ಹಾವೇರಿ: ಅವರಿಬ್ಬರೂ ಒಂದೇ ಗ್ರಾಮದ ಮದುವೆಯಾಗದ ಹುಡುಗ ಹುಡುಗಿ. ಹೀಗಾಗಿ ಅವರಿಬ್ಬರ ನಡುವೆ ಪರಿಚಯ ಬೆಳೆದು, ಸ್ನೇಹ ಪ್ರೀತಿಯಾಗಿತ್ತು (Love). ನಿನಗೆ ನಾನು, ನನಗೆ ನೀನು ಅಂತಾ ಐದು ವರ್ಷಗಳಿಂದ ಪ್ರಣಯ ಪಕ್ಷಿಗಳಾಗಿದ್ದ ಈ ಜೋಡಿ ದೂರವಾಗಿವೆ. ಈಗ ಪ್ರೀತಿಸಿದ ಹುಡುಗ ಮೋಸ ಮಾಡಿದ್ದಾನೆ ಎಂದು ಯುವತಿ ಗಂಭೀರ ಆರೋಪ ಮಾಡಿ, ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ರವಿ ಬನ್ನಿಮಟ್ಟಿ ಮತ್ತು ಶೋಭಾ ಹಾವೇರಿ ಜಿಲ್ಲೆಯ ರಾಣೆಬೆನ್ನೂರು (Ranebennur, Haveri) ತಾಲೂಕಿನ ಒಂದೇ ಗ್ರಾಮದ ನಿವಾಸಿಗಳು. ಐದು ವರ್ಷ ಪ್ರೀತಿಸಿದ ರವಿ ಈಗ ಬೇರೆ ಮದುವೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಈಗ ನನಗೆ ನ್ಯಾಯ ಕೊಡಿಸಿ ಎಂದು ಶೋಭಾ ಕಣ್ಣೀರು ಹಾಕುತ್ತಿದ್ದಾರೆ. ರವಿ ಬನ್ನಿಮಟ್ಟಿ ಡಿಆರ್ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾನೆ.
ಕಳೆದ ಐದು ವರ್ಷಗಳಿಂದ ಪ್ರೀತಿಸಿ, ನನ್ನ ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ. ಅಲ್ಲದೇ ನಾಲ್ಕು ಬಾರಿ ಗರ್ಭಪಾತ ಮಾಡಿಸಿದ್ದಾನೆ. ನನಗೆ ನ್ಯಾಯ ಬೇಕು. ಅವನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ಶೋಭಾ ಹೇಳುತ್ತಿದ್ದಾರೆ. ಇನ್ನು ರವಿ ಜೊತೆ ನಡೆಸಿರುವ ವಾಟ್ಸಪ್ ಸಂಭಾಷಣೆ, ಆಡಿಯೋ ಕಾಲ್ ಮಾಹಿತಿಯನ್ನು ಸಹ ಶೋಭಾ ನೀಡಿದ್ದಾರೆ.
ಮದುವೆಗೆ ಒಪ್ಪದ ರವಿ ಮತ್ತು ಆತನ ಕುಟುಂಬ
ಕಳೆದ ಒಂದು ತಿಂಗಳಿನಿಂದ ಯುವತಿ ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರ ಸೇರಿದಂತೆ ಗ್ರಾಮಸ್ಥರ ಜೊತೆಗೆ ರಾಜಿ ಸಂಧಾನ ನಡೆಸಿ ಮದುವೆ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರೆ ರವಿ ಬನ್ನಿಮಟ್ಟಿ ಮನೆಯವರು ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.
ರವಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಆತನ ಪೋಷಕರು ಹೇಳುತ್ತಿದ್ದಾರೆ. ಇತ್ತ ರವಿ ಸಹ ಮನೆಯವರ ಮಾತಿನಂತೆ ಬೇರೆ ಮದುವೆಯಾಗಲು ಸಿದ್ದನಾಗಿದ್ದಾನೆ.
ನಮ್ಮದು ಜಸ್ಟ್ ಫ್ರೆಂಡ್ಶಿಪ್ ಎಂದ ರವಿ
ಯುವತಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರವಿ, ನಮ್ಮಿಬ್ಬರದ್ದು ಜಸ್ಟ್ ಫ್ರೆಂಡ್ಶಿಪ್. ಇದೇ ಸ್ನೇಹದಲ್ಲಿ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೇವೆ. ನಾನು ಅವರ ಮನೆಗೆ, ಅವರು ನಮ್ಮ ಮನೆಗೆ ಬಂದು ಹೋಗಿದ್ದೇವೆ. ಈಗ ಅದೇ ಫೋಟೋ ಮತ್ತು ನಮ್ಮ ನಡುವೆ ನಡೆದ ಸಂಭಾಷಣೆಯ ಆಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾಳೆ ಎಂದು ರವಿ ಆರೋಪಿಸಿದ್ದಾನೆ.
ಇದುವರೆಗೂ ಶೋಭಾ ಯಾವುದೇ ದೂರು ನೀಡಿಲ್ಲ. ಒಂದು ವೇಳೆ ದೂರು ದಾಖಲಿಸಿದ್ರೆ, ಪ್ರಕರಣವನ್ನು ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ ಎಂದು ರವಿ ಹೇಳಿದ್ದಾನೆ.
ಯಾರಿಗೆ ಮೋಸ?
ಕಳೆದ ಐದು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸಿ, ಪ್ರೇಮ ಪ್ರಣಯ ಪಕ್ಷಿಗಳಂತೆ ಹಾರಾಡಿದ್ದ ಜೋಡಿಗಳು ಇದೀಗ ದೂರವಾಗಿವೆ. ನಾನು ತಪ್ಪು ಮಾಡಿಲ್ಲಾ ಅಂತಾ ಯುವಕ, ಅವನದ್ದೇ ತಪ್ಪು ಅಂತಾ ಯುವತಿ. ಹಾಗಾದ್ರೆ ಇಲ್ಲಿ ಯಾರಿಗೆ ಮೋಸ ಆಗಿದೆ ಎಂಬ ಸತ್ಯ ಹೊರಬರಬೇಕಿದೆ.
ಹಾವೇರಿ ಶಾಸಕ ನೆಹರೂ ಓಲೇಕಾರ್‌ಗೆ 2 ವರ್ಷ ಜೈಲು
ಹಾವೇರಿ: ಮೀಸಲು ಕ್ಷೇತ್ರದ (Havery) ಬಿಜೆಪಿ (BJP) ಶಾಸಕ ಶಾಸಕ ನೆಹರೂ ಓಲೇಕಾರ್ (Nehru Olekar) ಹಾಗೂ ಇಬ್ಬರು ಪುತ್ರ ಸೇರಿ ಐವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ (Special Courts for MP/MLA)ಎರಡು ವರ್ಷ ಜೈಲು, ಎರಡು ಸಾವಿರ ದಂಡ ವಿಧಿಸಿ ಆದೇಶ ಪ್ರಕಟಿಸಿದೆ.
2012ರಲ್ಲಿ ನಗರಸಭೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದ ಪ್ರಕರಣದಲ್ಲಿ ನೆಹರೂ ಓಲೇಕಾರ ಮಕ್ಕಳು ಹಾಗೂ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ. ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ 35 ಲಕ್ಷ ರೂಪಾಯಿ ಮೋಸ ಮಾಡಿದ್ದ ಎಂಟು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿತ್ತು.
ನ್ಯಾಯಾಲಯದ ವಿಚಾರಣೆ ವೇಳೆ ಸುಳ್ಳು ಕ್ಲಾಸ್ ಓನ್ ಗುತ್ತಿಗೆದಾರ ಪ್ರಮಾಣಪತ್ರ ಪಡೆದು ಕಾಮಗಾರಿ ಮಾಡಿರುವುದು ಸಾಬೀತು ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ