ಬೆಂಗಳೂರು: ಇದು ಪಾಗಲ್ (Pagal) ಪ್ರೇಮಿಯ (Lover) ಪ್ರೇಮ (Love) ನಿವೇದನೆಯೋ? ಕಿಡಿಗೇಡಿಗಳ ಕುಕೃತ್ಯವೋ, ಮಾಡೋಕೆ ಕೆಲಸ ಇಲ್ಲದ ಪುಂಡ ಹುಡುಗರ (Boys) ಹುಚ್ಚಾಟವೋ ಗೊತ್ತಿಲ್ಲ… ಆದರೆ ಬೆಂಗಳೂರಿನ (Bengaluru) ಸುಂಕದಕಟ್ಟೆಯ (Sunkadakatte) ಜನರೆಲ್ಲ ಬೆಳಗ್ಗೆ (Morning) ಎದ್ದು ಆಶ್ಚರ್ಯಗೊಂಡಿದ್ದರು . ಕಾರಣ ಇಲ್ಲಿನ ಕಾಲೇಜ್ (College) ಒಂದರ ಗೋಡೆ (Wall), ಮೆಟ್ಟಿಲು (Steps), ರಸ್ತೆಗಳ (Road) ಮೇಲೆಲ್ಲ ಯಾರೋ ಒಬ್ಬರು ‘ಸಾರಿ’ (Sorry) ಅಂತ ಬರೆದಿದ್ದರು. ಅದು ಒಂದಲ್ಲ, ಎರಡಲ್ಲ, ನೂರಾರು ಬಾರಿ ಕಾಲೇಜ್ ಗೋಡೆ, ಮೆಟ್ಟಿಲು ಅಷ್ಟೇ ಅಲ್ಲ ಕಾಲೇಜ್ ಮುಂದಿನ ರಸ್ತೆ ಮೇಲೂ ಸಾರಿ ಅಂತ ಲೆಕ್ಕವೇ ಇಲ್ಲದಷ್ಟು ಸಲ ಬರೆದಿದ್ದ. ಹಾಗಾದ್ರೆ ಇದು ಯಾರ ಕೆಲಸ? ಸಾರಿ ಕೇಳಿದವ ಯಾರು? ಯಾಕಾಗಿ ಸಾರಿ ಕೇಳಿದ? ಯಾರಿಗೆ ಸಾರಿ ಕೇಳಿದ? ಕೊನೆಗೂ ಆ ವ್ಯಕ್ತಿ ಈ ವ್ಯಕ್ತಿಯನ್ನು ಕ್ಷಮಿಸಿದನಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಅಪಚಿತನ ಹುಚ್ಚಾಟ
ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕ್ಷಮಿಸು (Sorry) ಅಂತ ಬರೆದಿದ್ದಾನೆ. ಬರೀ ಶಾಲೆ ಅಷ್ಟೇ ಅಲ್ಲ, ಅಲ್ಲೇ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್, ಮೆಟ್ಟಿಲ ಮೇಲೆಲ್ಲಾ 'Sorry' ಎಂದು ಆತ ಬರೆದಿದ್ದಾನೆ. ಕಾಲೇಜ್ ಮುಂದಿನ ರಸ್ತೆ ಮೇಲೂ ಸಾರಿ ಅಂತ ನೂರಾರು ಸಾರಿ ಬರೆದಿದ್ದಾನೆ. ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಆಘಾತವಾಗಿದ್ದು, ಇದು ಯಾರು ಯಾರಿಗಾಗಿ ಬರೆದ ಬರಹ ಎಂದು ಕುತೂಹಲಗೊಂಡಿದ್ದಾರೆ.
ಕೆಂಪು ಬಣ್ಣದಲ್ಲಿ ‘ಸಾರಿ’ ಅಂತ ಬರೆದ ಅಪರಿಚಿತ
ಆ ಅಪರಿಚಿತ ವ್ಯಕ್ತಿ ಇಡೀ ರಸ್ತೆ ಮೇಲೆಲ್ಲ ಸಾರಿ ಅಂತ ಬರೆದಿದ್ದಾನೆ. ಆತ ಶಾಲೆ ಕಾಂಪೌಂಡ್, ರಸ್ತೆ, ಎಲ್ಲಾ ಕಡೆ sorry ಅಂತಾ ಬರೆದಿದ್ದಾನೆ. ಬೇರೆ ಯಾವುದೇ ಬಣ್ಣ ಬಳಸದೇ, ಕೇವಲ ಕೆಂಪು ಬಣ್ಣದಲ್ಲಿ ಬೇಕಾಬಿಟ್ಟಿಯಾಗಿ, ಲೆಕ್ಕವಿಲ್ಲದಷ್ಟು ಸಲ Sorry ಅಂತ ಬರೆದಿದ್ದಾನೆ.
ಇದನ್ನೂ ಓದಿ: Couple Suicide: ಪಾಗಲ್ ಪ್ರೇಮಿಗಳ ದುರಂತ ಅಂತ್ಯ: ಕೊಲೆ ಆಯಾಮದಲ್ಲೂ ಪೊಲೀಸರಿಂದ ತನಿಖೆ
ರಾತ್ರಿ ಬೈಕ್‌ನಲ್ಲಿ ಬಂದು ಬರೆದು ಹೋದ ಇಬ್ಬರು ಅಪರಿಚಿತರು
ಸ್ಥಳೀಯರು ಹೇಳುವ ಪ್ರಕಾರ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಡ್ಯೂಕ್ ಬೈಕ್ ನಲ್ಲಿ ಇಬ್ಬರು ಯುವಕರು ಫುಡ್ ಡಿಲವರಿ ಬ್ಯಾಗ್ ನೊಂದಿಗೆ ಬಂದಿದ್ದರು. ಅವರೇ ಸ್ಪ್ರೇ ಮೂಲಕ SORRY ಎಂದು ಬರೆದಿದ್ದಾರೆ ಎನ್ನಲಾಗಿದೆ. ಇದು ಪಾಗಲ್ ಪ್ರೇಮಿಗಳದ್ದೇ ಕೃತ್ಯ ಅಂತ ಸ್ಥಳೀಯರು ಶಂಕಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು
ಬೆಳಗ್ಗೆ ಎದ್ದು ರಸ್ತೆ, ಶಾಲೆ ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಬಳಿಕ ಸ್ಛಳೀಯರು ಹಾಗೂ ಕಾಲೇಜ್ ಪ್ರಿನ್ಸಿಪಾಲ್ ಕಾಮಾಕ್ಷಿಪಾಳ್ಯ ಠಾಣೆಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬರಹಗಳನ್ನು ಪರಿಶೀಲಿಸಿದ್ದಾರೆ.
“ಸಾರಿ” ಅಂತ ಬರೆದವನಿಗೆ ಖಾಕಿಯಿಂದ ಶೋಧ
ಇನ್ನು ಸಾರಿ ಅಂತ ಊರ ತುಂಬೆಲ್ಲಾ ಬರೆದವನ ಬಗ್ಗೆ ಸ್ಥಳೀಯರಷ್ಟೇ ಅಲ್ಲ, ಪೊಲೀಸರು ತಲೆ ಕೆಡಿಸಿಕೊಂಡಿದ್ದಾವೆ. ಹಾಗಾದ್ರೆ ಇದು ಯಾರ ಕೆಲಸ? ಸಾರಿ ಕೇಳಿದವ ಯಾರು? ಯಾಕಾಗಿ ಸಾರಿ ಕೇಳಿದ? ಯಾರಿಗೆ ಸಾರಿ ಕೇಳಿದ? ಕೊನೆಗೂ ಆ ವ್ಯಕ್ತಿ ಈ ವ್ಯಕ್ತಿಯನ್ನು ಕ್ಷಮಿಸಿದನಾ? ಅಂತ ತಲೆ ಕೆಡಿಸಿಕೊಂಡಿದ್ದಾರೆ. ಇದೀಗ Sorry ಅಂತ ಬರೆದವನ ಹಿಂದೆ ಪೊಲೀಸರು ಬಿದ್ದಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿ ಅಪರಿಚಿತ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ
ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಈ ಸಾರಿ ಬರಹಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಯಾವುದೋ ಭಗ್ನ ಪ್ರೇಮಿಯದ್ದೇ ಕೆಲಸ ಎಂದಿರುವ ನೆಟ್ಟಿಗರು, ಇದು ಸ್ಪೆಷಲ್ ಪ್ರೀತಿ, ವಿಶೇಷ ಲವ್ ಲೆಟರ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ