ಎಸ್​.ಎಂ ಕೃಷ್ಣರನ್ನು ಭೇಟಿಯಾಗಲು ಮುಂದಾದ ಸುಮಲತಾ; ಕುತೂಹಲ ಕೆರಳಿಸಿದ ಗೌಡ್ತಿ ನಡೆ

ತಮ್ಮ ಚುನಾವಣಾ ನಿರ್ಧಾರದ ಕುರಿತು ಮಾರ್ಚ್​ 18ರಂದು ಅಧಿಕೃತ ಪಡಿಸಲಿರುವ ಅವರು ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ, ಇಲ್ಲ ಬಿಜೆಪಿಗೆ ಹೋಗುತ್ತಾರಾ ಎಂಬ ಸಂಶಯ ಮೂಡಿಸಿದೆ. ಇದಕ್ಕೆ ಕಾರಣ ಇಂದಿನ ಅವರ ಭೇಟಿ.

Seema.R | news18
Updated:March 15, 2019, 10:52 AM IST
ಎಸ್​.ಎಂ ಕೃಷ್ಣರನ್ನು ಭೇಟಿಯಾಗಲು ಮುಂದಾದ ಸುಮಲತಾ; ಕುತೂಹಲ ಕೆರಳಿಸಿದ ಗೌಡ್ತಿ ನಡೆ
ಸುಮಲತಾ- ಎಸ್​ಎಂ ಕೃಷ್ಣ
  • News18
  • Last Updated: March 15, 2019, 10:52 AM IST
  • Share this:
ಬೆಂಗಳೂರು (ಮಾ.15): ಮೈತ್ರಿ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿರುವ ಕಾಂಗ್ರೆಸ್​ ತಮ್ಮನ್ನು ಬೆಂಬಲಿಸುವುದಿಲ್ಲ ಎಂಬ ಅರಿವಾಗುತ್ತಿದ್ದಂತೆ ಸುಮಲತಾ ಅಂಬರೀಷ್​ ಬಿಜೆಪಿ ಮುಖಂಡ ಎಸ್.ಎಂ ಕೃಷ್ಣ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಬಿಜೆಪಿ ಕೂಡ ಸುಮಲತಾ ಸೆಳೆಯಲು ಅನೇಕ ಬಾರಿ ಮುಂದಾಗಿರುವ ಹಿನ್ನೆಲೆ ಇವರ ಇಂದಿನ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸತತ ಎರಡು ವಾರಗಳ ಕಾಲ ಮಂಡ್ಯ ಕ್ಷೇತ್ರವನ್ನು ಸುತ್ತಿರುವ ಸುಮಲತಾ ಈಗಾಗಲೇ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ತಮ್ಮ ಚುನಾವಣಾ ನಿರ್ಧಾರದ ಕುರಿತು ಮಾರ್ಚ್​ 18ರಂದು ಅಧಿಕೃತ ಪಡಿಸಲಿರುವ ಅವರು, ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ, ಇಲ್ಲ ಬಿಜೆಪಿಗೆ ಹೋಗುತ್ತಾರಾ ಎಂಬ ಸಂಶಯ ಮೂಡಿದೆ. ಇದಕ್ಕೆ ಕಾರಣ ಇಂದಿನ ಅವರ ಭೇಟಿ.

ಮಂಡ್ಯ ಕ್ಷೇತ್ರ ಪ್ರಚಾರಕ್ಕೆ ಇಂದು ತಾತ್ಕಾಲಿಕ ಬ್ರೇಕ್​ ನೀಡಿರುವ ಅವರು,  ಸದಾಶಿವನಗರದಲ್ಲಿನ ಎಸ್​ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಮಂಡ್ಯ ಮೂಲದ ಎಸ್​ ಎಂ ಕೃಷ್ಣ, ಕಾಂಗ್ರೆಸ್​ನಲ್ಲಿ ದೀರ್ಘರಾಜಕೀಯ ಅನುಭವವನ್ನು ಪಡೆದಿದ್ದು, ಅಂಬರೀಷ್​ ಅವರ ಆಪ್ತರು ಕೂಡ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ  ಹಾಗೂ ಚುನಾವಣಾ ತೀರ್ಮಾನದ ಕುರಿತು ಅವರೊಂದಿಗೆ ಚರ್ಚೆ ನಡೆಸಲು ಸುಮಲತಾ ಮುಂದಾಗಿದ್ದಾರೆ.

ಕಾಂಗ್ರೆಸ್​ ಟಿಕೆಟ್​ ನೀಡದ ಹಿನ್ನೆಲೆಯಲ್ಲಿ ಸುಮಲತಾರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಕೂಡ ಮುಂದಾಗಿತು. ಸುಮಲತಾ ಬಿಜೆಪಿ ಸೇರಿದರೆ ಅವರಿಗೆ ಟಿಕೆಟ್​ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈಗಾಗಲೇ ಬಹಿರಂಗ ಆಹ್ವಾನ ನೀಡಿದ್ದಾರೆ. ಅಲ್ಲದೇ ಆರ್​ ಅಶೋಕ್​ ಮೂಲಕ ಕೂಡ ಸುಮಲತಾ ಮನವೊಲಿಕೆಗೆ ಯತ್ನ ನಡೆಸಿದ್ದರು. ಈಗ ಈ ಅಂಬರೀಷ್​ ಕುಟುಂಬಕ್ಕೆ ಹತ್ತಿರವಾಗಿರುವ ಕೃಷ್ಣ ಮೂಲಕ ಸುಮಲತಾರನ್ನು ಬಿಜೆಪಿ ಕರೆತರುವ ಪ್ರಯತ್ನ ಕೂಡ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನು ಓದಿ: ದೇವೇಗೌಡರ ಮೊಮ್ಮಕ್ಕಳ ರಾಜಕೀಯ ಎಂಟ್ರಿ ಹೂವಿನ ಹಾದಿಯೇ, ಆದರೆ ಮುಂದೆ ಕಾದಿದೆ ಕಲ್ಲು-ಮುಳ್ಳುಗಳು!

ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ ಅನುಭವ, ಮಂಡ್ಯದ ರಾಜಕೀಯ ತಂತ್ರಗಾರಿಕೆ ಬಲ್ಲ ಕೃಷ್ಣ  ಅವರಿಂದ ತಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಸುಮಲತಾ ಕೂಡ ಸಜ್ಜಾಗಿದ್ದಾರೆ. ಮೈತ್ರಿ ಪಕ್ಷಕ್ಕೆ ಕಟ್ಟುಬಿದ್ದು ನಿಖಿಲ್​ ಕುಮಾರಸ್ವಾಮಿಗೆ ಟಿಕೆಟ್​ ನೀಡಿರುವ ಮೈತ್ರಿ ಪಕ್ಷದ ನಾಯಕರ ನಡೆಯಿಂದ ಅಸಮಾಧಾನ ವ್ಯಕ್ತಪಡಿಸಿರುವ ಸುಮಲತಾ ಮುಂದಿನ ನಡೆ ಏನು ಎಂಬ ಬಗ್ಗೆ ಮಾ.18ರಂದು ತಿಳಿಯಲಿದೆ.

First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ