Love Jihad: ಹಿಂದೂ ಯುವಕನಂತೆ ಸೋಗು - ಯುವತಿ ಲವ್ ಜಿಹಾದ್ ಖೆಡ್ಡಾಕ್ಕೆ? ಇಬ್ರಾಹಿಂ-ಸ್ನೇಹಾ ಲವ್​ಸ್ಟೋರಿ

ಹುಬ್ಬಳ್ಳಿಯ ಕೇಶ್ವಾಪುರದ‌ ನಿವಾಸಿ ಇಬ್ರಾಹಿಂ ಮತ್ತು ಕಮರಿಪೇಟೆ ಸ್ನೇಹ ಇಬ್ಬರು ಪ್ರೀತಿಸಿ ಮದುವೆಯಾದ ಜೋಡಿ. ಇಬ್ರಾಹಿಂ ಪ್ಲಂಬರಿಂಗ್ ಕೆಲಸ ಮಾಡುತ್ತಿದ್ದರೇ, ಸ್ನೇಹ ಟೈಲರಿಂಗ್ ಕಲಿಯೋಕೆ ಐಟಿಐ ಕಾಲೇಜಿಗೆ ಹೋಗ್ತಿದ್ದಳು. ಸ್ನೇಹಳಾ ಅಣ್ಣ ಪವನ್ ಮೂಲಕ ಇಬ್ರಾಹಿಂ ಸ್ನೇಹಳಾನ್ನು ಪರಿಚಯ ಮಾಡಿಕೊಂಡಿದ್ದ.

ವಿವಾಹ ನೋಂದಣಿ ಪತ್ರ

ವಿವಾಹ ನೋಂದಣಿ ಪತ್ರ

  • Share this:
ಹುಬ್ಬಳ್ಳಿ(ಏ.07)- ಸದ್ಯ ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿರುವ ಹೊತ್ತಿನಲ್ಲಿಯೇ, ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ವಿವಾದ ಭುಗಿಲೆದ್ದಿದೆ. ಕಳೆದ ತಿಂಗಳ ಹಿಂದೆ ಗದಗ ಮೂಲದ ಗೃಹಿಣಿಯ ಲವ್ ಜಿಹಾದ್ (Love Jihad) ಪ್ರಕರಣ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹೇಗಾದರೂ ಮಾಡಿ ಲವ್ ಜಿಹಾದ್ ಖೆಡ್ಡಾಕ್ಕೆ ಬಿದ್ದ ಮಗಳನ್ನು ಕಾಪಾಡಿ, ಮತ್ತೆ ಮನೆಗೆ ಕರೆತನ್ನಿ ಅಂತ ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯ (Police Station) ಎದುರು ಧರಣಿ (Protest) ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಗೃಹಿಣಿ ಅಪೂರ್ವ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಲವ್ ಜಿಹಾದ್ ಆರೋಪ ತಿರುವು ಪಡೆದುಕೊಂಡ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿಸಿ ಮದುವೆಯಾಗಿದ್ದು, ಈ ಪ್ರಕರಣ ಪಾಲಕರು ಸೇರಿದಂತೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಯುವಕರ ಪೋಷಕರಿಂದ ಪ್ರತಿಭಟನೆ

ಯುವತಿಯನ್ನು ಯಾಮಾರಿಸಿ ಲವ್ ಜಿಹಾದ್ ಖೆಡ್ಡಾಕೆ ಕೆಡವಲಾಗಿದ್ದು, ಕೂಡಲೇ ಯುವಕನನ್ನು ಬಂಧನ ಮಾಡಿ ಅಂತ ಹಿಂದೂಪರ ಸಂಘಟನೆಗಳು ಮತ್ತು ಯುವತಿಯ ಪಾಲಕರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದರು.

ಇಬ್ರಾಹಿಂ ಮತ್ತು ಸ್ನೇಹ

ಹುಬ್ಬಳ್ಳಿಯ ಕೇಶ್ವಾಪುರದ‌ ನಿವಾಸಿ ಇಬ್ರಾಹಿಂ ಮತ್ತು ಕಮರಿಪೇಟೆ ಸ್ನೇಹ ಇಬ್ಬರು ಪ್ರೀತಿಸಿ ಮದುವೆಯಾದ ಜೋಡಿ. ಇಬ್ರಾಹಿಂ ಪ್ಲಂಬರಿಂಗ್ ಕೆಲಸ ಮಾಡುತ್ತಿದ್ದರೇ, ಸ್ನೇಹ ಟೈಲರಿಂಗ್ ಕಲಿಯೋಕೆ ಐಟಿಐ ಕಾಲೇಜಿಗೆ ಹೋಗ್ತಿದ್ದಳು. ಸ್ನೇಹಳಾ ಅಣ್ಣ ಪವನ್ ಮೂಲಕ ಇಬ್ರಾಹಿಂ ಸ್ನೇಹಳಾನ್ನು ಪರಿಚಯ ಮಾಡಿಕೊಂಡಿದ್ದ.

ಅರುಣ್ ಎಂದು ಪರಿಚಯಿಸಿಕೊಂಡು ಲವ್

ತಾನು ಅರುಣ್ ಎಂದು ಹೇಳಿಕೊಂಡಿದ್ದ ಇಬ್ರಾಹಿಂ, ಪವನ್ ಮೂಲಕ ಸ್ನೇಹಾಳಿಗೆ ಹತ್ತಿರವಾಗಿದ್ದ.  ಇದಾದ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಕಳೆದ ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಈ ವರ್ಷ ಫೆಬ್ರವರಿ 11 ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಇದಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸುಳ್ಳು ದಾಖಲೆ ಸೃಷ್ಟಿಸಿ ಮದುವೆ?

ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ಮಾಡಿ ತಮ್ಮ ಮಗಳನ್ನು ಇಬ್ರಾಹಿಂ ಮೋಸದಿಂದ ಮದುವೆಯಾಗಿದ್ದಾನೆ. ಅಲ್ಲದೆ ಅವಳು ಮದುವೆಯಾದಾಗ ಅವಳು ಮೈನರ್ ಆಗಿದ್ದಳು, ದಾಖಲೆಗಳಲ್ಲಿ ಇರುವ ಮದುವೆಯ ದಿನ ಅಂದ್ರೆ ಫೆ. 11 ರಂದು ಸ್ನೇಹ ಮನೆಯಲ್ಲಿ ಇದ್ದಳು. ಮದುವೆ ಪತ್ರದಲ್ಲಿ ಸಹಿ ಸಹ ಅವಳದ್ದಲ್ಲಾ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಇಬ್ರಾಹಿಂ ಸ್ನೇಹಳನ್ನು ಮದುವೆ ಯಾಗಿದ್ದಾನೆ. ಈ ಮದುವೆಗೆ ಗದಗ ಸಬ್ ರಿಜಿಸ್ಟ್ರಾರ್ ಕುಮ್ಮಕ್ಕಿದೆ ಅಂತ ಸ್ನೇಹ ಪಾಲಕರರು ಆರೋಪಿಸಿದ್ದಾರೆ.

Bengaluru: ಚಂದ್ರು ಕೊಲೆ ಕೇಸ್, ವಿವಾದಾತ್ಮಕ ಹೇಳಿಕೆ, ಆರಗ ಜ್ಞಾನೇಂದ್ರ, ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ದೂರು

ಮಿಸ್ಸಿಂಗ್ ದೂರು ದಾಖಲಾದರೂ ಕ್ರಮವಿಲ್ಲ

ಇನ್ನೂ ಈ ಬಗ್ಗೆ ಎಪ್ರಿಲ್ 2 ರಂದು ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ಮಿಸ್ ಕಂಪ್ಲೆಂಟ್ ನ್ನು ಸ್ನೇಹಾಳ ಕುಟುಂಬಸ್ಥರು ದಾಖಲು ಮಾಡಿದ್ದಾರೆ. ಆದರೆ ಪೊಲೀಸರು ಯಾವುದೇ ತನಿಖೆ ನಡೆಸಿದೆ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ, ಸ್ನೇಹ ಕುಟುಂಬಸ್ಥರು ಜೊತೆಗೆ ಕೆಲವು ಹಿಂದೂಪರ ಸಂಘಟನೆಗಳು ಉಪನಗರ ಠಾಣೆಯೆದರು ಬೆಳಗ್ಗೆಯಿಂದ ಸಂಜೆಯ ತನಕ ಧರಣಿ ನಡೆಸಿದರು. ಧರಣಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಎಚ್ಚೆತ್ತ ಪೊಲೀಸರು ಯುವತಿ ತಾಯಿಯಿಂದ ಮತ್ತೊಂದು ದೂರು ಪಡೆದುಕೊಂಡಿದೆ.

ಇದನ್ನೂ ಓದಿ: Kolar: ಹೂಳು ತೆಗೆಯೋ ಕೆಲಸಕ್ಕೆ ಸೈ ಎಂದ್ರು 35 ಮಹಿಳೆಯರು, ಗ್ರಾಮದ ಕೆರೆಗಳಿಗೆ ಮರುಜೀವ ಕೊಟ್ರು

ಇನ್ನೂ ಸುದ್ದಿ ತಿಳಿದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿ ಪಾಲಕರ ಜೊತೆಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಮಾತನಾಡಿ ಮುತಾಲಿಕ್ ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ, ಬಿಜೆಪಿ ಅಧಿಕಾರದಲ್ಲಿದ್ದರೂ ಇದರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿಲ್ಲ. ಅವರ ಮನೆಯ ಹೆಣ್ಣು ಮಕ್ಕಳಿಗೆ ಹೀಗಾದ್ರೆ ಅವರಿಗೆ ಬುದ್ದಿ ಬರುತ್ತೆ ಎಂದಿದ್ದಾರೆ.

ಯುವತಿಯನ್ನು ಕರೆತರುವಂತೆ ಎಚ್ಚರಿಕೆ

ನಾಳೆ ಮಧ್ಯಾಹ್ನ 12 ಗಂಟೆಯ ತನಕ ಸಮಯ ನೀಡುತ್ತವೆ. ಒಂದುವೇಳೆ ಯುವಕನ ಬಂಧಿಸಿ ಯುವತಿಯನ್ನು ಕರೆತರದಿದ್ದರೆ, ಹೋರಾಟ ಹಾದಿ ಬೇರೆ ರೂಪ ಪಡೆದುಕೊಳ್ಳುತ್ತದೆ. ಮುಂದಾಗುವ ಅನಾಹುತಕ್ಕೆ ಬಿಜೆಪಿ ನಾಯಕರೇ ಕಾರಣ ಅಂತ ಕಿಡಿಕಾರಿದರು. ಒಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಎದ್ದಿರುವ ಧರ್ಮ ಯುದ್ಧಕ್ಕೆ , ಹುಬ್ಬಳ್ಳಿ ಈ ಪ್ರಕರಣ ತುಪ್ಪ ಸುರಿದಂತಾಗಿದೆ.
Published by:Divya D
First published: