• Home
  • »
  • News
  • »
  • state
  • »
  • Chikkamgaluru: 6 ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿದ ‘ಒಂದು' ಕೇಸ್; ಏನಾಯ್ತೋ ಗೊತ್ತಿಲ್ಲ, ಒಂದೇ ವೇಲ್​ಗೆ ಕೊರಳೊಡ್ಡಿದ ಜೋಡಿ

Chikkamgaluru: 6 ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿದ ‘ಒಂದು' ಕೇಸ್; ಏನಾಯ್ತೋ ಗೊತ್ತಿಲ್ಲ, ಒಂದೇ ವೇಲ್​ಗೆ ಕೊರಳೊಡ್ಡಿದ ಜೋಡಿ

ದರ್ಶನ್ ಮತ್ತು ಪೂರ್ವಿಕಾ

ದರ್ಶನ್ ಮತ್ತು ಪೂರ್ವಿಕಾ

ಮಂಗಳೂರಿಗೆ ಹೋಗಿ ಬರುತ್ತಿದ್ದ ದರ್ಶನ್​​ಗೆ ಅಲ್ಲಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿಕಾ ನಡುವೆ ಸ್ನೇಹವಾಗಿತ್ತು. ಇಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು.

  • News18 Kannada
  • 3-MIN READ
  • Last Updated :
  • Chikmagalur, India
  • Share this:

ಆರು ವರ್ಷದಿಂದ ಪ್ರೀತಿಸಿದ್ದ ಜೋಡಿಯೊಂದು (Couple) ಒಂದೇ ವೇಲ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  (Suicide) ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ನಡೆದಿದೆ. ಇಬ್ಬರ ಪ್ರೀತಿಯ (Love) ವಿಷಯ ತಿಳಿದಿದ್ದ ಎರಡೂ ಕುಟುಂಬಗಳು ಮದುವೆಗೆ (Marriage) ಗ್ರೀನ್ ಸಿಗ್ನಲ್ ನೀಡಿದ್ದರು. ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕ ನಂತರ ಜೋಡಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಆದ್ರೆ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿಸಿದ್ದು ಒಂದು ಪ್ರಕರಣ. ಒಂದು ತಿಂಗಳ ಹಿಂದೆ ಯುವಕನ ವಿರುದ್ಧ ದಾಖಲಾದ ಒಂದು ಪ್ರಕರಣ (Compliant Filed) ಇಂದು ಇಬ್ಬರ ಜೀವವನ್ನು ಪಡೆದುಕೊಂಡಿದೆ. ಇತ್ತ ಮಕ್ಕಳನ್ನು (Children) ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.


ದರ್ಶನ್ ಮತ್ತು ಪೂರ್ವಿಕಾ ಆತ್ಮಹತ್ಯೆಗೆ ಶರಣಾದ ಜೋಡಿ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಕಲ್ಲುಗುಡ್ಡೆ ಗ್ರಾಮದ ದರ್ಶನ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನ್‍ಬಾಳು ಗ್ರಾಮದ ಪೂರ್ವಿಕಾ ಆಲ್ದೂರು ಸಮೀಪದ ಗುಲ್ಲನ್‍ಪೇಟೆಯ ಸತ್ತಿಹಳ್ಳಿಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.


ಮದುವೆಗೆ ಒಪ್ಪಿಗೆ ನೀಡಿದ್ದ ಕುಟುಂಬಸ್ಥರು


ಮಂಗಳೂರಿಗೆ ಹೋಗಿ ಬರುತ್ತಿದ್ದ ದರ್ಶನ್​​ಗೆ ಮಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿಕಾ ನಡುವೆ ಸ್ನೇಹವಾಗಿತ್ತು. ಇಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು. ವಿಷಯ ಮನೆಯವರಿಗೆ ತಿಳಿದು 5 ವರ್ಷದ ಬಳಿಕ ಮದುವೆ ಮಾಡ್ತೀವಿ ಎಂದು ಭರವಸೆ ನೀಡಿದ್ದರು.


ಪ್ರೇಮಿಗಳ ಮಧ್ಯೆ ಬಿರುಕು


ಒಂದು ತಿಂಗಳ ಹಿಂದೆ ದರ್ಶನ್ ವಿರುದ್ಧ ಚಿಕ್ಕಮಗಳೂರಿನ ಮಲ್ಲಂದೂರು ಠಾಣೆಯಲ್ಲಿ ದಾಖಲಾದ ಅದೊಂದು ಕೇಸ್ ಪ್ರೇಮಿಗಳ ಮಧ್ಯೆ ಬಿರುಕು ಮೂಡಿಸಿತ್ತು.


ದರ್ಶನ್​​ನಿಂದ ತನಗೆ ಮೋಸ ಆಗಿದ್ದು, ಅವನಿಂದಲೇ ನಾನು ಗರ್ಭಿಣಿಯಾಗಿದ್ದೇನೆ ಎಂದು ಯುವತಿಯೊಬ್ಬಳು ದೂರು ದಾಖಲಿಸಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಪೂರ್ವಿಕಾ ಗೆಳೆಯ ದರ್ಶನ್ ವಿರುದ್ಧ ರೆಬೆಲ್ ಆಗದ್ದಳು. ಆದ್ರೆ ಈ ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲ. ಬೇಕಾದರೆ ಡಿಎನ್​ಎ ಟೆಸ್ಟ್ ಮಾಡಿಸಿ ಎಂದು ದರ್ಶನ್ ಹೇಳಿಕೊಂಡಿದ್ದನು.


ಮೂರು ದಿನದ ಹಿಂದೆ ಪೂರ್ವಿಕಾ ದರ್ಶನ್​ನನ್ನು ಭೇಟಿಯಾಗಿದ್ದಾಳೆ. ಇಬ್ಬರ ನಡುವೆ ಏನಾಯ್ತೋ ಗೊತಿಲ್ಲ. ಅಪ್ಪ-ಅಮ್ಮನಿಗೆ ಕ್ಷಮಿಸಿ, ಅವನನ್ನ ಬಿಟ್ಟು ಇರೋಕೆ ಆಗ್ತಿಲ್ಲ ಎಂದು ವಾಯ್ಸ್ ಮೆಸೇಜ್ ಕಳಿಸಿ ಪೂರ್ವಿಕಾ ತನ್ನ ಪ್ರೇಮಿ ಜೊತೆ ನೇಣಿಗೆ ಕೊರಳೊಡ್ಡಿದ್ದಾಳೆ.


ದೂರು ನೀಡಿದ ಹುಡುಗಿಯನ್ನ ಮದ್ವೆ ಆಗಬೇಕಿತ್ತು!


ದರ್ಶನ್​ನಿಗೆ ದೂರು ನೀಡಿದ ಯುವತಿಯನ್ನೇ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಪೂರ್ವಿಕಾಗೆ ಪ್ರೀತಿಸಿದ ಹುಡುಗನನ್ನು ಬಿಟ್ಟು ಬದುಕಲು ಆಗಲ್ಲ ಅನ್ನೋ ಸ್ಥಿತಿಗೆ ಬಂದಿದ್ದಳು. ಹೀಗಾಗಿಯೇ ಮಂಗಳೂರಿನಿಂದ ದರ್ಶನ್​ನನ್ನು ಭೇಟಿಯಾಗಲು ಪೂರ್ವಿಕಾ ಬಂದಿದ್ದಳು.


ಇಬ್ಬರು ಸೇರಿ ಆಲ್ದೂರು ಪ್ರದೇಶದ ಕಡೆಗೆ ಬಂದಿದ್ದಾರೆ. ಇಬ್ಬರು ಮಧ್ಯೆ ಏನು ಮಾತು ನಡೆದಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಬದುಕಿದ್ರೆ ದೂರು ನೀಡಿದ ಹುಡುಗಿಯನ್ನೇ ಮದುವೆ ಆಗಬೇಕು ಎಂದು ತಿಳಿದ ದರ್ಶನ್ ಗೆಳತಿ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  Gadag: ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್​ಗೆ ಟ್ವಿಸ್ಟ್​; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ


ಯುವತಿ ಆರೋಪ ನಿಜನಾ?


ಇನ್ನು ದೂರು ದಾಖಲಿಸಿದ್ದ ಯುವತಿ ಆರೋಪ ನಿಜವಾ ಅಥವಾ ಸುಳ್ಳಾ ಎಂಬುದರ ಬಗ್ಗೆ ಇನ್ನೂ ಗೊತ್ತಿಲ್ಲ. ದೂರು ದಾಖಲಾದ ಬಳಿಕ ದರ್ಶನ್ ಪೋಷಕರು ಅದೇ ಯುವತಿ ಜೊತೆ ಮದುವೆ ಮಾಡಿಸಲು ಮುಂದಾಗಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು ಎನ್ನಲಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು