ಸೋಲಿಲ್ಲದ ಸರದಾರ ಕೆ.ಎಚ್​. ಮುನಿಯಪ್ಪಗೆ ಈ ಬಾರಿ ಗೆಲುವಿನ ಹಾದಿ ಸುಗಮವಲ್ಲ?

Lok Sabha Elections 2019: ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಮುನಿಯಪ್ಪ ಎಲ್ಲರಿಗಿಂತ ಒಂದೆಜ್ಜೆ ಮುಂದಿರುತ್ತಾರೆ. ಹಾಗಂತ ಇವರು ಜನ ಮೆಚ್ಚಿದ ನಾಯಕರೂ ಆಗಿಲ್ಲ. ಸಮಯೋಚಿತ ರಾಜಕೀಯ, ಜೊತೆಗೆ ಮೀಸಲು ಕ್ಷೇತ್ರವಾದ್ದರಿಂದ ಜಾತಿ ಲೆಕ್ಕಾಚಾರದಿಂದಲೂ ಮುನಿಯಪ್ಪ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ

Latha CG | news18
Updated:April 22, 2019, 6:07 PM IST
ಸೋಲಿಲ್ಲದ ಸರದಾರ ಕೆ.ಎಚ್​. ಮುನಿಯಪ್ಪಗೆ ಈ ಬಾರಿ ಗೆಲುವಿನ ಹಾದಿ ಸುಗಮವಲ್ಲ?
ಕೋಲಾರ ಲೋಕಸಭಾ ಚುನಾವಣೆ ಅಭ್ಯರ್ಥಿಗಳು
 • News18
 • Last Updated: April 22, 2019, 6:07 PM IST
 • Share this:
ರಘುರಾಜ್​

ಕೋಲಾರ: ಸೋಲಿಲ್ಲದ ಸರದಾರ ಸಂಸದ ಮುನಿಯಪ್ಪ ಇದುವರೆಗೂ ಲೋಕಸಭಾ ಚುನಾವಣೆಯಲ್ಲಿ ಸೋಲೇ ಕಂಡಿಲ್ಲ. ಕಳೆದ 7 ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಸೋಲುಣಿಸಿರುವ ಮುನಿಯಪ್ಪ ಜಿಲ್ಲೆಯನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದಾರೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲನುಭವಿಸಿರುವ ಮುನಿಯಪ್ಪ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಜಯಗಳಿಸಿಲ್ಲ.

ವಿಧಾನಸಭೆ ಚುನಾವಣೆ ಕಡೆ ಅಷ್ಟೊಂದು ಒಲವು ತೋರದ ಮುನಿಯಪ್ಪ ಸ್ಥಳೀಯ ನಾಯಕರಿಗೆ ಚುನಾವಣಾ ಉಸ್ತುವಾರಿ ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಮುನಿಯಪ್ಪ ಎಲ್ಲರಿಗಿಂತ ಒಂದೆಜ್ಜೆ ಮುಂದಿರುತ್ತಾರೆ. ಹಾಗಂತ ಇವರು ಜನ ಮೆಚ್ಚಿದ ನಾಯಕರೂ ಆಗಿಲ್ಲ. ಸಮಯೋಚಿತ ರಾಜಕೀಯ, ಜೊತೆಗೆ ಮೀಸಲು ಕ್ಷೇತ್ರವಾದ್ದರಿಂದ ಜಾತಿ ಲೆಕ್ಕಾಚಾರದಿಂದಲೂ ಮುನಿಯಪ್ಪ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೋಲಾರ ಕೇಶವ ಮುನಿಯಪ್ಪಗೆ ಪ್ರತಿರೋಧ ಒಡ್ಡಿದ್ದು ಬಿಟ್ಟರೆ, ಬಿಜೆಪಿ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಾಗಿತ್ತು. ಕ್ಷೇತ್ರದಲ್ಲಿ ಸತತ 7 ಬಾರಿ ಗೆಲುವಿಗೆ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳ ಸಹಕಾರ ಇದೆ ಎಂಬ ಅಭಿಪ್ರಾಯವಿದೆ. ಬಿಎಸ್ ಯಡಿಯೂರಪ್ಪ ಹಾಗೂ ಎಚ್‍ಡಿ ದೇವೇಗೌಡರ ಬಳಿ ಆತ್ಮೀಯತೆ ಬೆಳೆಸಿಕೊಂಡಿರುವ ಮುನಿಯಪ್ಪ ತಮ್ಮ ವಿರೋಧದ ಅಭ್ಯರ್ಥಿಯನ್ನಾಗಿ ಅವರೇ ಆಯ್ಕೆ ಮಾಡಿಕೊಂಡು ಜಯ ಗಳಿಸುವುದಾಗಿ ಹೇಳುತ್ತಾರೆ ಇಲ್ಲಿಯ ಜನರು.

7 ಬಾರಿ ಗೆದ್ದು ಕೋಲಾರಕ್ಕೆ ಏನು ಮಾಡಿದ್ದಾರೆ?

ಒಂದು ಹೆದ್ದಾರಿ ನಿರ್ಮಾಣವಾಗಿದೆ. ರೈಲೂ ಒಂದೇ ಇದೆ. ಜಿಲ್ಲೆಯ ಕೆಲವೆಡೆ ಇನ್ನೂ ಬಸ್ ನಿಲ್ದಾಣಗಳೂ ಇಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರಿಯಾದ ರಸ್ತೆಗಳಿಲ್ಲ. ಕೋಲಾರದ ವೇಮಗಲ್ ಮತ್ತು ನರಸಾಪುರ ಭಾಗದಲ್ಲಿ ಕೈಗಾರಿಕಾ ಪ್ರದೇಶ ಆಗಿದ್ದು ಒಳ್ಳೇ ಕೆಲಸ. ಆದರೆ ಜಿಲ್ಲೆಯ ನೀರಾವರಿ ಸಮಸ್ಯೆಯನ್ನು ಬಗೆಹರಿಸಿಲ್ಲ. ಲೋಕಸಭೆಯಲ್ಲಿ ಏನೂ ಜಿಲ್ಲೆಯ ಪರವಾಗಿ ಮಾತಾಡಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೆಸಿ ವ್ಯಾಲಿ ಯೋಜನೆ ಜಾರಿಯಾಗಿದೆಯಾದರೂ, ಅವೈಜ್ಞಾನಿಕ ನೀತಿಯಿಂದ ಸರ್ಕಾರ ನ್ಯಾಯಾಂಗ ಹೋರಾಟದಲ್ಲಿ ಹಿನ್ನಡೆ ಉಂಟಾಗಿ ನೀರು ಸ್ಥಗಿತವಾಗಿದೆ. ಎತ್ತಿನಹೊಳೆ ಯೋಜನೆ ಆರಂಭಿಸುವುದರಲ್ಲಿ ಮುನಿಯಪ್ಪನವರ ಪಾತ್ರವೂ ಇದೆ. ಆದರೆ ಯೋಜನೆಯಿಂದ ಜಿಲ್ಲೆಗೆ ನೀರು ಸಿಗುವ ಭರವಸೆಯಿಲ್ಲ.ಕಳೆದ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳೇನು? 

 • ಕೆಜಿಎಫ್​​ ಚಿನ್ನದಗಣಿ ಪುನರ್​​ ಆರಂಭ: ಅದು ಕೇವಲ ಮನವಿ ನೀಡುವ ತನಕ ಸೇರಿದೆ, ಕೇಂದ್ರ ಬಿಜೆಪಿ ಸರ್ಕಾರ ಒಪ್ಪುತ್ತಿಲ್ಲ ಎಂದು ಇಂದಿಗೂ ಕಾರಣ ಹೇಳುತ್ತಿದ್ದಾರೆ.

 • ಕೆಜಿಎಫ್​​ನಲ್ಲಿ ಕೈಗಾರಿಕಾ ವಲಯ ಸ್ಥಾಪನೆ - ಈಗ ಅದರ ಪ್ರಸ್ತಾಪವೇ ಇಲ್ಲ.

 • ಶ್ರೀನಿವಾಸಪುರದಲ್ಲಿ ರೈಲು ಕೋಚ್ ಫ್ಯಾಕ್ಟರಿ- ಆದರೆ ಒಂದಿಂಚು ಕಾಮಗಾರಿ ಆರಂಭವಾಗಿಲ್ಲ.

 • ಕೋಲಾರ ಜಿಲ್ಲೆಗೆ ನೀರಾವರಿ - ಚುನಾವಣೆ ಹಿಂದೆ ಬಯಲುಸೀಮೆ ಜಿಲ್ಲೆಗೆ ಕುಡಿಯುವ ನೀರು ಹರಿಸುವುದಾಗಿ ಹೇಳಿದ್ದರು. ಆದರೆ ಈಗ ಎತ್ತಿನಹೊಳೆ, ಕೆಸಿ ವ್ಯಾಲಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ಕುರಿತು ಹೇಳಿಕೆ ನೀಡ್ತಿದ್ದಾರೆ.

 • ಶಾಶ್ವತ ನೀರಾವರಿ ಭರವಸೆ ನೀಡಿದ್ದರು - ಆದ್ರೆ ಜಿಲ್ಲೆಗೆ ಯಾವುದೇ ನೀರಾವರಿ ಯೋಜನೆ ಭರವಸೆ ಪೂರ್ಣವಾಗಿಲ್ಲ.


ಕ್ಷೇತ್ರದ ನಿಜವಾದ ಬೇಡಿಕೆಗಳೇನು. ಸಮಸ್ಯೆಗಳೇನು. ಜನಕ್ಕೆ ಪರಿಹಾರ ನೀಡುವಲ್ಲಿ ಹಾಲಿ ಸಂಸದರ ಪ್ರಯತ್ನ ಎಷ್ಟರ ಮಟ್ಟಿಗಿದೆ. 

 • ಶ್ರೀನಿವಾಸಪುರದಲ್ಲಿ ಮಾವು ಪಲ್ಪ್  ಫ್ಯಾಕ್ಟರಿ - ಪ್ರಯತ್ನ ಕೇವಲ ಆಶ್ವಾಸನೆ, ಭರವಸೆ

 • ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ - ಅದರ ಪ್ರಸ್ತಾಪವೇ ಇಲ್ಲ.

 • ಮುಳಬಾಗಿಲು ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶ- ಕೇವಲ ಚುನಾವಣೆ ವೇಳೆ ಮಾತ್ರ ಪ್ರಸ್ತಾಪ.

 • ಅತ್ಯಾಧುನಿಕ ಟೊಮೆಟೊ ಮಾರುಕಟ್ಟೆ, ಟೊಮೆಟೊ ಸಂಸ್ಕರಣಾ ಕೇಂದ್ರ, ಟೊಮೆಟೋ ಹಣ್ಣಿನ ಪ್ಯಾಕ್ಟರಿಗಳ ಬೇಡಿಕೆಯಿದೆ, ಅದರ ಪ್ರಸ್ತಾಪವೂ ಇಲ್ಲ.

 • ಟೊಮೆಟೊ ದರ ಕುಸಿದಾಗ ವೈಜ್ಞಾನಿಕವಾಗಿ ಬೇರೆಡೆ ಬೇಡಿಕೆಯಿರುವ ಸ್ತಳಗಳಿಗೆ ಟೊಮೆಟೊ ಸಾಗಾಣಿಕ ವ್ಯವಸ್ತೆಯ ಬೇಡಿಕೆಯಿದೆ - ಅದರ ಪ್ರಸ್ತಾಪವೂ ಇಲ್ಲ.

 • ಜಿಲ್ಲೆಯ ಎಲ್ಲಾ ತಾಲೂಕುಗಳ ಕೇಂದ್ರದಲ್ಲಿ ಜನಸಂಖ್ಯೆಯ ಹೆಚ್ಚಳದಿಂದ ನಿತ್ಯ ಟ್ರಾಫಿಕ್ ಸಮಸ್ಯೆಯಿದೆ. ಆದರೆ ರಸ್ತೆಗಳು ಕಿರಿದಾಗಿದ್ದು, ಅಭಿವೃದ್ದಿಯಾಗದೆ ಜನರು ಪರದಾಟ ಎದುರಿಸುತ್ತಿದ್ದಾರೆ.

 • ಮುಳಬಾಗಿಲು ಟು ಬೆಂಗಳೂರು ರೈಲು ಮಾರ್ಗದ ಬೇಡಿಕೆಯಿದೆ: ಇದಕ್ಕೆ ಮುನಿಯಪ್ಪ ಹಲವು ಬಾರಿ ಮನವಿ ನೀಡಿದ್ದಾರೆ. ಕೆಜಿಎಫ್​​ ತಾಲೂಕಿನಿಂದ ಬೆಂಗಳೂರಿಗೆ ನಿತ್ಯ 30 ಸಾವಿರಕ್ಕೂ ಹೆಚ್ಚು ಮಂದಿ ಕೆಲಸಕ್ಕಾಗಿ ಪ್ರಯಾಣಿಸುತ್ತಾರೆ. ಕೆಜಿಎಫ್​​ನಿಂದ ಬೆಂಗಳೂರಿಗೆ ವಿಶೇಷ ರೈಲು ವ್ಯವಸ್ಥೆ ಬೇಕಿದೆ.

 • ಯರಗೋಳು ಕುಡಿಯುವ ನೀರಾವರಿ ಯೋಜನೆ - ಸಂಸದರು ಕಳೆದ 10 ವರ್ಷದಿಂದ ಈ ಯೋಜನೆ ಗೋಜಿಗೆ ಹೋಗಿಲ್ಲ.


ವಿಧಾನ ಸಭಾ ಕ್ಷೇತ್ರಗಳ ಹೆಸರು:

ಬಂಗಾರಪೇಟೆ, ಕೋಲಾರ,  ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್​, ಚಿಂತಾಮಣಿ, ಶಿಡ್ಲಘಟ್ಟ.

ಕ್ಷೇತ್ರದ ಒಟ್ಟು ಮತದಾರರ ವಿವರ: 

ಒಟ್ಟು ಮತದಾರರು: 13,20,078, ಪುರುಷರು 51.01 %, ಮಹಿಳೆಯರು 49 %.

ಹಾಲಿ ಸಂಸದರು ಮತ್ತು ಕ್ಷೇತ್ರದಲ್ಲಿನ ಹಾಲಿ ಶಾಸಕರ ವಿವರ:

 • ಕೋಲಾರ- ಕೆಎಚ್ ಮುನಿಯಪ್ಪ

 • ಶಾಸಕರು: ಬಂಗಾರಪೇಟೆ - ಎಸ್‍ಎನ್ ನಾರಾಯಣಸ್ವಾಮಿ,

 • ಕಾಂಗ್ರೆಸ್ ಕೋಲಾರ - ಕೆಎಸ್ ಶ್ರೀನಿವಾಸಗೌಡ, ಜೆಡಿಎಸ್​

 • ಮಾಲೂರು - ಕೆವೈ ನಂಜೇಗೌಡ, ಕಾಂಗ್ರೆಸ್​

 • ಮುಳಬಾಗಿಲು - ಎಚ್ ನಾಗೇಶ್, ಪಕ್ಷೇತರ

 • ಕೆಜಿಎಫ್​​ - ಎಮ್ ರೂಪಕಲಾ, ಕಾಂಗ್ರೆಸ್​

 • ಶ್ರೀನಿವಾಸಪುರ, - ಕೆಆರ್ ರಮೇಶ್‍ ಕುಮಾರ್​

 • ಚಿಂತಾಮಣಿ - ಜೆಕೆ ಸುಬ್ಬಾರೆಡ್ಡಿ, ಜೆಡಿಎಸ್​

 • ಶಿಡ್ಲಘಟ್ಟ - ವಿ ಮುನಿಯಪ್ಪ , ಕಾಂಗ್ರೆಸ್


ಇದನ್ನೂ ಓದಿ: ಬಿಜೆಪಿಯ ಹ್ಯಾಟ್ರಿಕ್​ ಹೀರೊ ಪ್ರಹ್ಲಾದ್​ ಜೋಶಿಯನ್ನು ಈ ಬಾರಿಯಾದರೂ ಕಟ್ಟಿ ಹಾಕತ್ತಾ ಕಾಂಗ್ರೆಸ್​?

ಕಳೆದ ಚುನಾವಣೆಯಲ್ಲಿ ಗೆಲುವಿನ ಅಂತರ:

ಕೆಎಚ್ ಮುನಿಯಪ್ಪ, (ಕಾಂಗ್ರೆಸ್ ) ಒಟ್ಟು ಮತಗಳು 4,18,926. ಕೋಲಾರ ಕೇಶವ (ಜೆಡಿಎಸ್) - ಒಟ್ಟು ಮತಗಳು - 3,71,076ಗೆಲುವಿನ ಅಂತರ - 47,850.

ಕಳೆದ ಐದು ಚುನಾವಣೆಗಳ ಫಲಿತಾಂಶ:

1998 - ಕೆಎಚ್ ಮುನಿಯಪ್ಪ (ಕಾಂಗ್ರೆಸ್ ) - 304261ಬಾಲಾಜಿ ಚನ್ನಯ್ಯ (ಜನತಾದಳ) - 2,26,289.
1999 - ಕೆಎಚ್ ಮುನಿಯಪ್ಪ (ಕಾಂಗ್ರೆಸ್) - 3,21,964. ಜಿ ಗಂಗಮ್ಮ (ಬಿಜೆಪಿ) - 2,39,182.
2004 - ಕೆಎಚ್ ಮುನಿಯಪ್ಪ (ಕಾಂಗ್ರೆಸ್) - 3,85,582. ಡಿಎಸ್ ವೀರಯ್ಯ (ಬಿಜೆಪಿ) - 3,73,947.
2009 - ಕೆಎಚ್ ಮುನಿಯಪ್ಪ (ಕಾಂಗ್ರೆಸ್ ) - 3,44,771. ಡಿಎಸ್ ವೀರಯ್ಯ (ಬಿಜೆಪಿ) - 3,21,765.
2014 - ಕೆಎಚ್ ಮುನಿಯಪ್ಪ, (ಕಾಂಗ್ರೆಸ್) ಒಟ್ಟು ಮತಗಳು 4,18,926. ಕೋಲಾರ ಕೇಶವ (ಜೆಡಿಎಸ್) - ಒಟ್ಟು ಮತಗಳು - 3,71,076.

ಇದನ್ನೂ ಓದಿ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಯದ ಓಟಕ್ಕೆ ಬೀಳತ್ತಾ ಬ್ರೇಕ್​?

ಜಾತಿವಾರು ಮತದಾರರ ಲೆಕ್ಕಾಚಾರ:

 • ಪರಿಶಿಷ್ಟ ಜಾತಿ - 3,15867

 • ಪರಿಶಿಷ್ಟ ವರ್ಗ - 58,875

 • ಒಕ್ಕಲಿಗ - 2.90000

 • ಕುರುಬ - 1,90,000

 • ಭೋವಿ - 1,90,500

 • ಮುಸ್ಲಿಂ - 1,70,873

 • ಬಲಜಿಗ - 45,000

 • ಕ್ಷತ್ರಿಯಾ - 30,000

 • ಲಿಂಗಾಯತ - 3,000

 • ಬ್ರಾಹ್ಮಣ - 2,000

 • ಕ್ರಿಶ್ಚಿಯನ್ - 10,722

First published:January 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ