್ರೇಯಸಿಯನ್ನು ಬೈಕ್​ನ ಪೆಟ್ರೋಲ್​ ಟ್ಯಾಂಕ್​ ಮೇಲೆ ಎದುರಾಗಿ ಕೂರಿಸಿಕೊಂಡು ರಸ್ತೆ ಮೇಲೆ ಗಾಡಿ ಓಡಿಸಿದ್ದಾನೆ. ಈ ವೇಳೆ ಆಕೆ ಆತನಿಗೆ ಮುತ್ತು ಕೊಡುತ್ತಾ, ಲಿಪ್ ಲಾಕ್ ಮಾಡಿದ್ದಾಳೆ. ಜಗತ್ತಿನ ಪರಿವೇ ಇಲ್ಲದಂತೆ ಬೈಕ್ ಓಡಿಸುತ್ತಲೇ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡಿದ್ದಾರೆ.ಜನನಿಬಿಡ ರಸ್ತೆಯಲ್ಲೇ ಚುಂಬನದಾಟ!

ಗುಂಡ್ಲುಪೇಟೆ ರಸ್ತೆಯಲ್ಲಿ ಪಲ್ಸರ್​ ಬೈಕ್​ನಲ್ಲಿ ಹೊರಟಿದ್ದ ಈ ಜೋಡಿ ಜಗತ್ತನ್ನೇ ಮರೆತು ಪ್ರೇಮಲೋಕದಲ್ಲಿ ಮುಳುಗಿದ್ದರು. ಹೇಳಿ ಕೇಳಿ ಅದು ಜನನಿಬಿಡ ಪ್ರದೇಶ. ಆ ರಸ್ತೆಯಲ್ಲಿ ಬಸ್, ಲಾರಿಯಂತಹ ದೊಡ್ಡ ದೊಡ್ಡ ವಾಹನಗಳು ಓಡಾಡುತ್ತಲೇ ಇರುತ್ತವೆ. ಆದರೆ ಈ ಪ್ರೇಮಿಗಳು ಮಾತ್ರ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಜಾಲಿಯಾಗಿ ರೈಡ್​ ಮಾಡಿದ್ದಾರೆ. ಪೆಟ್ರೋಲ್​ ಟ್ಯಾಂಕ್​ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವೂ ಇದೆ.

ಇದನ್ನೂ ಓದಿ: Love Letter: 10 ರೂಪಾಯಿ ನೋಟಿನ ಮೇಲೆ ಪ್ರೇಮ ಪತ್ರ ಬರೆದ ಹುಡುಗಿ! ಆ ಹುಡುಗನಿಗೆ ತಲುಪಿತಾ ಸಂದೇಶ?

ರಸ್ತೆ ನಿಯಮ ಉಲ್ಲಂಘಿಸಿದ ಪ್ರೇಮಿಗಳು

ಈ ಪ್ರೇಮಿಗಳು ರಸ್ತೆ ಮೇಲೆ ಬೈಕ್‌ನಲ್ಲಿ ರೊಮ್ಯಾನ್ಸ್  ಮಾಡೋಕೆ ಹೋಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೆಲ್ಮೆಟ್ ಹಾಕದೇ ಬೈಕ್ ರೈಡ್ ಮಾಡಿದ್ದಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಆದರೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಡಿವೈಎಸ್‍ಪಿ ಸೂಚನೆ ಮೇರೆಗೆ ಬೈಕ್ ಜಪ್ತಿ ಮಾಡಲು ತಲಾಶ್ ನಡೆಸುತ್ತಿರುವುದಾಗಿ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Love Story: ಇದು ಮಾತಿಲ್ಲದ 'ವಿಶೇಷ' ಪ್ರೀತಿ! ಗುಜರಾತ್-ಕರ್ನಾಟಕ ನಡುವಿನ ಪ್ರೇಮಕಥೆಯನ್ನು ನೀವೂ ಓದಿ

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಯ್ತು ವಿಡಿಯೋ

ಈ ಪ್ರೇಮಿಗಳ ಪ್ರಣಯದಾಟವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬೈಕ್​ ಚಾಮರಾಜನಗರದ್ದೇ ನೋಂದಣಿ ಸಂಖ್ಯೆ ಹೊಂದಿದ್ದು, ಇದು ಆ ಊರಿನ ಪ್ರೇಮಿಗಳೇ ಎಂದು ಹೇಳಲಾಗಿದೆ.

ಈ ಪ್ರೇಮಿಗಳ ಹುಚ್ಚಾಟದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು, ಪ್ರೇಮಿಗಳ ಅಸಭ್ಯ ವರ್ತನೆಗೆ ಛೀಮಾರಿ ಹಾಕಿದ್ದಾರೆ.
Published by:Annappa Achari
First published: