ಬಿಜೆಪಿಯ ಹ್ಯಾಟ್ರಿಕ್​ ಹೀರೊ ಪ್ರಹ್ಲಾದ್​ ಜೋಶಿಯನ್ನು ಈ ಬಾರಿಯಾದರೂ ಕಟ್ಟಿ ಹಾಕತ್ತಾ ಕಾಂಗ್ರೆಸ್​?

ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಯಾಗಬೇಕು. ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಮಹದಾಯಿಯಿಂದ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ. ವಿದ್ಯಾವಂತ ಯುವಕರು ಕೆಲಸ ಅರಸಿ ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬ ಆರೋಪ ಜೋಶಿ ಮೇಲೆ ಕೇಳಿ ಬರುತ್ತದೆ

G Hareeshkumar | news18
Updated:January 27, 2019, 9:16 PM IST
ಬಿಜೆಪಿಯ ಹ್ಯಾಟ್ರಿಕ್​ ಹೀರೊ ಪ್ರಹ್ಲಾದ್​ ಜೋಶಿಯನ್ನು ಈ ಬಾರಿಯಾದರೂ ಕಟ್ಟಿ ಹಾಕತ್ತಾ ಕಾಂಗ್ರೆಸ್​?
ಲೋಕಸಭಾ ಚುನಾವಣೆ 2019 - ಧಾರವಾಡ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳು
G Hareeshkumar | news18
Updated: January 27, 2019, 9:16 PM IST
ಪರಶುರಾಮ್ ತಹಶೀಲ್ದಾರ್​

ಉತ್ತರ ಕರ್ನಾಕದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಧಾರವಾಡ ಸಹ ಒಂದು. ಅಲ್ಲದೇ ಹ್ಯಾಟ್ರಿಕ್ ಬಾರಿಸಿ ಪ್ರಹ್ಲಾದ್​ ಜೋಶಿ ಎಲ್ಲರ ಗಮನ ಸೇಳೆದಿದ್ದರು ಕಳೆದ ಬಾರಿ ಜೋಶಿ ಸೋಲಿಸಲು ಕಾಂಗ್ರೆಸ್ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಅಖಾಡಕ್ಕೆ ಇಳಿಸಿತ್ತು. ಆದರೆ ಈ ಬಾರಿ ಬಿಜೆಪಿಯಲ್ಲಿಯು ಸಹ ಜೋಶಿ ವಿರುದ್ಧ ಅಸಮಧಾನದ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಬಿಜೆಪಿ ಟಿಕೇಟ್ ಯಾರಿಗೆ ಕೊಡುತ್ತಾರೆ ಎಂಬುವುದು ಇನ್ನೂ ಅಂತಿಮವಾಗಿಲ್ಲ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು

1) ನವಲಗುಂದ: ಬಿಜೆಪಿ ಶಾಸಕ- ಶಂಕರ್‌ ಪಾಟೀಲ್‌ ಮುನೇನಕೊಪ್ಪ.
2) ಕುಂದಗೋಳ: ಕಾಂಗ್ರೆಸ್‌ ಶಾಸಕ- ಪೌರಾಡಳಿತ ಸಚಿವ - ಸಿ.ಎಸ್. ಶಿವಳ್ಳಿ.
3) ಧಾರವಾಡ ಗ್ರಾಮೀಣ: ಬಿಜೆಪಿ ಶಾಸಕ- ಅಮೃತ್ ದೇಸಾಯಿ.
Loading...

4) ಹುಬ್ಬಳ್ಳಿ- ಧಾರವಾಡ ಪೂರ್ವ: ಕಾಂಗ್ರೆಸ್‌ ಶಾಸಕ- ಲಿಡ್ಕರ್‌ ನಿಗಮದ ಅಧ್ಯಕ್ಷ- ಪ್ರಸಾದ್‌ ಅಬ್ಬಯ್ಯ.
5) ಹುಬ್ಬಳ್ಳಿ- ಧಾರವಾಡ ಕೇಂದ್ರ: ಬಿಜೆಪಿ ಶಾಸಕ- ಮಾಜಿ ಸಿಎಮ್- ಜಗದೀಶ್ ಶೆಟ್ಟರ್.
6) ಹುಬ್ಬಳ್ಳಿ- ಧಾರವಾಡ ಪಶ್ಚಿಮ: ಬಿಜೆಪಿ ಶಾಸಕ- ಅರವಿಂದ್ ಬೆಲ್ಲದ್.
7) ಕಲಘಟಗಿ: ಬಿಜೆಪಿ ಶಾಸಕ- ಸಿ.ಎಂ. ನಿಂಬಣ್ಣವರ್.
8) ಶಿಗ್ಗಾವಿ: ಬಿಜೆಪಿ ಶಾಸಕ- ಬಸವರಾಜ್ ಬೊಮ್ಮಾಯಿ.

2014ರ ಲೋಕಸಭಾ ಚುನಾವಣಾ ಫಲಿತಾಂಶ

ಪ್ರಹ್ಲಾದ್ ಜೋಶಿ: ಬಿಜೆಪಿ- 5,45,395
ವಿನಯ ಕುಲಕರ್ಣಿ: ಕಾಂಗ್ರೆಸ್‌- 4,31,738
ಗೆಲುವಿನ ಅಂತರ: 1,13,657

ಕಳೆದ ಐದು ಚುನಾವಣೆಗಳಲ್ಲಿ ಗೆದ್ದವರು ಮತ್ತು ಎರಡನೆಯ ಸ್ಥಾನ ಪಡೆದ ಅಭ್ಯರ್ಥಿಗಳು ಪಡೆದ ಮತಗಳ ವಿವರ.

2009ರ ಚುನಾವಣಾ ಫಲಿತಾಂಶ
ಪ್ರಹ್ಲಾದ್ ಜೋಶಿ: ಬಿಜೆಪಿ- 4,46,786
ಮಂಜುನಾಥ್ ಕುನ್ನೂರ್: ಕಾಂಗ್ರೆಸ್- 3,09,123

2004ರ ಚುನಾವಣಾ ಫಲಿತಾಂಶ
ಪ್ರಲ್ಹಾದ್ ಜೋಶಿ: ಬಿಜೆಪಿ- 3,85,084
ಬಿ.ಎಸ್. ಪಾಟೀಲ್: ಕಾಂಗ್ರೆಸ್- 3,02,006

1999ರ ಚುನಾವಣಾ ಫಲಿತಾಂಶ
ವಿಜಯ ಸಂಕೇಶ್ವರ್‌: ಬಿಜೆಪಿ- 3,45,197
ವೀರಣ್ಣ ಮತ್ತಿಕಟ್ಟಿ: ಕಾಂಗ್ರೆಸ್- 3,03,595

1998ರ ಚುನಾವಣಾ ಫಲಿತಾಂಶ
ವಿಜಯ ಸಂಕೇಶ್ವರ್‌: ಬಿಜೆಪಿ- 3,39,660
ಡಿ.ಕೆ. ನಾಯ್ಕರ್‌: ಕಾಂಗ್ರೆಸ್‌- 2,89,260

ಜಾತಿವಾರು ಮತದಾರರ ಲೆಕ್ಕಾಚಾರ
ಲಿಂಗಾಯತ- 5,75,000
ಪರಿಶಿಷ್ಟ ಜಾತಿ- 1,84,000
ಪರಿಶಿಷ್ಟ ಪಂಗಡ- 72,000
ಮುಸಲ್ಮಾನ- 2,55,000
ಕ್ರಿಶ್ಚಿಯನ್‌- 42,000
ಕುರುಬ- 1,68,000
ಮರಾಠಾ- 1,22,000
ಬ್ರಾಹ್ಮಣ- 96,000
ಜೈನ್‌- 13,000
ಒಕ್ಕಲಿಗ- 8,000
ಈಡಿಗ- 12,000

ನಿರೀಕ್ಷಿತ ಅಭ್ಯರ್ಥಿಗಳು
ಹಾಲಿ ಸಂಸದ ಪ್ರಹ್ಲಾದ್ ಜೋಶಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಪ್ರಹ್ಲಾದ್ ಜೋಶಿ ಈಗಾಗಲೇ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಬ್ರಾಹ್ಮಣ ಸಮಾಜದ ಪ್ರಹ್ಲಾದ್ ಜೋಶಿ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳು

ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ವಿನಯ ಕುಲಕರ್ಣಿಗೆ ಈ ಬಾರಿಯೂ ಟಿಕೆಟ್‌ ಸಿಗಬಹುದು ಎನ್ನಲಾಗುತ್ತಿದೆ. ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ವಿನಯ ಕುಲಕರ್ಣಿ ಸಿದ್ದರಾಮಯ್ಯ ಸರ್ಕಾರದಲ್ಲಿ  ಸಚಿವರಾಗಿದ್ದವರು. ಪ್ರಭಲ ಲಿಂಗಾಯತ ಮುಖಂಡ. ಪಂಚಮಸಾಲಿ ಪಂಗಡದವರು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮುಂಚೂಣಿಯಲ್ಲಿದ್ದವರು. ಕಾಂಗ್ರೆಸ್‌ ವೈದ್ಯಕೀಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ. ಮಹೇಶ್‌ ನಾಲವಾಡ್ ಅವರ ಪರವಾಗಿ ಜೋರಾಗಿ ಲಾಬಿ ನಡೆಯುತ್ತಿದೆ. ಇವರು ಕೂಡ ಲಿಂಗಾಯತ ಪಂಚಮಸಾಲಿ ಸಮಾಜದವರು. ಜಗದೀಶ್ ಶೆಟ್ಟರ್‌ ವಿರುದ್ಧ ಎರಡು ಬಾರಿ ಸೋಲನುಭವಿಸಿದ್ದಾರೆ. ಕ್ಷೇತ್ರದ ಜನರಲ್ಲಿ ಅನುಕಂಪವಿದೆ. ವೈದ್ಯ ವೃತ್ತಿಯಿಂದಾಗಿ ಜನರಿಗೆ ಹತ್ತಿರವಾಗಿದ್ದಾರೆ. ಟಿಕೆಟ್‌ ಕೊಟ್ಟರೆ ಬಿಜೆಪಿಗೆ ಪ್ರಭಲ ಪೈಪೋಟಿ ಒಡ್ಡುತ್ತಾರೆ ಎಂದು ಕಾಂಗ್ರೆಸ್‌ ಪಕ್ಷದಲ್ಲಿಯೇ ಚರ್ಚೆ ನಡೆದಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಸದಾನಂದ ಡಂಗನವರ್, ರಾಜಶೇಖರ್‌ ಮೆಣಸಿನಕಾಯಿ ಮತ್ತು ಮಾಜಿ ಸಚಿವ ಸಂತೋಷ್‌ ಲಾಡ್‌ ಹೆಸರು ಕೂಡ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.  ಮೈತ್ರಿ ಪಕ್ಷಗಳಲ್ಲಿ ಹೊಂದಾಣಿಕೆಯಾಗಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಮಾಜಿ ಶಾಸಕ ಎನ್‌.ಎಚ್. ಕೋನರೆಡ್ಡಿಯವರು ಸ್ಪರ್ಧಿಸಬಹುದು. ನವಲಗುಂದ ಕ್ಷೇತ್ರದ ಶಾಸಕರಾಗಿದ್ದ ಎನ್.ಎಚ್. ಕೋನರೆಡ್ಡಿ ಧಾರವಾಡ ಕ್ಷೇತ್ರದ ಜನರಿಗೆ ಚಿರಪರಿಚಿತರು. ಮಹದಾಯಿ ಹೋರಾಟಗಾರರು. ಎಚ್‌.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಆಪ್ತರು.

ಹಾಲಿ ಸಂಸದರು ನೀಡಿದ ಭರವಸೆ ಮತ್ತು ಮಾಡಿದ ಕೆಲಸಕಾರ್ಯಗಳು. ಆಗಬೇಕಿರುವ ಕೆಲಸಗಳು

ಸಂಸದ ಪ್ರಹ್ಲಾದ್ ಜೋಶಿಯವರು ಕೇಂದ್ರದಿಂದ ಸ್ಮಾರ್ಟ್‌ಸಿಟಿ, ಐಐಟಿ ಮತ್ತು ಏಮ್ಸ್‌ ಹುಬ್ಬಳ್ಳಿ- ಧಾರವಾಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಸಿಆರ್‌ಎಫ್ ಅನುದಾನ ತಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ನಗರ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ಮಟ್ಟದ ಮೇಲ್ದರ್ಜೆಗೆ ಏರಿಸಲು ವಿಶೇಷ ಅನುದಾನ ತಂದಿದ್ದಾರೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣ ಮತ್ತು ವರ್ಕ್‌ಶಾಪ್‌ ಅಧುನೀಕರಣ ಹಾಗೂ ಗುಡ್‌ಶೆಡ್‌ ನಿರ್ಮಾಣ.
ಐವತ್ತು ಹಾಸಿಗೆಗಳ ರಾಜ್ಯ ಕಾರ್ಮಿಕ ವಿಮಾ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ. ಕ್ಲೀನ್‌ ಇಮೇಜ್‌ ಮತ್ತು ಸುಲಭ ಲಭ್ಯತೆಯ ಕಾರಣ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಕಳೆದ ಚುನಾವಣೆಗೂ ಮುನ್ನ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ.

ಪ್ರಹ್ಲಾದ್ ಜೋಶಿಯವರು ನೀಡಿದ್ದ ಹಲವು ಭರವಸೆಗಳು ಅಪೂರ್ಣವಾಗಿವೆ ಇನ್ನೂ ಕೆಲವು ಭರವಸೆಗಳು ಚಾಲ್ತಿಯಲ್ಲಿವೆ. ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಯಾಗಬೇಕು. ಮಹದಾಯಿಯಿಂದ ಮಲಪ್ರಭೆಗೆ ನೀರು ಹರಿಸಬೇಕು. ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಮಹದಾಯಿಯಿಂದ ಕುಡಿಯುವ ನೀರು ಪೂರೈಕೆಯಾಗಬೇಕು ಎನ್ನುವ ಬೇಡಿಕೆಗಳು ಇದುವರೆಗೂ ಈಡೇರಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ. ವಿದ್ಯಾವಂತ ಯುವಕರು ಕೆಲಸ ಅರಸಿ ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

ದೊಡ್ಡ ಉದ್ಯಮ ಮತ್ತು ಕೈಗಾರಿಕೆಗಳನ್ನು ತರುವುದು ಸಾಧ್ಯವಾಗಿಲ್ಲ.
ಸಿಆರ್‌ಎಫ್‌ ಅಡಿ ಸಾವಿರಾರು ಕೋಟಿ ಅನುದಾನ ಬಂದರೂ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಸ್ಮಾರ್ಟ್‌ಸಿಟಿ ಯೋಜನೆ ಕುಂಟುತ್ತಾ ಸಾಗಿದೆ.
ಸಂಸದರ ಆದರ್ಶ ಗ್ರಾಮ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಸಿಗಬೇಕಿದೆ.
ಬೆಳೆವಿಮೆ ಪರಿಹಾರ ಧನ ಸಮರ್ಪಕವಾಗಿ ಬರುತ್ತಿಲ್ಲ.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಜೋಶಿ ಬಿಟ್ಟರೆ ಬೇರೆ ಸಮರ್ಥ ಅಭ್ಯರ್ಥಿ ಇಲ್ಲವಾಗಿದೆ ಇದರಿಂದ ಈ ಬಾರಿಯೂ ಅವರಿಗೇ ಟಿಕೇಟ್ ಸಿಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಬಿಜೆಪಿ ಅಭ್ಯರ್ಥಿಯಾಗಿ ಜೋಶಿ ಸ್ಪರ್ಧಿಸಿದ್ರೆ ಎದುರಾಳಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಪ್ರಮುಖವಾಗಿದೆ.
First published:January 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626