Girl Suicide: ಮದುವೆ ಆಗಲು ಮತಾಂತರದ ಕಂಡಿಷನ್; ಲವ್ ಜಿಹಾದ್​ಗೆ ಯುವತಿ ಬಲಿ; ಆರೋಪಿ ಪರಾರಿ

ಮೊದಲೇ‌ ಮೋಸ ಮಾಡುವುದರಲ್ಲೇ ಚಾಲಾಕಿಯಾದ್ದ ಅಜೀಜ್, ಶಿಲ್ಪಾಳಿಗೆ ಪ್ರೀತಿ ಗೀತಿ ಅಂತ ಯಾಮಾರಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಮದುವೆ ಆಗ್ಬೇಕು ಅಂದ್ರೆ ಮತಾಂತವಾಗುವಂತೆ ಒತ್ತಾಯ ಕೂಡ ಮಾಡಿದ್ದ

ಲವ್​ ಜಿಹಾದ್​ಗೆ ಯುವತಿ ಬಲಿ

ಲವ್​ ಜಿಹಾದ್​ಗೆ ಯುವತಿ ಬಲಿ

  • Share this:
ಉಡುಪಿ (ಮೇ 26): ಲವ್ ಜಿಹಾದ್ (Love Jihad) ಕರಾವಳಿಯಲ್ಲಿ ಮತ್ತೆ ಸದ್ದು ಮಾಡಿದೆ.‌ ಮುಸ್ಲಿಂ ‌ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತ ಯುವತಿ ಇಲಿಪಾಷಾಣ ಸೇವಿಸಿ  ಆತ್ಮಹತ್ಯೆ (Girl Suicide). ಅಣ್ಣ ನಾನು ತಪ್ಪು ಮಾಡಿದ್ದೇನೆ ಅಂತ ಸಾವಿನ ಕೊನೆ ಕ್ಷಣದಲ್ಲಿ ನೋವನ್ನ ಹೊರಹಾಕಿದ್ದಾಳೆ ಆ ಯುವತಿ.  ಯುವತಿಯ ಸಾವಿಗೆ ಕಾರಣನಾದ ಕಿರಾತಕ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಉಡುಪಿಯಲ್ಲಿ (Udupi) ನಡೆದ ಲವ್ ಸೆಕ್ಸ್ ದೋಖಗೆ ಶಿಲ್ಪಾ ದೇವಾಡಿಗ ಬಲಿಯಾಗಿದ್ದಾರೆ. ಈಕೆ ಕುಂದಾಪುರ (Kundapura) ತಾಲೂಕಿನ ಉಪ್ಪಿನಕುದ್ರು ಗ್ರಾಮದ ಯುವತಿ.  ಮನೆಯಿಂದ ಕೆಲವೇ ದೂರವಿರುವ ತಲ್ಲೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು

ಮದುವೆ ಮಾಡಿಕೊಳ್ಳಲು ಮತಾಂತರಕ್ಕೆ ಒತ್ತಾಯ

ಕಳೆದ ಐದು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ  ಅಜೀಜ್ (32) ಎಂಬಾತ ಶಿಲ್ಪಾಳ ಸ್ನೇಹ ಸಂಪಾದಿಸಿದ್ದ. ಮೊದಲೇ‌ ಮೋಸ ಮಾಡುವುದರಲ್ಲೇ ಚಾಲಾಕಿಯಾದ್ದ ಅಜೀಜ್, ಶಿಲ್ಪಾಳಿಗೆ ಪ್ರೀತಿ ಗೀತಿ ಅಂತ ಯಾಮಾರಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಆಗಾಗ ಕೋಟೇಶ್ವರದಲ್ಲಿ ತನ್ನ ಫ್ಲಾಟ್ ಗೆ ಶಿಲ್ಪಾಳನ್ನು ಕರೆಯಿಸಿಕೊಳ್ತಿದ್ದ.  ಅಜೀಜ್, ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ, ಆಗಾಗ ಆಕೆಗೆ ಬೆತ್ತಲೆ ಫೋಟೋ ಕಳುಹಿಸುವಂತೆ, ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ, ಒತ್ತಾಯಿಸುತ್ತಿದ್ದ. ಕಳೆದ ಕೆಲವು ದಿನಗಳ ಹಿಂದೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಅಜೀಜ್  ಬಳಿ ಕೇಳಿದ್ರೆ ಆತ ಮತಾಂತರವಾಗುವಂತೆ ಒತ್ತಾಯ ಮಾಡಿದ್ದ.

ವಿಡಿಯೋ ವೈರಲ್​ ಮಾಡೋದಾಗಿ ಬೆದರಿಕೆ

ಕೊನೆ ಕೊನೆಗೆ ಮದುವೆ ಹಠ ಹಿಡಿದಾಗ ಮುಸ್ಲೀಂ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದ ಇದಕ್ಕೆ ಶಿಲ್ಪಾ ಒಪ್ಪದಿದ್ದಾಗ ಆಕೆ ಬೆತ್ತಲೆ ಫೋಟೋ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಬೆನ್ನಲ್ಲೆ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರಂತರವಾಗಿ ಶಿಲ್ಪಾಳನ್ನು ದೈಹಿಕವಾಗಿ ಬಳಸಿಕೊಂಡಿದ್ದ ಅಜೀಜ್‌ಗೆ ಶಿಲ್ಪಾಳ ಪರಿಚಯಕ್ಕೂ ಮೊದಲೇ ಹಂಗಳೂರಿನ ಸಲ್ಮಾ (30) ಎಂಬ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ.

ಇದನ್ನೂ ಓದಿ: H.D Devegowda: ಬೆಂಗಳೂರಲ್ಲಿ ಕೆಸಿಆರ್-ಹೆಚ್​ಡಿಡಿ ಭೇಟಿ, ತೃತೀಯ ರಂಗ ಬಲಪಡಿಸುವ ಕುರಿತು ಮಾತುಕತೆ

Love jihad young woman suicide in udupi
ಶಿಲ್ಪಾ, ಆಜೀಜ್​


ವಿಷ ಸೇವಿಸಿ ಶಿಲ್ಪಾ ಆತ್ಮಹತ್ಯೆ

ಅಲ್ಲದೇ ಶಿಲ್ಪಾಳನ್ನು ಧರ್ಮ ಪರಿವರ್ತನೆ ಮಾಡಿಕೊಳ್ಳುವಂತೆ ತನ್ನ ಹೆಂಡತಿಯಿಂದಲೂ ಒತ್ತಾಯ ಮಾಡಿಸಿದ್ದ ಎನ್ನಲಾಗಿದೆ. ಅಜೀಜ್ ನ ಕಪಟ ಪ್ರೀತಿಯ, ಲವ್ ಸೆಕ್ಸ್ ಜಿಹಾದ್ ಕರಾಳ ಮುಖದ ಅರಿವಾದಾಗ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಸಾಯುವ ಮೊದಲು ಸಹೋದರ ರಾಘವೇಂದ್ರನ ಬಳಿ ಅಣ್ಣ ನಾನು ತಪ್ಪು ಮಾಡಿದ್ದೇನೆ ಅಂತ ಅಜೀಜನ ಮೋಸದಾಟ ವಿವರವಾಗಿ ಬಿಚ್ಚಿಟ್ಟಿದ್ದಾಳೆ.

ಕುಟುಂಬ ಸಮೇತ ಅಜೀಜ್​ ಪರಾರಿ

ಶಿಲ್ಪಾ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಅಜೀಜ್ ಪತ್ನಿ ಮಕ್ಕಳ ಜೊತೆ ಎಸ್ಕೇಪ್ ಆಗಿದ್ದಾನೆ.  ಇತ್ತ ಮನೆಯ ಮಗಳನ್ನು ಕಳೆದುಕೊಂಡ, ಮರ್ಯಾದೆಗೆ ಅಂಜಿ ದುಃಖದಲ್ಲಿರುವ ಮನೆಯವರು ಕಣ್ಣೀರು ಸುರಿಸುತ್ತಿದ್ದರೆ, ಅತ್ತ ಮನೆಯವರ ನೈತಿಕ ಬೆಂಬಲಕ್ಕೆ ನಿಂತ ಹಿಂದು ಸಂಘಟನೆ ಮುಖಂಡರು ಆತನನ್ನು ಕೂಡಲೇ ಬಂಧಿಸಿ ಜೈಲಿಗಟ್ಟಿ ಲವ್ ಜಿಹಾದ್ ಗೆ ಬಲಿಯಾದ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Hijab Controversy: ಮಂಗಳೂರು ವಿವಿಯಲ್ಲಿ ಮತ್ತೆ ಹಿಜಾಬ್ ವಿವಾದ, ವಿದ್ಯಾರ್ಥಿಗಳಿಂದ ಪ್ರತಿಭಟನೆ

ಇನ್ನಾದರೂ ಜಿಹಾದಿಗಳ ಮೋಸಕ್ಕೆ ಮರುಳಾಗುವ ಹಿಂದು ಯುವತಿಯರಿಗೆ ಇದೊಂದು ಪಾಠ, ಇನ್ನಾದರೂ ಮುಸ್ಲಿಂ ಯುವಕರ ಕಪಟ ಪ್ರೀತಿಗೆ ಬಲಿಯಾಗದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕುಂದಾಪುರ ಪೊಲೀಸರು ಅಜೀಜ್ ಹಾಗೂ ಆಕೆಯ ಪತ್ನಿ ಸಲ್ಮಾಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಪೊಲೀಸರು. ಒಟ್ಟಾರೆಯಾಗಿ ಹಿಂದೂ ಯುವತಿ ಶಿಲ್ಪಾ ಆತ್ಮಹತ್ಯೆಯಿಂದಾಗಿ ಕುಂದಾಪುರ ಪರಿಸರದಲ್ಲಿ ಮತ್ತೆ ಧರ್ಮ ದಂಗಲ್ ಸಾಧ್ಯತೆ ದಟ್ಟವಾಗುತ್ತಿದೆ.
Published by:Pavana HS
First published: