Love Tragedy: ಇತ್ತ ಕೈಕೊಟ್ಟವಳ ಕೊಂದ ಪ್ರಿಯಕರ, ಅತ್ತ ಪ್ರೇಯಸಿ ಮನೆಯವರ ಕಿರುಕುಳಕ್ಕೆ ಯುವಕ ಸೂಸೈಡ್!

ದೇವನಹಳ್ಳಿಯಲ್ಲಿ (Devanahalli) ತನಗೆ ಕೈಕೊಟ್ಟು, ಬೇರೆಯವನನ್ನು ಮದುವೆಯಾಗಿದ್ದ ಪ್ರಿಯತಮೆಯನ್ನು ಆಕೆಯ ಪ್ರಿಯಕರನೇ ಕೊಲೆ (Murder) ಮಾಡಿದ್ದಾನೆ. ಅತ್ತ ಶಿಕಾರಿಪುರದಲ್ಲಿ (Shikaripura) ಪ್ರೇಯಸಿ ಮನೆಯವರ ಕಿರುಕುಳಕ್ಕೆ ಪ್ರಿಯಕರ ಸಾವಿಗೆ (Suicide) ಶರಣಾಗಿದ್ದಾನೆ. ಮತ್ತೊಂದೆಡೆ ವಿಜಯಪುರದಲ್ಲಿ (Vijayapur) ಪ್ರೇಮಿಗಳು ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ (Video Message) ಕಳಿಸಿದ್ದಾರೆ. ಇನ್ನು ಪುತ್ತೂರಿನಲ್ಲಿ (Puttur) ಲವ್ ಜಿಹಾದ್ (Love Jihad) ಆರೋಪ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೀತಿ (Love) ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅಂತಾರೆ, ಆದ್ರೆ ಪ್ರೀತಿ ಮಾಡುವಾಗ ಜಗಕ್ಕೆ ಹೆದರದ ಪ್ರೇಮಿಗಳು (Lovers), ಆಮೇಲೆ ತಂದೆ-ತಾಯಿಗೆ (Father-Mother) ಹೆದರಿಯೋ, ತಂದೆ-ತಾಯಿ ಮಾತು ಮೀರಲಾರದೆಯೋ ಬೇರೆ ಬೇರೆ ಆಗುತ್ತಾರೆ. ಕೆಲವೊಮ್ಮೆ ದೂರದಲ್ಲೇ ಇದ್ದು, ಅವರ ಬದುಕು ಅವರಿಗೆ, ಇವರ ಬದುಕು ಇವರಿಗೆ ಎನ್ನುವಂತೆ ಇರುತ್ತಾರೆ. ಆದರೆ ಕೆಲವೊಮ್ಮೆ ಪ್ರೀತಿ ದ್ವೇಷವಾಗಿ ಬದಲಾಗುತ್ತದೆ. ಆಗ ಪ್ರೇಮಿಗಳು ಎನಿಸಿಕೊಂಡವರ ಮಧ್ಯೆ ನಡೆಯಬಾರದ್ದು ನಡೆಯುತ್ತದೆ. ದೇವನಹಳ್ಳಿಯಲ್ಲಿ (Devanahalli) ತನಗೆ ಕೈಕೊಟ್ಟು, ಬೇರೆಯವನನ್ನು ಮದುವೆಯಾಗಿದ್ದ ಪ್ರಿಯತಮೆಯನ್ನು ಆಕೆಯ ಪ್ರಿಯಕರನೇ ಕೊಲೆ (Murder) ಮಾಡಿದ್ದಾನೆ. ಅತ್ತ ಶಿಕಾರಿಪುರದಲ್ಲಿ (Shikaripura) ಪ್ರೇಯಸಿ ಮನೆಯವರ ಕಿರುಕುಳಕ್ಕೆ ಪ್ರಿಯಕರ ಸಾವಿಗೆ (Suicide) ಶರಣಾಗಿದ್ದಾನೆ. ಮತ್ತೊಂದೆಡೆ ವಿಜಯಪುರದಲ್ಲಿ (Vijayapur) ಪ್ರೇಮಿಗಳು ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ (Video Message) ಕಳಿಸಿದ್ದಾರೆ. ಇನ್ನು ಪುತ್ತೂರಿನಲ್ಲಿ (Puttur) ಲವ್ ಜಿಹಾದ್ (Love Jihad) ಆರೋಪ ಕೇಳಿ ಬಂದಿದೆ.

ಪ್ರೇಯಸಿಯ ಕೊಂದ ಪ್ರಿಯಕರ

ತನ್ನ ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾದ ನವವಿವಾಹಿತೆಯನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಈ ಘಟನೆ ನಡೆದಿದೆಯ . 23 ವರ್ಷದ ಸೌಮ್ಯಾ ಎಂಬಾಕೆಯನ್ನು ಆಕೆಯ ಪ್ರಿಯಕ ಸುಬ್ರಹ್ಮಣ್ಯ ಎಂಬಾತ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆಯಾದ ಯುವತಿ


ಬೇರೆಯೊಬ್ಬನನ್ನು ಮದುವೆಯಾಗಿದ್ದ ಯುವತಿ

ಕೊಲೆಯಾದ ಸೌಮ್ಯ ಬೆಂಗಳೂರಿನ ನಾಗವಾರದಲ್ಲಿ ಕಾಫಿ ಡೇಯಲ್ಲಿ ಕೆಲಸ ಮಾಡ್ತಿದ್ಲು. ಇಲ್ಲಿಯೇ ಕೆಲಸ ಮಾಡ್ತಿದ್ದ ಸುಬ್ರಹ್ಮಣ್ಯ ಮತ್ತು ಸೌಮ್ಯಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದ್ರೆ ಕೆಲ ತಿಂಗಳ ಹಿಂದೆ ಸೌಮ್ಯಾ ಕೆಲಸ ಬಿಟ್ಟಿದ್ದಳು. ಇನ್ನು ಕಳೆದ ಹದಿನೈದು ದಿನಗಳ ಹಿಂದಷ್ಟೇ ಆಕೆಗೆ ಬೇರೊಬ್ಬನೊಂದಿಗೆ ಮದುವೆಯಾಗಿತ್ತು.

ಇದನ್ನೂ ಓದಿ: Love Jihad: ಲವ್ ಜಿಹಾದ್ ಎಂದು ಮದ್ವೆ ನಿಲ್ಲಿಸಿದ ಹಿಂದೂ ಸಂಘಟನೆಗಳು; ಮಗಳ ಪ್ರೇಮ ವಿವಾಹಕ್ಕೆ ತಾಯಿಯ ಒಪ್ಪಿಗೆ; ನಾಲ್ವರ ವಿರುದ್ಧ FIR ದಾಖಲು

ಮನೆಗೇ ಬಂದು ಚಾಕು ಇರಿದು ಕೊಂದ ಪ್ರೇಮಿ

ಸೌಮ್ಯಾ ತನ್ನ ಪ್ರೀತಿ ನಿರಾಕರಿಸಿ ಬೇರೊಬ್ಬನನ್ನು ಮದುವೆಯಾಗಿದ್ದರಿಂದ ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ನೊಂದುಕೊಂಡಿದ್ದ. ಕಳೆದ ರಾತ್ರಿ ಸೌಮ್ಯ ಹುಟ್ಟೂರಿಗೆ ಬಂದಿರೋದು ನೋಡಿದ್ದ ಆರೋಪಿ ಸುಬ್ರಹ್ಮಣ್ಯ, ರಾತ್ರಿ ಗಣೇಶನ ಪೂಜೆಗೆ ಆಕೆಯ ಮನೆಯವರು ಹೋಗಿದ್ದ ವೇಳೆ ಮನೆಗೆ ಬಂದಿದ್ದ. ಮನೆಯೊಳಗೆ ನುಗ್ಗಿ ಎರಡು ಚಾಕುವಿನಿಂದ ಸೌಮ್ಯಾಳಿಗೆ ಇರಿದಿದ್ದ. ಆಕೆ ಕೂಗಿಕೊಂಡಿದ್ದು ಕೇಳಿ, ಮನೆಯವರೆಲ್ಲ ಬರುತ್ತಿದ್ದಂತೆ ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೌಮ್ಯಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಈ ಕುರಿತು ಬೆಂಗಳೂರು ಗ್ರಾಮಾಂತರದ ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಯಸಿ ಮನೆಯವರ ಕಿರುಕುಳಕ್ಕೆ ಯುವಕ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಿತ್ತಲ ಗ್ರಾಮದ 24 ವರ್ಷದ ಮದನ್ ಕುಮಾರ್ ಮೃತ ಯುವಕ. ವೈರಿಂಗ್ ಕೆಲಸ ಮಾಡಿಕೊಂಡಿದ್ದ ಮದನ್ ಕುಮಾರ್ ಪ್ರೇಮಪ್ರಕರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ಯುವಕ


ಪ್ರೇಯಸಿ ಮನೆಯವರು ಕಿರುಕುಳ ನೀಡಿದ ಆರೋಪ

ಇನ್ನು ಮೃತ ಮದನ್ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿಯಿತ್ತು. ಆದರೆ ಯುವತಿ ಮನೆಯವರು ಮದನ್ ವಿರುದ್ಧ ಅತ್ಯಾಚಾರದ ದೂರನ್ನು ದಾಖಲಿಸಿದ್ದರಂತೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದ್ದು, 25 ಲಕ್ಷ ರೂಪಾಯಿ ಕೊಡುವಂತೆಯೂ ಕೇಳಿದ್ದರಂತೆ. ಇದೇ ಕಾರಣಕ್ಕೆ ನೊಂದು ಮದನ್ ಸೂಸೈಡ್ ಮಾಡಿಕೊಂಡಿದ್ದಾನೆ ಅಂತ ಆರೋಪಿಸಿದ್ದಾರೆ.

ಅಜ್ಞಾತ ಸ್ಥಳದಿಂದ ಪ್ರೇಮಿಗಳ ವಿಡಿಯೋ ಸಂದೇಶ

ಪ್ರೇಮಿಗಳ ಓಡಿ ಹೋಗಿದಕ್ಕೆ ತಂದೆ ತಾಯಿಗಳ ಮೇಲೆ ಹಲ್ಲೆ ಮಾಡಿರೋ ಘಟನೆ ವಿಜಯಪುರ ಜಿಲ್ಲೆಯ ಜಾಲಗೇರಿ‌ ಗ್ರಾಮದಲ್ಲಿ ನಡೆದಿತ್ತು. ಇದೀಗ ಅಜ್ಞಾತ ಸ್ಥಳದಿಂದ ಪ್ರೇಮಿಗಳು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: Beef: ಮುಸ್ಲಿಂ ಹುಡುಗಿ ಮದ್ವೆಯಾದ ಹಿಂದೂ ಯುವಕ ಆತ್ಮಹತ್ಯೆ! ಗೋಮಾಂಸ ತಿನ್ನಿಸಿದ್ದಕ್ಕೆ ನೊಂದು ಸೂಸೈಡ್

ಪುತ್ತೂರಿನಲ್ಲಿ ಲವ್ ಜಿಹಾದ್ ಆರೋಪ

ಪುತ್ತೂರಿನಲ್ಲಿ ಲವ್ ಜಿಹಾದ್ ನಡೆದಿರುವ ಆರೋಪ ಕೇಳಿ ಬಂದಿದೆ. ಉಡುಪಿಯ ಕೋಟಾ ಮೂಲದ ಮುಸ್ಲಿಂ ಯುವಕ ಪುತ್ತೂರಿನ ಯುವತಿ ಜೊತೆ ಪ್ರೀತಿಯ ನಾಟಕವಾಡಿ, ನಂಬಿಸಿದ್ದಾನೆ ಅಂತ ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಠಾಣೆ ಮುಂದೆ ಜಮಾಯಿಸಿದ್ದು, ಇದೀಗ ಹುಡುಗಿ ನಾಪತ್ತೆಯಾಗಿದ್ದು, ಯುವಕನನ್ನು ಬಂಧಿಸಲಾಗಿದೆ.
Published by:Annappa Achari
First published: