New Year: ರಾಜ್ಯದಲ್ಲಿ ನೋ ನ್ಯೂ ಇಯರ್​ ಪಾರ್ಟಿ.. ಸೆಲೆಬ್ರೇಷನ್​ಗೆ ಗೋವಾಗೆ ಹಾರಿದ ಕರುನಾಡ ಮಂದಿ!

ಪ್ರತಿವರ್ಷ ಗೋವಾದಲ್ಲಿ ಹೊಸ ವರ್ಷವನ್ನು ಅದ್ಭುತವಾಗಿ ಬರಮಾಡಿಕೊಳ್ಳಲಾಗುತ್ತೆ. ದೇಶ, ವಿದೇಶಗಳಿಂದ ಗೋವಾಗೆ ಬಂದು ಜನ ಸೆಲೆಬ್ರೇಷನ್​ ಮಾಡುತ್ತಾರೆ. ನಮ್ಮ ರಾಜ್ಯದವರು ಪ್ರತಿವರ್ಷ ಹೊಸ ವರ್ಷಕ್ಕೆ ಗೋವಾಗೆ ತೆರಳುತ್ತಾರೆ. ಆದರೆ, ಈ ಬಾರಿ ಗೋವಾಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ(Corona) ಬರುವ ಮೊದಲು ಹೇಗೆ ಎಲ್ಲರೂ ರಾಜ್ಯದಲ್ಲಿ ಹೊಸ ವರ್ಷ ಆಚರಿಸುತ್ತಿದ್ದರು ಎಂದು ನೀವೇ ನೆನಪು ಮಾಡಿಕೊಳ್ಳಿ. ಅದೇನು ಸಂಭ್ರಮ, ಅದೇನು ಮಜಾ.. ಅಬ್ಬಾ.. ಅದನ್ನು ನೆನಪಿಸಿಕೊಂಡು ಖುಷಿ ಪಡಬೇಕು ಅಷ್ಟೇ. ಅದರಲ್ಲೂ ಬೆಂಗಳೂರ(Bengaluru)ಲ್ಲಿ ನ್ಯೂ ಇಯರ್​ ಸೆಲೆಬ್ರೇಷನ್​(New Year Celebration) ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ, ಕೊರೋನಾ ವಕ್ಕರಿಸಿದ ಮೇಲೆ ಇದಕ್ಕೆ ಅವಕಾಶ ಇಲ್ಲ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ವರ್ಷ ವೇಳೆ ಸೋಂಕು ಹರಡುವ ಭೀತಿ ಹೆಚ್ಚಾಗಿತ್ತು.ರಾಜ್ಯ ಸರ್ಕಾರ 10 ದಿನಗಳ ಕಾಲ ನೈಟ್‌ ಕರ್ಫ್ಯೂ (Nighr Cerfew) ಜಾರಿಗೊಳಿಸಿದೆ. ಹೊಸ ವರ್ಷವನ್ನು ಸೆಲೆಬ್ರೇಟ್​ ಮಾಡಲು ಪ್ಲ್ಯಾನ್​ ಮಾಡಿಕೊಂಡಿದ್ದವರಿಗೆ ಇದು ಶಾಕ್​ ನೀಡಿತ್ತು. ಒಂದು ತಿಂಗಳ ಮುಂಚೆಯೇ ಹಲವು ಮಂದಿ ನ್ಯೂ ಇಯರ್​ ಸೆಲೆಬ್ರೇಷನ್​ ಮಾಡಲು ಪ್ಲ್ಯಾನ್(Plan)​ ಮಾಡಿಕೊಂಡಿದ್ದರು. ಆದರೆ, ರಾಜ್ಯದಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ, ಈ ನಿರ್ಧಾರದಿಂದ ಕರುನಾಡ ಮಂದಿಗೆ ಬೇಸರ ಆಗಿಲ್ಲ. ಬದಲಾಗಿ ಖುಷಿಯಾಗಿದೆ. ನ್ಯೂ ಇಯರ್​ ಸೆಲೆಬ್ರೇಷನ್​ ಮಾಡಲು ಮತ್ತೊಂದು ಮಾರ್ಗ ಕಂಡು ಹಿಡಿದಿದ್ದರು. ನಮ್ಮ ರಾಜ್ಯದಲ್ಲಿ ಮಾತ್ರ ಟಫ್​ ರೂಲ್ಸ್​ ಇದೆ. ಕೆಲ ರಾಜ್ಯಗಳಲ್ಲಿ ಯಾವುದೇ ನಿಯಮಗಳಿಲ್ಲ. ಹೀಗಾಗಿ ಕರುನಾಡ ಮಂದಿ ನ್ಯೂ ಇಯರ್​ ಸೆಲೆಬ್ರೇಷನ್​ ಮಾಡಲು ಗೋವಾ(Goa)ಗೆ ಹಾರಿದ್ದಾರೆ. 

ಕರ್ನಾಟಕ ಬಿಟ್ಟು ಗೋವಾಗೆ ಹಾರಿದ ಕರುನಾಡ ಮಂದಿ!

ಪ್ರತಿವರ್ಷ ಗೋವಾದಲ್ಲಿ ಹೊಸ ವರ್ಷವನ್ನು ಅದ್ಭುತವಾಗಿ ಬರಮಾಡಿಕೊಳ್ಳಲಾಗುತ್ತೆ. ದೇಶ, ವಿದೇಶಗಳಿಂದ ಗೋವಾಗೆ ಬಂದು ಜನ ಸೆಲೆಬ್ರೇಷನ್​ ಮಾಡುತ್ತಾರೆ. ನಮ್ಮ ರಾಜ್ಯದವರು ಪ್ರತಿವರ್ಷ ಹೊಸ ವರ್ಷಕ್ಕೆ ಗೋವಾಗೆ ತೆರಳುತ್ತಾರೆ. ಆದರೆ, ಈ ಬಾರಿ ಗೋವಾಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಹೌದು, ರಾಜ್ಯದಲ್ಲಿ ಯಾವಾಗ ನೈಟ್​ ಕರ್ಫ್ಯೂ ಅಂತ ತಿಳಿದ ಕೂಡಲೇ ಜನ ಪ್ಲ್ಯಾನ್​ ಚೇಂಜ್​ ಮಾಡಿಕೊಂಡಿದ್ದರು. ರಾಜ್ಯ ಬಿಟ್ಟು ಗೋವಾಗೆ ಹೋಗಿ ಸೆಲೆಬ್ರೇಷನ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊನ್ನೆಯಿಂದಲೂ ಇಲ್ಲಿಂದ ಗೋವಾಗೆ ತೆರಳಿದವರ ಸಂಖ್ಯೆ ಹೆಚ್ಚಿದೆ. ರೈಲು, ವಿಮಾನ, ಬಸ್​ ಎಲ್ಲವೂ ಫುಲ್​ ಆಗಿತ್ತು. ಹೆಚ್ಚಿನ ಬಸ್​, ರೈಲು ಸೇವೆಯನ್ನು ಒದಗಿಸಲಾಗಿತ್ತು.

ಇದನ್ನು ಓದಿ : ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧ; ಜನಸಂದಣಿ, ಡಿಜೆಗೆ ಅವಕಾಶ ಇಲ್ಲ

ಗೋವಾದಲ್ಲಿ ಹೊಸ ವರ್ಷ ಪಾರ್ಟಿಗೆ ಅವಕಾಶ!

ಓಮಿಕ್ರಾನ್ ಹರಡುವಿಕೆ ಭೀತಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ವಿವಿಧ ರಾಜ್ಯ ಸರ್ಕಾರಗಳು ನಿಷೇಧ ಹೇರಿವೆ, ನೈಟ್ ಕರ್ಫ್ಯೂ ಜಾರಿಗೊಳಿಸಿವೆ. ಆದರೆ ಗೋವಾ ರಾಜ್ಯ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿತ್ತು."ಡಿಸೆಂಬರ್ 31ರಂದು ರಾಜ್ಯದಲ್ಲಿ ಪಾರ್ಟಿ, ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಆಗಮಿಸುವ ಅತಿಥಿಗಳು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಅಥವ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು" ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದರು.

ಇದನ್ನು ಓದಿ: ರಾಜ್ಯದ ಯಾವ ಊರಲ್ಲಿ ಇವತ್ತು ರಾತ್ರಿ ಪಾರ್ಟಿ ಮಾಡೋಕೆ ಪರ್ಮಿಶನ್? ಎಷ್ಟು ಗಂಟೆಗೆ ರೆಸ್ಟೊರೆಂಟ್-ಬೀಚ್ ಕ್ಲೋಸ್? ಫುಲ್ ಡೀಟೈಲ್ಸ್ ಇಲ್ಲಿದೆ

ಗೋವಾಗೆ ತೆರಳುವವರ ಸಂಖ್ಯೆ ಹೆಚ್ಚಳ!

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ ಹೇರಿವೆ. ನೈಟ್ ಕರ್ಫ್ಯೂ ಸೇರಿದಂತೆ ಹಲವಾರು ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ. ಇಂತಹ ಸಂದರ್ಭದಲ್ಲಿಯೇ ಗೋವಾ ರಾಜ್ಯ ಪಾರ್ಟಿ, ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಮೂಲಕ ಪ್ರವಾಸಿಗರಿಗೆ ಖುಷಿ ಕೊಟ್ಟಿತ್ತು. ಹೀಗಾಗಿ ಕರ್ನಾಟಕದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಗೋವಾಗೆ ತೆರಳಿದ್ದಾರೆ. ಹೊಸ ವರ್ಷ ಆಚರಣೆ ಮಾಡಲೇಬೇಕು ಎಂದು ನಿರ್ಧರಿಸಿ ಗೋವಾಗೆ ತೆರಳಿದ್ದಾರೆ.
Published by:Vasudeva M
First published: