Speaker Om Birla: ಜಂಟಿ ಸದನ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತು; ಹಿಂದಿ ಭಾಷಣಕ್ಕೆ ಜೆಡಿಎಸ್ ಶಾಸಕ ಅನ್ನದಾನಿ ವಿರೋಧ!

ಶಾಸಕಾಂಗವು ಹೆಚ್ಚು ಅರಿವು, ಶ್ರದ್ಧೆ, ಪ್ರಾಮಾಣಿಕತೆ ಜವಾಬ್ದಾರಿಯುತವಾಗಿರಬೇಕು. ಶಾಸಕರು ಶಾಸಕಾಂಗ ರೂಪಿಸುವ ಕಾನೂನುಗಳ ಬಗ್ಗೆ ಚರ್ಚೆ, ಚಿಂತನ ಮಂಥನ ನಡೆಸಬೇಕು. ಶಾಸಕಾಂಗಗಳು ರೂಪಿಸುವಲ್ಲಿ ಕಾನೂನು ಪರಿಣಾಮಕಾರಿ, ಸಮರ್ಥ ಇರಬೇಕು. ಆದರೆ ಸದನಗಳಲ್ಲಿ ಅಗತ್ಯ ಪ್ರಮಾಣದ ಚರ್ಚೆ, ಶಾಸಕರ ಭಾಗವಹಿಸುವಿಕೆ ನಡೆಯುತ್ತಿಲ್ಲ. ಇದು ಕಳವಳಕಾರಿ ಸಂಗತಿ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಜಂಟಿ ಸದನದಲ್ಲಿ ಭಾಗಿಯಾಗಿ ಮಾತನಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ.

ಜಂಟಿ ಸದನದಲ್ಲಿ ಭಾಗಿಯಾಗಿ ಮಾತನಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ.

  • Share this:
ಬೆಂಗಳೂರು: ಜಂಟಿ ಸಭೆಯಲ್ಲಿ ಭಾಗವಹಿಸುತ್ತಿರೋದು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿನ ವಿಧಾನಸೌಧ ಕಟ್ಟಡವು ಪ್ರಜಾಪ್ರಭುತ್ವದ (Democracy) ವಿಶಿಷ್ಟ ಸಂಕೇತ. ಅದು ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಈ. ಐತಿಹಾಸಿಕ ಕಟ್ಟಡ ಮತ್ತು ಪ್ರಜಾಪ್ರಭುತ್ವದೊಂದಿಗಿನ ಅದರ ಸುದೀರ್ಘ ಪ್ರಯಾಣವು ನಮಗೆ ಹೊಸ ಸ್ಪೂರ್ತಿ ನೀಡುತ್ತದೆ. ವಿಧಾನಸೌಧವು, ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಮತ್ತು ವಿದೇಶಿ ಪ್ರವಾಸಿಗರ ಮೇಲೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಸ್ಪೂರ್ತಿ ನೀಡುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Lok sabha Speaker Om Birla ಅವರು ಹೇಳಿದರು.

ಇಂದು ರಾಜ್ಯದ ಎರಡು ಸದನಗಳನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ಅವರು, ಕರ್ನಾಟಕ ಶ್ರಿಮಂತ ಮತ್ತು ಅದ್ಬುತ ಇತಿಹಾಸ ಹೊಂದಿದೆ. ಭಗವಾನ್ ಬಸವೇಶ್ವರ 12ನೇ ಶತಮಾನದಲ್ಲಿ ನಿರ್ಮಿಸಿದ ಅನಭವ ಮಂಟಪ ಪ್ರಸ್ತುತ ಸಂದರ್ಭದಲ್ಲಿ ಜನಪ್ರತಿನಿಧಿಗಳ ಸಂಸತ್ತಿನ ಪ್ರತಿಬಿಂಬವಾಗಿದೆ. ರಾಣಿ ಚೆನ್ನಮ್ಮನ ಮಹಾನ್ ತ್ಯಾಗವು ನಮಗೆ ಸ್ಪೂರ್ತಿ ನೀಡುತ್ತದೆ. ಕರ್ನಾಟಕ ರಾಜ್ಯದಲ್ಲಿ, ಪ್ರಜಾಪ್ರಭುತ್ವ ಪ್ರಯಾಣವು, ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿದೆ. ಈ ಭವ್ಯವಾದ ಪ್ರಯಾಣಕ್ಕೆ ಕಾರಣರಾದ ರಾಜಕೀಯ ಮುತ್ಸದ್ದಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಕೂಡ ಅಂತಹವರಿಂದ ಸ್ಪೂರ್ತಿ ಪಡೆಯಬೇಕು. ಸಂಸದೀಯ ಪ್ರಜಾಪ್ರಭುತ್ವವನ್ನು ಆಡಳಿತ ರೂಪವೆಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಈ ಸನ್ನಿವೇಶದಲ್ಲಿ ನಾವು ಸಂಸದೀಯ ಪ್ರಜಾಪ್ರಭುತ್ವ ಮತ್ತು ಶಾಸಕಾಂಗವನ್ನು ಬಲಪಡಿಸಿದ್ದೇವೆ. ಆಡಳಿತದ ಆಯಾಮಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ಪ್ರಜಾಪ್ರಭುತ್ವ ಯಾವಾಗಲೂ ಜನ ಕೇಂದ್ರೀಕೃತವಾಗಿದೆ ಎಂದರು.

ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಬೇಕು

ಸಂವಿಧಾನ ನಿರ್ಮಾತೃಗಳು ಸಂವಿಧಾನ ರೂಪಿಸುವಾಗ ಜನರ ಹಿತಾಸಕ್ತಿಗಳನ್ನು ಮುಖ್ಯವಾಗಿ‌ ಗಮನದಲ್ಲಿ ಇಟ್ಟುಕೊಂಡಿದ್ದರು. ಇದರಿಂದಲೇ ದೇಶದಲ್ಲಿ 17 ಸಾರ್ವತ್ರಿಕ ಚುನಾವಣೆಗಳು, ಮತ್ತು 300ಕ್ಕೂ ವಿಧಾನಸಭೆ ಚುನಾವಣೆಗಳು ಯಶಸ್ವಿಯಾಗಿ ನಡೆದಿವೆ. ಮತದಾರರ ಭಾಗವಹಿಸುವಿಕೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಚುನಾವಣೆ ನಂತರ ಅಧಿಕಾರ ವರ್ಗಾವಣೆ ಅತ್ಯಂತ ಸರಳವಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ಪ್ರಜಾಪ್ರಭುತ್ವ ಬಗೆಗಿನ ಬದ್ದತೆ. ಜನರ ಕಲ್ಯಾಣಕ್ಕೆ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡುತ್ತವೆ. ಶಾಸಕಾಂಗದಲ್ಲಿರುವ ನಾವು ಜನರ ಆಶಯಗಳನ್ನು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಮಾಧ್ಯಮವಾಗಿದ್ದು, ಅವುಗಳ ಕಲ್ಯಾಣ ಗುರಿಯಾಗಿಸಿಕೊಂಡು ಕಾನೂನು ರೂಪಿಸುತ್ತೇವೆ. ಆದರೆ ಈಗ ನಾವು ಈ ಪ್ರಯಾಣದ 75 ವರ್ಷಗಳನ್ನು ಪೂರ್ಣಗೊಳಿಸಲಿರುವಾಗ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಜನರಿಗೆ ಇನ್ನಷ್ಟು ಉತ್ತರದಾಯಕರನ್ನಾಗಿ ಮಾಡುವುದು ಹೇಗೆ? ಎಂದು ಪರಿಶೀಲಿಸಬೇಕಾಗಿದೆ. ಆಡಳಿತವು ಜನರ ಭಾವನೆಗಳು ಮತ್ತು ಅಕಾಂಕ್ಷೆಗಳೊಂದಿಗೆ ಹೊಂದಿಕೆಯಾಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಸಂಸದೀಯ ಪ್ರಜಾಪ್ರಭುತ್ವವು ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿಯನ್ನು ಆಧರಿಸಿದೆ. ಚುನಾಯಿತ ಪ್ರತಿನಿಧಿಗಳು ಜನರ ಆಶಯಗಳು ಮತ್ತು ಆಕಾಂಕ್ಷೆಗಳಿಗೆ ಸಂವೇದನಾಶೀಲರಾದಾಗ ಮತ್ತು ಶಾಸಕಾಂಗಗಳ ಮೂಲಕ ಅವುಗಳನ್ನು ಪೂರೈಸಲು ಶ್ರಮಿಸಿದಾಗ ಮಾತ್ರ ಸಂಸತ್ತು ಮತ್ತು ಶಾಸಕಾಂಗದ ಪ್ರತಿಷ್ಠೆಯನ್ನು ಹೆಚ್ಚಿಸಬಹುದು. ನಮ್ಮ ಶಾಸಕಾಂಗಗಳು ಪ್ರಜಾಪ್ರಭುತ್ವದ ಆತ್ಮ, ದೇಶಕ್ಕಾಗಿ ನೀತಿಗಳು ಮತ್ತು ಕಾನೂನುಗಳನ್ನು ರೂಪಿಸುವ ಜವಾಬ್ದಾರಿ ಶಾಸಕಾಂಗಗಳ ಹೆಗಲ ಮೇಲಿದೆ ಎಂದರು.

ನಮ್ಮ ಶಾಸಕಾಂಗ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಜನರ ಕುಂದು- ಕೊರತೆಗಳಿಗೆ ಧ್ವನಿ ನೀಡಲು ವಿವಿಧ ದೃಷ್ಟಿ ಕೋನಗಳಲ್ಲಿ ಕೆಲಸ ಮಾಡುತ್ತಿವೆ. ಮತ್ತು ಕಾರ್ಯಾಂಗದ ಜವಾಬ್ದಾರಿಯನ್ನು ಸರಿಪಡಿಸಲು ಕೂಡ ಬಹುವಿಧದ ಆಯಾಮದಲ್ಲಿ ಕೆಲಸ ಮಾಡುತ್ತಿವೆ. ಇಂತಹ ಗುರುತರವಾದ ಜವಾಬ್ದಾರಿಗಳನ್ನು ಪೂರೈಸಲು, ಶಾಸಕಾಂಗದ ಸದಸ್ಯರು ಪ್ರಜಾಪ್ರಭುತ್ವದ ತತ್ವಗಳು ಮತ್ತು ಮೌಲ್ಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಮತ್ತು ಈ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಜನರಿಗೆ ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಕವಾಗಿ ಮಾಡುವಂತೆ ನೋಡಿಕೊಳ್ಳಬೇಕು. ಆಡಳಿತದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ಸಂವಿಧಾನದಲ್ಲಿ ನಿರ್ದಿಷ್ಟಪಡಿಸಲಾಗಿದೆ ಮತ್ತು ಅವುಗಳ ವ್ಯಾಪ್ತಿಯನ್ನು ಕೂಡ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: Siddaramaiah on CM-Speaker: ಸಿಎಂ RSS ಕೈಗೊಂಬೆ, ಸ್ಪೀಕರ್ ಸರ್ಕಾರದ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಸಂವಿಧಾನವನ್ನು ರೂಪಿಸುವಾಗ, ನಮ್ಮ ಶಾಸಕರು ನಮ್ಮ ಜನರ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಶಾಸಕಾಂಗವು ಹೆಚ್ಚು ಅರಿವು, ಶ್ರದ್ಧೆ, ಪ್ರಾಮಾಣಿಕತ ಮತ್ತು ಜವಾಬ್ದಾರಿಯುತವಾಗಿರಬೇಕು ಎಂಬ ಚಿಂತನೆಯೊಂದಿಗೆ ಇದರ ನಿರ್ಮಾತೃಗಳು ಕೆಲಸ ಮಾಡಿದರು. ಶಾಸಕಾಂಗವು ಹೆಚ್ಚು ಅರಿವು, ಶ್ರದ್ಧೆ, ಪ್ರಾಮಾಣಿಕತೆ ಜವಾಬ್ದಾರಿಯುತವಾಗಿರಬೇಕು. ಶಾಸಕರು ಶಾಸಕಾಂಗ ರೂಪಿಸುವ ಕಾನೂನುಗಳ ಬಗ್ಗೆ ಚರ್ಚೆ, ಚಿಂತನ ಮಂಥನ ನಡೆಸಬೇಕು. ಶಾಸಕಾಂಗಗಳು ರೂಪಿಸುವಲ್ಲಿ ಕಾನೂನು ಪರಿಣಾಮಕಾರಿ, ಸಮರ್ಥ ಇರಬೇಕು. ಆದರೆ ಸದನಗಳಲ್ಲಿ ಅಗತ್ಯ ಪ್ರಮಾಣದ ಚರ್ಚೆ, ಶಾಸಕರ ಭಾಗವಹಿಸುವಿಕೆ ನಡೆಯುತ್ತಿಲ್ಲ. ಇದು ಕಳವಳಕಾರಿ ಸಂಗತಿ. ಸದಸ್ಯರು ಉತ್ತಮ ನಡವಳಿಕೆ, ಸಭ್ಯತೆ, ಪ್ರಬುದ್ಧತೆ, ಔದಾರ್ಯ ಹೊಂದಿರಬೇಕು. ಪ್ರತಿಭಟನೆ ಸದನದ ಘನತೆಗೆ ಅನುಗುಣವಾಗಿ ಇರಬೇಕು. ಸಂಸತ್ತಿನ ನಿಯಮಗಳಿಗನುಸಾರ ಪ್ರತಿಭಟನೆಗಳಿರಬೇಕು ಎಂದರು.

ಓಂ ಬಿರ್ಲಾ ಹಿಂದಿ ಭಾಷಣಣಕ್ಕೆ ಜೆಡಿಎಸ್ ಶಾಸಕ ಅನ್ನದಾನಿ ವಿರೋಧ

ಜಂಟಿ ಸದನ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಿಂದಿಯಲ್ಲಿ ಭಾಷಣ ಆರಂಭಿಸಿದರು. ಆಗ ಹಿಂದಿ‌ ಭಾಷಣಕ್ಕೆ ಜೆಡಿಎಸ್ ಶಾಸಕ‌ ಅನ್ನದಾನಿ ಅವರು ವಿರೋಧ ವ್ಯಕ್ತಪಡಿಸಿದರು. ಕನ್ನಡ ಬಾವುಟ ಪ್ರದರ್ಶಿಸಿ, ಕನ್ನಡದಲ್ಲಿ ಭಾಷಣ ಮಾಡುವಂತೆ ಎದ್ದು ನಿಂತು ಕೂಗಿದರು. ಬಾವುಟ ಪ್ರದರ್ಶಿಸಿ, ಕರ್ನಾಟಕಕ್ಕೆ ಜೈ ಎಂದು ಘೋಷಣೆ ಕೂಗಿದರು.

ವರದಿ: ಕೃಷ್ಣ ಜಿವಿ
Published by:HR Ramesh
First published: