ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತನ (BJP Activist) ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ (Minor Girl) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳಸ ತಾಲೂಕಿ (Kalasa) ಕುದುರೆ ಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Kudremukh Police) ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ಬಾಲಕಿಯನ್ನು 17 ವರ್ಷದ ದೀಪ್ತಿ ಎಂದು ಗುರುತಿಸಲಾಗಿದ್ದು, ಜನವರಿ 14 ರಂದು ಮಂಗಳೂರಿನ ಏಜೆ ಆಸ್ಪತ್ರೆಯಲ್ಲಿ (AJ Hospital) ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.
ಪ್ರೀತಿಸಿ ವಂಚಿನೆ ಮಾಡಿರುವ ಆರೋಪ
ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯಾಗಿದ್ದ ದೀಪ್ತಿ, ಜನವರಿ 10ರಂದು ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದ ಬಾಲಕಿ, ಪ್ರೀತಿಸಿ ವಂಚಿನೆ ಮಾಡಿರುವ ಆರೋಪವನ್ನು ಬಿಜೆಪಿ ಕಾರ್ಯಕರ್ತ ಆರೋಪಿ ಹಿತೇಶ್ (25) ಮೇಲೆ ಮಾಡಿದ್ದಾಳೆ ಎನ್ನಲಾಗಿದೆ.
ಪೊಲೀಸರಿಗೆ ಎಸ್ಪಿ ತರಾಟೆ
ಇನ್ನು, ಪೋಷಕರು ಆರೋಪಿ ವಿರುದ್ಧ ದೂರು ನೀಡಲು ಮುಂದಾದರೆ ದೂರು ದಾಖಲಿಸದೆ ಕುದುರೆ ಮುಖ ಪೊಲೀಸರು ಸತಾಯಿಸಿದ್ದರಂತೆ. ಆ ಬಳಿಕ ಪೋಷಕರ ದೂರು ಸ್ವೀಕರಿಸುವಂತೆ ಕುದುರೆಮುಖ ಪೊಲೀಸರಿಗೆ ಎಸ್ಪಿ ತರಾಟೆ ತೆಗೆದುಕೊಂಡು ಸೂಚನೆ ನೀಡಿದ ಬಳಿಕ ದೂರು ದಾಖಲಿಸಿಕೊಂಡಿದ್ದರಂತೆ. ಆದರೆ ದೂರು ಸ್ವೀಕರಿಸಿದರು ಸಹ ಇದುವರೆಗೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ಮೃತ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜರಂಗದಳ ಸಂಘಟನೆಯಲ್ಲೂ ಸಕ್ರೀಯನಾಗಿದ್ದ ಆರೋಪಿ
ಆರೋಪಿ ನಿತೇಶ್ ಬಿಜೆಪಿ ಕಾರ್ಯಕರ್ತನಾಗಿದ್ದು, ಆತನ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ಆರೋಪಿ ನಿತೇಶ್ ಬಜರಂಗದಳ ಸಂಘಟನೆಯಲ್ಲೂ ಸಕ್ರೀಯನಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: Crime News: ಸರಸಕ್ಕೆ ಅಡ್ಡಿಯಾದ ಮಗು; ಬಿಯರ್ ಬಾಟಲಿಯಿಂದ ಹೊಡೆದು 3 ವರ್ಷದ ಕಂದಮ್ಮನನ್ನೇ ಕೊಲೆಗೈದ ಮಲತಂದೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಜರಂಗದಳ ಸಂಸೆ ಘಟಕದ ಸಂಯೋಜಕನಾಗಿದ್ದ ನಿತೇಶ್ನನ್ನು ಸಂಘನೆಯಿಂದ ಆತನನ್ನು ಹೊರ ಹಾಕಿದ್ದಾರೆ. ನಿತೇಶ್ಗೂ ಬಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಳಸ ಬಜರಂಗದಳ ಪ್ರಖಂಡರು ತೀರ್ಮಾನ ಕೈಗೊಂಡಿದ್ದಾರೆ.
ಘಟನೆ ಕುರಿತಂತೆ ಮಾಹಿತಿ ನೀಡಿರುವ ಮೃತ ಬಾಲಕಿ ಸಂಬಂಧಿ, ಬಾಲಕಿ ಸಾವನ್ನಪ್ಪುವ ಮುನ್ನ ಎಲ್ಲಾ ಮಾಹಿತಿಯನ್ನು ಆಕೆಯ ಸಹೋದರಿಗೆ ತಿಳಿಸಿದ್ದಾಳೆ. ಅಲ್ಲದೇ ಡೆತ್ನೋಟ್ನಲ್ಲೂ ಆತನ ಹೆಸರನ್ನು ಬರೆದಿಟ್ಟಿದ್ದಾಳೆ. ಕಾಲೇಜು ಹೋಗುವ ವೇಳೆ ಪ್ರೀತಿ ಮಾಡಿ ಮೋಸ ಮಾಡಿದ ಅಂತ ಬಾಲಕಿ ನೋವಿನಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಂದೆ-ತಾಯಿ ಸಾಲ ಮಾಡಿ ಆಕೆಯನ್ನು ಬದುಕಿಸುವ ಪ್ರಯತ್ನ ಮಾಡಿದ್ದರು. ಆದರೆ ಮೊನ್ನೆ ರಾತ್ರಿ ಈ ರೀತಿ ಆಗಿದೆ ಎಂದು ತಿಳಿಸಿದರು.
ಬಾಲಕಿ ಪೋಷಕರು ಬಳಿ ಯಾವುದೇ ಸಾಕ್ಷಿಗಳು ಇರಲಿಲ್ಲ. ಆದರೆ ಡೆತ್ನೋಟ್ ಬರೆದ ಬಳಿಕ ಮಾಹಿತಿ ಸಿಕ್ತು. ನಿತೇಶ್ ಮನೆಗೂ ಕಳಸಕ್ಕೂ ಓಡಾಡಿಕೊಂಡಿದ್ದ ಅಷ್ಟೇ. ಆತನ ಹಿನ್ನೆಲೆ ಏನು ಅಂತ ನಮಗೆ ಗೊತ್ತಿಲ್ಲ. ಆದ್ದರಿಂದ ದೂರು ಕೊಟ್ಟಿದ್ದೇವೆ. ಆತನನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆತ ಯಾವುದೇ ಪಕ್ಷದ ಕಾರ್ಯಕರ್ತ ಆಗಲಿ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ ಎಂದು ಮನವಿ ಮಾಡಿದರು.
ಇನ್ನು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಬಾಲಕಿ ಸಾವು ಬದುಕಿನ ಹೋರಾಟ ನಡುವೆ ತನಗೆ ಆದ ನೋವನ್ನು ಪತ್ರದಲ್ಲಿ ಬರೆದಿದ್ದಾಳೆ. ಬಾಲಕಿ ಪತ್ರ ಬರೆಯುತ್ತಿರುವ ಸಂದರ್ಭದ ವಿಡಿಯೋ ಕೂಡ ಲಭ್ಯವಾಗಿದೆ. ಆಪ್ರಾಪ್ತ ಬಾಲಕಿಯ ಹಿಂದೆ ಬಿದ್ದು, ಆಕೆಯನ್ನು ಪ್ರೀತಿ ಮಾಡುವ ನಾಟಕ ಮಾಡಿ ಕೈ ಕೊಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಪೊಲೀಸರ ತನಿಖೆಯಲ್ಲಿ ಬಾಲಕಿ ಸಾವಿನ ನಿಖರ ಬೆಳಕಿಗೆ ಬರಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ