Murder Case: ಪತ್ನಿಯ ಸ್ನೇಹಿತೆ ಜೊತೆ ಅಫೇರ್; ಲಾಡ್ಜ್​ಗೆ ಕರೆದೊಯ್ದು ಕೊಂದೇ ಬಿಟ್ಟ; ಹೆಂಡತಿಯೇ ಕೊಟ್ಲಾ ಸಾಥ್​?

ವೇರ್ ಈಸ್ ಮೈ ಟ್ರೈನ್ ಆ್ಯಪ್ ನಲ್ಲಿ ರೈಲಿನ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರು. ಅನಂತಪುರ ಬಳಿ ಟ್ರೈನ್ ಕ್ಯಾಚ್ ಮಾಡಿದ್ರು. ಪೊಲೀಸರ ಬಂದ ವಿಚಾರ ತಿಳಿದು ಟ್ರೈನ್ ಒಳಗೆ ಶೌಚಾಲಯದಲ್ಲಿ ಅಡಗಿ ಕುಳಿತ್ತಿದ್ದ, ಬಳಿಕ ಆತನನ್ನು ಹಿಡಿದು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು (ಜೂ 14):‌ ಪತ್ನಿಯ ಸ್ನೇಹಿತೆ ಜೊತೆ ಸ್ನೇಹ, ಪ್ರೀತಿ ಎಂದು ಓಡಾಡಿ ಆಕೆಯ ಜೊತೆ ಅಕ್ರಮ ಸಂಬಂಧ (Illegal Relationship) ಹೊಂದಿದ್ದ. ಬಳಿಕ ಆಕೆ ಪರಪುರುಷನೊಂದಿಗೆ ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಲಾಡ್ಜ್​ಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ  ಯಶವಂತಪುರ‌‌‌ ಪೊಲೀಸ್ ಠಾಣೆ (Police Station) ವ್ಯಾಪ್ತಿಯಲ್ಲಿ ನಡೆದಿದೆ. ಜೂನ್​ 9ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಒಡಿಶಾ‌‌ (Odisha) ಮೂಲದ‌ ದೀಪಾ‌ ಬದನ್ (Deepa Badan) ಕೊಲೆಯಾದ ಯುವತಿ.‌ ಹತ್ಯೆ ಆರೋಪಿ ಅನ್ಮಲ್ ರತನ್ ಕಂದರ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ. ಯಶವಂತಪುರ ರೈಲ್ವೆ ಠಾಣೆ ಬಳಿ ಬೆಂಗಳೂರು ರೆಸಿಡೆನ್ಸಿ ಲಾಡ್ಜ್​ನಲ್ಲಿ‌ (Residency Lodge) ಯುವತಿಯನ್ನು ಕೊಲೆ (Murder) ಮಾಡಲಾಗಿದೆ. ಮಾರನೇ ದಿನ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ‌.

ಪೊಲೀಸರ ಕೈಗೆ ಸಿಕ್ಕಿಬಿದ್ದ ಅನ್ಮಲ್​

ತಲೆಮರೆಸಿಕೊಂಡಿದ್ದ ಆರೋಪಿ ಅನ್ಮಲ್‌ ಯಶವಂತಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಎರಡು ವರ್ಷಗಳ ಹಿಂದೆ‌‌ ದೀಪಾ‌ ಬದನ್​ಳ ಸ್ನೇಹಿತೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಬೆಂಗಳೂರಿನ ಜೀವನ್‌ಭೀಮಾನಗರದಲ್ಲಿ ದಂಪತಿ‌ ವಾಸವಿದ್ದರು. ಕೊಲೆಯಾದ ದೀಪಾ ಹಾಗೂ ಆರೋಪಿಯ ಹೆಂಡತಿ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳು. ಇದೇ ಪರಿಚಯದ ಮೇರೆಗೆ ದೀಪಾ‌ ಕೂಡ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಸ್ನೇಹಿತೆ ಭೇಟಿ ಮಾಡಲು ಬರ್ತಿದ್ದ

ಆಗಾಗ ಗೆಳತಿ ಮನೆಗೆ ದೀಪಾ ಬರುತ್ತಿದ್ದಳು. ಈ ನಡುವೆ ಆರೋಪಿ ಅನ್ಮಲ್ ಹಾಗೂ‌ ದೀಪಾ ಸ್ನೇಹಿತರಾಗಿದ್ದರು. ಇದೇ‌ ಒಡನಾಟವು ಆತ್ಮೀಯತೆ ಹೆಚ್ಚಾಗಲು ಕಾರಣವಾಗಿತ್ತು. ಅಲ್ಲದೆ, ಇಬ್ಬರೂ ದೈಹಿಕ‌ ಸಂಬಂಧವನ್ನೂ ಬೆಳೆಸಿಕೊಂಡಿದ್ದರು ಎನ್ನಲಾಗುತ್ತಿದೆ.ಆದರೆ, ಇತ್ತೀಚೆಗೆ ದೀಪಾ ತನ್ನ ಫೋನ್​ಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಯು ಅಸಮಾಧಾನಗೊಂಡಿದ್ದ‌‌‌.‌‌‌‌ ಜೂನ್ 9ರಂದು ಆಕೆಗೆ ಕರೆ ಮಾಡಿ ಲಾಡ್ಜ್ ಕರೆಯಿಸಿಕೊಂಡಿದ್ದ.‌‌

ಇದನ್ನೂ ಓದಿ: Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆಲ್?

ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ

ಈ ವೇಳೆ ಬೇರೊಬ್ಬನೊಂದಿಗೆ ಓಡಾಡುತ್ತೀಯಾ ಎಂದು ಕ್ಯಾತೆ ತೆಗೆದು ಜಗಳ‌ ಮಾಡಿದ್ದ.‌ ಕೋಪದಲ್ಲಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ರೂಮ್​ಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಮಾರನೇ ದಿನ‌ ರೂಮ್​ ಬಾಗಿಲು ತೆರೆಯದಿದ್ದಾಗ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ‌ ಪೊಲೀಸರು ಬೀಗ ಮುರಿದು‌‌ ಪರಿಶೀಲಿಸಿದಾಗ ಯುವತಿ ಕೊಲೆಯಾಗಿರುವ ಸಂಗತಿ ಬಯಲಾಗಿದೆ.

ಲಾಡ್ಜ್​ ಎದುರು ಆರೋಪಿ ಪತ್ನಿ ಹೈಡ್ರಾಮಾ

ಊರು ಬಿಟ್ಟು ಹೋಗೊಣ ಎಂದು ದೀಪಾಳನ್ನು ಕರೆ ತಂದಿದ್ದ ಆರೋಪಿ. ಯಶವಂತಪುರದಲ್ಲಿ ರೈಲು ಹತ್ತಿ ಹೋಗೋಣ ಎಂದು ಬಂದಿದ್ದ. ರೈಲು ನಿಲ್ದಾಣ ಬಳಿ ಲಾಡ್ಜ್ ನಲ್ಲಿ ರೂಂ ಮಾಡಿದ್ದ ಆರೋಪಿ ರೂಂಗೆ ತೆರಳಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಪತ್ನಿಗೆ ಪೋನ್ ಮಾಡಿ ಕೊಲೆ ಬಗ್ಗೆ ಹೇಳಿದ್ದ ಆರೋಪಿ. ಲಾಡ್ಜ್ ನಲ್ಲಿ ನಿನ್ನ ಸ್ನೇಹಿತೆ ಕೊಲೆಯಾಗಿದ್ದಾಳೆ. ರೂಂ ನಂಬರ್ 201 ರಲ್ಲಿ ಇರೋ ಮಹಿಳೆಯನ್ನ ನೋಡಬೇಕು ಎಂದು ಹೋಗುವಂತೆ ಹೇಳಿದ್ದ. ಗಂಡನ ಸೂಚನೆ ಮೇರೆಗೆ ಲಾಡ್ಜ್ ಗೆ ತೆರಳಿದ್ದ ಪತ್ನಿ. ಈ ವೇಳೆ ಲಾಡ್ಜ್ ಸಿಬ್ಬಂದಿ ಕೊಲೆ ಮಾಡಿದ್ದಾರೆ ಎಂದು ಹೈಡ್ರಾಮಾ ಮಾಡಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಲಾಡ್ಜ್ ಸಿಬ್ಬಂದಿ ‌

ಇದನ್ನೂ  ಓದಿ: JP Nadda: ಮೋದಿ ಆಗಮನಕ್ಕೂ ಮುನ್ನ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ; ಕುತೂಹಲ ಕೆರಳಿಸಿದೆ ನಡ್ಡಾ ಭೇಟಿ

ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ ಪತ್ನಿ

ಪೊಲೀಸರ ವಿಚಾರಣೆ ವೇಳೆ ಆರೋಪಿ ಪತ್ನಿ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾಳೆ. ಕೊಲೆ ಮಾಡಿ ಲಾಡ್ಜ್ ನಿಂದ ರಾತ್ರಿ ಪರಾರಿಯಾಗಿದ್ದ. ವಿಚಾರ ತಿಳಿಯುತಿದ್ದಂತೆ ಟ್ರೈನ್ ಹತ್ತಿ ಊರು ಬಿಟ್ಟಿದ್ದ. ಕೊನೇ ಬಾರಿ ಕಂಟೋನ್ಮೆಂಟ್ ಬಳಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕುರ್ಲಾ ಎಕ್ಸ್ ಪ್ರೆಸ್ ರೈಲಿನಲ್ಲಿ ಹೊರಟಿದ್ದ ಆರೋಪಿ. ಆ ಸಂದರ್ಭದಲ್ಲಿ ರೈಲು ನಿಲ್ದಾಣದಿಂದ ತೆರಳಿದ್ದ ಟ್ರೈನ್ ಗಳ ಮಾಹಿತಿ ಸಂಗ್ರಹವಾಗಿದೆ. ವೇರ್ ಈಸ್ ಮೈ ಟ್ರೈನ್ ಆ್ಯಪ್ ನಲ್ಲಿ ರೈಲಿನ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರು. ಅನಂತಪುರ ಬಳಿ ಟ್ರೈನ್ ಕ್ಯಾಚ್ ಮಾಡಿದ್ರು. ಪೊಲೀಸರ ಬಂದ ವಿಚಾರ ತಿಳಿದು ಟ್ರೈನ್ ಒಳಗೆ ಶೌಚಾಲಯದಲ್ಲಿ ಅಡಗಿ ಕುಳಿತ್ತಿದ್ದ, ಬಳಿಕ ಆತನನ್ನು ಹಿಡಿದು ಪೊಲೀಸರು ಬೆಂಗಳೂರುಗೆ ಕರೆತಂದಿದ್ದಾರೆ.
Published by:Pavana HS
First published: