ಪುತ್ರ ವಾತ್ಸಲ್ಯಕ್ಕೆ ಬಚ್ಚೇಗೌಡರು ನನ್ನನ್ನು ಸೋಲಿಸಿದರು ; ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​​​​​ ವಾಗ್ದಾಳಿ

ಬಚ್ಚೇಗೌಡರು ಬಿಜೆಪಿ ಪಕ್ಷದಿಂದ ಶಾಸಕ, ಸಚಿವ ಸಂಸದರಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಮಗನನ್ನು ಬೆಂಬಲಿಸಿ ಪಕ್ಷ ಮತ್ತು ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನಗೆ ದ್ರೋಹವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

G Hareeshkumar | news18-kannada
Updated:December 9, 2019, 6:59 PM IST
ಪುತ್ರ ವಾತ್ಸಲ್ಯಕ್ಕೆ ಬಚ್ಚೇಗೌಡರು ನನ್ನನ್ನು ಸೋಲಿಸಿದರು ; ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​​​​​ ವಾಗ್ದಾಳಿ
ಬಿಎನ್ ಬಚ್ಚೇಗೌಡ, ಎಂಟಿಬಿ ನಾಗರಾಜ್.
  • Share this:
ಬೆಂಗಳೂರು(ಡಿ.09) : ಪುತ್ರ ವಾತ್ಸಲ್ಯಕ್ಕೆ ನನ್ನನ್ನು ಸಂಸದ ಬಿ ಎನ್ ಬಚ್ಚೇಗೌಡರು ಸೋಲಿಸಿದರು. ಈ ಬಗ್ಗೆ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪಕ್ಷದ ನಾಯಕರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗರುಡಚಾರ್ ಪಾಳ್ಯದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸೋಲಿಗೆ ಬಿ ಎನ್ ಬಚ್ಚೇಗೌಡರೇ ನೇರ ಕಾರಣ. ಬಚ್ಚೇಗೌಡರು ಬಿಜೆಪಿ ಪಕ್ಷದಿಂದ ಶಾಸಕ, ಸಚಿವ, ಸಂಸದರಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಮಗನನ್ನು ಬೆಂಬಲಿಸಿ ಪಕ್ಷ ಮತ್ತು ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನಗೆ ದ್ರೋಹ ವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಲಿನ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೆನೆ. ಸ್ಥಾನಮಾನ ಕೊಡುವ ಬಗ್ಗೆ ಇನ್ನೂ ಭರವಸೆ ನೀಡಿಲ್ಲ. ಬಿಜೆಪಿ ಪಕ್ಷದ ನಾಯಕರುಗಳ  ಮುಂದಿನ ತಿರ್ಮಾನದ ಗಮನಿಸಿ ಮುಂದಿನ ನಡೆಯನ್ನು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ : ಸೋಲಿನಿಂದ ಕಂಗೆಟ್ಟ ಎಂಟಿಬಿ ನಾಗರಾಜ್​ ; ಸಿಎಂ ಬಿಎಸ್​ವೈರಿಂದ ಧೈರ್ಯ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪು ಅಂತಿಮ- ಹೊಸಕೋಟೆ ಕ್ಷೇತ್ರದ ಮತದಾರರ ತೀರ್ಪನ್ನು ಗೌರವಿಸುತ್ತೆನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಬಿಜೆಪಿ ಪಕ್ಷ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ನನ್ನ ಮೇಲೆ ನಂಬಿಕೆಯಿಟ್ಟು 71 ಸಾವಿರ ಮತ ನೀಡಿದ ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಇತ್ತ ಎಂಟಿಬಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಸದ ಬಿ ಎನ್​​​ ಬಚ್ಚೇಗೌಡ,  ನಾನು ಚುನಾವಣೆಯಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಶರತ್ ಗೆ ಬೆಂಬಲ ನೀಡಿಲ್ಲ. ಎರಡು ಲಕ್ಷ ಮತದಾರನಿಗೆ ನಾನು ಹೇಗೆ ಪರೋಕ್ಷವಾಗಿ ಮಾತನಾಡಲಿ. ಎಲ್ಲೂ ಪಾಂಪ್ಲೇಟ್ ಮಾಡಿ ಹಂಚಿಲ್ಲ. ಆದರೆ, ಸೋಲಿನ ನಂತರ ಎಂಟಿಬಿ ನಡೆದುಕೊಂಡ ವರ್ತನೆ ಸರಿ ಇಲ್ಲ. 1200 ಕೋಟಿ ಹಣ ಇದೆ ಅಂತ ಅವರು ಅಹಂ ತೋರಿಸಿದ್ರು. ಅಲ್ಲದೆ, ಸಿದ್ದರಾಮಯ್ಯ ಅವರಿಗೆ ಎಂಟಿಬಿ ನಾಗರಾಜ್ ಮೇಲೆ ಕೋಪ ಇತ್ತು. ಹೀಗಾಗಿ ಕುರುಬರ ಓಟುಗಳು ಇಬ್ಬಾಗ ಆಗಿದೆ. ಇದೇ ಕಾರಣಕ್ಕೆ ಎಂಟಿಬಿ ಸೋಲನ್ನಪ್ಪಿದ್ದಾರೆ" ಎಂದು ಬಚ್ಚೇಗೌಡ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ಉಪ ಚುನಾವಣೆಯಲ್ಲಿ ಸೋತವರಿಗೆ ಬಿಜೆಪಿಯಿಂದ ಬೇರೆ ದಾರಿ; ಎಂಟಿಬಿಗೆ ಪಕ್ಷ ಸಂಘಟನೆ ಜವಾಬ್ದಾರಿ?ಶರತ್ ಬಚ್ಚೇಗೌಡ ಹೊಸಕೋಟೆ ಕಣ ಪ್ರವೇಶಿಸಿದ ದಿನದಿಂದ ಎಂಟಿಬಿ ನಾಗರಾಜ್ ಬಿಜೆಪಿ ರಾಜ್ಯ ನಾಯಕರಿಗೆ ಕರೆ ಮಾಡಿ ಶರತ್ ಬಚ್ಚೇಗೌಡ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಒತ್ತಡ ಹೇರಿದ್ದರು. ಆದರೆ, ಯಾರ ಒತ್ತಡಕ್ಕೂ ಮಣಿಯದ ಶರತ್ ಬಚ್ಚೇಗೌಡ ಕೊನೆಗೂ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

 
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ