ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) (Bangalore Development Authority) ಎಂದರೆ ಕೋಟಿ ಕೋಟಿ ವ್ಯವಹಾರ ನಡೆಯುವ ಜಾಗ. ಭ್ರಷ್ಟಾಚಾರ ಅನ್ನೋದು ಸರ್ವೇ ಸಾಮಾನ್ಯ ಎನ್ನುವ ಮಾತಿದೆ. ಜನರ ಕೆಲಸ ಹೇಗಪ್ಪಾ ಆಗುತ್ತೆ ಎಂದರೆ ಮೀಡಿಯೇಟರ್ಸ್ (Mediator) ಮಸ್ಟ್ ಅಂತಾರೆ ಜನ. ಇಷ್ಟೆಲ್ಲಾ ಆರೋಪ ಬಂದರೆ ಲೋಕಾಯುಕ್ತ (Lokayukta) ಸುಮ್ಮನಿರುತ್ತಾ? ಇಂದು ಬಿಡಿಎಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, 6 ತಂಡಗಳ 35 ಅಧಿಕಾರಿಗಳಿಂದ (Lokayukta Officer) ದಾಳಿ ಮಾಡಿದೆ. ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪವರ್ ಕೊಟ್ಟ ಬಳಿಕ ಇದೇ ಮೊದಲ ಬಾರಿಗೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ಮಾಡಿದ್ದಾರೆ. ಕಳೆದ ಆರೇಳು ತಿಂಗಳ ಹಿಂದೆ ಎಸಿಬಿ ಟೀಂ ದಾಳಿ ಕೆಲವೊಂದು ದಾಖಲೆ ಪರಿಶೀಲನೆ ಮಾಡಿತ್ತು. ಎಸಿಬಿಯಿಂದ ದಾಖಲೆ ವರ್ಗಾವಣೆ ಆದ ಬಳಿಕ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಅಧಿಕಾರಿಗಳಿಂದ ಕಡತಗಳ ಪರಿಶೀಲನೆ
ಇಂದು ಮಧ್ಯಾಹ್ನ 3:30ರ ಸುಮಾರಿಗೆ 6 ತಂಡಗಳಲ್ಲಿ 35 ಜನ ಲೋಕಾಯುಕ್ತ ಅಧಿಕಾರಿಗಳು ಕುಮಾರ ಪಾರ್ಕ್ ಬಳಿಯ ಬಿಡಿಎ ಕೇಂದ್ರ ಕಚೇರಿಗೆ ಎಂಟ್ರಿ ಕೊಟ್ಟಿದ್ದರು. ಟೌನ್ ಪ್ಲಾನಿಂಗ್, ಅಲಾಟ್ಮೆಂಟ್ ಸೆಕ್ಷನ್ ಹಾಗೂ ಪರಿಹಾರ ವಿತರಣೆ ಸೆಕ್ಷನ್ಗಳಲ್ಲಿ ಅವ್ಯವಹಾರದ ಬಗ್ಗೆ ದಾಖಲೆ ಪರಿಶೀಲನೆ ನಡೆಸಿದ್ದರು. ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, ಎಸ್.ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಕಡತಗಳ ಪರಿಶೀಲನೆ ಮಾಡಿದ್ದಾರೆ.
ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ದಾಳಿ
ಲೋಕಾಯುಕ್ತ ತಂಡದಿಂದ ಈಗ ದಾಳಿ ನಡೆಯುತ್ತಿದೆ. ಸಾರ್ವಜನಿಕರಿಂದ ದೂರುಗಳು ಸಹ ಬಂದಿತ್ತು. ಆದ್ದರಿಂದ ದೂರುಗಳನ್ನು ಸಿಸ್ಟಾಮ್ಯಾಟಿಕ್ ಆಗಿಯೇ ಪರಿಶೀಲನೆ ನಡೆಸಿ ತನಿಖೆ ಮಾಡಲಾಗುವುದು. ಈ ಹಿಂದೆ ಕೂಡ ದಾಳಿಯಾಗಿದೆ, ಈಗ ಆಗಿರುವ ದಾಳಿ ಸೇರಿ ಎಲ್ಲವನ್ನು ಕೂಲಂಕುಷವಾಗಿ ತನಿಖೆ ಮಾಡಲಾಗುತ್ತೆ. ತನಿಖೆ ಮುಂದಿನ ಹಂತಕ್ಕೆ ಬಂದನಂತರ ಸಂಪೂರ್ಣ ಮಾಹಿತಿ ನೀಡಲಾಗುತ್ತೆ. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದರಿಂದ ದಾಳಿ ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: Kalaburagi: ಸರ್ಕಾರಿ ಉದ್ಯೋಗಕ್ಕಾಗಿ ಅಡ್ಡದಾರಿ; 5 ಕೆಜಿ ಕಬ್ಬಿಣದ ಕಲ್ಲನ್ನು ಕಾಲಿಗೆ ಕಟ್ಟಿಕೊಂಡು ಬಂದು ಸಿಕ್ಕಿಬಿದ್ರು!
ಸಂಕಷ್ಟ ತೊಡಿಕೊಂಡ ಸಾರ್ವಜನಿಕರು
ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದ ಹಾಗೆ ಸಾರ್ವಜನಿಕರು ದೂರುಗಳ ಮಹಾಪೂರವೇ ಆಯ್ತು. ನೂರಾರು ಸಾರ್ವಜನಿಕರು, ಖುದ್ದು ಭೇಟಿಯಾಗಿ ಸಂಕಷ್ಟಗಳ ಬಗ್ಗೆ ಹೇಳಿಕೊಂಡರು. ದೂರುಗಳು ಹೆಚ್ಚಾಗುತ್ತಿದ್ದ ಹಾಗೆ ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿದ್ದರು. ಈ ವೇಳೆ ಜನರು ನ್ಯೂಸ್ 18 ಜೊತೆಗೂ ಸಂಕಷ್ಟ ಹೇಳಿಕೊಂಡಿದ್ದಾರೆ. ಅರ್ಕಾವತಿ ಲೇಔಟ್ ವಿಚಾರವಾಗಿ 16 ವರ್ಷಗಳಿಂದ ದೂರು ನೀಡುತ್ತಾ ಬಂದಿದ್ದೇನೆ, ಸಮಸ್ಯೆ ಅದೇ ರೀತಿ ಇದೆ.
ಸರಿಯಾದ ಉತ್ತರ ನೀಡದೆ ಹಾರಿಕೆ ಉತ್ತರ ನೀಡುತ್ತಾರೆ. ನಾನು ಸೈಟ್ ಖರೀದಿ ಮಾಡಿದ್ದೆ ಅದು ರಿಡೈರ್ನಲ್ಲಿ ಹೋಗಿತ್ತು. ಅಲ್ಲಿಂದ ಇಲ್ಲಿವರೆಗೂ ನನಗೆ ಸಿಡಿಯನ್ನೇ ಕೊಟ್ಟಿಲ್ಲ. ಸೈಟ್ ಆಗಿದೆಯಾ ಮಾಹಿತಿ ಕೊಡಿ ಎಂದರು ನೀಡುತ್ತಿಲ್ಲ. ಈಗ ಲೋಕಾಯುಕ್ತ ಅಧಿಕಾರಿಗಳು ದೂರು ಕೊಡಿ ಕ್ರಮಕೈಗೊಳ್ಳುತ್ತೀವಿ ಎಂದು ಹೇಳ್ತಿದ್ದಾರೆ. ಆದ್ದರಿಂದ ದೂರು ನೀಡಲು ಬಂದಿದ್ದೇವೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಮತ್ತೊಬ್ಬರು ಮಾತನಾಡಿ ಬನಶಂಕರಿ 6ನೇ ಸ್ಟೇಜ್ ಬಡವಾಣೆಗೆ ನನ್ನ ಜಮೀನು ಹೋಗಿದೆ. 2028-19ರಲ್ಲೇ ನನಗೆ ಕಮಿಷನರ್ ನಮಗೆ ಸೈಟ್ ಮಂಜೂರು ಮಾಡಿದ್ದಾರೆ. ಸೌಥ್ಗೆ ಫೈಲ್ ಹೋಗಿದೆ. ಈಗ ಸೌಥ್ನಲ್ಲಿ ಸಿಡಿ ಬರೆದಿದ್ದಾರೆ. ಆದರೆ ಸೈನ್ ಮಾಡಿ ನಮಗೆ ಸೈಟ್ ಫೈನಲ್ ಮಾಡಲು ಹಣ ಕೇಳ್ತಿದ್ದಾರೆ. ಆದರೆ ನಮಗೆ ಹಣ ಕೊಡಲು ಆಗುತ್ತಿಲ್ಲ. ಆದ್ದರಿಂದ ಲೋಕಾಯುಕ್ತಗೆ ದೂರು ನೀಡಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಮೂವರು ಬ್ರೋಕರ್ಗಳು ವಶಕ್ಕೆ
ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಬಿಡಿಎ ಆವರಣದಲ್ಲಿ ಕೆಲವು ಬ್ರೋಕರ್ಗಳ ಓಡಾಟ ಕಂಡು ಬಂದಿತ್ತು. ಮಂಜುನಾಥ್ ಎಂಬುವರು ಸೇರಿ ಮೂವರನ್ನು ವಶಕ್ಕೆ ಪಡೆಯಲಾಯಿತು. ಇನ್ನು ಸಂಜೆ ಡ್ಯೂಟಿ ಮುಗಿಸಿ ಮನೆಗೆ ಹೊರಡಲು ಸಜ್ಜಾಗಿದ್ದ ಬಿಡಿಎ ಸಿಬ್ಬಂದಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟು ಗೇಟ್ಗೆ ಬೀಗ ಹಾಕಿಸಿದ್ದರು.
ಜನರಿಂದ ಲೋಕಾಯುಕ್ತರಿಗೆ ದೂರುಗಳು ಬಂದಿದ್ದು ಹಾಗೂ ಕಳೆದ ಬಾರಿ ಎಸಿಬಿ ದಾಳಿ ಮಾಡಿದಾಗ ದಾಖಲೆ ಸಿಕ್ಕ ದಾಖಲೆಗಳ ಆದಾರದಲ್ಲಿ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಭ್ರಷ್ಟರಿಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದರೆ ಮುಂದಾದರೂ ಭ್ರಷ್ಟಾಚಾರ ಕಡಿಮೆ ಆಗುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ