ಸಮೀಕ್ಷೆಯೇ ಬೇರೆ, ನಿಜಾಂಶವೇ ಬೇರೆ, ಮೋದಿ ಗೆದ್ದು ತೋರಿಸಲಿ; ಪ್ರಕಾಶ್​ ರೈ ಸವಾಲು

ಲೋಕಸಭೆ ಚುನಾವಣೆ ಹಿನ್ನಲೆ ಆಕ್ಟಿವ್​ ಅಗಿ ಚುನಾವಣಾ ಪ್ರಚಾರವನ್ನು ನಟ ಪ್ರಕಾಶ್ ರೈ ಆರಂಭಿಸಿದ್ದು, ಬೆಂಗಳೂರು ಸೆಂಟ್ರಲ್ ವ್ಯಾಪ್ತಿಯ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶಿವಾಜಿನಗರದ ಕೆಲವೆಡೆ ಚುನಾವಣೆ ಪ್ರಚಾರವನ್ನು ನಡೆಸಿದ್ದರು.

ಪ್ರಕಾಶ್​​ ರೈ

ಪ್ರಕಾಶ್​​ ರೈ

  • News18
  • Last Updated :
  • Share this:
ಬೆಂಗಳೂರು ( ಜ.25) :  ಚುನಾವಣೆ ಸಮೀಕ್ಷೆಗಳು ಕೇವಲ ಮಾಧ್ಯಮಗಳ ಸೃಷ್ಟಿ ಅದರಿಂದ ಜನಾಭಿಪ್ರಾಯ ಬದಲಾಗುವುದಿಲ್ಲ. ಸಮೀಕ್ಷೆಗಳಾಚೆಗೆ ಈ ಬಾರಿ ಪ್ರಧಾನಿ ಮೋದಿ ಗೆದ್ದು ತೋರಿಸಲಿ ಎಂದು ಚಿತ್ರ ನಟ ಪ್ರಕಾಶ್ ರೈ ಸವಾಲು ಹಾಕಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನಲೆ ಆಕ್ಟಿವ್​ ಅಗಿ ಚುನಾವಣಾ ಪ್ರಚಾರವನ್ನು ನಟ ಪ್ರಕಾಶ್ ರೈ ಆರಂಭಿಸಿದ್ದು, ಬೆಂಗಳೂರು ಸೆಂಟ್ರಲ್ ವ್ಯಾಪ್ತಿಯ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಶಿವಾಜಿನಗರದ ಕೆಲವೆಡೆ ಚುನಾವಣೆ ಪ್ರಚಾರವನ್ನು ನಡೆಸಿದ್ದರು.

ನಾನು ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಲು ಪ್ರದಕ್ಷಿಣೆ ಹಾಕುತ್ತಿದ್ದೇನೆ. ಕ್ಷೇತ್ರದಲ್ಲಿರುವ ಸಮಸ್ಯೆಯನ್ನು ಗಮ‌ನಿಸಿದರೆ ರಾಜಕಾರಣಿಗಳು ಎಷ್ಟರ ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಜನರಿಗೆ ತಮ್ಮ ಸಂಸದ ಯಾರೆನ್ನುವುದೇ ಗೊತ್ತಿಲ್ಲ. ಜನರಲ್ಲಿ ಅರ್ಹ ಹಾಗೂ ಉತ್ತಮರನ್ನು ಆಯ್ಕೆ ಮಾಡಬೇಕೆ‌ನ್ನುವ ಅರಿವನ್ನು ಜನರಲ್ಲಿ ತುಂಬಬೇಕಿದೆ. ನಾನು ನನ್ನ ನಟನೆಯ ವರ್ಚಸ್ಸಿನ ಮೇಲೆ ಖಂಡಿತ ಮತವನ್ನು ಕೇಳುವುದಿಲ್ಲ. ಬದಲಾವಣೆಗೊಂದು ಅವಕಾಶ ಕೇಳುತ್ತಿದ್ದೇನೆ ಅಷ್ಟೆ‌ ಎಂದು ಹೇಳಿದರು.

ಮುಸಲ್ಮಾನ ಮತಗಳ ಮೇಲೆ ಕಣ್ಣು:

ಬೆಂಗಳೂರು ಸೆಂಟ್ರಲ್ ವ್ಯಾಪ್ತಿಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಅಣಿಯಾಗಿರುವ ನಟ ಪ್ರಕಾಶ್ ರೈ ಪ್ರಚಾರವನ್ನು ಆರಂಭಿಸಿದ್ದಾರೆ. ಇಲ್ಲಿನ ಮುಸ್ಲಿಂ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಅವರು ಶಿವಾಜಿನಗರ ಸುತ್ತಮುತ್ತ ಪ್ರದೇಶಗಳಲ್ಲಿ ಸಂಚಾರ ಮಾಡಿ ದರ್ಗಾ ಬಳಿ ಸಾರ್ವಜನಿಕರು ಹಾಗೂ  ಬೀದಿ ಬದಿ ವ್ಯಾಪಾರಿಗಳ ಸಂಕಷ್ಟ ಆಲಿಸಿದರು.

ಇದನ್ನೂ ಓದಿ :  ನಿಮ್ಮಿಬ್ಬರಿಗೇ ಇಲ್ಲ, ನನಗೂ 56 ಇಂಚು ಎದೆಗಾರಿಕೆಯಿದೆ ಪ್ರಶ್ನಿಸುವ ಹಕ್ಕು ನನಗಿದೆ - ನಟ ಪ್ರಕಾಶ್ ರೈ

ನಟ ಪ್ರಕಾಶ್ ರೈ ಕರ್ನಾಟಕದಲ್ಲಿ ಅದರಲ್ಲಿ ಬೆಂಗಳೂರು ಕೇಂದ್ರವನ್ನು ಆಯ್ದುಕೊಳ್ಳಲು ಕಾರಣವಿದೆ. ಈ ಕ್ಷೇತ್ರ ನನ್ನದು. ನಾನು ಹುಟ್ಟಿ ಬೆಳೆದಿದ್ದು , ಓದಿದ್ದು ಎಲ್ಲವೂ ಇದೇ ಕ್ಷೇತ್ರದಲ್ಲಿ. ಸಿನಿಮಾ ರಂಗದ ತವರುಮನೆ ಗಾಂಧಿನಗರ ಕೂಡ ಇದೇ ಕ್ಷೇತ್ರದಲ್ಲಿದೆ. ಇಲ್ಲಿ ನನ್ನ ಸಾಕಷ್ಟು ನೆನಪುಗಳಿವೆ. ಅದಕ್ಕಾಗಿ ನಾನು ಬೆಂಗಳೂರು ಸೆಂಟ್ರಲ್​ನಿಂದ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ  ಎನ್ನಲಾಗಿದೆ.

ಚುನಾವಣೆಗೆ ಇನ್ನು ಮೂರು ತಿಂಗಳು ಸಮಯವಿದ್ದು, ಇದಕ್ಕಾಗಿ ನಾನು ಇನ್ನು ತಯಾರಾಗಬೇಕಿದೆ. ನನ್ನ ಮುಂದಿನ ನಡೆ ಕುರಿತು ಹಲವು ಹಿರಿಯರೊಂದಿಗೆ ಮಾತುಕತೆ ನಡೆಸಲು ಬಾಕಿ ಇದೆ . ಇನ್ನು ಪಕ್ಷೇತರರಾಗಿ ಸ್ಪರ್ಧಿಸುವುದರಿಂದ ಕಾಂಗ್ರೆಸ್  ಮತಗಳು ಕಸಿದು ಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲ. ನನ್ನ ಉದ್ದೇಶ ಯಾವ ಮತಗಳನ್ನು ಕಸಿಯುವುದಲ್ಲ ಎಂದು ಸ್ಪಷ್ಟಪಡಿಸಿದರು.

First published: