• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Lokayukta Raid: ತಹಶೀಲ್ದಾರ್ ಹೆಸರಲ್ಲಿ ಕೋಟಿ-ಕೋಟಿ ಆಸ್ತಿ! ಲೋಕಾಯುಕ್ತ ದಾಳಿ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

Lokayukta Raid: ತಹಶೀಲ್ದಾರ್ ಹೆಸರಲ್ಲಿ ಕೋಟಿ-ಕೋಟಿ ಆಸ್ತಿ! ಲೋಕಾಯುಕ್ತ ದಾಳಿ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

ಕಾಂಗ್ರೆಸ್ ಮುಖಂಡನ ಮೇಲೆ ಐಟಿ ದಾಳಿ

ಕಾಂಗ್ರೆಸ್ ಮುಖಂಡನ ಮೇಲೆ ಐಟಿ ದಾಳಿ

ಲೋಕಾಯುಕ್ತ ದಾಳಿ ವೇಳೆ ಅಪಾರ ಆಸ್ತಿಪಾಸ್ತಿ ಮತ್ತು ವಿಮಾ ಪಾಲಿಸಿ, ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿರುವುದು ಕಂಡು ಬಂದಿದೆ.

  • Share this:

ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆಯೇ ಲೋಕಾಯುಕ್ತ (Lokayukta) ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಹಶೀಲ್ದಾರ್​ ಎನ್​​ಜೆ ನಾಗರಾಜ್ ಅವರ ನಿವಾಸದ ಮೇಲೆ ಇಂದು ಲೋಕಾಯುಕ್ತ ಪೊಲೀಸರು (Police) ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ತಹಶೀಲ್ದಾರ್ (Tehsildar) ಹೆಸರಲ್ಲಿ ಅಪಾರ ಪ್ರಮಾಣದ ಚರಾಸ್ತಿ ಸ್ಥಿರಾಸ್ತಿ ಪತ್ತೆಯಾಗಿದೆ.


ಪರಿಶೀಲನೆ ವೇಳೆ ಅಪಾರ ಪ್ರಮಾಣ ಆಸ್ತಿ ಪತ್ತೆ


ತಹಶೀಲ್ದಾರ್​ ಎನ್​​ಜೆ ನಾಗರಾಜ್ ಅವರ ಹೆಸರಿನಲ್ಲಿ ಶಿಕಾರಿಪುರ ಟೌನ್ ಚನ್ನಕೇಶವ ನಗರದಲ್ಲಿ 75 ಲಕ್ಷ ಬೆಲೆ ಬಾಳುವ ಮನೆ, ನಿಂಬಾಪುರದಲ್ಲಿ 25 ಲಕ್ಷ ಬೆಲೆಬಾಳುವ ಮನೆ, ಚನ್ನಗಿರಿ ತಾಲೂಕಿನ ನುಗ್ಗೆಹಳ್ಳಿಯಲ್ಲಿ 6.05 ಗುಂಟೆ 9.75 ಲಕ್ಷ ಬೆಲೆಬಾಳು ಜಾಗ, 10 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, 12 ಲಕ್ಷ ರೂಪಾಯಿ ಮೌಲ್ಯದ ಡಸ್ಟರ್ ಕಾರು, 50 ಸಾವಿರ ಮೌಲ್ಯದ ಹೊಂಡಾ ಮೊಪೈಡ್ ವಾಹನ ಪತ್ತೆಯಾಗಿದೆ.


ಇದನ್ನೂ ಓದಿ: Lokayukta Raid: ಲೋಕಾಯುಕ್ತ ದಾಳಿಯಾಗುತ್ತಿದ್ದಂತೆ ನಡುರಸ್ತೆಯಲ್ಲೇ ಉರುಳಾಡಿ ಅಧಿಕಾರಿಯ ಹೈಡ್ರಾಮಾ!


ಈ ಬಗ್ಗೆ ದಾವಣಗೆರೆ ಲೊಕಾಯುಕ್ತ ಕಚೇರಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಅಧಿಕಾರಿಗೆ ಆಸ್ತಿಗೆ ಆದಾಯದ ಮೂಲದ ವಿವರಗಳನ್ನು ನೀಡುವಂತೆ ನೋಟಿಸ್ ನೀಡಿದ್ದಾರೆ. ವ್ಯಕ್ತಿಯೊಬ್ಬರು ಅಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ತಹಶೀಲ್ದಾರ್ ಅವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ದಾಳಿ ವೇಳೆ ಅಪಾರ ಆಸ್ತಿಪಾಸ್ತಿ ಮತ್ತು ವಿಮಾ ಪಾಲಿಸಿ, ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್​ ನಾಗರಾಜ್​ ಅವರ ಕುಟುಂಬ ಸದಸ್ಯರ ವಿದೇಶಿ ಪಾಸ್ ಪೋರ್ಟ್ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.


ಕಾಂಗ್ರೆಸ್​ ಮುಖಂಡನ ಮನೆ ಮೇಲೆ ಐಟಿ ದಾಳಿ


ಇನ್ನು, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಗಂಗಾಧರ ಗೌಡರ ನಿವಾಸ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ 30 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಬೆಳ್ತಂಗಡಿಯ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಗಂಗಾಧರ ಗೌಡರಿಗೆ ಸೇರಿದ ಒಟ್ಟು ಮೂರು ಕಡೆ ಮುಂದುವೆರೆದ ಐಟಿ ಅಧಿಕಾರಿಗಲು ಶೋಧ ನಡೆಸಿದ್ದರು.

top videos
    First published: