ಕೊರೋನಾ ಹಿನ್ನಲೆ ಸಾಂಪ್ರದಾಯಿಕ ದಸಾರದಲ್ಲಿ ಭಾರೀ ಬದಲಾವಣೆ; ವಜ್ರಮುಷ್ಠಿ ಕಾಳಕ್ಕೆ ಈ ಬಾರಿ ಬ್ರೇಕ್​

ಈ ಬಾರಿ ವಜ್ರಮುಷ್ಠಿ ಕಾಳಗವನ್ನು ಕೈಬಿಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಮೈಸೂರು ರಾಜವಂಶಸ್ಥರು ಈ ನಿರ್ಧಾರ ಮಾಡಿದ್ದಾರೆ.

ಮೈಸೂರಿನ ರತ್ನ ಖಚಿತ ಸಿಂಹಾಸನ.

ಮೈಸೂರಿನ ರತ್ನ ಖಚಿತ ಸಿಂಹಾಸನ.

  • Share this:
ಮೈಸೂರು (ಅ.13): ಕೊರೋನಾ ಪರಿಣಾಮದಿಂದಾಗಿ ವಿಶ್ವವಿಖ್ಯಾತ ಅದ್ಧೂರಿ ದಸರಾ ಆಚರಣೆಯಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಯಾಗಿದೆ. ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ಮುಂದಾಗಿದ್ದು, ಈ ನಡುವೆ ಅರಮನೆಯ ಸಾಂಪ್ರದಾಯಿಕ ದಸರಾ ಆಚರಣೆಯಲ್ಲಿಯೂ ಸಾಕಷ್ಟು ಬದಲಾವಣೆ ಮಾಡಲಾಗಿದೆ.  ದಸರಾ ಉತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಸಿದ್ಧತೆ ಆರಂಭ ಶುರವಾಗಿದೆ. ಅತಿ ಕಡಿಮೆ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ, ಕೋವಿಡ್​ ಹಿನ್ನಲೆ ಅನೇಕ ಸಂಪ್ರದಾಯಿಕ ಕಾರ್ಯಕ್ರಮಗಳನ್ನು ಕೈ ಬಿಡಲು ರಾಜವಂಶಸ್ಥರು ಮುಂದಾಗಿದ್ದಾರೆ.  ಶರನ್ನಾವರಾತ್ರಿಯನ್ನು  ವಿಜೃಂಭಣೆಯಿಂದ ಆಚರಿಸುವ ಬದಲು ಸರಳವಾಗಿ ಶಾಸ್ತ್ರೋಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ. 

ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಖಾಸಗಿ ದರ್ಬಾರ್​ ಆಗಿದೆ. ಈ ಬಾರಿ ಈ ಖಾಸಗಿ ದರ್ಬಾರಿಗೆ 60ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ. ಜೊತೆಗೆ  ದರ್ಬಾರ್ ನಲ್ಲಿ ಯಾರು ಹಸ್ತಾಲಾಘವ ಮಾಡದಂತೆ ಸೂಚನೆ ನೀಡಲಾಗಿದೆ. ಜೊತೆಗೆ ದರ್ಬಾರ್ ಭಕ್ಷಿ‌ಗೂ ಅವಕಾಶವಿಲ್ಲ ಎಂದು ರಾಜಮಾತೆ ಪ್ರಮೋದಾದೇವಿ ತಿಳಿಸಿದ್ದಾರೆ.  ಸಾರ್ವಜನಿಕರ ಆರೋಗ್ಯದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. , ದರ್ಬಾರ್‌ಗೆ ಆಯ್ದ ಆಹ್ವಾನಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ. 9 ದಿನಗಳ ದಸರಾದಲ್ಲಿ ಭಾಗವಹಿಸುವರಿಗೆ ಕೊರೋನಾ ಟೆಸ್ಟ್ ಮಾಡಿಸಲು ಚಿಂತನೆ ನಡೆಸಿದ್ದು. ಈ ಬಾರಿಯ ಖಾಸಗಿ ದರ್ಬಾರ್‌ನಲ್ಲೂ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಇತ್ತ ನವರಾತ್ರಿ ಉತ್ಸವಕ್ಕೆ ಸಜ್ಜಾದ ಚಾಮುಂಡಿಬೆಟ್ಟದ ಅರ್ಚಕರು, ಚಾಮುಂಡಿಬೆಟ್ಟದಲ್ಲಿ‌ ಉತ್ಸವಮೂರ್ತಿಯ ಶುಚಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇಂದಿನಿಂದ ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಶುಚಿ ಕಾರ್ಯ ಆರಂಭಿಸಿದ್ದು, ನವರಾತ್ರಿಯಲ್ಲಿ ಉತ್ಸವಮೂರ್ತಿಗೆ ವಿಶೇಷ ಪೂಜೆ ನಡೆಯಲಿದೆ

ಜಂಬೂಸವಾರಿ ದಿನ ಅರಮನೆಗೆ ತಲುಪಲಿರುವ ಪಂಚಲೋಹದಲ್ಲಿ ತಯಾರಾದ ವಿಶೇಷ ಉತ್ಸವ ಮೂರ್ತಿಯನ್ನ ನುರಿತ ಸ್ವಯಂ ಸೇವಕರು ಉತ್ಸವ ಮೂರ್ತಿ ಜೊತೆ  ಬೆಳ್ಳಿ ಪದಾರ್ಥಗಳ ಸ್ವಚ್ಛಗೊಳಿಸಿದರು.

ಇದನ್ನು ಓದಿ: ದಸರಾ ಉದ್ಘಾಟಕರಾದ ಡಾ.ಮಂಜುನಾಥ್​ರಿಗೆ​ ಅಧಿಕೃತ ಆಮಂತ್ರಣ ನೀಡಿದ ಸಿಎಂ

ಇವೆಲ್ಲದರ ಜೊತೆ ದಸರಾ 2020 ರಲ್ಲಿ  ವಜ್ರಮುಷ್ಠಿ ಕಾಳಗವನ್ನು ಕೈಬಿಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಮೈಸೂರು ರಾಜವಂಶಸ್ಥರು ಈ ನಿರ್ಧಾರ ಮಾಡಿದ್ದಾರೆ. ಜಟ್ಟಿಕಾಳಗ ನಡೆಸುತ್ತಿದ್ದ ನಾಲ್ಕು ಕುಟುಂಬ‌ದೊಂದಿಗೆ ಮಾತುಕತೆ ನಡೆಸಿರುವ ಪ್ರಮೋದಾದೇವಿ ಒಡೆಯರ್, ಕೊರೊನಾ‌ ಹಿನ್ನೆಲೆಯಲ್ಲಿ ಈ ಬಾರಿ ವಜ್ರಮುಷ್ಠಿ ಕಾಳಗ ಬೇಡ ಎಂದು ನಿರ್ಧರಿಸಿದ್ದಾರೆ. ರಾಜವಂಶಸ್ಥರ ನಿರ್ಧಾರಕ್ಕೆ ಸಮ್ಮತಿಸಿರುವ ಜಟ್ಟಿ‌ ಕುಟಿಂಬಸ್ಥರು ಮೊಟ್ಟ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿದೆ.

ದಸರಾ ಉದ್ಘಾಟನೆಗೆ ನಾಲ್ಕೇ ದಿನ ಬಾಕಿ ಇರುವ ಹಿನ್ನಲೆಯಲ್ಲಿ ಅರಮನೆ ಅಂಗಳದಲ್ಲಿ  ಆನೆಗಳ ತಾಲೀಮು ಮುಂದುವರೆದಿದೆ. ಪರ್ಯಾಯ ಆನೆಗಳಿಗೆ ಮರಳು‌ ಮೂಟೆ ಹೊರಿಸಿ ತಾಲೀಮು ನೀಡಲಾಯಿತು. ಮರಳು ಮೂಟೆ ಹೊತ್ತು ಸಾಗಿದ ದಸರಾ ಆನೆಯಾದ ಗೋಪಿ ಪರ್ಯಾಯ ಅಂಬಾರಿ ಆನೆಯಾಗಿ ತಾಲೀಮು ನಡೆಸಿತು. ನಾಳೆಯಿಂದ ಆನೆಗಳಿಗೆ ಮರದ ಅಂಬಾರಿ ಹೊರಿಸೋ ತಾಲೀಮು ಆರಂಭವಾಗಲಿದೆ, ಕ್ಯಾಪ್ಟನ್ ಅಭಿಮನ್ಯು ಸೇರಿ ಗೋಪಿ, ವಿಕ್ರಮನಿಗೂ ಮರದ‌ ಅಂಬಾರಿ ಹೊರಿಸಿ ತಾಲೀಮು ನೀಡಲಾಗುವುದು ಎಂದು ಪಶುವೈದ್ಯ ಡಾ.ನಾಗರಾಜ್‌ ಮಾಹಿತಿ ನೀಡಿದ್ದಾರೆ.
Published by:Seema R
First published: