• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: 16 ಬಾರಿ ಯುವತಿಯನ್ನ ಚುಚ್ಚಿ ಚುಚ್ಚಿ ಕೊಲೆಗೈದ ಪ್ರೇಮಿ; ಬೆಂಗಳೂರಿನಲ್ಲಿ ಯುವಕನ ನೀಚ ಕೃತ್ಯ!

Crime News: 16 ಬಾರಿ ಯುವತಿಯನ್ನ ಚುಚ್ಚಿ ಚುಚ್ಚಿ ಕೊಲೆಗೈದ ಪ್ರೇಮಿ; ಬೆಂಗಳೂರಿನಲ್ಲಿ ಯುವಕನ ನೀಚ ಕೃತ್ಯ!

ಮೃತ ಯುವತಿ ಲೀಲಾ ಪವಿತ್ರ/ ಆರೋಪಿ ದಿವಾಕರ್

ಮೃತ ಯುವತಿ ಲೀಲಾ ಪವಿತ್ರ/ ಆರೋಪಿ ದಿವಾಕರ್

ಮೃತ ಯುವತಿ ಲೀಲಾ ಹಾಗೂ ಆರೋಪಿ ದಿವಾಕರ್ ಇಬ್ಬರು ಆಂಧ್ರ ಪ್ರದೇಶದ ಮೂಲದವರಾಗಿದ್ದಾರೆ. ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೀಲಾ ಇಂದು ಕೆಲಸ ಮುಗಿಸಿ ಹೊರಗಡೆ ಬಂದಾಗ ಆರೋಪಿ ಕೃತ್ಯ ಎಸಗಿದ್ದಾನೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪಾಗಲ್​ ಪ್ರೇಮಿಯೋರ್ವ (Lover) ತಾನು ಪ್ರೀತಿಸುತ್ತಿದ್ದ ಯುವತಿಯನ್ನು (Women) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಮುರುಗೇಶ್ ಪಾಳ್ಯದ (Murgesh Pallya) ರಸ್ತೆ ಒಂದರಲ್ಲಿ ನಡೆದಿದೆ. ಮೃತ ಯುವತಿಯನ್ನು 26 ವರ್ಷದ ಲೀಲಾ ಪವಿತ್ರ ಎಂದು ಗುರುತಿಸಲಾಗಿದೆ. ದಿವಾಕರ್ ಎಂಬ ಆರೋಪಿ ಯುವತಿಯನ್ನು ಬರ್ಬರವಾಗಿ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಸಂಜೆ 7:30ರ ಸಮಯದಲ್ಲಿ ಘಟನೆ ನಡೆದಿದ್ದು, ಜೀವನ್ ಭೀಮಾನಗರ ಠಾಣೆಯಲ್ಲಿ (Jeevan Bhima Nagar Police Station) ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸದ್ಯ ಯುವತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆರೋಪಿ ದಿವಾಕರ್​ನನ್ನು ಜೀವನ್ ಭೀಮಾ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಮೃತ ಯುವತಿ ಲೀಲಾ ಹಾಗೂ ಆರೋಪಿ ದಿವಾಕರ್ ಇಬ್ಬರು ಆಂಧ್ರ ಪ್ರದೇಶದ ಮೂಲದವರಾಗಿದ್ದಾರೆ. ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೀಲಾ ಇಂದು ಕೆಲಸ ಮುಗಿಸಿ ಹೊರಗಡೆ ಬಂದಾಗ ಆರೋಪಿ ಕೃತ್ಯ ಎಸಗಿದ್ದಾನೆ. ಯುವತಿಯ ಎದೆ, ಹೊಟ್ಟೆ ಹಾಗೂ ಕುತ್ತಿಗೆಗೆ ಸುಮಾರು 16 ಬಾರಿ ಇರಿದು ಕೊಲೆ ಮಾಡಿದ್ದಾನೆ.


A 28-year-old woman died after she was allegedly set a fire by her live-in partner in delhi
ಪ್ರಾತಿನಿಧಿಕ ಚಿತ್ರ


ಇದನ್ನೂ ಓದಿ: Siddaramaiah: ಯಾರ್ ರೀ ಇವರು! ಕುಡಿಸಿ ಕರೆದುಕೊಂಡು ಬಂದು ಕೂಗಾಡಿಸೋದಾ? ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಗರಂ


ಅಂದಹಾಗೇ, ಲೀಲಾ ಹಾಗೂ ದಿವಾಕರ್ ಇಬ್ಬರು ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಇಬ್ಬರದ್ದು ಬೇರೆ ಬೇರೆ ಜಾತಿ ಆಗಿದ್ದ ಕಾರಣ, ಯುವತಿ ಕುಟುಂಬಸ್ಥರು ಇಬ್ಬರ ಮದುವೆಗೆ ವಿರೋಧ ಮಾಡಿದ್ದರಂತೆ.


ಪರಿಣಾಮ ಯುವತಿ ಕಳೆದ ಕೆಲ ದಿನಗಳಿಂದ ದಿವಾಕರ್​ನನ್ನು ದೂರ ಮಾಡುತ್ತಿದ್ದರಂತೆ. ಇದರಿಂದ ಕೋಪಗೊಂಡಿರುವ ದಿವಾಕರ್ ಇಂದು ಸಂಜೆ ಆಕೆ ಕಚೇರಿಯಲ್ಲಿ ಕೆಲಸ ಮುಗಿಸಿ ಕಂಪನಿಯಿಂದ ಹೊರ ಬರುತ್ತಿದ್ದಂತೆ ಯುವತಿಗೆ ಮನಸೋ ಇಚ್ಚೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.


ತಂದೆಯಿಂದಲೇ ಮಗನ ಹತ್ಯೆ


ಚಿಕ್ಕೋಡಿ: ಹೆತ್ತ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಭರತೇಶ ಜಿನ್ನಪ್ಪಾ ಕಾಂಜಿ (30) ಎಂದು ಗುರುತಿಸಲಾಗಿದೆ. ಮೃತ ಭರತೇಶ ದಿನನಿತ್ಯ ಮದ್ಯಪಾನಕ್ಕೆ ಹಣ ಕೊಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.


ಇಂದು ಕೂಡ ಹಣ ಕೊಡುವಂತೆ ಪೀಡಿಸಿದ ಕಾರಣ ಭರತೇಶ ಅವರ ತಂದೆ ಜಿನ್ನಪ್ಪಾ ಕಾಂಜಿ ಹರಿತವಾದ ಆಯುಧದಿಂದ ಹೊಡೆದ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತನ ತಲೆಯ ಹಿಂಭಾಗಕ್ಕೆ ಆಯುಧದಿಂದ ಹೊಡೆದ ಕಾರಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವು ಭರತೇಶ ಮೃತಪಟ್ಟಿದ್ದಾನೆ.




ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಗನನ್ನು ಕೊಲೆಗೈದ ತಂದೆ ಜಿನ್ನಪ್ಪಾ ಕಾಂಜಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Dog-Sitting Job: ಸಖತ್ ಟ್ರೆಂಡ್​ ಸೃಷ್ಟಿಸುತ್ತಿದೆ ಡಾಗ್ ಸಿಟ್ಟಿಂಗ್ ಉದ್ಯೋಗ; ಅರೆಕಾಲಿಕ ವೃತ್ತಿಯಿಂದ ಕೈ ತುಂಬಾ ಹಣ!


ಹಣ ಕದಿಯಲು ಬಂದಿದ್ದ ಖದೀಮರಿಗೆ ಧರ್ಮದೇಟು!


ಬ್ಯಾಂಕ್​​ನಲ್ಲಿ ವಿತ್ ಡ್ರಾ ಮಾಡಿದ ಹಣವನ್ನು ಎಗರಿಸಲು ಬಂದ ಖದೀಮರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಕರೋಶಿ ಗ್ರಾಮದ ಕೆವಿಜಿ ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಿದ್ದ ಅಣ್ಣಾಸಾಹೇಬ್ ಎಂಬುವರಿಂದ ಖದೀಮರು ಹಣ ಕಸಿಯಲು ಮುಂದಾಗಿದ್ದರು. ಈ ವೇಳೆ ಖದೀಮರನ್ನ ಬೆನ್ನಟ್ಟಿದ ಸ್ಥಳೀಯರು ಅವರನ್ನ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Sumanth SN
First published: