Love Jihad: ಸರ್ಕಾರಿ ಶಿಕ್ಷಕನ ಕಾಮಪುರಾಣ, ರಾಸಲೀಲೆ ಹಿಂದೆ ಲವ್ ಜಿಹಾದ್ ಹುನ್ನಾರ; ಸಂತ್ರಸ್ತೆ ಬಿಚ್ಚಿಟ್ಟ ಸ್ಫೋಟಕ ಸತ್ಯ

ವಿಕೃತ ಕಾಮಿ ಅಜರುದ್ದಿನ್ ಮಾತಿಗೆ ಅನೇಕ ಮಹಿಳೆಯರು ಮರುಳಾಗಿದ್ರು. ಶಾಲೆಯಲ್ಲೂ ಲವ್ ಜಿಹಾದ್ ಮಾಡುತ್ತಿದ್ದೇನೆ ಎಂದಿದ್ದನಂತೆ ಈ ಪಾಪಿ, ಲವ್ ಜಿಹಾದ್ ಉದ್ದೇಶದಿಂದ ಶಾಲೆಯಲ್ಲಿನ ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಸಲುಗೆ ಬೆಳೆಸಿಕೊಳ್ತಿದ್ದ, ಅಜರುದ್ದಿನ್ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಶಿಕ್ಷಕ

ಶಿಕ್ಷಕ

  • Share this:
ಸರ್ಕಾರಿ ಶಿಕ್ಷಕನ (Teacher) ಕಾಮ ಪುರಾಣದ ಬಗೆದಷ್ಟು ಸ್ಫೋಟಕ ಮಾಹಿತಿ ಹೊರ ಬರ್ತಿದೆ. ಲವ್ ಜಿಹಾದ್ (Love Jihad) ಉದ್ದೇಶಕ್ಕೆ ಕೃತ್ಯ ಎಂದ ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ಬ್ಯುಟಿಷಿಯನ್ ನೀಡಿದ ದೂರಿನಲ್ಲಿ ಬೆಚ್ಚಿ ಬೀಳಿಸೋ ವಿಷಯ ಉಲ್ಲೇಖವಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ  ಆರೋಪಿ ಮೊಹಮ್ಮದ್‌ ಅಜರುದ್ದಿನ್ (Mohammad Azharuddin) ಕರಾಳ ಮುಖವನ್ನು ಸಂತ್ರಸ್ತೆ ಬಯಲು ಮಾಡಿದ್ದಾಳೆ. ಲವ್ ಜಿಹಾದ್, ಸೆಕ್ಸ್ ಜಿಹಾದ್ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರೊ ಸಂತ್ರಸ್ತೆ. ಲೈಂಗಿಕ ಸಂಪರ್ಕ ಹೊಂದಿದ ಬಳಿಕ ಮಹಿಳಾ ಪೋಷಕರನ್ನ ಪುಸಲಾಯಿಸಿ ತನ್ನ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಅಜರುದ್ದಿನ್​ ಮೈಂಡ್ ವಾಷ್ (Mind wash) ಮಾಡ್ತಿದ್ದನಂತೆ.

ಶಾಲೆಯಲ್ಲೂ ಲವ್​ ಜಿಹಾದ್​

ಹೀಗೆ ವಿಕೃತ ಕಾಮಿ ಅಜರುದ್ದಿನ್ ಮಾತಿಗೆ ಅನೇಕ ಮಹಿಳೆಯರು ಮರುಳಾಗಿದ್ರು. ಶಾಲೆಯಲ್ಲೂ ಲವ್ ಜಿಹಾದ್ ಮಾಡುತ್ತಿದ್ದೇನೆ ಎಂದಿದ್ದನಂತೆ ಪಾಪಿ, ಲವ್ ಜಿಹಾದ್ ಉದ್ದೇಶದಿಂದ ಶಾಲೆಯಲ್ಲಿನ ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಸಲುಗೆ ಬೆಳೆಸಿಕೊಳ್ತಿದ್ದ, ಅಜರುದ್ದಿನ್ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದೇ ಕಾರಣಕ್ಕೆ ಅನೇಕ ವಿದ್ಯಾರ್ಥಿನಿಯರು ಶಾಲೆ ಬಿಟ್ಟಿದ್ರು. ಈ ಹಿಂದೆ ಕೆಲ ಪೋಷಕರು ಶಾಲೆಗೆ ಬಂದು ಆತನನ್ನ ಬೈದಿದ್ದು ಉಂಟು.

ಶಾಲೆಯಲ್ಲಿ ಶಿಕ್ಷಕರ ಜೊತೆ ಗುಂಡಾವರ್ತನೆ

ಅಜರುದ್ದಿನ್ ಬೆಂಬಲಿಗರರು ಶಿಕ್ಷಕರ ಜೊತೆ ಕಿರಿಕ್ ಮಾಡಿದ್ರು. ಈ ಸಂಬಂಧ ಕಾರಟಗಿಯಲ್ಲಿ ಕೇಸ್ ದಾಖಲಾಗಿತ್ತು ಇದರ ಬೆನ್ನಲ್ಲೇ ಅಜರುದ್ದಿನ್​ನನ್ನು ಸಸ್ಪೆಂಡ್ ಕೂಡ ಮಾಡಲಾಗಿತ್ತು. ಆ ಬಳಿಕ ಆತನ ಬೆಂಬಲಿಗರು ಶಾಲೆಗೆ ಮುತ್ತಿಗೆ ಹಾಕಲಾಗಿದ್ರು. ಶಾಲೆಗೆ ಬೀಗ ಹಾಕಿ ಶಿಕ್ಷಕರು ಹಾಗೂ ಸಿಬ್ಬಂದಿ ಜೊತೆ ಗೂಂಡಾವರ್ತನೆ ತೋರಿದ್ದ ಅಜರುದ್ದಿನ್.

ಶಾಲೆ ಗೇಟ್​ ಹಾಕಿ ಬೆಂಬಲಿಗರ ಬೆದರಿಕೆ

ಶಾಲೆಗೆ ಬಳಿ ಜಮಾಯಿಸಿರೋ ಆತನ ಬೆಂಬಲಿಗರು ಅಜರುದ್ದಿನ್​ನನ್ನು ಸಸ್ಪೆಂಡ್​ ಮಾಡಿದ್ದು ಯಾಕೆ? ಅಜರುದ್ದಿನ್​ ನನ್ನು ವಾಪಸ್​ ಕರೆಸ್ರಿ, ಇಲ್ಲದಿದ್ರೆ ಗೇಟ್ ಓಪನ್ ಮಾಡಲ್ಲ ಅಂತ ಬೆಂಬಲಿಗರು ಗಲಾಟೆ ಮಾಡಿದ್ರು. ಹೀಗೆ ಕಿರಿಕ್ ಮಾಡಿ ಹೋಗಿದ್ದ ಕೆಲ ಕಿಡಿಗೇಡಿಗಳ ವಿರುದ್ಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ಇದನ್ನೂ ಓದಿ: Koppal: ಮಕ್ಕಳ ಗುಪ್ತಾಂಗ ಮುಟ್ಟುತ್ತಿದ್ದ ಶಿಕ್ಷಕ ಪೊಲೀಸರ ವಶಕ್ಕೆ; ವರ್ಷದ ಹಿಂದೆಯೇ ದೂರು ನೀಡಿದ್ದ ಪತ್ನಿ

ಧಾರವಾಡದಲ್ಲಿ ಸಿಕ್ಕಿಬಿದ್ದ ಮಹಮದ್​ ಅಜರುದ್ದೀನ್​

ರಾಸಲೀಲೆ ಮತ್ತು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ಧಾರವಾಡ ಜಿಲ್ಲೆಯಲ್ಲಿ ಆರೋಪಿ ಶಿಕ್ಷಕ ಮಹ್ಮದ್ ಅಜರುದ್ದೀನ್​ನನ್ನು ವಶಕ್ಕೆ ಪಡೆಯಲಾಗಿದೆ.

ಶಿಕ್ಷಕನ ವಿರುದ್ಧ ಮಹಿಳೆ ದೂರು

ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಸಿಂಗಾಪೂರ ಗ್ರಾಮದ ಶಿಕ್ಷಕ ಅಜರುದ್ದೀನ್ ನೆರೆಮನೆಯ ಮಹಿಳೆಯರು ಮತ್ತು ಮಕ್ಕಳನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಎನ್ನುವ ವಿಡಿಯೋ ವೈರಲ್ ಆಗಿದ್ದವು. ಶಿಕ್ಷಕನ ವಿರುದ್ಧ ವಿಡಿಯೋದಲ್ಲಿರುವ ಮಹಿಳೆಯೇ ದೂರು ನೀಡಿದ್ದರು.

ಮೊಬೈಲ್​ ಸ್ವಿಚ್​ ಆಫ್​ ಮಾಡಿ ತಲೆಮರೆಸಿಕೊಂಡಿದ್ದ

ಬಳಿಕ ಎಫ್ಐಆರ್ ದಾಖಲಾಗುತ್ತಿದ್ದಂತೆ ಅಜರುದ್ದೀನ್ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ತಲೆಮರೆಸಿಕೊಂಡಿದ್ದ.ಕೊಪ್ಪಳದ ಎಸ್​​ಪಿ ಎ.ಗಿರಿ ಆರೋಪಿ ಶಿಕ್ಷಕನ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಆರೋಪಿಯನ್ನು ಧಾರವಾಡದಿಂದ ಕಾರಟಗಿಗೆ ಕರೆದುಕೊಂಡು ಬರಲಿದ್ದಾರೆ. ರಾಸಲೀಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಮೊಹಮ್ಮದ್‌ ಅಜರುದ್ದೀನ್​ನನ್ನು ಅಮಾನತುಗೊಳಿಸಿತ್ತು.

ಇದನ್ನೂ ಓದಿ:  Kolara: ರಾಹುಲ್ ಗಾಂಧಿ ಪ್ರಚಾರ ಮಾಡಿದ್ರು, ರಮೇಶ್‌ ಕುಮಾರ್ ಸೋಲು ಖಚಿತ ಎಂದ KH ಮುನಿಯಪ್ಪ

ವರ್ಷದ ಹಿಂದೆ ದಾಖಲಾಗಿತ್ತು ದೂರು

ವಿಕೃತಕಾಮಿ ಶಿಕ್ಷಕನ ವಿರುದ್ದ ಪತ್ನಿ ಸಲ್ಮಾ ಬೇಗ ವರ್ಷ ಹಿಂದೆಯೇ ಬಿಇಓ (ಶಿಕ್ಷಣಾಧಿಕಾರಿ) ಗೆ ದೂರು ಸಲ್ಲಿಸಿದ್ದರು. ನಾನು ಮನೆಯಲ್ಲಿರುವಾಗಲೇ ವಿವಾಹಿತ, ವಿಧವೆಯರನ್ನು ಕರೆದುಕೊಂಡು ಬರುತ್ತಿದ್ದನು. ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದನು. ಈ ಸಮಯದಲ್ಲಿ ಬೇರೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದುತ್ತಿದ್ದ.
Published by:Pavana HS
First published: