Love U Rachu| ಲವ್ ಯು ರಚ್ಚು ಸಿನಿಮಾ ದುರಂತ; ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಬಿಡದಿಯ ರೈತರೊಬ್ಬರ ಜಮೀನಿನಲ್ಲಿ ಆಗಸ್ಟ್​ 9 ರಂದು ಲವ್ ಯೂ ರಚ್ಚು ಕನ್ನಡ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿತ್ತು. ಈ ವೇಳೆ, ವಿವೇಕ್ ಎಂಬ ಫೈಟರ್ ಸಾವನ್ನಪ್ಪಿದರೆ ರಂಜಿತ್ ಎಂಬ ಇನ್ನೊಬ್ಬ ಫೈಟರ್ ಗಾಯಗೊಂಡಿದ್ದರು.

ಸಾಹಸ ಕಲಾವಿದ ವಿವೇಕ್​ ಸಾವಿನ ಪ್ರಕರಣದ ಪ್ರಮುಖ ಆರೋಪಿಗಳು.

ಸಾಹಸ ಕಲಾವಿದ ವಿವೇಕ್​ ಸಾವಿನ ಪ್ರಕರಣದ ಪ್ರಮುಖ ಆರೋಪಿಗಳು.

 • Share this:
  ರಾಮನಗರ (ಆಗಸ್ಟ್​ 24); ಕನ್ನಡದ ಲವ್ ಯೂ ರಚ್ಚು (Love U Rachu|) ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಡೆದ ದುರಂತದಲ್ಲಿ ವಿವೇಕ್ ಎಂಬ ಓರ್ವ ಸ್ಟಂಟ್​ ಮಾಸ್ಟರ್​ ಮೃತಪಟ್ಟಿದ್ದರು. ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ (Masthigudi) ಎಂಬ ಚಿತ್ರದ ಶೂಟಿಂಗ್ ವೇಳೆ ಕೆರೆಗೆ ಬಿದ್ದು ಉದಯ್ ಮತ್ತು ಅನಿಲ್ ಎಂಬ ಪ್ರತಿಭಾನ್ವಿತ ಖಳ ನಟರು ಸಾವನ್ನಪ್ಪಿದ ಬೆನ್ನಿಗೆ ನಡೆದ ಈ ಘಟನೆ ಇಡೀ ರಾಜ್ಯವನ್ನು ತಲ್ಲಣಕ್ಕೆ ದೂಡಿತ್ತು. ಈ ದುರಂತಕ್ಕೆ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಂಕರ್, ಫೈಟ್ ಮಾಸ್ಟ್ ವಿನೋದ್ ಮತ್ತು ಕ್ರೇನ್ ಚಾಲಕ ಮಹದೇವ್ ಅವರೇ ಕಾರಣ ಎಂದು ಈ ಮೂವರನ್ನೂ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು. ಅಲ್ಲದೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನ 14 ದಿನ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿತ್ತು. ಆದರೆ, ಇದೀಗ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

  ಬಂಧಿತ ಆರೋಪಿಗಳನ್ನು ಪೊಲೀಸ್ ಭದ್ರತೆಯೊಂದಿಗೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿದೆ. ಈ ಮೂವರೂ ಸಹ ಜಾಮೀನಿಗಾಗಿ ನ್ಯಾಯಾಲಯಕ್ಕೆ ಎಡತಾಕುತ್ತಿದ್ದಾರೆ. ಇವರ ಜಾಮೀನು ಅರ್ಜಿ ಇಂದು ರಾಮನಗರ ನ್ಯಾಯಾಲಯದಲ್ಲಿ ವಿಚಾರಣೆ ಬಂದಿತ್ತು. ಆದರೆ, ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಈ ವಿಚಾರಣೆಯಲ್ಲಿ ನ್ಯಾಯಾಧೀಶೆ ಅನುಪಮಲಕ್ಷ್ಮಿ ಅವರು ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದರು. ಅಲ್ಲದೆ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್​ 7ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮೂವರೂ ಪ್ರಮುಖ ಆರೋಪಿಗಳು ಇನ್ನೂ ಎರಡು ವಾರ ಜೈಲಿನಲ್ಲೇ ಕಳೆಯುವಂತಾಗಿದೆ.

  ಬಿಡದಿಯ ರೈತರೊಬ್ಬರ ಜಮೀನಿನಲ್ಲಿ ಆಗಸ್ಟ್​ 9 ರಂದು ಲವ್ ಯೂ ರಚ್ಚು ಕನ್ನಡ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿತ್ತು. ಈ ವೇಳೆ, ವಿವೇಕ್ ಎಂಬ ಫೈಟರ್ ಸಾವನ್ನಪ್ಪಿದರೆ ರಂಜಿತ್ ಎಂಬ ಇನ್ನೊಬ್ಬ ಫೈಟರ್ ಗಾಯಗೊಂಡಿದ್ದರು. ಮೆಟಲ್ ರೋಪ್ ಬಳಸಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕ್ರೇನ್ ಡ್ರೈವರ್​ನ ತಪ್ಪಿನಿಂದಾಗಿ ವಿದ್ಯುತ್ ತಂತಿಗೆ ಮೆಟಲ್ ರೋಪ್ ತಗುಲಿ ಕರೆಂಟ್ ಶಾಕ್​ನಿಂದ ಈ ದುರಂತ ಸಂಭವಿಸಿತ್ತು.

  ಇದನ್ನೂ ಓದಿ: Sweater Scam: ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ; ಮಾನನಷ್ಟ ಮೊಕದ್ಧಮೆ ಹೂಡುತ್ತೇನೆ ಎಂದ ನಟ ಕೋಮಲ್​​

  ಈ ದುರಂತ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಆದರೆ, ಈ ಬಗ್ಗೆ ಮಾತನಾಡಿದ್ದ ಚಿತ್ರದ ನಟ ಅಜಯ್ ರಾವ್ "ದುರಂತ ಘಟನೆ ನಡೆದಾಗ ನಾನು ಸ್ಪಾಟ್​ನಲ್ಲಿ ಇರಲಿಲ್ಲ. ನಾನು ಅಲ್ಲಿ ಇದ್ದಿದ್ದರೆ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಇದನ್ನು ಅಲ್ಲಗೆಳೆದಿರುವ ಗಾಯಾಳು ಫೈಟರ್ ರಂಜಿತ್, "ನಾನು ಪೆಟ್ಟಾಗಿ ಬಿದ್ದಾಗ ಹೀರೋ ಅಲ್ಲೇ 10-15 ಮೀಟರ್ ದೂರದಲ್ಲೇ ಇದ್ದರು. ನನ್ನ ಸಹಾಯಕ್ಕೆ ಬರದೇ ಸುಮ್ಮನೆ ನೋಡುತ್ತಾ ಕೂತಿದ್ದರು. ಘಟನೆ ಸ್ಥಳದಲ್ಲಿ ತಾನು ಇರಲಿಲ್ಲ ಅಂತ ಮಾಧ್ಯಮದ ಮುಂದೆ ಯಾಕೆ ಹೇಳಿದ್ದಾರೋ ಗೊತ್ತಿಲ್ಲ" ಎಂದು ಹೇಳುವ ಮೂಲಕ ಅಜಯ್ ರಾವ್ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

  ಇದನ್ನೂ ಓದಿ: Anand Singh: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್; ಅಧಿಕಾರ ಸ್ವೀಕಾರ

  ಇದರ ಬೆನ್ನಿಗೆ ನಾಯಕ ನಟ ಅಜಯ್ ರಾವ್ ಮತ್ತು ನಟಿ ರಚಿತಾ ರಾಮ್ ಅವರನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಪೊಲೀಸರು ಈ ಮೂವರನ್ನು ಮಾತ್ರ ಬಂಧಿಸಿ ಇದೀಗ ವಿಚಾರಣೆ ನಡೆಸುತ್ತಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: