ಬೆಳಗಾವಿಯಲ್ಲಿ ಬೆಂಕಿಪೊಟ್ಟಣ ಕೇಳಿದ್ದಕ್ಕೆ ಲಾರಿ ಕ್ಲೀನರ್​ ಬರ್ಬರ ಕೊಲೆ

ಮೂರು ಜನ ಸೇರಿ ಮಹಮ್ಮದ ಪ್ರಾಣ ಹೋಗುವಂತೆ ಹೊಡಿದ್ದಾರೆ. ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಮೃತನ ಶವದ ಬಳಿಯಲ್ಲಿಯೇ ಮದ್ಯದ ಅಮಲಿನಲ್ಲಿ ಮೂರು ಜನ ರಾತ್ರಿ ಇಡೀ ಕಳೆದಿದ್ದಾರೆ. ಬೆಳಗ್ಗೆ ನೋಡಿದ್ರೆ ಮಹಮ್ಮದ ಮೃತಪಟ್ಟಿರೋದು ಖಚಿತವಾಗಿದೆ. ಇದರಿಂದ ಗಾಬರಿಯಾದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.

news18-kannada
Updated:January 15, 2020, 8:01 PM IST
ಬೆಳಗಾವಿಯಲ್ಲಿ ಬೆಂಕಿಪೊಟ್ಟಣ ಕೇಳಿದ್ದಕ್ಕೆ ಲಾರಿ ಕ್ಲೀನರ್​ ಬರ್ಬರ ಕೊಲೆ
ಪ್ರಾತಿನಿಧಿಕ ಚಿತ್ರ
  • Share this:
ಬೆಳಗಾವಿ(15) : ಸಿಗರೇಟ್ ಹಚ್ಚಲು  ಬೆಂಕಿ ಪೊಟ್ಟಣ ಕೇಳಿದ ಲಾರಿ ಕ್ಲೀನರ್ ಓರ್ವನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಬಿ. ಎಸ್ ಯಡಿಯೂರಪ್ಪ ಮಾರ್ಗದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಇಂದು ಪ್ರಕರಣ ಬಯಲಾಗಿದೆ. ಓರ್ವ ಆರೋಪಿಗೆ ಪೊಲೀಸ್ ಠಾಣೆಗೆ ಹಾಜರ ಆಗಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.

ಚಿತ್ರದುರ್ಗ ಮೂಲದ ಮಹಮ್ಮದ ಶಫೀವುಲ್ಲಾ ಕೊಲೆಯಾದ ದುರ್ದೈವಿ. ನಿನ್ನೆ ತೆಂಗಿನ ಕಾಯಿಯ ಲಾರಿಯಲ್ಲಿ ಚಿತ್ರದುರ್ಗದಿಂದ ಬೆಳಗಾವಿಯ ಮಹಮ್ಮದ್ ಆಗಮಿಸಿದ್ದನು. ಈ ವೇಳೆಯಲ್ಲಿ ಲಾರಿ ಚಾಲಕ ಇತನಿಗೆ ಊಟ ಮಾಡಿ ಬರುವಂತೆ ಹೇಳಿ ಹಣ ಕೊಟ್ಟಿದ್ದ. ಅಲ್ಲಿಯೇ ಸ್ವಲ್ಪವೇ ದೂರದಲ್ಲಿ ಇದ್ದ ಮಹಾರಾಜ್ ಬಾರ್ ಬಳಿ ಹೋಗಿದ್ದ ಮಹಮ್ಮದ್ ಮದ್ಯ ಪಾರ್ಸಲ್ ತೆಗೆದುಕೊಂಡಿದ್ದನು. ನಂತರ ಹೊರ ಬಂದಾಗ ಅಲ್ಲಿ ಮೂರು ಜನ ಸಿಗರೇಟ್ ಸೆದುತ್ತ ನಿಂತಿದ್ದರು.

ಈ ಪೈಕಿ ಓರ್ವನ ಬಳಿ ಬೆಂಕಿಪೊಟ್ಟಣ >ಕೇಳಿದ್ದಾನೆ. ಅಷ್ಟಕ್ಕೆ ಸಿಟ್ಟಾದ ವ್ಯಕ್ತಿ ನನ್ನನೇನು ಸಪ್ಲೆಯರ್ ಅಂದುಕೊಂಡಿದ್ದಾ ಎಂದು ಜಗಳಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಬಾರ್ ನಿಂದ ಸ್ವಲ್ಪವೇ ದೂರದಲ್ಲಿ ಇರೋ ಭತ್ತದ ಗದ್ದೆಯಲ್ಲಿ ಜಳಗವಾಡಿದ್ದ ರಾಜು ಲೋಕುರ್ ಹಾಗೂ ಸ್ನೇಹಿತರು ಮದ್ಯಪಾನ ಮಾಡುತ್ತ ಕುಳುತಿದ್ದರು. ಈ ವೇಳೆಯಲ್ಲಿ ಮಹಮ್ಮದ ಸಹ ಅದೇ ಗದ್ದೆಗೆ ಹೋಗಿದ್ದು ಸ್ವಲ್ಪವೇ ದೂರದಲ್ಲಿ ಕುಳಿತು ಮದ್ಯಪಾನ ಮುಂದಾಗಿದ್ದಾನೆ. ಕುಡಿದ ಅಮಲಿನಲ್ಲಿ ಇದ್ದು ರಾಜು ಲೋಕುರ್ ಹಾಗೂ ಇಬ್ಬರು ಮತ್ತೆ ಮಹಮ್ಮದ್ ಜತೆಗೆ ಜಗಳಕ್ಕೆ ಇಳಿದಿದ್ದಾರೆ.  ಮಹಮ್ಮದ ತಪ್ಪಿಸಿಕೊಂಡು ಹೋಗುವ ಯತ್ನ ಮಾಡಿದರು.

ಪ್ರಯೋಜವಾಗಿಲ್ಲ. ಮೂರು ಜನ ಸೇರಿ ಮಹಮ್ಮದ ಪ್ರಾಣ ಹೋಗುವಂತೆ ಹೊಡಿದ್ದಾರೆ. ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಮೃತನ ಶವದ ಬಳಿಯಲ್ಲಿಯೇ ಮದ್ಯದ ಅಮಲಿನಲ್ಲಿ ಮೂರು ಜನ ರಾತ್ರಿ ಇಡೀ ಕಳೆದಿದ್ದಾರೆ. ಬೆಳಗ್ಗೆ ನೋಡಿದ್ರೆ ಮಹಮ್ಮದ ಮೃತಪಟ್ಟಿರೋದು ಖಚಿತವಾಗಿದೆ. ಇದರಿಂದ ಗಾಬರಿಯಾದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ :  ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ - ಕಣ್ಣೀರಲ್ಲೇ ಹಬ್ಬ ಆಚರಿಸುತ್ತಿರುವ ಸಂತ್ರಸ್ತರು

ಆರೋಪಿ ರಾಜು ಲೋಕುರ ಶಹಾಪುರ ಪೊಲೀಸ್ ಠಾಣೆಗೆ ಹಾಜರ್ ಆಗಿ ಘಟನೆ ಬಗ್ಗೆ ತಿಳಿಸಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಇನ್ನೂ ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ಇನ್ನಿಬ್ಬರಿಗಾಗಿ ಶೋಧ ಆರಂಭಿಸಿದ್ದಾರೆ. ಮಹಮ್ಮದ್ ಶವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿತ್ರದುರ್ಗದಿಂದ ಪೊಷಕರು ಆಗಮಿಸಿದ ಬಳಿಕ ಶವ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ.
First published: January 15, 2020, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading