HOME » NEWS » State » LOVE MARRIAGE END WITH BOY MURDER BY GIRLS UNCLE AND BROTHER IN BANGALORE SESR

Murder: ಪ್ರೇಮ ವಿವಾಹಕ್ಕೆ ವಿರೋಧ; ಹುಟ್ಟುಹಬ್ಬದಂದೇ ಅಳಿಯನ ಬರ್ಬರ ಹತ್ಯೆ ಮಾಡಿದ ಚಿಕ್ಕಪ್ಪ

ಭೂಮಿಕಾ ಕೂಡ ಮನೆಯವರ ಒತ್ತಾಯಕ್ಕೆ ಮಣಿದು  ವಿಜಯ್ ಎಂಬುವವರ ಜೊತೆ  ಮದುವೆಯಾಗಿದ್ದಳು. ಮದುವೆಯಾದರೂ ಭೂಮಿಕಾ,  ಚೇತನ್ ನನ್ನ ಪ್ರೀತಿಸುತ್ತಿದ್ದಳು. ಇದೇ ಕಾರಣಕ್ಕೆ ಮದುವೆಯಾದ ಒಂದು ವಾರಕ್ಕೆ ವಿಜಯ್‌ನನ್ನು ಬಿಟ್ಟು ಚೇತನ್ ಜೊತೆ ಬಂದಿದ್ದಳು. 

news18-kannada
Updated:February 16, 2021, 5:13 PM IST
Murder: ಪ್ರೇಮ ವಿವಾಹಕ್ಕೆ ವಿರೋಧ; ಹುಟ್ಟುಹಬ್ಬದಂದೇ ಅಳಿಯನ ಬರ್ಬರ ಹತ್ಯೆ ಮಾಡಿದ ಚಿಕ್ಕಪ್ಪ
ಕೊಲೆಯಾದ ಯುವಕ ಚೇತನ್​
  • Share this:
ಬೆಂಗಳೂರು (ಫೆ. 16): ತಮ್ಮ ಇಚ್ಚೆ ಹೊರಾತಾಗಿಯೂ ಪ್ರೀತಿಸಿದ ಯುವಕನನ್ನೇ ಮದುವೆಯಾದ ಸಿಟ್ಟಿಗೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿಯ ಚಿಕ್ಕಪ್ಪ ಮತ್ತು ಆಕೆಯ ಸಹೋದರ ಈ ಕೊಲೆ ಮಾಡಿದ್ದಾರೆ. ಹುಟ್ಟುಹಬ್ಬದ ಹಿನ್ನಲೆ ಶುಭಾಶಯ ಕೋರುವ ನೆಪದಲ್ಲಿ ಮನೆಗೆ ಆಗಮಿಸಿ ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಎಲ್​ಜಿ ರಾಮಣ್ಣ ಬಡಾವಣೆಯಲ್ಲಿಈ   ಕೃತ್ಯ ನಡೆದಿದ್ದು, ಚೇತನ್​ (27) ಕೊಲೆಯಾದ ಯುವಕ. ಚೇತನ್​ ಮತ್ತು ಭೂಮಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವ ವಿರೋಧದ ನಡುವೆಯೂ ಎರಡು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಕೊಲೆ ಮಾಡಿದವರನ್ನು ಭೂಮಿಕ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜೇಶ್ ಎಂದು ಗುರುತಿಸಲಾಗಿದೆ



ಭೂಮಿಕಾ ಚೇತನ್​ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಒಂದೇ ಜಾತಿಯಾವರಾದರೂ ಇವರ ಪ್ರೇಮ ವಿವಾಹಕ್ಕೆ ಭೂಮಿಕಾ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ಇದನ್ನು ಓದಿ: ಮದುವೆ ದಿನಗಳನ್ನು ಮೆಲುಕು ಹಾಕಿದ ಕಾಂಗ್ರೆಸ್​ ನಾಯಕಿ; 24 ವರ್ಷದ ಹಿಂದಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ

ಅಷ್ಟೇ ಅಲ್ಲದೇ, ಆಕೆಯ ಮದುವೆಯನ್ನು ಬಲವಂತವಾಗಿ ಬೇರೆಯ ಹುಡುಗನ ಜೊತೆ ಅದ್ದೂರಿಯಾಗಿ ಮಾಡಲಾಗಿತ್ತು. ಭೂಮಿಕಾ ಕೂಡ ಮನೆಯವರ ಒತ್ತಾಯಕ್ಕೆ ಮಣಿದು  ವಿಜಯ್ ಎಂಬುವವರ ಜೊತೆ  ಮದುವೆಯಾಗಿದ್ದಳು. ಮದುವೆಯಾದರೂ ಭೂಮಿಕಾ,  ಚೇತನ್ ನನ್ನ ಪ್ರೀತಿಸುತ್ತಿದ್ದಳು. ಇದೇ ಕಾರಣಕ್ಕೆ ಮದುವೆಯಾದ ಒಂದು ವಾರಕ್ಕೆ ವಿಜಯ್‌ನನ್ನು ಬಿಟ್ಟು ಚೇತನ್ ಜೊತೆ ಬಂದಿದ್ದಳು.

ಇದಾದ ಬಳಿಕ ಕಳೆದ ಎರಡು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಇದೇ ಸಿಟ್ಟಿನಲ್ಲಿದ್ದ ಭೂಮಿಕಾ ಕುಟುಂಬ ಈಗ ಈ ಕೃತ್ಯ ನಡೆಸಿದೆ. ಇಂದು ಚೇತನ್​ ಹುಟ್ಟು ಹಬ್ಬ ಹಿನ್ನಲೆ ಶುಭಾಶಯ ಕೋರಲು ಬಂದ  ಭೂಮಿಕಾ ಚಿಕ್ಕಪ್ಪ ಹಾಗೂ ಸಹೋದರ ಭೂಮಿಕಾ ನ‌ ಹೊರಗಡೆ ಕಳುಹಿಸಿ, ಲಾಂಗು ಮಚ್ಚಿನಿಂದ ಕೊಲೆ ಮಾಡಿದ್ದಾರೆ. ಈ ಕುರಿತು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.   ಸದ್ಯ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದು,  ಹುಡುಕಾಟ ನಡೆಸಿರುವುದಾಗಿ ಉತ್ತರ ವಿಭಾಗ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ  ತಿಳಿಸಿದ್ದಾರೆ.
Published by: Seema R
First published: February 16, 2021, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories