ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಹೊಸ ದಾಖಲೆ ಸೇರ್ಪಡೆ: ಬಾಕ್ಸ್ ಮೂಲಕವೇ ಸಾಧನೆ ಮರೆದ ಕನ್ನಡತಿ

ಬಾಕ್ಸ್​ನ ಒಂದೊಂದೇ ಪುಟವನ್ನು ತೆರೆದುಕೊಳ್ಳುತ್ತಾ ಹೋದರೆ ನಿಮಗೆ ಎರಡು ಬದಿಯಲ್ಲಿ ಸೇರಿದಂತೆ ಮೂರು ವಿಭಾಗಗಳಲ್ಲಿ ಮಾಹಿತಿಗಳು ದೊರೆಯುತ್ತವೆ. ಹೀಗೆ ನೂರಾರು ಮಾಹಿತಿಯನ್ನು ಅಪೇಕ್ಷಾ ಒಂದೇ ಬಾಕ್ಸಿನಲ್ಲಿ ಅದ್ಭುತವಾಗಿ ಶೇಖರಿಸಿಟ್ಟಿದ್ದಾರೆ. ನೋಡಲು ಸುಂದರವಾಗಿ ಕಾಣುವ ಈ ಬಾಕ್ಸ್​ ಭಾರತದ ಅತಿ ಉದ್ದನೆಯ ಎಕ್ಸ್​ಪ್ಲೋಷನ್ ಬಾಕ್ಸ್ ಎಂದು ಗುರುತಿಸಿಕೊಂಡಿದೆ.

zahir | news18-kannada
Updated:October 14, 2019, 3:48 PM IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಹೊಸ ದಾಖಲೆ ಸೇರ್ಪಡೆ: ಬಾಕ್ಸ್ ಮೂಲಕವೇ ಸಾಧನೆ ಮರೆದ ಕನ್ನಡತಿ
ಅಪೇಕ್ಷಾ
  • Share this:
ಸಾಮರ್ಥ್ಯ ಅರಿತರೆ ಸಾಧನೆಗೆ ಹಲವು ದಾರಿಗಳಿರುತ್ತವೆ. ಇಂದಿನ ಪೀಳಿಗೆ ಕೂಡ ಸಾಧನೆ ಮಾಡಬೇಕಿದ್ದರೆ ಮೊದಲು ತಮ್ಮ ಸಾಮರ್ಥ್ಯ ಅರಿತು ಅದಕ್ಕೆ ತಕ್ಕಂತೆ ಪರಿಶ್ರಮ ಪಡಬೇಕು. ಅಂತಹದೊಂದು ವಿಭಿನ್ನ ಸಾಧನೆ ಮಾಡಿ ನಮ್ಮೂರ ಕನ್ನಡತಿ ಇಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ.

ಬಾಲ್ಯದಿಂದಲೂ ಸಣ್ಣ ಪುಟ್ಟ ಗಿಫ್ಟ್​ ಬಾಕ್ಸ್​ಗಳನ್ನು ಸಿದ್ಧಪಡಿಸುವ ಹವ್ಯಾಸವನ್ನು ಮಣ್ಣಗುಡ್ಡೆಯ ಅಪೇಕ್ಷಾ ಎಸ್. ಕೊಟ್ಟಾರಿ ಹೊಂದಿದ್ದರು. ಇಂದು ಅದನ್ನೇ ಮುಂದುವರೆಸಿ ರಾಷ್ಟ್ರೀಯ ಮಟ್ಟದ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ ಎಂದರೆ ಸಣ್ಣ ವಿಷಯವಲ್ಲ.

ಪ್ರಸ್ತುತ ಬೆಸೆಂಟ್ ಕಾಲೇಜಿನ ಎಂ.ಕಾಂ ವಿದ್ಯಾರ್ಥಿನಿಯಾಗಿರುವ ಅಪೇಕ್ಷಾ  ಇಂತಹದೊಂದು ಗಿಫ್ಟ್ ಬಾಕ್ಸ್​ ತಯಾರಿಸಿದ್ದು ಇನ್​ಕ್ರೆಡಿಬಲ್ ಇಂಡಿಯಾ ಪರಿಕಲ್ಪನೆಯಡಿ. 1000 ಸೆಂ.ಮೀ ಉದ್ದನೆಯ ಈ ಬಾಕ್ಸ್​ನ ಸುತ್ತಳತೆ ಕೇವಲ 25 ಸೆಂ.ಮೀ ಎಂಬುದು ವಿಶೇಷ. ಇದು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ 2019ರಲ್ಲಿ ಅತಿ ಉದ್ದನೆಯ ಎಕ್ಸ್​ಪ್ಲೋಷನ್​ ಬಾಕ್ಸ್​ ಎಂದು ದಾಖಲೆ ನಿರ್ಮಿಸಿದೆ.

ಗಿಫ್ಟ್ ಬಾಕ್ಸ್​ ಮಾದರಿಯಲ್ಲಿ ಅತಿ ಉದ್ದನೆಯ ಎಕ್ಸ್​ಪ್ಲೋಷನ್ ಬಾಕ್ಸ್​ ತಯಾರಿಸಿರುವ ಅಪೇಕ್ಷಾ ಅದರಲ್ಲಿ ಹಲವು ಮಾಹಿತಿಗಳನ್ನು ನೀಡಿದ್ದರು. ಸಾಮಾನ್ಯ ಡಬ್ಬಿಯಂತೆ ಕಾಣುವ ಈ ಬಾಕ್ಸ್​ ತೆರೆದುಕೊಳ್ಳುತ್ತಾ ಹೋಗುತ್ತಿದ್ದಂತೆ ಒಂದೊಂದು ವಿಭಾಗದ ಮಾಹಿತಿಗಳನ್ನು ಪಡೆಯಬಹುದು. 32 ಅಡಿ ಉದ್ದವಿರುವ ಈ ಎಕ್ಸ್​ಪ್ಲೋಷನ್​ನಲ್ಲಿ ಅಪೇಕ್ಷಾ ಸ್ವಾತಂತ್ರ್ಯ ಹೋರಾಟಗಾರರ, ವಿವಿಧ ಕ್ಷೇತ್ರಗಳ ಸಾಧಕರ, ಪ್ರಮುಖ ನಾಯಕರ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಹಲವು ಮಾಹಿತಿಗಳನ್ನು ಕಟ್ಟಿಕೊಟ್ಟಿದ್ದಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸರ್ಟಿಫಿಕೇಟ್


ಬಾಕ್ಸ್​ನ ಒಂದೊಂದೇ ಪುಟವನ್ನು ತೆರೆದುಕೊಳ್ಳುತ್ತಾ ಹೋದರೆ ನಿಮಗೆ ಎರಡು ಬದಿಯಲ್ಲಿ ಸೇರಿದಂತೆ ಮೂರು ವಿಭಾಗಗಳಲ್ಲಿ ಮಾಹಿತಿಗಳು ದೊರೆಯುತ್ತವೆ. ಹೀಗೆ ನೂರಾರು ಮಾಹಿತಿಯನ್ನು ಅಪೇಕ್ಷಾ ಒಂದೇ ಬಾಕ್ಸಿನಲ್ಲಿ ಅದ್ಭುತವಾಗಿ ಶೇಖರಿಸಿಟ್ಟಿದ್ದಾರೆ. ನೋಡಲು ಸುಂದರವಾಗಿ ಕಾಣುವ ಈ ಬಾಕ್ಸ್​ ಭಾರತದ ಅತಿ ಉದ್ದನೆಯ ಎಕ್ಸ್​ಪ್ಲೋಷನ್ ಬಾಕ್ಸ್ ಎಂದು ಗುರುತಿಸಿಕೊಂಡಿದೆ.

ಈಗಾಗಲೇ ಇಂತಹ 30 ಗಿಫ್ಟ್​ ಬಾಕ್ಸ್​ಗಳನ್ನು ತಯಾರಿಸಿ ಮಾರಾಟ ಮಾಡಿರುವುದಾಗಿ ಈ ಯುವ ಸಾಧಕಿ ಹೇಳಿಕೊಂಡಿದ್ದಾರೆ. ಇನ್ನು ಹಲವು ಫ್ರೆಂಡ್ಸ್​ ಕೂಡ ಅಪೇಕ್ಷಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತಿ ಬಾರಿ ಫ್ರೆಂಡ್ಸ್​ ಇಂತಹ ಬಾಕ್ಸ್​ಗಳನ್ನು ಗಿಫ್ಟ್ ಮಾಡುವಾಗ ಅವರಿಂದ ಮತ್ತಷ್ಟು ಪ್ರೋತ್ಸಾಹ ದೊರೆಯುವುದಾಗಿ ಕನ್ನಡತಿ ತಿಳಿಸಿದ್ದಾರೆ.ಇನ್ನು ಇದೇ ಸಾಧನೆಯ ಮೂಲಕ ಏಷಿಯಾ ಬುಕ್ ಆಫ್ ರೆಕಾರ್ಡ್​ ಮತ್ತು ಗಿನ್ನಿಸ್ ವರ್ಲ್ಡ್​ ರೆಕಾರ್ಡ್ಸ್​ಗೂ ತಮ್ಮ ಸಾಧನೆಯನ್ನು ತಿಳಿಸುವ ಇರಾದೆಯನ್ನು ಅಪೇಕ್ಷಾ ಇಟ್ಟುಕೊಂಡಿದ್ದಾರೆ. ಒಂದೇ ಒಂದು ಬಾಕ್ಸ್​ ಮೂಲಕ ಭವ್ಯ ಭಾರತವನ್ನು ತೆರೆದಿಡುವ ಅಪೇಕ್ಷಾ ಸಾಧನೆ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಲಿ ಎಂಬುದೇ ನಮ್ಮ ಆಶಯ.​
First published:October 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading