ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ; ಶರಣಾಗುವಂತೆ ಗೃಹ ಸಚಿವರಿಂದ ಎಚ್ಚರಿಕೆ

ಟೆಕ್ನಿಕಲ್ ಜಾಣ ನಡೆ ಇಟ್ಟಿರುವ ಸಂಪತ್ ರಾಜ್ ಫೋನ್ ಬಳಸದೆ, ಯಾರನ್ನೂ ಸಂಪರ್ಕಿಸದೆ ಅಜ್ಞಾತವಾಗಿದ್ದುಕೊಂಡು ಪೊಲೀಸರಿಗೆ ಚೆಳ್ಳೆಹಣ್ಷು ತಿನ್ನಿಸುತ್ತಿದ್ದಾರೆ. ಪತ್ನಿ ಹಾಗು ಕುಟುಂಬಸ್ಥರ ಮೊಬೈಲ್ ಗಳೇ ಸ್ವಿಚ್ಡ್ ಆಪ್ ಆಗಿದ್ದು, ಸಂಪತ್ ರಾಜ್ ಅಲ್ಲದೆ ಸಂಬಂಧಿಕರ ಫೋನ್​ಗೂ ಕರೆ ಬಂದಿಲ್ಲ.

ಸಂಪತ್ ರಾಜ್

ಸಂಪತ್ ರಾಜ್

  • Share this:
ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಪರಾರಿಯಾಗಿ ತಿಂಗಳಾಯಿತು. ಇನ್ನು ಸಹ ಪೊಲೀಸರಿಗೆ ಸಂಪತ್ ರಾಜ್ ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಸಣ್ಣ ಸುಳಿವು ಸಹ ಸಿಕಿಲ್ಲ. ಹೀಗಾಗಿ ಸಂಪತ್ ರಾಜ್  ಸಂಪರ್ಕದಲ್ಲಿದ್ದ 25 ಕ್ಕೂ ಹೆಚ್ಚು ಸ್ನೇಹಿತರು ಹಾಗೂ ಕೆಲ ಸಂಬಂಧಿಕರನ್ನು ಸಿಸಿಬಿ ವಿಚಾರಣೆ ಮಾಡಿದೆ. ಜೊತೆಗೆ ಸಂಪತ್ ರಾಜ್ ಅಡ್ಮಿಟ್ ಆಗಿದ್ದ ಆಸ್ಪತ್ರೆಯ ಆಡಳಿತ ಮಂಡಳಿಯ ಸಿಬ್ಬಂದಿ ಜೊತೆಗೆ ಚಿಕಿತ್ಸೆ ನೀಡಿದ್ದ ವೈದ್ಯರನ್ನ ಸಹ ವಿಚಾರಣೆ ಮಾಡಿದೆ. ಆದರೆ ಯಾರಿಂದಲೂ ಸಹ ಅಧಿಕಾರಿಗಳಿಗೆ ಸಮರ್ಪಕ ಉತ್ತರ ಸಿಕ್ಕಿಲ್ಲ.

ಈ ನಡುವೆ ಮೈಸೂರು, ನಾಗರಹೊಳೆ, ತಮಿಳುನಾಡು, ಕೇರಳ ಸೇರಿ ಮುಂಬೈನಲ್ಲೂ ಸಿಸಿಬಿ ಹುಡುಕಾಡುತ್ತಿದೆ‌. ಆದರೆ ಪೊಲೀಸರಿಗೆ ಇನ್ನೂ ಸಂಪತ್ ರಾಜ್ ಎಲ್ಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿಲ್ಲ. ಸಂಪತ್ ರಾಜ್ ಜವಾಬ್ದಾರಿಯುತ ನಾಗರಿಕನಾಗಿ ಬಂದು ಶರಣಾಗಬೇಕೆಂದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಅವರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾಗಿದೆ. ಸಂಪತ್ ರಾಜ್ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅವರ ವಿರುದ್ದ ಲುಕ್ ಔಟ್ ನೊಟೀಸ್ ಹೊರಡಿಸಲಾಗಿದೆ. ಅವರನ್ನು ಪತ್ತೆ ಹಚ್ಚಲು ನಾಲ್ಕೈದು ವಿಶೇಷ ತಂಡ ರಚಿಸಲಾಗಿದೆ. ಆದಷ್ಟು ಬೇಗ ಸಿಸಿಬಿ ತಂಡ ಅವರನ್ನು ಬಂಧಿಸಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಸವಕಲ್ಯಾಣದತ್ತ ವಿಜಯೇಂದ್ರ ಪ್ರಯಾಣ; ಉಪಚುನಾವಣೆ ಘೋಷಣೆಗೂ ಮೊದಲು ತಾಲೀಮು ಆರಂಭ

ಇನ್ನು ಟೆಕ್ನಿಕಲ್ ಜಾಣ ನಡೆ ಇಟ್ಟಿರುವ ಸಂಪತ್ ರಾಜ್ ಫೋನ್ ಬಳಸದೆ, ಯಾರನ್ನೂ ಸಂಪರ್ಕಿಸದೆ ಅಜ್ಞಾತವಾಗಿದ್ದುಕೊಂಡು ಪೊಲೀಸರಿಗೆ ಚೆಳ್ಳೆಹಣ್ಷು ತಿನ್ನಿಸುತ್ತಿದ್ದಾರೆ. ಪತ್ನಿ ಹಾಗು ಕುಟುಂಬಸ್ಥರ ಮೊಬೈಲ್ ಗಳೇ ಸ್ವಿಚ್ಡ್ ಆಪ್ ಆಗಿದ್ದು, ಸಂಪತ್ ರಾಜ್ ಅಲ್ಲದೆ ಸಂಬಂಧಿಕರ ಫೋನ್​ಗೂ ಕರೆ ಬಂದಿಲ್ಲ. ಅತ್ತ ಮಾಜಿ ಕಾರ್ಪೊರೇಟರ್ ಝಾಕೀರ್ ಮತ್ತು ಸಹೋದರನು ಸಹ ಎಸ್ಕೇಪ್ ಆಗಿದ್ದು, ಅವರನ್ನು ಹುಡುಕಲಾಗುತ್ತಿದೆ. ಅವರೂ ಸಹ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಸಂಬಂಧಿಕರ ಕೆಲ ಫೋನ್ ಟ್ರ್ಯಾಕ್ ಮಾಡಲಾಗುತ್ತಿದೆ.

ಏನೇ ಆಗಲಿ ಶತಾಯ ಗತಾಯ ಬಂಧಿಸಲೇಬೇಕು ಎಂದು ಪೊಲೀಸರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ನಿರೀಕ್ಷಣಾ ಜಾಮೀನು ಸಿಕ್ಕರೆ ಸಾಕು ಎಂದು ಸಂಪತ್ ರಾಜ್ ತಲೆಮರೆಸಿಕೊಂಡಿದ್ದಾರೆ.
Published by:HR Ramesh
First published: