Lokayukta Raid: ಪಶ್ಚಿಮ ವಿಭಾಗದ ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಅಧಿಕಾರಿ!

ಬಿಬಿಎಂಪಿ ಕಚೇರಿ ಮೇಲೆ ಒಟ್ಟು 8 ಜನ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ SP ಶ್ರೀನಾಥ್ ಮಹದೇವ ಜೋಶಿ ನೇತೃತ್ವದಲ್ಲಿ ದಾಳಿ ನಡೆದಿದೆ. ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಪಿ.ಎ ಉಮೇಶ್​ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಕಚೇರಿ

ಲೋಕಾಯುಕ್ತ ಕಚೇರಿ

  • Share this:
ರಾಜ್ಯದಲ್ಲಿ ಲೋಕಾಯುಕ್ತ ಅಬ್ಬರಿಸಲು ಶುರು ಮಾಡಿದೆ. ಲೋಕಾಯುಕ್ತ (Karnataka Lokayukta) ಮರುಸ್ಥಾಪನೆ ಬೆನ್ನಲ್ಲೇ ಮೊದಲ ದಾಳಿ ನಡೆಸಿದ ಅಧಿಕಾರಿಗಳು, ಪಶ್ಚಿಮ ವಿಭಾಗದ ಬಿಬಿಎಂಪಿ ಕಚೇರಿ (BBMP Office) ಮೇಲೆ ದಾಳಿ ನಡೆಸಿ ಲಂಚಬಾಕರ ಮೈ ಚಳಿ ಬಿಡಿಸಿದೆ. ಮಲ್ಲೇಶ್ವರಂ (Malleswaram) ಬಳಿ ಇರೋ ಬಿಬಿಎಂಪಿ ಕಚೇರಿ ಮೇಲೆ ಅಧಿಕಾರಿಗಳು ಏಕಾಏಕಿ ರೇಡ್​ ಮಾಡಿದ ವೇಳೆ ಜಂಟಿ ಆಯುಕ್ತ ಶ್ರೀನಿವಾಸ್ (Joint Commissioner Srinivas) ಅವರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದಾರೆ. 4 ಲಕ್ಷ ಹಣದ ಸಮೇತ ಶ್ರೀನಿವಾಸ್ ಲಾಕ್ ಆಗಿದ್ದಾರೆ. ಖಾತೆ ಬದಲಾವಣೆ ವಿಚಾರಕ್ಕಾಗಿ ಶ್ರೀನಿವಾಸ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಿಎ ಮೂಲಕ ಹಣ ಪಡೆಯುತ್ತಿದ್ರು ಈ ವೇಳೆ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಪಿಎ ಬಳಿ ಹಣ ಪಡೆಯಲು ಹೇಳಿದ್ದ ಶ್ರೀನಿವಾಸ್​

ಬಿಬಿಎಂಪಿ ಕಚೇರಿ ಮೇಲೆ ಒಟ್ಟು 8 ಜನ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ SP ಶ್ರೀನಾಥ್ ಮಹದೇವ ಜೋಶಿ ನೇತೃತ್ವದಲ್ಲಿ ದಾಳಿ ನಡೆದಿದೆ. ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಪಿ.ಎ ಉಮೇಶ್​ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಸದ್ಯ ಪಿಎ ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಜಂಟಿ ಆಯುಕ್ತ ಶ್ರೀನಿವಾಸ್




ಶ್ರೀನಿವಾಸ್ ಹಾಗೂ ಪಿಎ ಉಮೇಶ್ ಬಂಧನ

ಪಶ್ಚಿಮ ವಿಭಾಗ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಪಿಎ ಉಮೇಶ್ ಇಬ್ಬರನ್ನು ಬಂಧನ ಮಾಡಲಾಗಿದೆ. ಸದ್ಯ ಇಬ್ಬರನ್ನು ಬಂಧಿಸಿ ಬಿಬಿಎಂಪಿ ಕಚೇರಿಯಲ್ಲೇ ವಿಚಾರಣೆ ನಡೆಸಲಾಗ್ತಿದೆ. ಕೆಲವೇ ಕ್ಷಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಇಬ್ಬರನ್ನೂ ಹಾಜರು ಪಡಿಸಲಾಗುತ್ತದೆ.

ಇದನ್ನೂ ಓದಿ: BJP ಕೆಣಕಲು RSS ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್​! ಸಂಸದ ತೇಜಸ್ವಿ ಸೂರ್ಯ ಕೆಂಡಾಮಂಡಲ

ಎಸಿಬಿ ಬಲೆಗೆ ಭ್ರಷ್ಟ ಅಧಿಕಾರಿಗಳು

ಇತ್ತೀಚಿನ ದಿನಗಳಿಂದ ಎಸಿಬಿ ಬಲೆಗೆ ಭ್ರಷ್ಟ ಅಧಿಕಾರಿಗಳು ಸಿಲುಕಿಕೊಳ್ಳುತ್ತಿದ್ದಾರೆ. ಒಂದೇ ದಿನ IPS ಹಾಗೂ IAS ಅಧಿಕಾರಿಯನ್ನು ಬಂಧಿಸಿದ್ದ ಎಸಿಬಿ ಅಧಿಕಾರಿಗಳು, ಇವತ್ತು (ಜುಲೈ 7) ಬಿಬಿಎಂಪಿಯ (BBMP) ಬಿಎಂಟಿಎಫ್ ಅಧಿಕಾರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಮಾಜಿ ಕಾರ್ಪೋರೇಟರ್ (Ex Corporator) ಬಳಿಯೇ ಲಂಚ ಪಡೆಯಲು ಮುಂದಾಗಿದ್ದ ಬಿಎಂಟಿಎಫ್  ಅಧಿಕಾರಿ ಬೇಬಿ ವಾಲೇಕರ್​ ಅವರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು.

3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಬೇಬಿ ವಾಲೇಕರ್​

ಹೊರಮಾವು ಅಗರ ಸರ್ವೆ ನಂಬರ್ 153ರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸಲು 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಸಬ್ ಇನ್ಸ್ ಪೆಕ್ಟ್ರ್ ಬೇಬಿ ವಾಲೇಕರ್​. ಈ ಸಂಬಂಧ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ ದೂರು ನೀಡಿದ್ರು ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಒಂದು ಲಕ್ಷ ಹಣ ಪಡೆಯುತ್ತಿರೋವಾಗ ಪಿ.ಎಸ್.ಐ ಬೇಬಿ ವಾಲೇಕರ್​ ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿ ಕರೆದೊಯ್ಯದಿದ್ದರು

ಗಲಾಟೆ ವಿಚಾರಕ್ಕೆ ಸಸ್ಪೆಂಡ್​ ಆಗಿದ್ದ ವಾಲೇಕರ್​

ಕೆಲ ವರ್ಷಗಳ ಹಿಂದೆ ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿದ ಆರೋಪಿಯೊಬ್ಬನಿಗೆ ಮನಸೋ ಇಚ್ಛೆ ಥಳಿಸಿದ ಕಾರಣಕ್ಕೆ ಕರ್ತವ್ಯದಿಂದ ಅಮಾನತಿಗೆ ಒಳಗಾಗಿದ್ದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಬೇಬಿ ವಾಲೇಕರ್ ಅವರಿಗೆ ರಿಲೀಫ್ ಸಿಕ್ಕಿತ್ತು. ಬೇಬಿ ವಾಲೇಕರ್ ಅವರ ಸಸ್ಪೆಂಡ್ ಆದೇಶ  ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿ: H D Kumaraswamy: ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಅತಿದೊಡ್ಡ ಹಗರಣ ಬಯಲಿಗೆಳೆಯುವೆ; ಎಚ್​ಡಿಕೆ ಹೊಸ ಬಾಂಬ್​

ಗಲಾಟೆ ಮಾಡಿದ್ದ ವ್ಯಕ್ತಿಗೆ ಥಳಿತ

ಈಶಾನ್ಯ ವಲಯದ ಐಜಿಪಿ ವಜೀದ್ ಅಹ್ಮದ್ ಅವರು ಬೇಬಿ ವಾಲೇಕರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿದ್ರು. ಬೇಬಿವಾಲೇಕರ್ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ರಾಯಚೂರಿನ ಜನತೆ ಭಾರಿ ಪ್ರತಿಭಟನೆ ನಡೆದಿತ್ತು. ನಗರದ ಮಾರ್ಕೆಟ್ ಯಾರ್ಡ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬೇಬಿ ವಾಲೇಕರ್ ಆರೋಪಿಯನ್ನು ಹಿಗ್ಗಾಮಗ್ಗಾ ಥಳಿಸಿ ಶಿಕ್ಷಿಸಿದ್ದರು.
Published by:ಪಾವನ ಎಚ್ ಎಸ್
First published: